Wednesday, 27 February 2008

ಕಾಮನಬಿಲ್ಲು

ಕಾಮನಬಿಲ್ಲನ್ನು ಕಂಡರೆ ಖುಷಿಪಡದವರಾರು??! ಚಿಕ್ಕವರಿದ್ದಾಗ ಕಾಮನಬಿಲ್ಲನ್ನು ಕಂಡರೆ, " ಹೋ, ಕಾಗೆಗೂ ನರಿಗೂ ಮದ್ವೆ!"ಎಂದು ಕುಣಿದಾಡುತ್ತಿದ್ದೆವು. ಅದು ಯಾಕೆ ಕಾಗೆಗೂ ನರಿಗೂ ಮದುವೆ ಮಾಡಿಸುತ್ತಿದ್ದೆವೋ ದೇವರಿಗೇ ಗೊತ್ತು! ಮಳೆ ನಿಂತು ತಟ್ಟನೆ ಬೀಳುವ ಬಿಸಿಲಿಗೆ ಮೂಡುವ ಕಾಮನಬಿಲ್ಲನ್ನು ನೋಡಿಯೇ ಖುಷಿಪಡಬೇಕು.


ಮೊನ್ನೆ ಬಿಡದೆ ನಾಲ್ಕು ದಿನ ಸುರಿದ ಮಳೆ ನಿಂತಾಗ, " ಅಬ್ಬಾ, ಸಾಕಪ್ಪಾ ಸಾಕು ಈ ಮಳೆ ಎನ್ನಿಸಿತು. ಮಳೆ, ಗಾಳಿಗೆ ನನ್ನ ತೋಟವೆಲ್ಲಾ ನೆಂದು ತೊಪ್ಪೆಯಾಗಿ, ಆಸರೆಗೆ ಕೊಟ್ಟಿದ್ದ ಕೋಲುಗಳೇ ನೆಲಕಚ್ಚಿದ್ದವು. ಪುಣ್ಯಕ್ಕೆ ಹೆಚ್ಚಿನ ಹಾನಿಯಾಗಲಿಲ್ಲವಾದರೂ, ಇನ್ನೂ ಬೀಳುತ್ತಿದ್ದ ತುಂತುರು ಹನಿಯಲ್ಲೇ, ಮುಂಜಾಗ್ರತೆಯಾಗಿ ಮತ್ತಷ್ಟು ಕೋಲು ನೆಟ್ಟು, ದಾರ ಕಟ್ಟಿ, ಬೇಲಿಯನ್ನು ಬಂದೋಬಸ್ತು ಮಾಡಿದೆವು.


ಇಲ್ಲಿ ಯಾವಾಗ ಮಳೆ ಬೀಳುತ್ತದೋ, ಯಾವಾಗ ಬಿಸಿಲು ಬರುತ್ತದೋ ನನಗಂತೂ ಇಷ್ಟು ದಿನಕ್ಕೂ ಗೊತ್ತಾಗಿಲ್ಲ. ಮೊನ್ನೆ ಮಳೆ ನಿಂತ ತಕ್ಷಣ ಬಿದ್ದ ಬಿಸಿಲಿಗೆ ಮೂಡಿದ ಕಾಮನಬಿಲ್ಲನ್ನು ಸೆರೆ ಹಿಡಿಯಲು ಒಂದು ಸಣ್ಣ ಪ್ರಯತ್ನ.



























" ಕಾಮನಬಿಲ್ಲು ಕಮಾನು ಕಟ್ಟಿದೆ

ಮೋಡದ ನಾಡಿನ ಬಾಗಿಲಿಗೆ

ಬಣ್ಣಗಳೇಳನು ತೋರಣ ಮಾಡಿದೆ

ಕಂದನ ಕಣ್ಣಿಗೆ ಚಂದನ ಮಾಡಿದೆ

ಹಣ್ಣಿನ ಹೂವಿನ ಹೊನ್ನನು ಕೂಡಿದೆ

ಮಕ್ಕಳಿಗೋಕುಳಿ ಆಟವನಾಡಿದೆ

ತೆಂಗಿನ ತೋಟದ ಬುಡದಲಿ ಮೂಡಿದೆ

ಭೂಮಿಗೆ ಬಾನಿಗೆ ಸೇತುವೆ ಮಾಡಿದೆ."




ಎಂಬ ಪದ್ಯದ ಸಾಲುಗಳು ನನ್ನ ಮಟ್ಟಿಗಂತೂ ನಮ್ಮ ಮನೆ ಬಾಗಿಲಿಗೆ ಕಟ್ಟಿರುವಂತೆ ಕಾಣಿಸುತ್ತದೆ :)

17 comments:

Anonymous said...

