Thursday 14 June 2007

ಕೆಲವು ಜಾನಪದ ಗೀತೆಗಳ ಸಾಹಿತ್ಯ

ಕೋಲು ಕೋಲಣ್ಣ ಕೋಲೆ


ಕೋಲು ಕೋಲಣ್ಣ ಕೋಲೆ
ಕೋಲು ಕೋಲಣ್ಣ ಕೋಲೆ


ಮಲ್ಲಯ್ಯನಿರುವುದು ಇಲ್ಲಿಗೆ ಗಾವುದ
ಮಲ್ಲಯ್ಯ್ನ ಮಡದಿ ಮರುಗಮ್ಮ | ಇರುವುದು
ಕಲ್ಲು ಮಾಳಿಗೆ ಕೈಲಾಸ||



ಮಲ್ಲಯ್ಯ ಶಿವನೀ ವೆಲ್ಲಿಗಬಿಟ್ರೆ
ಮಲ್ಲಿಗೆ ಬೆಳಗೋ ಮತಿಘಟ್ಟನೆ ರಾಮಂದ್ರೆ
ಬೆಳಗಾಗಿ ಬಿಟ್ಟು ಪರುಸೆಯ||


ಒಕ್ಕಾಲ ಉರುಗೆಜ್ಜೆ ಒಕ್ಕಾಲ ಕಿರುಗೆಜ್ಜೆ
ಚೊಕ್ಕಾ ಬೆಳ್ಳಿ ಮಕರಂಭ
ಚೊಕ್ಕಾ ಬೆಳ್ಳೀಲಿ ಮಕರಂಭ ಕೀಲಕುದುರೆ
ಒಕ್ಕಾವು ಮಾರ್ನೊಮಿ ಪೌಜೀಗೆ||


ಆನೆ ಶೃಂಗಾರವಾಗಿ ಅಂಗಾಳದ ಗೈದಾವೆ
ಜಾಣ ತಾನೇಕೆ ಒರಟಾನೆ
ಜಾಣ ತಾನೇಕೆ ಒರಟಾನೆ ಲೋ ನಿನ್ನ
ಡೊಲು ಲಾಲಿಲಿ ಕರೆದಾವೆ||

~~~~~~~~~~~~~~~~~~~~~~~~~~~~~~~~~~~~~~~~~~~

ಎಲ್ಲೋ ಜೋಗಪ್ಪ ನಿನ್ನರಮನೆ



ಕಿನ್ನೂರಿ ನುಡಿಸೋನಾ ದನಿ ಚೆಂದಾವೊ
ಕಿನ್ನೂರಿ ನುಡಿಸೋನಾ ಬೆರಳಿನಂದ ಚೆಂದವೋ....


ಚಿಕ್ಕಿಯುಂಗರಕೆ ನಾರಿ ಮನಸಿಟ್ಟಳೂ
ಬೆಳ್ಳಿಯುಂಗರಕೆ ನಾರಿ ಮನಸಿಟ್ಟಳೂ
ಎಲ್ಲೋ ಜೋಗಪ್ಪ ನಿನ್ನರಮನೆ
ಎಲ್ಲೊ ಜೋಗಪ್ಪ ನಿನ್ನ ತಳಮನೆ ||

ಅಲ್ಲಲ್ಲಿ ದಾನವೂ ಅಲ್ಲಲ್ಲಿ ಧರ್ಮವೂ
ತಂದಿಡೆ ನಾರಿ ನೀ ನೀ ಸುಖವ |

ಅತ್ತಿತ್ತ ಬಂದರೆ ಅತ್ತೆ ಮಾವಂದಿರು ಬೈತಾರೆ
ಕೊಳ್ಳೋ ಜೋಗಪ್ಪ ನಿನ್ನ ಪಡಿದಾನ |

ಇತ್ತಿತ್ತ ಬಂದರೆತ್ತ ಮಾವಂದಿರು ಬಯ್ಯಲಿಕ್ಕೆ
ಅನೆಸಾಲು ನಾನು ಕದ್ದೇನೇನೆ | ನಾರಿ
ಕುದುರೆ ಸಾಲು ನಾನು ಕದ್ದೇನೇನೆ
ಹೆರವಾ ಹೆಣ್ಣಿಗೆ ನಾನು ಬಿದ್ದೆನೇನೆ ||ಎಲ್ಲೋ ಜೋಗಪ್ಪ||


ಇದ್ದ ಬದ್ದ ಬಟ್ಟೆನೆಲ್ಲ ಗಂಟು ಮೂಟೆ ಕಟ್ಟಿಕೊಂಡು....ಓ..
ಹೊರಟಾಳೂ ಜೋಗಿಯ ಹಿಂದುಗೂಟಿ | ನಾರಿ
ಹೊರಟಾಳೂ ಜೋಗಿಯ ಹಿಂದುಗೂಟಿ..


ಹಾರುವರ ಕೇರಿಯ ಗಾರೆಜಗಲಿಯ ಮೇಲೆ
ಕೋಲು ಕಿನ್ನೂರಿ ಮಾಡಿ ನುಡಿಸೋನೇ | ಜೋಗಿ
ಹೂವಾಗಿ ಬಾರೋ ನನ್ನ ತುರುಬೀಗೆ


ಹುಳ್ಳಿ ಹೊಲವಾ ಬಿಟ್ಟು ಒಳ್ಳೆ ಗಂಡಾನ ಬಿಟ್ಟು
ಸುಳ್ಳಾಡೋ ಜೋಗಿ ಕೂಡೋಗಬಹುದೇ | ನಾರಿ
ಪೊಳ್ಳಂತ ಜೋಗಿ ಕೂಡೋಗಬಹುದೆ || ಎಲ್ಲೋ ಜೋಗಪ್ಪ||


ಎಲ್ಲಾನು ಬಿಟ್ಟ ಮೇಲೆ ನನ್ನನ್ಯಾಕೆ ಬಿಡಲೊಲ್ಲೆ
ನನ್ಮೇಲೆ ನಿನಗೆ ಮನಸ್ಯಾಕೆ | ನಾರಿ
ನನ್ಮೇಲೆ ನಿನಗೆ ಮನಸ್ಯಾಕೆ....


ನಿನ್ನ ಕಂಡಾಗಿನಿಂದ ಕಣ್ಣುರಿ ಕಾಣೂ ಜೋಗಿ
ನಿನ್ನ ಬಿಟ್ಟು ನಾನಿರಲಾರೆ ಜೋಗಿ
ನಿನ್ನ ಬಿಟ್ಟು ನಾನಿರಲಾರೆ ಜೋಗಿ ||ಎಲ್ಲೋ ಜೋಗಪ್ಪ||


ಅಂತರಘಟ್ಟ ಬೆಂತರಘಟ್ಟ ಹತ್ತಲಾರೆ ಇಳಿಯಲಾರೆ
ಎಲ್ಲೋ ಜೋಗಪ್ಪ ನಿನ್ನರಮನೆ ಎಲ್ಲೋ ಜೋಗಪ್ಪ ನಿನ ತಳಮಾನೆ

ಅಂತರಘಟ್ಟ ಬೆಂತರಘಟ್ಟ ಅಲ್ಲಿಗರವತ್ತು ಘಟ್ಟ
ಅಲ್ಲಿದೆ ಕಾಣೆ ನನ್ನರಮನೆ | ನಾರಿ
ಅಲ್ಲಿದೆ ಕಾಣೆ ನನ್ನರಮನೆ ನಾರಿ ||ಎಲ್ಲೋ ಜೋಗಪ್ಪ||


