Wednesday 27 February 2008

ಕಾಮನಬಿಲ್ಲು

ಕಾಮನಬಿಲ್ಲನ್ನು ಕಂಡರೆ ಖುಷಿಪಡದವರಾರು??! ಚಿಕ್ಕವರಿದ್ದಾಗ ಕಾಮನಬಿಲ್ಲನ್ನು ಕಂಡರೆ, " ಹೋ, ಕಾಗೆಗೂ ನರಿಗೂ ಮದ್ವೆ!"ಎಂದು ಕುಣಿದಾಡುತ್ತಿದ್ದೆವು. ಅದು ಯಾಕೆ ಕಾಗೆಗೂ ನರಿಗೂ ಮದುವೆ ಮಾಡಿಸುತ್ತಿದ್ದೆವೋ ದೇವರಿಗೇ ಗೊತ್ತು! ಮಳೆ ನಿಂತು ತಟ್ಟನೆ ಬೀಳುವ ಬಿಸಿಲಿಗೆ ಮೂಡುವ ಕಾಮನಬಿಲ್ಲನ್ನು ನೋಡಿಯೇ ಖುಷಿಪಡಬೇಕು.


ಮೊನ್ನೆ ಬಿಡದೆ ನಾಲ್ಕು ದಿನ ಸುರಿದ ಮಳೆ ನಿಂತಾಗ, " ಅಬ್ಬಾ, ಸಾಕಪ್ಪಾ ಸಾಕು ಈ ಮಳೆ ಎನ್ನಿಸಿತು. ಮಳೆ, ಗಾಳಿಗೆ ನನ್ನ ತೋಟವೆಲ್ಲಾ ನೆಂದು ತೊಪ್ಪೆಯಾಗಿ, ಆಸರೆಗೆ ಕೊಟ್ಟಿದ್ದ ಕೋಲುಗಳೇ ನೆಲಕಚ್ಚಿದ್ದವು. ಪುಣ್ಯಕ್ಕೆ ಹೆಚ್ಚಿನ ಹಾನಿಯಾಗಲಿಲ್ಲವಾದರೂ, ಇನ್ನೂ ಬೀಳುತ್ತಿದ್ದ ತುಂತುರು ಹನಿಯಲ್ಲೇ, ಮುಂಜಾಗ್ರತೆಯಾಗಿ ಮತ್ತಷ್ಟು ಕೋಲು ನೆಟ್ಟು, ದಾರ ಕಟ್ಟಿ, ಬೇಲಿಯನ್ನು ಬಂದೋಬಸ್ತು ಮಾಡಿದೆವು.


ಇಲ್ಲಿ ಯಾವಾಗ ಮಳೆ ಬೀಳುತ್ತದೋ, ಯಾವಾಗ ಬಿಸಿಲು ಬರುತ್ತದೋ ನನಗಂತೂ ಇಷ್ಟು ದಿನಕ್ಕೂ ಗೊತ್ತಾಗಿಲ್ಲ. ಮೊನ್ನೆ ಮಳೆ ನಿಂತ ತಕ್ಷಣ ಬಿದ್ದ ಬಿಸಿಲಿಗೆ ಮೂಡಿದ ಕಾಮನಬಿಲ್ಲನ್ನು ಸೆರೆ ಹಿಡಿಯಲು ಒಂದು ಸಣ್ಣ ಪ್ರಯತ್ನ.



























" ಕಾಮನಬಿಲ್ಲು ಕಮಾನು ಕಟ್ಟಿದೆ

ಮೋಡದ ನಾಡಿನ ಬಾಗಿಲಿಗೆ

ಬಣ್ಣಗಳೇಳನು ತೋರಣ ಮಾಡಿದೆ

ಕಂದನ ಕಣ್ಣಿಗೆ ಚಂದನ ಮಾಡಿದೆ

ಹಣ್ಣಿನ ಹೂವಿನ ಹೊನ್ನನು ಕೂಡಿದೆ

ಮಕ್ಕಳಿಗೋಕುಳಿ ಆಟವನಾಡಿದೆ

ತೆಂಗಿನ ತೋಟದ ಬುಡದಲಿ ಮೂಡಿದೆ

ಭೂಮಿಗೆ ಬಾನಿಗೆ ಸೇತುವೆ ಮಾಡಿದೆ."