Wow Nilgiri its a beautiful picture. Thanks for sharing....

Sumeru said...

Girija! very beautiful..:) i too feel the same... namma maneya bagila thorana thara (-:
Sangeetha

bhadra said...

ಕಾಮನಬಿಲ್ಲು ಬಹಳ ಚೆನ್ನಾಗಿದೆ, ಕಣ್ಣುಗಳು ತಂಪಾದುವು.
ಒಂದೇ ಚಿತ್ರವನ್ನು ಮೂರು ಬಾರಿ ಏರಿಸಿದ ಹಾಗೆ ಕಾಣುತ್ತಿದೆ ಅಲ್ವಾ?
ಬೇರೆ ಬೇರೆ ಚಿತ್ರಗಳಾದರೂ ನನಗೇಕೋ ವ್ಯತ್ಯಾಸ ಗೊತ್ತಾಗ್ತಿಲ್ಲ.

ಕಾಗೆ ನರಿ ಮದುವೆ ಬಗ್ಗೆ ಹೇಳಿದ್ದೀರಿ - ಅದರ ಬಗ್ಗೆ ನನ್ನ ಅನಿಸಿಕೆ ಹೀಗಿದೆ - ಮಳೆ ನಿಂತ ಬಳಿಕ ಬಿಸಿಲು ಬಂದು - ತೇವಾಂಶ - ಉಷ್ಣತೆ ಎರಡೂ ಇರುವುದು. ಮೈ ಒದ್ದೆಯಾದರೂ ತಕ್ಷಣ ಒಣಗುವುದು. ಎರಡೂ ವ್ಯತಿರಿಕ್ತ ಅನುಭವ. ಕಾಗೆ ನರಿ ಎಂದೂ ಒಂದಾಗೋಕೆ ಸಾಧ್ಯವಿಲ್ಲ. ನರಿಗೆ ಕಾಗೆ ಸಿಕ್ಕರೆ ಸುಮ್ಮನೆ ಬಿಡುವುದಾ? ಒಂದೇ ಏಟಿಗೆ ಗಬಕ್!

ಇದು ಕೇವಲ ನನ್ನ ಅನಿಸಿಕೆಯಷ್ಟೆ - ಸರಿ ಇಲ್ಲದಿರಬಹುದು
ಕಾಮನಬಿಲ್ಲು ಕಮಾನು ಕಟ್ಟಿ ... ಕವನ ಪೂರ್ತಿ ಮಾಡಿದ್ದರೆ ಚನ್ನಿತ್ತು :D
ಕಾಮನಬಿಲ್ಲಿನ ನಂತರ ಮುಂದೇನು ...

ಅಂತರ್ವಾಣಿ said...

ಗಿರಿಜಾ ಅವರೆ,
ತುಂಬಾ ಚೆನ್ನಾಗಿದೆ. ಕಾಮನ ಬಿಲ್ಲಿನ ಕವನ. ನಾನು ಬಾಲ್ಯದಲ್ಲಿ ಕಾಗೆ- ನರಿ ಮದುವೆ ಬಗ್ಗೆ ಮಾತಾಡುತ್ತಿದ್ದೆ.

maddy said...

aiyyo.. navu chikkoriddaga... bisilu-maLe baro time nalli Eeshwara snaana madta idane kailasadalli anthidvi :D :)))....

amele kaamanabillu barta ittu! :)

nange ondu haadu nenpaagutte..

'kaamana billina mele
kooguta saaguva railide...
beLLiya deepada kamba
chandaki maamana kailide....!

Good post..
:)

Pranathi said...

Beautiful girija....naanu illige bandmele suryana nodade aparoopa...innu kamanabillina,,,,,,kanasu kanbeku aste.
Chenagi ide pics n adara mele kavana kooda
Girija ondu request, nxt time inda font change madi bariri (kannadadu)

Shubha said...

BEAUTIFUL PICTURES

padyakke sariyada chitrano , chitrakke sariyada padyavo
both are equibeautiful... chikkavariddaga hadidddu matte nenapige bantu... beautiful work again.. keep it up Nilgiri.

Anveshi said...

"ಕಾಮನಬಿಲ್ಲನ್ನು ಕಂಡರೆ ಖುಷಿಪಡದವರಾರು??!" ಅಂತ ಆರಂಭದಲ್ಲೇ ಕೇಳಿದ್ದೀರಿ. ಆದರೆ ಅದನ್ನೇಕೆ ನೀವು ಸೆರೆ ಹಿಡಿದದ್ದು? ಮಾತ್ರವಲ್ಲ, ಸೆರೆ ಹಿಡಿದು ನಿಮ್ಮ ಮನೆ ಬಾಗಿಲಿಗೆ ಮಾತ್ರ ಕಟ್ಟಿದ್ದೇಕೆ?