~~~~~~~~~~~~~~~~~~~~~~~~~~~~~~~~~~~~~~~~~~~~~

ಚನ್ನಪ್ಪ ಚನ್ನಗೌಡ


ಚನ್ನಪ್ಪ ಚನ್ನಗೌಡ | ಕುಂಬಾರ ಮಾಡಿದ ಕೊಡನವ್ವ

ಚಂದಕ ತಂದೇನ ತಂಗಿ | ನೀರಿಗೆ ಬಂದೇನೆ



ಆರು ಮೂರು ಒಂಭತ್ತು | ತೂತಿನ ಕೊಡನವ್ವ

ಚಂದಕ ತಂದೇನ ತಂಗಿ | ನೀರಿಗೆ ಬಂದೇನೆ


ಬಾಳಿಯ ಬನದಾಗ ನಾ | ಹೆಂಗ ಬಾಗಿ ಬರಲೆವ್ವ

ಚೆಂದಕ ತಂದೇನೆ ತಂಗಿ | ನೀರಿಗೆ ಬಂದೇನೆ


ಲಿಂಬಿಯ ವನದಾಗ ನಾ ಹೆಂಗ ನಂಬಿ ಬರಲೆವ್ವ

ಚೆಂದಕ ತಂದೇನೆ ತಂಗಿ | ನೀರಿಗೆ ಬಂದೇನೆ


ದ್ಯಾಮವ್ವನ ಗುಡಿ ಮುಂದ ಒಬ್ಬ ಮುದುಕ ಕುಂತಿದ್ದಾ

ಗಾಂಜಾ ಸೇದತಿದ್ದಾ ಪಟಕಾ ಸುತ್ತಿದ್ದಾ


ಹುಯಿಲಗೋಳ ಕೇರಿಯಾಗ ನೀರು ತರುವಾಗ

ಕಲ್ಲು ತಾಕಿತ ತಂಗಿ ಕೊಡವು ಒಡೆಯಿತ


ಎವ್ವಾ ಇವನ್ಯಾರ ಮಂಚದ ಮ್ಯಾಲ ಮಲಗ್ಯಾನ

ಗೊತ್ತಿಲ್ಲೇನವ್ವಾ ತಂಗಿ ಶಿಶುನಾಳ ಶರೀಫಜ್ಜ


ಚೆಂದಕ ತಂದೇನೆ ತಂಗಿ | ನೀರಿಗೆ ಬಂದೇನೆ

~~~~~~~~~~~~~~~~~~~~~~~~~~~~~~~~~~~~~~~~~~~~~

ಮುಂಜಾನೆದ್ದು ಕುಂಬಾರಣ್ಣ

ಹಾಲು ಬಾನುಂಡಾನ

ಹಾರ್ಯರಿಮಣ್ಣಾ ತುಳಿದಾನ

ಹಾರಿ ಹಾರ್ಹಾರಿ ಮಣ್ಣ ತುಳಿದು ತಾ ಮಾಡ್ಯಾನ

ನಾರ್ಯಾರು ಹೊರುವಂತ ಐರಾಣಿ ||



ಹೊತ್ತಾರೆದ್ದು ಕುಂಬಾರಣ್ಣ

ತುಪ್ಪ ಬಾನುಂಡಾನ

ಗಟ್ಟೀಸಿ ಮಣ್ಣಾ ತುಳಿದಾನ

ಗಟ್ಟೀಸಿ ಮಣ್ಣಾ ತುಳಿಯೂತ ಮಾಡ್ಯಾನ

ಮಿತ್ರೇರು ಹೊರುವಂತ ಐರಾಣಿ||


ಅಕ್ಕಿ ಹಿಟ್ಟು ನಾವು ತಕ್ಕೊಂಡು ತಂದೀವಿ

ಗಿಂಡೀಲಿ ತಂದೀವ್ನಿ ತಿಳಿದುಪ್ಪ

ಗಿಂಡೀಲಿ ತಂದೀವ್ನಿ ತಿಳಿದುಪ್ಪ ಕುಂಬಾರಣ್ಣ

ತಂದೀಡು ನಮ್ಮ ಐರಾಣಿ ||


ಕುಂಬಾರಣ್ಣನ ಮಡದಿ ಕಡಗಾದ ಕೈಯಿಕ್ಕಿ

ಕೊಡದಾ ಮ್ಯಾಲೇನ ಬರದಾಳ

ಕೊಡದಾ ಮ್ಯಾಲೇನಾ ಬರೆದಾಳ್ ಕಲ್ಯಾಣದ ಶರಣಾ ಬಸವನ ನಿಲಿಸ್ಯಾಳ ||

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಹೆಣ್ಣಿನ ಜನುಮಾಕೆ



ಹೆಣ್ಣಿನ ಜನುಮಾಕೆ ಅಣ್ಣ ತಮ್ಮರು ಬೇಕು

ಬೆನ್ನು ಕಟ್ಟುವರು ಸಭೆಯೊಳಗೆ

ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ ಹೊನ್ನು ಕಟ್ಟುವರು ಉಡಿಯೊಳಗೆ||


ಎನಗೆ ಯಾರಿಲ್ಲಂತ ಮನದಾಗ ಮರುಗಿದರು

ಪರನಾಡಲೊಬ್ಬ ಪ್ರತಿಸೂರ್ಯ | ನನ್ನಣ್ಣ

ಬಿದಿಗೆ ಚಂದ್ರಾಮ ಉದಿಯಾದ


ಮನೆಯ ಹಿಂದಿಲ ಮಾವು ನೆನೆದಾರೆ ಘಮ್ಮೆಂದು

ನೆನೆದಂಗೆ ಬಂದ ನನ ಅಣ್ಣ| ಬಾಳೆ

ಗೊನೆಯಾಂಗೆ ತೋಳ ತಿರುವೂತ


ಸರದಾರ ಬರುವಾಗ ಸುರಿದಾವು ಮಲ್ಲಿಗೆ

ದೊರೆ ನನ್ನ ತಮ್ಮ ಬರುವಾಗ| ಯಾಲಕ್ಕಿ

ಗೊನೆ ಬಾಗಿಲ ಹಾಲು ಸುರಿದಾವು


ಅಣ್ಣ ಬರುತಾನಂತ ಅಂಗಳಕೆ ಕೈಕೊಟ್ಟು

ರನ್ನ ಬಚ್ಚಲಿಗೆ ಮಣೆ ಹಾಕಿ | ಕೇಳೇನು

ತಣ್ಣಗಿಹರಣ್ಣ ತವರವರು