ಎಂಬ ಪದ್ಯದ ಸಾಲುಗಳು ನನ್ನ ಮಟ್ಟಿಗಂತೂ ನಮ್ಮ ಮನೆ ಬಾಗಿಲಿಗೆ ಕಟ್ಟಿರುವಂತೆ ಕಾಣಿಸುತ್ತದೆ :)

Thursday 21 February 2008

ಸೂರ್ಯೋದಯ

ಸೂರ್ಯೋದಯವೆಂದರೆ, ನಾವು ಚಿಕ್ಕವರಿದ್ದಾಗ ಎರಡು ಬೆಟ್ಟಗಳ ನಡುವೆ ಸೂರ್ಯನನ್ನು ಬಿಡಿಸಿ, ಮೇಲೆ ಒಂದೆರಡು ಹಕ್ಕಿ, ಪಕ್ಕದಲ್ಲಿ ಒಂದು ದೊಡ್ಡ ಮರ, ಬೆಟ್ಟದ ಕೆಳಗೆ ನದಿ, ಅದರ ಮೇಲೊಂದು ಪುಟ್ಟ ದೋಣಿ! ಇಷ್ಟೇ ಚಿತ್ರ ಬಿಡಿಸಲು ಬರುತ್ತಿದ್ದದ್ದು. ನಿಜ ಹೇಳಬೇಕೆಂದರೆ, ಸೂರ್ಯೋದಯವನ್ನು ಹುಟ್ಟಿದಾಗಿನಿಂದ ನೋಡೇ ಇರಲಿಲ್ಲ :).


ಬೆಳಗಾಗೆದ್ದು ಮುಖ ತೊಳೆದು, ಅಡಿಗೆಮನೆ ಬಾಗಿಲು ಕಾಯುತಿದ್ದು, ಕಾಫಿ ಕುಡಿದ ಮೇಲೆಯೇ ಮುಂದಿನ ಕೆಲಸ. ಒಮ್ಮೊಮ್ಮೆ ಅಮ್ಮ, " ಬಾಗಿಲು ತೊಳೆದು ಬಾರೆ, ಕಾಫಿ ಬೆರಿಸಿರುತ್ತೇನೆ" ಎಂದರೂ ಅಲ್ಲಾಡುತ್ತಿರಲಿಲ್ಲ. ಸೂರ್ಯೋದಯವನ್ನು ನೋಡುತ್ತೇನೆಂದರೂ ಕಾಣಿಸುವುದೆಲ್ಲಿಂದ?? ಅಕ್ಕ ಪಕ್ಕದಲ್ಲೆಲ್ಲಾ ನಮ್ಮ ಮನೆಗಿಂತಲೂ ದೊಡ್ಡ ದೊಡ್ಡ ಮನೆಗಳು, ಸದ್ಯ ಮನೆ ಮೇಲೆ ನಿಂತರೆ ಚಾಮುಂಡಿ ಬೆಟ್ಟ ಮಾತ್ರ ಕಾಣಿಸುತ್ತಿತ್ತು, ಈಗ ಅದಕ್ಕೂ ತಡೆ ಒಡ್ಡುವ ರೀತಿಯಲ್ಲಿ ಮನೆಗಳು ತಲೆ ಎತ್ತುತ್ತಿವೆ. ಅತ್ತೆ ಮನೆಯಲ್ಲೂ ಹೆಚ್ಚು ಕಡಿಮೆ ಇದೇ ಪದ್ಧತಿ ಮುಂದುವರೆಯಿತು. ಒಂದೇ ವ್ಯತ್ಯಾಸವೆಂದರೆ ಇಲ್ಲಿ ಟೀ!

ಈ ಮನೆಗೆ ಬಂದ ಮೊದಲ ದಿನವೇ ಸೂರ್ಯೋದಯದ ದರ್ಶನವಾಯಿತು.






































ಈಗ ನಿಜಕ್ಕೂ " ಸೂರ್ಯವಂಶಜಳೇ" ಆಗಿದ್ದೇನೆ. ದಿನವೂ ಸೂರ್ಯೋದಯವನ್ನು ನೋಡುತ್ತಿದ್ದರೂ, ದಿನ ದಿನಕ್ಕೂ ಸೂರ್ಯ ಬೇರೆಯೇ ತರ ಹುಟ್ಟುತ್ತಾನೇನೋ ಅನ್ನಿಸುತ್ತದೆ. ಯಾರಾದರೂ ಕವಿಗಳಿದ್ದರೆ ಒಂದು ಸುಂದರ ಕವಿತೆಯನ್ನೇ ಬರೆಯುತ್ತಿದ್ದರೇನೋ ಅನ್ನಿಸುತ್ತದೆ. ಸುಮ್ಮನೇ ಹುಟ್ಟುವ ಸೂರ್ಯನ್ನು ನೋಡುತ್ತಾ ಕೂರಬೇಕು ಅನ್ನಿಸುತ್ತದೆ. ಯಾರೋ ಗೆಳೆಯರು,
" ಸೂರ್ಯೋದಯ, ಚಂದ್ರೋದಯ ದೇವರ ದಯ ಕಾಣೋ" ಎಂಬ ಕವಿವಾಣಿಯನ್ನು, ಕವಿಯೇನು ಹೊಸದಾಗಿ ಹೇಳಿದ ಎಂದು ಪ್ರಶ್ನೆ ಮಾಡಿದುದು ನೆನಪಿಗೆ ಬರುತ್ತದೆ. ಅವರಿಗೆ ತೋರಿಸಬೇಕು ಈ ಸೂರ್ಯೋದಯವನ್ನು ಅನ್ನಿಸುತ್ತದೆ.