ನಾವು ಕೂಡ ನರಿಯ ಮದ್ವೆ ಬಗ್ಗೆ ಕೇಳಿದ್ದೆವು. ಆದರೆ ಕಾಗೆ ಜತೆ ಅಂತ ಈಗ್ಗೊತ್ತಾಯ್ತು. ಗೊತ್ತಾದಾಗ ಮದುವೆಯೂಟ ಮುಗಿದಿತ್ತು...

NilGiri said...

Thanks Deepa :) innu yaake anonymous vesha?!

NilGiri said...

Thanks Sangeetha :)

NilGiri said...

ಕಾಮನಬಿಲ್ಲಿನ ಬಗ್ಗೆ ಸುಂದರವಾದ ವರ್ಣನೆ ಕೊಟ್ಟಿದ್ದಕ್ಕೆ ಧನ್ಯವಾದಗಳು ಸಾರ್ :)

ಕಾಗೆ-ನರಿಗಳ ಸ್ವಭಾವ ವ್ಯತಿರಿಕ್ತವಿರುವುದಿಂದಲೇ ಮದುವೆ ಮಾಡಿಸುತ್ತಿದ್ದೆವು ;-)

" ಕಾಮನ ಬಿಲ್ಲು" ಪದ್ಯ ಪೂರ್ತಿ ಮಾಡಿದ್ದೇನೆ :)

--ಮುಂದಿನ ಭಾಗ???..." ತೆರೆಯ ಮೇಲೆ ನೋಡಿ ಆನಂದಿಸಿ" ;-)

NilGiri said...

ತಾಣಕ್ಕೆ ಭೇಟಿ ಕೊಟ್ಟಿದ್ದಕ್ಕೆ ವಂದನೆಗಳು ಜಯಶಂಕರ್. ಕಾಮನಬಿಲ್ಲಿನ ಕವನ ನನ್ನದಲ್ಲ! ನನ್ನ ಚಿತ್ರಕ್ಕೆ ಯಾರೋ ಕವಿಯ ಕವನ ಕದ್ದು ಹಾಕಿಕೊಂಡಿದ್ದೇನೆ :)

NilGiri said...

ವಾಹ್ ವಾಹ್! Madhu, ನಿಮ್ಮ ಕವನ ಅದ್ಭುತ! ನಾವೆಲ್ಲ ಚಿಕ್ಕವರಿದ್ದಾಗ ಹೆದರಿಸಲಷ್ಟೇ ದೇವರು ಬರುತ್ತಿದ್ದುದು :) ಈಶ್ವರನ ಸ್ನಾನದ concept ಗೊತ್ತಿರಲಿಲ್ಲ ;-) Thanks Madhu.

NilGiri said...

Thanks Pranathi.

naavu modalidda oorinalli enoo gottaguttiralilla! illige bandamEle sooryana mukha
nodiddu ;-)

ellaroo " kavana" chennagide andiddeeri aadare adu nannadalla
:( nanna chitrakke matching aguttade endu kaddu tandiddene :D


Fonts enu change maDabeku Pranathi? doDDadu maaDalaa?

NilGiri said...

Thanks Shubha :)

chitrakke matching anta kavana haakiruve :)

ee kavana yaru baredaddu anta nimge gottaa Shubha?

visitisidakke thanks :)

NilGiri said...

ಚೆನ್ನಾಗಿ ಕಂಡದೆಲ್ಲಾ ನನಗೇ ಬೇಕು ಎಂಬ ದುರಾಸೆಯಲ್ಲಿ ಸೆರೆ ಹಿಡಿದು ನಮ್ಮ ಮನೆ ಬಾಗಿಲಿಗೆ ಕಟ್ಟಿಕೊಂಡಿರುವೆ ;-) ನೀವು ತಡವಾಗಿ ಬಂದಿರಿ ಅದಕ್ಕೇ ಊಟ ತಪ್ಪಿತು ಅನ್ವೇಷಿಗಳೇ :D


ವಿಸಿಟಿಸಿದ್ದಕ್ಕೆ ಧನ್ಯವಾದಗಳು.


Anonymous said...

HI Nilgir,

Nimma articles tumba chennagide.....

I have a request... with you... Please review the site: http://kannadahanigalu.co.nr/ and add the link in your blog.

This site is dedicated to kannadigas for there fun n entertainment in the native "KANNADA" language.

You can contact me for more @ kannadajokes@gmail.com

Thanking you,

Regards
Kannada Hanigala Balaga
http://kannadahanigalu.co.nr/