~~~~~~~~~~~~~~~~~~~~~~~~~~~~~~~~~~~~~~~~~

ಚೆಲ್ವಿ ಚೆಲ್ವಿ ಎಂದು ಅತಿಯಾಸೆ ಪಡಬೇಡ
ಚೆಲ್ವು ಇದ್ದರೇನು ಗುಣವಿಲ್ಲ
ಹೊಳೆನೀರು ತಿಳಿ ಇದ್ದರೇನು ರುಚಿ ಇಲ್ಲಾ


ಕಪ್ಪು ಹೆಂಡತಿಯೆಂದು ಕಳವಳ ಪಡಬೇಡ
ನೇರಳೆ ಹಣ್ಣು ಬಲು ಕಪ್ಪು
ಇದ್ದರೂ ತಿಂದು ನೋಡಿದರೆ ರುಚಿ ಬಹಳ


ಕೆಂಪು ಹೆಂಡತಿಯೆಂದು ಸಂತೋಷ ಪಡಬೇಡ
ಹತ್ತಿಯ ಹಣ್ಣು ಬಲು ಕೆಂಪು
ಇದ್ದರೂ ಒಡೆದು ನೋಡಿದರೆ ಹುಳು ಬಹಳಾ


ಬಂಗಾರ ಬಳಿತೊಟ್ಟು ಬಡಿವಾರ ಬ್ಯಾಡ
ಬಂಗಾರ ನಿನಗೆ ಸ್ಥಿರವಲ್ಲ
ಮಧ್ಯಾಹ್ನ ಸಂಜೆಯಾಗುವುದು ತರವಲ್ಲ
~~~~~~~~~~~~~~~~~~~~~~~~~~~~~~~~~~~~~~~~~

ಅದು ಬೆಟ್ಟ ಇದು ಬೆಟ್ಟ


ಅದು ಬೆಟ್ಟ ಇದು ಬೆಟ್ಟವೋ ನಂಜುಂಡ

ನಂದ್ಯಾಲಗಿರಿ ಬೆಟ್ಟವೋ

ನಂದ್ಯಾಲಗಿರಿ ಬೆಟ್ಟಕೆ | ನಂಜುಂಡ

ದಾಸ್ವಾಳದ ಗಿಡ ಹುಟ್ಟಿತು



ದಾಸ್ವಾಳದ ಹೂವ ತಂದು | ನಂಜುಂಡ

ದಾರ್ಯಾಗ ಪೂಜೆ ಮಾಡಿ

ಹೂ ಬಾಡಿ ಹೋಗಿತಯ್ಯೋ | ನಂಜುಂಡ

ಎದ್ದು ಬಾರಯ್ಯ ಮನೆಗೆ


ಸ್ವಾತಿಯ ಮಳೆ ಹುಯ್ಯಿತೋ | ನಂಜುಂಡ

ಸಂಪಂಗಿ ಕೆರೆ ತುಂಬಿತೋ

ಸಂಪಂಗಿ ಕೆರೆಯ ಕೆಳಗೇ | ನಂಜುಂಡ

ಕೆಂಬತ್ತನೆಲ್ಲ ಬಿತ್ತಿ


ಸಾಲ್ಹಿಡಿದು ಕಬ್ಬ ನೆಟ್ಟು | ನಂಜುಂಡ

ಮುಂಭ್ಹಿಡಿದು ನೀರ ಕೊಟ್ಟು

ಜಲ ನೋಡಿ ಬಾವಿ ತೆಗೆಯೋ | ನಂಜುಂಡ

ಕುಲ ನೋಡಿ ಹೆಣ್ಣು ತೆಗೆಯೋ


ಮೂಡಲ ಸೀಮೆಯವನೇ | ನಂಜುಂಡ

ಮುತ್ತಿನ ಹಾರದವನೆ

ಬಡಗಲ ಸೀಮೆಯವನೇ | ನಂಜುಂಡ

ಬಯಲಾದ ರೂಪದವನೇ


ಸಾಲು ತೆಂಗಿನಮರವೋ | ನಂಜುಂಡ

ಮೇಲೆ ನಂಜಾನ ಗುಡಿಯು

ಹದಿನಾಲ್ಕು ಪರದಕ್ಷಿಣಾ | ನಂಜುಂಡ

ಹದಿನಾಲ್ಕು ಕಿರುದಕ್ಷಿಣಾ
~~~~~~~~~~~~~~~~~~~~~~~~~~~~~~~~~~~~~~~~~~~~~