Friday 15 February 2008

ನಮ್ಮ ಕೈ ತೋಟ

ಹುಟ್ಟಿದಾಗಿನಿಂದ ತರಕಾರಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಅಮ್ಮ ಮಾಡಿ ಹಾಕುತ್ತಿದ್ದ ತರಕಾರಿಗಳಿಗೆಲ್ಲಾ ಒಂದೊಂದು ಹೆಸರಿಟ್ಟು " ನನಗಿದು ಬೇಡ, ಅದನ್ಯಾರದರೂ ಮನುಷ್ಯರು ತಿನ್ನುತ್ತಾರೆಯೇ.??" ಎಂದೆಲ್ಲಾ ಕಥೆ ಹೊಡೆಯುತ್ತಿದ್ದ ನನಗೆ New Zealand ಗೆ ಬಂದ ಮೇಲೆ ತರಕಾರಿಗಳ ಬೆಲೆ ಅರಿವಾಯಿತು.

ಮೊದಲಿದ್ದ Invercargill ನಲ್ಲಿ ಆಲೂಗೆಡ್ಡೆ, ಎಲೆಕೋಸು ಎರಡೇ ತರಕಾರಿಗಳು! ಇವತ್ತು ಆಲೂಗೆಡ್ಡೆ, ನಾಳೆ ಕ್ಯಾಬೇಜು...ಇವತ್ತು ಕ್ಯಾಬೇಜು...ನಾಳೆ ಆಲೂಗೆಡ್ಡೆ! ಹೀಗೆ ದಿನ ತಳ್ಳಬೇಕಾದ ಸ್ಥಿತಿ. ಯಾವಾಗಲೋ ಒಮ್ಮೆ ಪಾಲಾಕ್ ಸೊಪ್ಪಿನ ದರ್ಶನ. frozen ಸಿಗುತ್ತಿತ್ತಾದರೂ ತಾಜಾ ತರಕಾರಿ ತಿಂದು ಅಭ್ಯಾಸವಾಗಿದ್ದ ನನಗೆ ಅದೇಕೋ ಇಷ್ಟವಿಲ್ಲ. ಏನೂ ಸಿಗದಿದ್ದಾಗ ಅದೇ ಗತಿ! ಅದು ಬೇರೆ ವಿಷಯ.

