Thursday, 21 February 2008

ಸೂರ್ಯೋದಯ

ಸೂರ್ಯೋದಯವೆಂದರೆ, ನಾವು ಚಿಕ್ಕವರಿದ್ದಾಗ ಎರಡು ಬೆಟ್ಟಗಳ ನಡುವೆ ಸೂರ್ಯನನ್ನು ಬಿಡಿಸಿ, ಮೇಲೆ ಒಂದೆರಡು ಹಕ್ಕಿ, ಪಕ್ಕದಲ್ಲಿ ಒಂದು ದೊಡ್ಡ ಮರ, ಬೆಟ್ಟದ ಕೆಳಗೆ ನದಿ, ಅದರ ಮೇಲೊಂದು ಪುಟ್ಟ ದೋಣಿ! ಇಷ್ಟೇ ಚಿತ್ರ ಬಿಡಿಸಲು ಬರುತ್ತಿದ್ದದ್ದು. ನಿಜ ಹೇಳಬೇಕೆಂದರೆ, ಸೂರ್ಯೋದಯವನ್ನು ಹುಟ್ಟಿದಾಗಿನಿಂದ ನೋಡೇ ಇರಲಿಲ್ಲ :).


ಬೆಳಗಾಗೆದ್ದು ಮುಖ ತೊಳೆದು, ಅಡಿಗೆಮನೆ ಬಾಗಿಲು ಕಾಯುತಿದ್ದು, ಕಾಫಿ ಕುಡಿದ ಮೇಲೆಯೇ ಮುಂದಿನ ಕೆಲಸ. ಒಮ್ಮೊಮ್ಮೆ ಅಮ್ಮ, " ಬಾಗಿಲು ತೊಳೆದು ಬಾರೆ, ಕಾಫಿ ಬೆರಿಸಿರುತ್ತೇನೆ" ಎಂದರೂ ಅಲ್ಲಾಡುತ್ತಿರಲಿಲ್ಲ. ಸೂರ್ಯೋದಯವನ್ನು ನೋಡುತ್ತೇನೆಂದರೂ ಕಾಣಿಸುವುದೆಲ್ಲಿಂದ?? ಅಕ್ಕ ಪಕ್ಕದಲ್ಲೆಲ್ಲಾ ನಮ್ಮ ಮನೆಗಿಂತಲೂ ದೊಡ್ಡ ದೊಡ್ಡ ಮನೆಗಳು, ಸದ್ಯ ಮನೆ ಮೇಲೆ ನಿಂತರೆ ಚಾಮುಂಡಿ ಬೆಟ್ಟ ಮಾತ್ರ ಕಾಣಿಸುತ್ತಿತ್ತು, ಈಗ ಅದಕ್ಕೂ ತಡೆ ಒಡ್ಡುವ ರೀತಿಯಲ್ಲಿ ಮನೆಗಳು ತಲೆ ಎತ್ತುತ್ತಿವೆ. ಅತ್ತೆ ಮನೆಯಲ್ಲೂ ಹೆಚ್ಚು ಕಡಿಮೆ ಇದೇ ಪದ್ಧತಿ ಮುಂದುವರೆಯಿತು. ಒಂದೇ ವ್ಯತ್ಯಾಸವೆಂದರೆ ಇಲ್ಲಿ ಟೀ!

ಈ ಮನೆಗೆ ಬಂದ ಮೊದಲ ದಿನವೇ ಸೂರ್ಯೋದಯದ ದರ್ಶನವಾಯಿತು.






































ಈಗ ನಿಜಕ್ಕೂ " ಸೂರ್ಯವಂಶಜಳೇ" ಆಗಿದ್ದೇನೆ. ದಿನವೂ ಸೂರ್ಯೋದಯವನ್ನು ನೋಡುತ್ತಿದ್ದರೂ, ದಿನ ದಿನಕ್ಕೂ ಸೂರ್ಯ ಬೇರೆಯೇ ತರ ಹುಟ್ಟುತ್ತಾನೇನೋ ಅನ್ನಿಸುತ್ತದೆ. ಯಾರಾದರೂ ಕವಿಗಳಿದ್ದರೆ ಒಂದು ಸುಂದರ ಕವಿತೆಯನ್ನೇ ಬರೆಯುತ್ತಿದ್ದರೇನೋ ಅನ್ನಿಸುತ್ತದೆ. ಸುಮ್ಮನೇ ಹುಟ್ಟುವ ಸೂರ್ಯನ್ನು ನೋಡುತ್ತಾ ಕೂರಬೇಕು ಅನ್ನಿಸುತ್ತದೆ. ಯಾರೋ ಗೆಳೆಯರು,
" ಸೂರ್ಯೋದಯ, ಚಂದ್ರೋದಯ ದೇವರ ದಯ ಕಾಣೋ" ಎಂಬ ಕವಿವಾಣಿಯನ್ನು, ಕವಿಯೇನು ಹೊಸದಾಗಿ ಹೇಳಿದ ಎಂದು ಪ್ರಶ್ನೆ ಮಾಡಿದುದು ನೆನಪಿಗೆ ಬರುತ್ತದೆ. ಅವರಿಗೆ ತೋರಿಸಬೇಕು ಈ ಸೂರ್ಯೋದಯವನ್ನು ಅನ್ನಿಸುತ್ತದೆ.

8 comments:

Anonymous said...

Beautiful pictures. Tumba chennagi sere hididdira suryodayavannu nilgiri. Neevu barediruva shailiyu tumba chennagide. Thanks a lot.

Sumeru said...

Hello Girija! very beautiful pics....(-:
Sangeetha

Shubha said...

Excellent pictures...and it is quite true that we value sunshine more in winter prone countries as we get to see very little of it....

Poster quality pictures..... good writeup too...

NilGiri said...

Thanks Deepa( mallige)

ನನ್ನ ಬರಹವನ್ನು ಮೆಚ್ಚಿಕೊಂಡಿದ್ದಕ್ಕೆ ಹಾಗೂ ತಾಣಕ್ಕೆ ಭೇಟಿಕೊಡುತ್ತಾ ಪ್ರೋತ್ಸಾಹಿಸುತ್ತಿರುವ ನಿಮಗೆ ಧನ್ಯವಾದಗಳು :)

NilGiri said...

Thanks Sangeetha :)

NilGiri said...

Thanks Shubha :)

maddy said...

superb pictures...
tumba chennagive girija...

idana torisi avrige agladru artha agutteno kavi vaaniya artha!

NilGiri said...

ಕೆಲವೊಂದು ವಿಷಯಗಳು ಅವರವರೇ ತಿಳಿದುಕೊಂಡರೆ ಉತ್ತಮ ಅಲ್ವಾ ಮಧು! ಈಗಲ್ಲದಿದ್ದರೂ ಮುಂದೆ ಯಾವಾಗಲಾದರೂ ಗೊತ್ತಾಗುತ್ತದೆ ಬಿಡಿ :)

visitisidakke thanks