ಭಾಗ್ಯದ ಬಳೆಗಾರ


ಭಾಗ್ಯದ ಬಳೆಗಾರ ಹೋಗಿ ಬಾ ನನ್ತವರಿಗೆ

ನಿನ್ನ ತವರೂರ ನಾನೇನು ಬಲ್ಲೇನು

ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆ ಬಾಲೆ

ತೋರಿಸು ಬಾರೇ ತವರೂರ



ಬಾಳೆ ಬಲಕ್ಕೆ ಬಿಡೊ, ಸೀಬೇ ಎಡಕ್ಕೆ ಬಿಡೊ

ನಟ್ಟ ನಡುವೇಲಿ ನೀ ಹೋಗೋ ಬಳೆಗಾರ

ಅಲ್ಲಿಹುದೇ ನನ್ನ ತವರೂರು

ಮುತ್ತೈದೆ ಎಲೆ ಹೆಣ್ಣೆ ತೋರುಬಾರೆ ತವರೂರ


ಅಂಚಿನ ಮನೆ ಕಾಣೊ ಕಂಚಿನ ಕದ ಕಾಣೊ

ಮಿಂಚಾಡೊವೆರಡು ಗಿಣಿ ಕಾಣೊ ಬಳೆಗಾರ

ಅಲ್ಲಿಹುದೇ ನನ್ನ ತವರೂರು

ಮುತ್ತೈಡೆ ಎಲೆ ಹೆಣ್ಣೆ ತೋರು ಬಾರೆ ತವರೂರ


ಆಲೆ ಆಡುತಾವೆ ಗಾಣ ತಿರುಗುತಾವೆ

ನವಿಲು ಸಾರಂಗ ನಲಿತಾವೆ ಬಳೆಗಾರ

ಅದೇ ಕಾಣೋ ನನ್ನ ತವರೂರು

ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರ



ಮುತ್ತೈದೆ ಹಟ್ಟೀಲಿ ಮುತ್ತೀನ ಚಪ್ಪರ ಹಾಕಿ

ನಟ್ಟ ನಡುವೇಲಿ ಪಗಡೆಯ ಆಡುತಾಳೆ

ಅವಳೆ ಕಾಣೊ ಎನ್ನ ಹಡೆದವ್ವಾ

ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರ


ಅಚ್ಚ ಕೆಂಪಿನ ಬಳೆ ಹಸಿರು ಗೀರಿನ ಬಳೆ

ಎನ್ನ ಹಡೆದವ್ಗೆ ಬಲು ಆಸೆ ಬಳೆಗಾರ

ಕೊಂಡೋಗೋ ಎನ್ನ ತವರಿಗೆ

ಭಾಗ್ಯದ ಬಳೆಗಾರ ಹೋಗಿ ಬಾ ನನ್ತವರಿಗೆ

~~~~~~~~~~~~~~~~~~~~~~~~~~~~~~~~~~~~~~~~~~~

ಚೆಲ್ಲಿದರು ಮಲ್ಲಿಗೆಯ


ಚೆಲ್ಲಿದರು ಮಲ್ಲಿಗೆಯಾ...
ಬಾಣಾಸೂರೇರಿ ಮ್ಯಾಲೆ..
ಅಂದಾದ ಚೆಂದಾದ ಮಾಯ್ಗಾರ ಮಾದೇವ್ಗೆ
ಚೆಲ್ಲಿದರು ಮಲ್ಲಿಗೆಯ||

ಮಾದಪ್ಪ ಬರುವಾಗಾ..
ಮಾಳೆಪ್ಪ ಘಮ್ಮೆಂದಿತೊ
ಮಾಳದಲಿ ಗರುಕೆ ಚಿಗುರ್ಯಾವೆ
ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ||


ಸಂಪಿಗೆ ಹೂವ್ನಂಗೇ
ಇಂಪಾದೊ ನಿನ್ನ ಪರುಸೆ
ಇಂಪಾದೊ ನಿನ್ನ ಪರುಸೆ
ಕೌದಳ್ಳಿ ಬಯಲಾಗಿ ಚೆಲ್ಲಿದರು ಮಲ್ಲಿಗೆಯ||


ಮಲ್ಲಿಗುವಿನ ಮಂಚಾ
ಮರುಗಾದ ಮೇಲೊದಪು
ತಾವರೆ ಹೂವು ತಲೆದಿಂಬು
ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ||


ಹೊತ್ತು ಮುಳಿಗಿದರೇನೂ
ಕತ್ತಲಾದರೇನು
ಅಪ್ಪಾ ನಿನ್ನ ಪರುಸೆ
ಬರುವೇವು ನಾವು ಚೆಲ್ಲಿದರು ಮಲ್ಲಿಗೆಯಾ||

~~~~~~~~~~~~~~~~~~~~~~~~~~~~~~~~~~~~~~~

ಕೋಲು ಕೋಲಣ್ಣ ಕೋಲೆ


ಕೋಲು ಕೋಲಣ್ಣ ಕೋಲೆ
ಕೋಲು ಕೋಲಣ್ಣ ಕೋಲೆ


ಮಲ್ಲಯ್ಯನಿರುವುದು ಇಲ್ಲಿಗೆ ಗಾವುದ
ಮಲ್ಲಯ್ಯ್ನ ಮಡದಿ ಮರುಗಮ್ಮ | ಇರುವುದು
ಕಲ್ಲು ಮಾಳಿಗೆ ಕೈಲಾಸ||



ಮಲ್ಲಯ್ಯ ಶಿವನೀ ವೆಲ್ಲಿಗಬಿಟ್ರೆ
ಮಲ್ಲಿಗೆ ಬೆಳಗೋ ಮತಿಘಟ್ಟನೆ ರಾಮಂದ್ರೆ
ಬೆಳಗಾಗಿ ಬಿಟ್ಟು ಪರುಸೆಯ||


ಒಕ್ಕಾಲ ಉರುಗೆಜ್ಜೆ ಒಕ್ಕಾಲ ಕಿರುಗೆಜ್ಜೆ
ಚೊಕ್ಕಾ ಬೆಳ್ಳಿ ಮಕರಂಭ
ಚೊಕ್ಕಾ ಬೆಳ್ಳೀಲಿ ಮಕರಂಭ ಕೀಲಕುದುರೆ
ಒಕ್ಕಾವು ಮಾರ್ನೊಮಿ ಪೌಜೀಗೆ||


ಆನೆ ಶೃಂಗಾರವಾಗಿ ಅಂಗಾಳದ ಗೈದಾವೆ
ಜಾಣ ತಾನೇಕೆ ಒರಟಾನೆ
ಜಾಣ ತಾನೇಕೆ ಒರಟಾನೆ ಲೋ ನಿನ್ನ
ಡೊಲು ಲಾಲಿಲಿ ಕರೆದಾವೆ||

~~~~~~~~~~~~~~~~~~~~~~~~~~~~~~~~~~~~~~~~~~~~

ಬಾಗಿ ಬಾಗಿ ಬಂಗಾರ ತೂಗಿ


ಬಾಗಿ ಬಾಗಿ ಬಂಗಾರ ತೂಗಿ
ಬೆಳ್ಳಿ ಮೂಡಿ ಬೆಳಗಾದವಮ್ಮ
ಗೋಕುಲ ಹೊಳಗೆ ಸಂಭ್ರಮವೆನ್ನಿರೆ
ನಂದಾನ ಕಂದ ಗೋವಿಂದ


ನಂದಾನ ಕಂದಾ ಗೋವಿಂದ ಕೃಷ್ಣನ
ಚಂದಾದಿ ತೊಟ್ಟಿಲೊಳಗಿಟ್ಟು
ಚಂದಾದಿ ತೊಟ್ಟಿಲೊಳಗಿಟ್ಟು ಗೋಪ್ಯಮ್ಮ
ನಂದಾದಿ ತೂಗುತ್ತ ಪಾಡಿದಳೆ

ಪೂತನಿಯ ಕೊಂದಾನೆ ಶಕಟನ ಮುರಿದಾನೆ
ಕಾಳಿಂಗ ಮಡುವ ಕಲಕಿದಾನೆ
ಕಾಳಿಂಗ ಮಡುವಾ ಕಲಕಿದ ಶ್ರೀ ಕೃಷ್ಣ
ರಕ್ಕಾಸರೆಲ್ಲರ ಮಡುವಿದಾನೆ


ಗೋವ್ಗಳ ಕಾಯ್ದಾನೆ ಬೆಣ್ಣೆಯ ಮೆದ್ದಾನೆ
ಬೆಟ್ಟಲ್ಲಿ ಬೆಟ್ಟಾವನೆತ್ತಿದ್ದನೆ
ಬೆಟ್ಟಲ್ಲಿ ಬೆಟ್ಟಾವನೆತ್ತಿದ ಶ್ರೀಕೃಷ್ಣ
ಗೋಪ್ಯಾರ ಸೀರೆ ಕದ್ದೊಯ್ದಾನೆ
~~~~~~~~~~~~~~~~~~~~~~~~~~~~~~~~~~~~~~~~~~~~
ಸರಕ್ಕ ಸರಿತಲ್ಲ


ಸರಕ್ಕ ಸರಿತಲ್ಲ
ಬೀಗರ ಸರೂಕ ತಿಳಿತಲ್ಲ||

ಆನೆ ಬರ್ತಾವಂತ ಆರು ಭಣವೆ ಕೊಂಡೆ
ಆನೆಲ್ಲಿ ನಿಮ್ಮ ದಳವೆಲ್ಲಿ | ಬೀಗ
ಬೋಳೋರಿ ಮ್ಯಾಲೆ ಬರುತಾನೆ||


ಒಂಟೆ ಬರ್ತಾವಂತ ಎಂತು ಭವಣೆಯ ಕೊಂಡೆ
ಒಂಟೆಲ್ಲಿ ನಿಮ್ಮ ದಳವೆಲ್ಲಿ |ಬೀಗ
ಕುಂಟೋರಿ ಮ್ಯಾಲೆ ಬರುತಾನೆ ||