Invercargil ನಿಂದ Auckland ಗೆ ಬಂದ ಮೇಲೆ, ಅಲ್ಲಿ ವಾರಕ್ಕೆ ಒಮ್ಮೆ veggie ಮಾರುಕಟ್ಟೆಯಲ್ಲಿ ನಮ್ಮ ತರಕಾರಿಗಳನ್ನು ಕಂಡು ಸ್ವರ್ಗಕ್ಕೆ ಮೂರೇ ಗೇಣು! ಕ್ಯಾಬೇಜು, ಆಲೂಗೆಡ್ಡೆಗಳನ್ನು ಮುಟ್ಟಲೇ ಬಾರದು ಎಂದು ನಿರ್ಧರಿಸಿಬಿಟ್ಟೆ. ಅಲ್ಲಿಯವರೆಗೂ ಊರಿನಲ್ಲಿ ಹೀರೇಕಾಯಿ, ಸೋರೆಕಾಯಿ, ಬದನೇಕಾಯಿ, ಮೂಲಂಗಿ ಎಂದರೆ ಒಂದೊಂದು ಹೆಸರಿಟ್ಟು ಅದನ್ನೆಲ್ಲಾ ಮನುಷ್ಯರು ತಿನ್ನಲು ಸಾದ್ಯವೇ ಇಲ್ಲಾ ಎಂದು ಅರಚುತ್ತಿದ್ದವಳು, ಇಲ್ಲಿ ಅವನ್ನೆಲ್ಲಾ ಕಂಡು, ಚಕಾರವೆತ್ತದೆ ಬ್ಯಾಗು ತುಂಬಿಸುಕೊಳ್ಳತೊಡಗಿದೆ. Auckland ನ ನೀರಿನ ಋಣ ಸ್ವಲ್ಪ ದಿನ ಮಾತ್ರವೇ. ನಂತರ Whangarei ಗೆ ಬಂದ ಮೇಲೆ, ಇಲ್ಲೂ veggie ಮಾರುಕಟ್ಟೆ ನಡೆಯುತ್ತಿತ್ತಾದ್ದಾರೂ ರೇಟು ಸೂಪರ್ ಮಾರ್ಕೆಟ್ಟಿನದೇ! ಅಕ್ಲೆಂಡಿನಷ್ಟು ತರಾವರಿ ತರಕಾರಿಗಳೂ ಇಲ್ಲ! ಕಡೆಗೆ ನಾನೇ ಯಾಕೆ ಮನೆ ಸುತ್ತ ಮುತ್ತ ಬೆಳೆದುಕೊಳ್ಳಬಾರದು? ಹೇಗೂ ಮನೆ ಸುತ್ತ ಜಾಗವಿದೆ, ಸ್ವಲ್ಪ ಜಾಗ ಹಸನು ಮಾಡಿದರೆ ಈ ಬೇಸಿಗೆಯಲ್ಲೇ ಏನೂ ಬೆಳೆಯದಿದ್ದರೂ ಒಂದಷ್ಟು ಕೊತ್ತಂಬರಿ, ಹಸಿಮೆಣಸಿನಕಾಯಿಯನ್ನಾದರೂ ಬೆಳೆಯಬಹುದಲ್ಲಾ..ಎಂದೆಲ್ಲಾ ಪ್ಲಾನ್ ಮಾಡಿ ಯಜಮಾನರ ಕೈಗೆ ಗುದ್ದಲಿ ಕೊಟ್ಟು ಶುರು ಮಾಡಿಸಿಯೇ ಬಿಟ್ಟೆ!.

ಬನ್ನಿ ನಮ್ಮ ಮನೆಯ ಕೈತೋಟವನ್ನು ನೋಡಿ. ಇಡೀ ವರ್ಷವೆಲ್ಲ ತರಕಾರಿ ಸಿಗದಿದ್ದರೂ ಯೋಚನೆಯಿಲ್ಲ, ಬೀನ್ಸ್, ಕ್ಯಾರೆಟ್, ಬೀಟ್ ರೂಟ್, ಪಾಲಾಕ್, ಹಸಿಮೆಣಸಿನಕಾಯಿ ಎಲ್ಲವನ್ನೂ ಬೆಳೆದುಕೊಂಡು ನಾನೇ freeze ಮಾಡಿ ಇಟ್ಟುಕೊಂಡಿದ್ದೇನೆ. ಯಾವ ಗೊಬ್ಬರವೂ ಇಲ್ಲ! " ಸ್ಪ್ರೇ ಫ್ರೀ" ಹುಳಗಳನ್ನು ಕಂಡಲ್ಲಿ ಹತ್ಯೆ ಮಾಡುತ್ತಿದ್ದರಿಂದ ಅವುಗಳ ಕಾಟ ಕಡಿಮೆಯೇ. ಅಕ್ಕಿ-ಬೇಳೆ ತೊಳೆದ ನೀರು, ತರಕಾರಿ-ಹಣ್ಣುಗಳ ಸಿಪ್ಪೆ, ಇವೇ ನನ್ನ ಗಿಡಕ್ಕೆ ಗೊಬ್ಬರ! ಊರಿನಿಂದ ಅಮ್ಮ ಬೆಳ್ಳುಳ್ಳಿ ಜಜ್ಜಿ ನೀರಿನಲ್ಲಿ ಕಲಸಿ ಗಿಡಕ್ಕೆ ಹಾಕಿದರೆ ಹುಳ ಬರುವುದಿಲ್ಲವೆಂದು ಹೇಳಿದ್ದರಿಂದ, ಎಲ್ಲಾ ಗಿಡಕ್ಕೂ
" ಬೆಳ್ಳುಳ್ಳಿ ಸ್ಪ್ರೇ ".

ಆದರೂ ಯಾಕೋ ಕರಿಬೇವಿನ ಗಿಡ ನನಗೆ ಒಲಿಯಲಿಲ್ಲ. ಮನೆಯೊಳಗೆ ಇಟ್ಟುಕೊಂಡು ಸಾಕಿ ಸಲಹಿದರೂ ಬದುಕಲಿಲ್ಲ. ಆದರೂ ಬಿಡುವುದಿಲ್ಲ, ಮುಂದಿನ ವರ್ಷದೊಳಗೆ ಹೇಗಾದರೂ ಬದುಕಿಸುವ ಛಲ ನನ್ನದು.