ಬೀಗತಿ ಒಳ್ಳೆಯವಳೆಂದು ದೇವಾರ ಮನೆ ಕೊಟ್ಟಿ
ದೇವಾರ ಜಗುಲಿ ಬಿಟ್ಟುಕೊಟ್ಟೆ ಬೀಗುತಿ
ದೇವರಿಕ್ಕೊತಾಳೆ ಬಗಲೊಳಗೆ||


ಬೀಗುತಿ ಒಳ್ಳೆಯವಳೆಂದು ಅಡಿಗೆಯ ಮನೆ ಕೊಟ್ಟೆ
ಓಳೀಗೆ ಚೀಲ ಬಗಲಾಗಿ | ಅವರಣ್ಣ
ನಿಲಿಸಿ ನಂದು ಕೊಸುಗೊಂಡಾ||

ಎಲ್ಲಾರು ಕಟ್ಯಾರು ಮಲ್ಲಿಗೆ ಹೂವಿನ ದಂಡ
ಬೀಗುತಿ ಕಟ್ಯಾಳು ಹೊಲ್ಲೊರೆ| ಅವರಣ್ಣ
ಕುದುರೆಯಿಲ್ಲೆಂದು ಕಸುಗೊಂಡ||

~~~~~~~~~~~~~~~~~~~~~~~~~~~~~~~~~~~~~~~~~

ನಿಂಬಿಯಾ ಬನಾದ ಮ್ಯಾಗಳ


ನಿಂಬಿಯಾ ಬನಾದ ಮ್ಯಾಗಳ
ಚಂದ್ರಾಮ ಚೆಂಡಾಡಿದ|

ಎದ್ದೋನೆ ನಿಮಗ್ಯಾನ ಏಳುತಲಿ ನಿಮಗ್ಯಾನ
ಸಿದ್ಧಾರ ಗ್ಯಾನ ಶಿವೂ ಗ್ಯಾನ
ಸಿದ್ಧಾರ ಗ್ಯಾನ ಶಿವೂ ಗ್ಯಾನ ಮಾ ಶಿವನೆ
ನಿದ್ರೆಗಣ್ಣಾಗೆ ನಿಮಗ್ಯಾನ


ಆರೇಲಿ ಮಾವಿನ ಬೇರಾಗಿ ಇರುವೋಳೆ
ಓಲ್ಗಾದ ಸದ್ದಿಗೆ ಒದಗೋಳೆ
ಓಲ್ಗಾದ ಸದ್ದೀಗೆ ಒದಗೋಳೆ ಸರಸತಿಯೆ
ನಮ್ ನಾಲಿಗೆ ತೊಡಿರ ಬಿಡಿಸವ್ವಾ


ಎಂಟೆಲಿ ಮಾವಿನ ದಂಟಾಗಿ ಇರುವೋಳೆ
ಗಂಟೆ ಸದ್ದೀಗೆ ಒದಗೋಳೆ
ಗಂಟೆ ಸದ್ದೀಗೆ ಒದಗೊಳೆ ಸರಸತಿಯೆ
ನಮ್ ಗಂಟಾಲ ತೊಡರ ಬಿಡಿಸವ್ವಾ

ರಾಗಿ ಬೀಸೋಕಲ್ಲೆ ರಾಜಾನ ಒಡಿಗಲ್ಲೆ
ರಾಯ ಅಣ್ಣಯ್ನ ಅರಮನೆ
ರಾಯ ಅಣ್ಣಯ್ನ ಅರಮನೆಯ ಈ ಕಲ್ಲೆ
ನೀ ರಾಜಾ ಬೀದೀಲಿ ದನಿದೋರೆ


ಕಲ್ಲವ್ವಾ ಮಾತಾಯಿ ಮಲ್ಲವ್ವಾ ರಾಗೀಯ
ಜಲ್ಲಾ ಜಲ್ಲಾನೆ ಉದುರವ್ವಾ
ಜಲ್ಲಾ ಜಲ್ಲಾನೆ ಉದುರವ್ವ ನಾ ನಿನಗೆ
ಬೆಲ್ಲಾದಾರತಿಯ ಬೆಳಗೇನು
~~~~~~~~~~~~~~~~~~~~~~~~~~~~~~~~~~~~~~~~~~~~~~

ಮೂಡಲ್ ಕುಣಿಗಲ್ ಕೆರೆ


ಮೂಡಲ್ ಕುಣಿಗಲ್ ಕೆರೆ ನೋಡೋರ್ಗೋಂದೈಭೋಗ

ಮೂಡಿ ಬರ್ತಾನೆ ಚೆಂದಿರಾಮ|

ತಂತ್ರಿಗೆ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ

ಸಂತೆ ಹಾದಿಲ್ ಕಲ್ಲುಕಟ್ಟೆ||



ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲ್ ಕೆರೆ

ಭಾವ ತಂದಾನು ಬಣ್ಣದ ಸೀರೆ| ತಾನಂದಾನೂ

ಭಾವ ತಂದಾನು ಬಣ್ಣದ ಸೀರೆ||


ಅಹಾ ನಿಂಬೆಯ ಹಣ್ಣಿನಂತೆ ತುಂಬಿದ್ ಕುಣಿಗಲ್ ಕೆರೆ

ಆಂದಾ ನೋಡಾಲು ಶಿವ ಬಂದ | ತಾನಂದನೋ

ಅಂದಾ ನೋಡಾಲು ಶಿವ ಬಂದ ||


ಅಂದಾನೆ ನೋಡಲು ಶಿವ ಬಂದು ಶಿವಯೋಗಿ

ಕಪ್ಫಕ್ಕಿ ಬಾಯ ಬಿಡುತಾವೆ | ತಾನಂದನೋ

ಕಪ್ಫಕ್ಕಿ ಬಾಯಿ ಬಿಡುತಾವೆ ಬಿಡದಿ

ಗಪ್ಪಾಗೊಂಬಾಳೆ ನಡುಗ್ಯಾವೆ||


ಹಾರಕ್ಕೊಂದೂರುಗೋಲು ನೂಕಾಕ್ಕೊಂದೂರುಗೋಲು

ಬೊಬ್ಬೆ ಹೊಡೆದಾವೆ ಬಾಳೆಮೀನು | ತಾನಂದನೋ

ಬೊಬ್ಬೆಯ ಹೊಡೆದಾವೆ ಬಾಳೆಮೀನು ಕೆರೆಯಾಗೆ

ದೊಪ್ಪಿಸಾರಂಗ ನಗುತಾವೆ ತಾನಂದನೋ

ದೊಪ್ಪಿಸಾರಂಗ ನಗುತಾವೆ||

~~~~~~~~~~~~~~~~~~~~~~~~~~~~~~~~~~~~~~~~~~~~~

ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ


ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ
ಜೀವಕ್ಕಿಲ್ರಿ ಸಮಾಧಾನ
ಅವನಿಗೆ ಎಂತ ಬಿಗುಮಾನ
ಅವನೆ ನನ್ನ ಗೆಣೆಕಾರ


ಇಂದ್ರ ಲೋಕ್ದಲಿಲ್ಲ ಕಣ್ರಿ
ಚಂದ್ರಲೋಕ್ದಲಿಲ್ಲ ಕಣ್ರಿ
ಮೂರು ಲೋಕ್ದಲಿಲ್ಲ ಕಣ್ರಿ
ಅವನೆ ನನ್ನ ಗೆಣೆಕಾರ

ರೂಪ್ದಲವನು ಚಂದ್ರ ಕಣ್ರಿ
ರೂಪ್ದಲವನು ಇಂದ್ರ ಕಣ್ರಿ
ಕೇರಿಗೆಲ್ಲ ಒಬ್ನೆ ಕಣ್ರೆ
ಅವನೆ ನನ್ನ ಗೆಣೆಕಾರ

ಜಾತ್ರೆಲ್ ಅವನ ಕಂಡೆ ಕಣ್ರಿ
ಛತ್ರಿ ಮುಚ್ಚಿ ನಿಂತ ಕಣ್ರಿ
ಪಕ್ಕಕ್ ಬಂದು ನಿಂತ ಕಣ್ರಿ
ಅವನೆ ನನ್ನ ಗೆಣೆಕಾರ

ಮೊಲ್ಲೆ ಹೂವ ತಂದ ಕಣ್ರಿ
ತುರುಬಿನಲ್ಲಿ ಇಟ್ಟ ಕಣ್ರಿ
ಮೈಯೆಲ್ಲ ಜುಂ ಅಂತ್ರಿ
ಅವನೆ ನನ್ನ ಗೆಣೆಕಾರ

ಚಾವಡಿಗ್ ಬಂದು ನಿಂತ ಕಣ್ರಿ
ತಾಳಿ ಚಿನ್ನ ತಂದ ಕಣ್ರಿ
ನಂಗು ಅವನ್ಗು ಮದುವೆ ಕಣ್ರಿ
ಅವನೆ ನನ್ನ ಯಜಮಾನ
~~~~~~~~~~~~~~~~~~~~~~~~~~~~~~~~~~~~~~~~~~~~~~