ಬನ್ನಿ ನಮ್ಮ ಕೈತೋಟದ ಪರಿಚಯ ಮಾಡಿಕೊಡುತ್ತೇನೆ.

ಸಿಲ್ವರ್ ಬೀಟ್ : ಕಬ್ಬಿಣಾಂಶ ಹೆಚ್ಚು ಇದೆಯಂತೆ. ಬೇಳೆ ಜೊತೆ, ಮತ್ತು ಇದರದೇ ಪಲ್ಯ ಚೆನ್ನಾಗಿರುತ್ತದೆ. ಸಿಲ್ವರ್ ಬೀಟ್ ಮತ್ತು ಆಲೂಗೆಡ್ಡೆ ನನ್ನ ಫೇವರಿಟ್ ಕಾಂಬಿನೇಷನ್ :)




ಮೆಂತ್ಯಸೊಪ್ಪು: ಮೆಂತ್ಯಸೊಪ್ಪಿನ ಬಗ್ಗೆ ಹೇಳುವುದೇ ಬೇಡ! ಮೆಂತ್ಯಸೊಪ್ಪಿನ ಹುಳಿ, ಅನ್ನಕ್ಕೆ ಮೆಂತ್ಯಸೊಪ್ಪಿನ ಒಗ್ಗರಣೆ, ಚಪಾತಿ ಹಿಟ್ಟಿಗೆ ಮೆಂತ್ಯ, ಹಸಿಮೆಣಸಿನಕಾಯಿ, ಶುಂಠಿ, ರುಬ್ಬಿ ಸೇರಿಸಿ ಚಪಾತಿ ಮಾಡಿದರೆ ಪಲ್ಯ ಇಲ್ಲದಿದ್ದರೂ ಮೊಸರಿನ ಜೊತೆ ಸಕತ್ ನಡೆಯುತ್ತದೆ!






ಕೊತ್ತಂಬರಿ ಸೊಪ್ಪು: ಕೊತ್ತಂಬರಿ ಬೀಜಗಳನ್ನು ಉದುರಿಸಿ 10 - 15 ದಿನಗಳ ನಂತರ ಕಣ್ಣುಬಿಡುತ್ತಿವೆ! ಪಲ್ಯ, ಹುಳಿ, ಸಾಂಬಾರಿಗೆ ಕೊತ್ತಂಬರಿ ಇಲ್ಲದಿದ್ದರೇ ನಡೆಯುವುದೇ??!



ಪುದೀನ: ಪುದೀನ ಚಟ್ನಿ, ಪಲಾವ್ ಗೆ ಪುದೀನದ ಒಂದೆರಡು ಎಲೆಗಳನ್ನು ಹಾಕಿದರೆ ಅದರ ಗಮವೇ ಬೇರೆ! ಪಲಾವ್, ಮಸಾಲೆವಡೆ, ಬೇಳೆ ಸಾರಿಗೆ ಎಲ್ಲದಕ್ಕೂ ಎರಡು ಪುದೀನ ಎಲೆ ಹಾಕುವುದು ನನ್ನ ಶೈಲಿ :)




ಪಾರ್ಸ್ಲೀ: ಇಲ್ಲಿ ಹೇರಳವಾಗಿ ಬೆಳೆಸುತ್ತಾರೆ. ಕೊತ್ತಂಬರಿಯ ಬದಲು ಹಾಕಿದರೂ ನಡೆಯುತ್ತದೆ. ಸಲಾಡ್ ನ ಜೊತೆ ಪಾರ್ಸ್ಲೀಯನ್ನು ಹಸಿ ತಿನ್ನಬಹುದು.





ಕೊತ್ತಂಬರಿ: ಕೊತ್ತಂಬರಿ ಬೀಜಗಳನ್ನು ಹಾಕಿ ಮೊಳಕೆ ಬರಿಸಿ ನೆಡುತ್ತಿದ್ದ ನನಗೆ, ಮಾರುಕಟ್ಟೆಯಲ್ಲಿ ಕೊತ್ತಂಬರಿಗಿಡ ಕಂಡು, ಕೊಂಡು ತಂದು ನೆಟ್ಟಿದ್ದೇನೆ.




ದಪ್ಪಮೆಣಸಿನಕಾಯಿ: ಇದು ದೊಡ್ದದಾದ ನಂತರ ಕೆಂಪು ಕಲರ್ ಬರುತ್ತದಂತೆ! ಗಿಡ ತಂದು ನೆಟ್ಟಿದ್ದು, ಇನ್ನೂ ದೊಡ್ಡದಾಗಬೇಕು. ಆಲೂ ಜೊತೆ ಪಲ್ಯ, ಇಲ್ಲವೇ ಬೋಂಡ ಮಾಡಿ ಹೊಡೆಯಬಹುದು!