ಕಲಿತ ಹುಡುಗಿ ಕುದುರಿ ನಡಗಿ

ನಡದು ಬರತಿತ್ತ

ಅದನ್ನು ಕಂಡ ನಮ್ಮ ಹಳ್ಳಿಮಂದಿಗೆ

ದಿಕ್ಕ ತಪ್ಪಿಹೋತ



ಉಟ್ಟ ಸೀರೆಯ ಕೆಳಗಿನ ದಡಿಯ ಕಸಾ ಹೊಡೆಯುತ್ತಿತ್ತಾ

ಮುನಸೀಪಾಲ್ಟಿ ಆಳಿನಕಿಂತ ಸ್ವಚ್ಛ ಮಾಡುತ್ತಿತ್ತ

ಜುಲುಪಿ ಬಿಟ್ಟ ಹಿಂಡ ರಿಬ್ಬನ್ನು ಬಾಚಿ ಕಟ್ಟಿತ್ತಾ

ಭರ್ರಂತ ನಡಿಯೋದ್ರಾಗ ರಿಬ್ಬನ್ನು ಢಿರಕಿ ಹೊಡಿತಿತ್ತಾ



ಬಣ್ಣದ ಮುಖಕ ಬಡಿದ ಪೌಡರು ಹಾರ್ಯಾರಿ ಬರುತಿತ್ತಾ

ಹಣೆಗೆ ಹಚ್ಚಿದ ಕುಂಕುಮ ಸಣ್ಣಗ ಹಣಿಕಿ ಹಾಕತಿತ್ತಾ

ಬಳೆಯಿಲ್ಲದ ಬಲಗೈಯಂತೂ ಬಣಬಣ ಅಂತಿತ್ತಾ

ಎಡಗೈಯಾಗ ರಿಷ್ಟವಾಚ್ ಬಡಿದು ಕುಂತಿತ್ತಾ


ಎತ್ತರ ಹಿಮ್ಮಡಿ ಚಪ್ಪಲ್ಲೊಮ್ಮೊಮ್ಮೆ ತೊಡ್ರಗಾಲ ಬಡಿತಿತ್ತಾ

ಮೊಳಕೈಗೊಂಡು ರೊಕ್ಕದ ಪರ್ಸ್ ಜೋತು ಬಿದ್ದಿತ್ತಾ

ಕಣ್ಣಿನ ನೋಟಕ ಕಾಲಿನ ತಾಳಕ ಎಲ್ಲಿಯ ಪುರುಸೊತ್ತಾ

ಬಳ್ಳಿಯಾಂಗ ಬಳುಕೂ ನಡುವ ನರ್ತನ ನಡೆಸಿತ್ತಾ


ಕಮ್ಮಾರ ಹುಡುಗ ಕಬ್ಬಿಣಾ ಕಾಸಿ ಬಡಕೊಂಡ ಕುಂತಿತ್ತಾ

ಹಾದು ಹೋಗುವ ಹುಡುಗಿಮ್ಯಾಗ ಅವನ ನೆದರ ಬಿತ್ತ

ಮ್ಯಾಲ ಎತ್ತಿದ ಕಬ್ಬಿಣ ಸುತ್ತಿಗೆ ಪಟ್ಟಂತ ಕೆಳಗ ಬಿತ್ತ

ಕಬ್ಬಿಣ ಮ್ಯಾಗ ಕುಂದ್ರೋ ಹೊಡತಾ ಕೈಯಮ್ಯಾಲ ಬಿತ್ತ


ಕುಂಬಾರ ಹುಡುಗಾ ಗಿಡಿಗಿ ಮಾಡಾಕ ಮಣ್ಣ ಕಲಸತಿತ್ತಾ

ಚಕ್ಕಂತ ಬಂದ ಹುಡುಗಿ ಮ್ಯಾಲ ಬಿತ್ತ ಅವನ ಚಿತ್ತ

ಬುಡುಕ ಕುಂತ ಹುಡುಗನ ಹೆಂಡತಿ ನೀರ ಬೆರಸತಿತ್ತ

ಹೆಂಡತಿ ಖಬರ ಇಲ್ಲದ ತುಳದಾನ ಸೊಂಟ ಮುರುದ ಬಿತ್ತ


ಮ್ಯಾದರ ಹುಡುಗ ಮೆಳ್ಳಗಣ್ಣೆಲೆ ಬಿದರ ಸೀಳತಿತ್ತ

ಮೂಲಿ ಹೊರಳಿ ಹುಡುಗಿ ಹೋಗುವಾಗ ಅವನ ಕಣ್ಣ ಬಿತ್ತ

ಬಿದರ ಸೀಳಿ ಎರಡೋಳಾಗಿದ್ದರು ಚೂರಿ ಸೀಳಿ ಬಂತ

ಬಟ್ಟ ಕತ್ತರಿ ಬಿದ್ದರೂ ಅವಗಾಗಲಿಲ್ಲ ಗೊತ್ತ


ಶೆಟ್ಟರ ಹುಡುಗ ಯಾಲಕ್ಕಿ ತೂಗಾಕ ಚಕ್ಕಡಿ ಹಿಡಿದಿತ್ತ

ಗಿರಾಕಿ ಕೂಡ ಮಾತಾಡುವಾಗ ಹುಡುಗಿ ಎದುರು ಬಂತ

ಯಾಲಕ್ಕಿ ತೂಗು ಹಾಕುವ ಕೈಯಾ ಹಾಕೇ ಹಾಕುತಿತ್ತಾ

ಹುಡುಗಿ ಗುಂಗಿನಾಗ ಯಾಲಕ್ಕಿ ಡಬ್ಬಿ ಖಾಲಿ ಹೋಗಿ ಹೋತಾ


ಸಿಂಪಿಗ್ಯಾರ ಹುಡುಗ ಅಂಗಿ ಹೊಲಿದು ಕಿಸೆ ಹಚ್ಚತಿತ್ತ

ಕಿಸೆ ಕತ್ತರಿಸಿ ಹಚ್ಚೊಮುಂದ ಹುಡುಗಿ ಎದುರುಬಂತ

ಹುಡುಗಿನ ನೋಡಿನ ಹುಡುಗನ ಅಳತಿ ಹೇರ ಪೇರ ಆತ

ಎದೆಗೆ ಹಚ್ಚು ಕಿಸಾದ ತುಕುಡಿ ಡುಬ್ಬಕ ಹಚ್ಚಿತ್ತ


ಪೂಜಾರ ಹುಡುಗ ಹನುಮಂತ ದೇವರ ಪೂಜೆಗೆ ನಡದಿತ್ತ

ಪೂಜಿವ್ಯಾಳೆ ಮೀರಿ ಹೋಗೈತಂತ ಗಡಬಡ ಸೊಂಟಿತ್ತ

ಬೆಕ್ಕು ಅಡ್ಡ ಹಾದು ಹೋಗುವಂಗ ಹುಡುಗಿ ಅಡ್ಡ ಬಂತ

ಪೂಜಾ ಮರೆತು ಬಾಯಿ ತೆರೆದು ನಿಂತು ಜೊಲ್ಲ ಸೋರತಿತ್ತ




ಬಡಿಗ್ಯಾರ ಹುಡುಗ ಆಳಿನ ಕೂಡ ಉಜ್ಜಗೊಡ್ಡ ಹೊಡಿತಿತ್ತ

ಕೊಡ್ಡದ ಮ್ಯಾಲ ಉಚ್ಚಗೊಡ್ಡು ಹಿಂದ ಮುಂದಾಗತಿತ್ತ

ಬಡಗ್ಯಾನ ಮರೆತು ಆಳು ಆ ಹುಡುಗಿನ ಡೊಗ್ಗಿ ನೋಡಿತ್ತ

ಹುಡುಗ್ತಿ ಲಕ್ಷ್ಯಕ್ಕ ಆಳಿನ ಡುಬ್ಬಾ ಕೆತ್ತಿ ಕೆತ್ತಿ ಹೋತಾ


ಚಾದ ಅಂಗಡಿ ಹೊರಗ ಆಳೊಂದು ಭಜಿ ಮಾಡತಿತ್ತ

ಭಜಿ ಮಾಡಿ ಮಾಡಿ, ಹಾಕುವಾಗ ಹುಡುಗಿ ಹಾದ ಹೋತ

ಹುಡುಗಿನ ನೋಡಿದ ಆಳು ಹುಡುಗನ ಜೀವ ಝಲ್ ಅಂತ

ಹಿಟ್ಟಿನ ಬುಟ್ಯಾಗ ಹಾಕುವ ಕೈಯಾ ಎಣ್ಣೆಗೆ ಹಾಕಿತ್ತ


ನಾದಿಗಾರ ಹುಡುಗನ ಮುಂದೊಂದು ಹಣ್ಣಣ್ಣ ಮುದುಕ ಕುಂತಿತ್ತ

ಹುಡುಗನ ಕತ್ತಿ ಮುದುಕನ ಮೀಸೆ ಕಟ್ ಮಾಡುತಿತ್ತ

ಹಾದಿಲೆ ಹೋಗುವ ಹುಡುಗಿನ ನೋಡ್ತಾ ಮುದುಕನ್ನ ಮರೆತ

ಲೇ ಅಂತ ಒದರುವಾಗ ಮೂಗು ಜಿಗಿದು ಬಿತ್ತ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಕುದುರೇನ ತಂದೀನಿ


ಕುದುರೇನ ತಂದೀನಿ ಜೀನಾವ ಬಿಗಿದೀನಿ

ಬರಬೇಕು ತಂಗಿ ಮದುವೇಗೆ



ಅಂಗ್ಳ ಗುಡಿಸೋರಿಲ್ಲ ಗಂಗ್ಳ ತೊಳೆಯೋರಿಲ್ಲ

ಹೆಂಗೆ ಬರಲಣ್ಣ ಮದುವೇಗೆ?

ಅಂಗ್ಳಾಕೆ ಆಳಿಡುವೆ ಗಂಗ್ಳಾಕೆ ತೊತ್ತಿಡುವೆ

ಬರಬೇಕು ತಂಗಿ ಮದುವೇಗೆ


ಮಳೆಯಾರ ಬಂದೀತು ಹೊಳೆಯಾರ ತುಂಬೀತು

ಹೆಂಗೆ ಬರಲಣ್ಣ ಮದುವೆಗೆ?


ಚಿನ್ನಾದ ಹರಿಗೋಲ್ಗೆ ರನ್ನಾದ ಹುಟ್ಟಾಕಿ

ಜೋಕೆಲಿ ನಿನ್ನ ಕರೆದೊಯ್ವೆ

ಬರಬೇಕು ತಂಗಿ ಮದುವೇಗೆ


ಅಪ್ಪಯಿದ್ದರೆ ಎನ್ನ ಸುಮ್ಮಾನೆ ಕಳುಹೋರೆ

ಅಮ್ಮಾ ಇಲ್ಲಾದ ಮನೆಯಲ್ಲಿ

ಬಂದಾರೆ ಬಂದೇನು ಅಂಗ್ಳದಾಗೆ ನಿಂದೇನು

ಕಣ್ದಾಗೆ ಧಾರೆ ಎರೆದೇನು
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಕೆಲವು ಭಾವಗೀತೆಗಳ ಸಾಹಿತ್ಯ

ಮಡಿಕೇರೀಲಿ ಮಂಜು

ಬೂಮೀನ್ ತಬ್ಬಿದ್ ಮೋಡ್ ಇದ್ದಂಗೆ
ಬೆಳ್ಳಿ ಬಳಿದಿದ್ ರೋಡ್ ಇದ್ದಂಗೆ
ಸಾಫಾಗ್ ಅಳ್ಳ ತಿಟ್ಟಿಲ್ದಂಗೆ

ಮಡಿಕೇರೀಲಿ ಮಂಜು !


ಮಡಗಿದ್ ಅಲ್ಲೇ ಮಡಗಿದ್ದಂಗೆ
ಲಂಗರ್ ಬಿದ್ದಿದ್ ಅಡಗಿದ್ದಂಗೆ
ಸೀತಕ್ ಸಕ್ತಿ ಉಡಗೋದಂಗೆ

ಅಳ್ಳಾಡಾಲ್ದು ಮಂಜು !