ಹಸಿಮೆಣಸಿನಕಾಯಿ: ತಂದು ನೆಟ್ಟದ್ದು ಒಂದೇ ಪುಟಾಣಿ ಗಿಡ. ಈಗ ಗಿಡದ ತುಂಬಾ ಕಾಯಿಗಳು.



ಪಲಾವ್ ಎಲೆ: bayleaves ಗೆ ನಾವು ಪಲಾವ್ ಎಲೆ ಎನ್ನುತ್ತೇವೆ. ಇದಕ್ಕೆ ಸರಿಯಾದ ಹೆಸರು ನನಗೆ ಗೊತ್ತಿಲ್ಲ :) ಅಂಗಡಿಗಳಲ್ಲಿ ಒಣಗಿಸಿದ ಪಲಾವ್ ಎಲೆಗಳು ಸಿಗುತ್ತವೆ. ನಾನಿನ್ನೂ ಒಣಗಿಸಲು ಶುರು ಮಾಡಿಲ್ಲ! ಸದ್ಯಕ್ಕೆ ಹಸಿ ಎಲೆಗಳನ್ನೇ ಪಲಾವ್/ಭಾತ್ ಗೆ ಉಪಯೋಗಿಸುತ್ತಿದ್ದೇನೆ.



ಸೌತೆಕಾಯಿ: ಸೌತೆಕಾಯಿತರವೇ ಆದರೆ ಆಕಾರ ಚಿಕ್ಕದು. ಸರಿಯಾದ ಪದ ನನಗೆ ಗೊತ್ತಿಲ್ಲ. ಹೇಗಿರುತ್ತದೋ ಏನೋ ಎಂದು ಸಣ್ಣ ಗಿಡ ತಂದು ನೆಟ್ಟಿದ್ದು, ಇಡೀ ಬೇಲಿಯನ್ನು ಆವರಿಸಿ ಬೆಳೆದಿದೆ. ಇದರಿಂದ ಪಲ್ಯ, ಮಜ್ಜಿಗೆ ಹುಳಿ, ಬಟಾಣಿ ಮತ್ತು ಗರ್ಕಿನ್ ಭಾತ್ ಸಹ ಮಾಡಬಹುದೆಂದು ತಿಳಿಸಿಕೊಟ್ಟವರು ಶುಭಾ ಮತ್ತು ಸಂಗೀತ ಅವರು. ಕಾಯಿಗಳನ್ನು ಕಿತ್ತು ಎಲ್ಲರಿಗೂ ಹಂಚಿ, ಇನ್ನೇನು ಗಿಡವನ್ನೇ ಕೀಳೋಣವೆನ್ನುವಷ್ಟರಲ್ಲಿ ಮತ್ತೊಂದು ಕಾಯಿ!



ಟೊಮೋಟೋ ಮತ್ತು ಬೀನ್ಸ್: ಇಲ್ಲಿಯ ಗಾಳಿಗೆ ಎಲ್ಲವೂ ಟೊಂಕ ಮುರಿದುಕೊಂಡು ಬೀಳುತ್ತಿದ್ದರಿಂದ ಈ ಗಿಡಗಳಿಗೆ ಕಡ್ಡಿಯ ಆಧಾರವನ್ನು ಕೊಟ್ಟಿದ್ದಾರೆ ಯಜಮಾನರು.



ಬೀಟ್ ರೂಟ್ ಮತ್ತು ಕ್ಯಾರೆಟ್: ಎರಡನೆಯ ಬೆಳೆಗೆ ತಂದು ನೆಟ್ಟ ಗಿಡಗಳು. ಇನ್ನೂ ಚಿಕ್ಕವು. ಇನ್ನೊಂದು 15 ದಿನಕ್ಕೆ ಬೀಟ್ ರೂಟ್ ಮತ್ತು ಕ್ಯಾರೆಟ್ ರೆಡಿ.




Dwarf beans: ಗಿಡದ ಬುಡದಲ್ಲಿ ಬಿಡುತ್ತವೆ. ಬಳ್ಳಿಯಂತೆ ಹಬ್ಬುವುದಿಲ್ಲ. ಆದರೆ ಮುಂದಿನ ಸಲ ಈ ಬೀನ್ಸ್ ತರಬಾರದೆಂದು ತೀರ್ಮಾನಿಸಿದ್ದೇನೆ. ಗಿಡದ ಬುಡದಲ್ಲಿ ಬಿಡುವುದರಿಂದ ಮಣ್ಣಿನ ಜೊತೆ ಸೇರಿ ಬೇಗ ಹಾಳಾಗುತ್ತಿವೆ.



ಈ ಗಿಡದಲ್ಲಿ ಹಸಿಮೆಣಸಿನಕಾಯಿ ಅಲ್ಲೆ ಒಣಗಲು ಬಿಟ್ಟಿದ್ದೇನೆ. ಈಗ ನನಗೆ ಕೆಂಪು ಸಾರು ಮಾಡಲು ಕೆಂಪು ಮೆಣಸಿನಕಾಯಿ!



ಎಳೆ ಹಸಿಮೆಣಸಿನಕಾಯಿಗಳು. ಇನ್ನೂ ಬಲಿತಿಲ್ಲ. ಗಿಡ ಇನ್ನೂ ಬೆಳೆಯುತ್ತಿದೆ.




ಬದನೇಕಾಯಿ: ಇದಕ್ಕೆ ಯಜಮಾನರ ಆರೈಕೆ ಬಹಳ. ಅವರ ಫೇವರಿಟ್ ತರಕಾರಿ. ಇನ್ನೂ ಹೂವು ಬಿಟ್ಟಿಲ್ಲ, ಗಿಡ ಮಾತ್ರ ಎಲೆಗಳನ್ನು ಅರಳಿಸಿಕೊಂಡು ನಗುತ್ತಿದೆ.




ದಪ್ಪಮೆಣಸಿನಕಾಯಿ: ಇದಕ್ಕೆ ನಮ್ಮವರಿಟ್ಟ ಹೆಸರು "ನೂಕ್ಲಿಯರ್ ಬಾಂಬ್". ಹೇಳಲಾರದಷ್ಟು ಖಾರ! ಒಮ್ಮೆ ತಿಳಿಯದೇ ಒಂದೀಡೀ ಈ ಮೆಣಸಿನಕಾಯಿಯನ್ನು ನೂಡಲ್ಸ್ ಗೆ ಹಾಕಿ ಕುಣಿದಾಡಿದ್ದನ್ನು ಇನ್ನೂ ಮರೆತಿಲ್ಲ!




ಟೊಮೋಟೋ: ಹೂವು ಕಾಯಾಗುತ್ತಿರುವ ಟೋಮೋಟೋ. ಟೋಮೋಟೋ ಕಾಯಿ ಚಟ್ನಿ ನಮ್ಮವರ ಫೇವರಿಟ್!



ಬೀನ್ಸ್: ಬಳ್ಳಿಯಂತೆ ಹಬ್ಬುವ ಬೀನ್ಸ್. ಗಿಡದ ತುಂಬಾ ಬೀನ್ಸ್ ಗಳೇ ಬೀನ್ಸ್ ಗಳು:)























ಇನ್ನೂ, ಹೂಕೋಸು, ಎಲೆಕೋಸು, ಆಲೂಗೆಡ್ಡೆ, ಲೆಟ್ಯೂಸ್ ಗಳು ಬಾಲ್ಯಾವಸ್ಥೆಯಲ್ಲಿರುವುದರಿಂದ ಅವುಗಳ ಪರಿಚಯ ಮತ್ತೊಮ್ಮೆ.

Thursday 7 February 2008

Rangoli

It is an ancient culture and traditional art of Indian Hindus.

Our mothers, grandmothers and their mothers drew these wonderful rangoli designs before sunrise in front of their homes. It was and is believed that by doing so we welcome the Sun God “Surya”. If we recall our good old Kannada/tamil/telugu movies , the lady of the house usually draws rangoli early in the morning and does Tulasi pooja with the “Suprabhata” chantings playing in the background.

Our grandmothers and great grandmothers did not learn how to draw beautiful and colourful rangolis at schools. They learnt this wonderful art from their mothers and grandmothers and then they passed on to their own children. I believe this traditional art should flow from generation to generations. It is sad to think that due to lack of space (living in high-rise apartments), time, interest or knowledge many of our young mothers are not able to pass on this valuable and very easy traditional art to their daughters.

I still remember when my mother drew beautiful rangolis in front of our home. She always insisted me to watch her draw them. By just watching her, I learnt a lot of simple tricks, to name a few drawing two lines, three lines, four lines. She usually did not repeat the same rangoli for at least 6 months. She knew many designs and patterns for different festivals and occasions alike. To name a few, the “Chukki rangolis” (dotted ones), “Ele rangolis” (with many arcs and curves), and then “Surya rangoli” for Ratha Sapthami, “Krishna na Tottilu for Janmashtami, “Deepa rangoli” for Deepavali and the list goes on.

My mother told me that our grandmother had taught her how to draw rangoli. As there were hundreds of different patterns and designs she had drawn them in a notebook. She still has that notebook and is like a treasure to her. She has maintained it very well and it also contains her self-made and our grandmother’s recipes for Kashayas, Navilgaries,:-) etc.

When I started drawing rangolies my mother always stood and watched me. She was very particular about the rangolis. By doing so she made sure that I drew them in a right manner. It was a compulsory and routine early morning chores for me. She did not accept lame excuses for not drawing a rangoli daily. She did not like using a ‘seeme sunna’ or chalk-piece to draw a rangoli. She believed that it was a bad omen.


When I first came to New Zealand we stayed in a city called Invercargill. I was very much disappointed to see that there was no “Angala” in front of our home:( We had a driveway but it was usually wet due to continuous rains. We also had too much of wind and weather was always chilly! I missed drawing rangolies a lot over there. But when we shifted to Auckland, which is a warmer place than Invercargill I fulfilled my desire to draw various rangolis during our festivals:). I am sharing some of my rangolis here.










Image and video hosting by TinyPic

Image and video hosting by TinyPic

Image and video hosting by TinyPic

Image and video hosting by TinyPic




I have many more rangoli designs, which I would like to share them as time goes by.

Monday 4 February 2008

Queenstown















In the Southern Island of New Zealand, Queenstown is a cosmopolitan heaven, offering a limitless adventure, southern wine and cuisine.

Early Maori(indigenous people) expeditioners to Queenstown came in search of pounamu(greenstone), a nephrite jade. It is a semi-precious stone of huge cultural importance to the Maori people. They once used the beautiful stone for adzes, chisels and weaponry. Today it is mostly carved into jewelery.

In the 1800s the Europeans found gold and the gold rush began in 1862. Today gold is still mined in the region, but typically with heavy machinery.


The town follows the shores of Lake Wakatipu—a deep blue pool of pure mountain water. Framing the pictures is The Remarkables range with its purple-brown peaks topped with snow. Most of these pictures were taken either during late spring or early summer of 2004.

Queenstown is also famous for adventure sports like jet boating, river rafting, sky diving, parapenting, mountain biking, helicopter excursions, river surfing, the world's first ever bungy jumping and during winter, skiing & snow boarding.


Queenstown ಒಂದು ಸುಂದರವಾದ ತಾಣ. ಬೇಸಿಗೆಯಲ್ಲಿ ಸೂರ್ಯ ತಡವಾಗಿ ಮುಳುಗಿ, ಬೇಗ ಮೂಡುವುದರಿಂದ ( 5am - 10pm ) ಸುತ್ತಾಡಲು ಪ್ರಶಸ್ತವಾದ ಕಾಲ. ನೋಡಿದ ಎಷ್ಟೋ lake ಗಳಿಗಿಂತ Lake Wakatipu ಬಣ್ಣ ನನಗೆ ಬಹಳ ಇಷ್ಟವಾದುದು.

ನಾವು 2004 ರಲ್ಲಿ Invercargill nalli ಇದ್ದಾಗ, ಅಲ್ಲಿಂದ Queenstown ಕೇವಲ 2 ಗಂಟೆಗಳ ಪ್ರಯಾಣ. ಸೂರ್ಯನ ಕೃಪೆಯಿದ್ದ ದಿನ, ಅನಿಲ್ ಆಫೀಸಿಗೆ ಚಕ್ಕರ್, Queenstown ಗೆ ಹಾಜರ್! ನಮ್ಮಿಬ್ಬರಿಗೂ ತುಂಬಾ ಇಷ್ಟವಾದ ಸ್ಥಳ . ನ್ಯೂಜಿಲೆಂಡಿಗೆ ಬಂದರೆ Queenstown ನಿಮ್ಮ ಪಟ್ಟಿಯಲ್ಲಿ ಎಲ್ಲಾ ಊರಿಗಳಿಗಿಂತ ಮೇಲಿರಲಿ :)

ಇಲ್ಲಿ ಬಹಳ ಸಿನೆಮಾಗಳ ಚಿತ್ರೀಕರಣವಾಗಿದೆ ಅಂತೆ. ಅದರಲ್ಲಿ Lord of the Rings ಒಂದು. ನಮ್ಮ ಎಷ್ಟೋ ತಮಿಳು, ತೆಲುಗು ಸಿನೆಮಾಗಳು ಇಲ್ಲಿ ಚಿತ್ರೀಕರಣವಾಗಿವೆ.