ತಾಯಿ ಮೊಗೀನ್ ಎತ್ಕೊಂಡಂಗೆ
ಒಂದಕ್ಕೊಂದು ಅತ್ಕೊಂಡಂಗೆ
ಮಡಕೇರೀನ ಎದೆಗೊತ್ಕೊಂಡಿ

ಜೂಗೀಡ್ಸಿತ್ತು ಮಂಜು !


ಮಲಗಾಕ್ ಸೊಳ್ಳೆ ಪರದೆ ಕಟ್ಟಿ
ಒದಿಯಾಕ್ ಒಗದಿದ್ ದುಬಟಿಕೊಟ್ಟಿ
ಪಕ್ದಾಗ್ ಗಂದದ್ ದೂಪ ಆಕ್ದಂಗ್

ಮಡಕೇರೀ ಮೇಲ್ ಮಂಜು !

ಮಂಜೀನ್ ಮಸಕಿಕ್ ಕಾವಲ್ನಲ್ಲಿ
ಒದಗಿದ್ ಉದ್ದಾನೆ ವುಲ್ನಲ್ಲಿ
ಒಳಗೇ ಏನೋ ಸರದೋದಂಗೆ

ಅಲಗಾಡ್ತಿತ್ತು ಮಂಜು !


ನಡಿಯೋ ದೊಡ್ದೊಡ್ ದೇವಲ್ನಂಗೆ
ಪಟ್ಣದ್ ಸುತ್ತಿನ್ ಕಾವಲ್ನಂಗೆ
ಅಲ್ಲಲ್ಲೇನೆ ಅಂಗಂಗೇನೆ

ಗಸ್ತಾಕ್ತಿತ್ತು ಮಂಜು !


ಸೂರ್ಯನ್ ಕರೆಯಾಕ್ ಬಂದ್ ನಿಂತೋರು
ಕೊಡಗಿನ್ ಎಲ್ಲಾ ಪೂವಮ್ನೋರು
ತೆಳ್ನ ಬೆಳ್ನೆ ಬಟ್ಟೇನಾಕಿ

ಬಂದಂಗಿತ್ತು ಮಂಜು !


ಚಿಮ್ತಾನಿದ್ರು ಎಳಬಿಸಲಿನ್ ಕೆಂಪು
ಮಂಜಿನ್ ಬಣ್ಣ ಕಣ್ಗೆ ತಂಪು
ಕೊಡಗಿನ್ ಲಸ್ಮೀರ್ ಪೂವಮ್ನೋರ್ಗೆ

ಆಲಿನ್ ಸೌಂದ್ರೀ ಮಂಜು !


ಅಗಲೇ ಬರಲಿ ರಾತ್ರೇ ಬರಲಿ
ಬಿಸಲು ನೆಳ್ಳು ಏನೇ ಇರಲಿ
ಕಣ್ಮರೆಯಾಗಕ್ ತಾವ್ ಕೊಡಾಲ್ದು

ಮಡಿಕೇರಿಗೆ ಮಂಜು !


ತೈಲ ನೀರಿನ್ ಮೇಗಿದ್ದಂಗೆ
ಪೂವಮ್ಮ- ನನ್ ತಂಗೀದ್ದಂಗೆ
ಬಿಟ್ಟೂಬಿಡದಂಗ್ ಇಡಕೋಂತಿತ್ತು

ಮಡಕೇರೀಗೆ ಮಂಜು !


~~~~~~~~~~~~~~~~~~~~~~~~~~~~~~~~~~~~~~

ನಂಜೆ ನನ್ ಅಪರಂಜೀ



ನೋಡಿದ್ರಾ ನಂ ನಂಜೀನಾವ

ನಂ ಗಜನಿಂಬೆ ನಂಜೀನಾವ


ಅವ್ಳ್ ನಕ್ರೆ ಗುಂಡ್ಗೆ ಗುಡಗ್ತೈತೆ ಜುಂ ಜುಂ ಜುಂ


ಅವ್ಳ್ ವಾರ್ಗಣ್ಣಿನ್ ನೋಟಕ್ಕೇವ

ಅವ್ಳ್ ಕೀಟ್ಳ್ ಆಟದ್ ಕಾಟಕ್ಕೇವ

ನಂ ಅಳ್ಳೀಲಿರೋ ಐದರೆಲ್ಲ ಗುಂ ಗುಂ ಗುಂ



ನಂಜಿ ನೀರಿಗ್ ಬರೊ ಝೋಕ್ನಾವ

ನೀರ್ ಸೇದೋ ಷೋಕ್ನಾವ

ಮೀರ್ಸಿದ್ ಉಡಿಗೀರ್ ಅಳ್ಳೀಲೇ ಇಲ್ಲಾ


ಅವ್ಳ್ ಅಟ್ಟಿ ಸೊರ್ಸೊ ಅಂದಾನಾವ

ಅವ್ಳ್ ತಟ್ಟಿದ್ ಬೆರ್ಣಿ ಚಂದಾನಾವ

ನೋಡಿ ನೋಡಿ ಸುಸ್ತಾಗಿವ್ನಿ - ನಾನೇನೇಳ್ಲಿ


ಚಿನ್ನದ್ ಗೊಂಬೆ ನಂಜಿ

ರನ್ನದ್ ಗೊಂಬೆ ನಂಜಿ

ನೀನ್ ಕಣ್ಣು ಮೋರೆ ತಾವ್ರೆ ಕಾರಂಜಿ


ನಿನ್ ಮೂತಿಗೆ ನಾನು ವುಚ್ಚು

ನಿನ್ ಮಾತಿಗೆ ನಾ ಬೆಚ್ಚು

ನಂಜೀ ನನ್ ಅಪರಂಜೀ


ನೋಡಿದ್ರಾ ನಂ ನಂಜೀನಾವ

ನಂ ಗೌಡನ್ ಮಗಲ್ ನಂಜೀನಾವ

ಅವ್ಳ್ ಅಟ್ಟೀಲೆಲ್ಲಾ ಅವಳ್ದೇ ದರ್ಬಾರ್

ಅವ್ಳ್ ಐನೆಟ್ಲೆ ರೇಗ್ಲಿ

ಅವ್ಳ್ ಅವ್ವೆ ಎಟ್ಟೆ ಕೂಗ್ಲಿ

ನಂಜಿ ಬುಟ್ರೆ ಬಾಯಿ ಅಳ್ಳಿ ಅಳ್ಳೀನೆ ಉಜಾರ್


ನಂಜೀನ್ ಮದ್ವೆ ಮಾಡ್ಕಳ್ಯಾಕೆ

ನಂಜೀನ್ ಅಟ್ಟೀಗ್ ತಂದ್ಕಳ್ಯಾಕೆ

ನಾನ್ ಪಟ್ಟಿದ್ದೆಲ್ಲಾ ಸಿವನೇ ಬಲ್ಲಾ

ಈಗ್ ನನ್ನೂ ನನ್ ನಂಜೀನೂವೇ

ನಮ್ಮಿಬ್ರೈದ್ಲು ಪುಟ್ನಂಜೀನ್ವೆ

ಮೀರ್ಸಿದ್ ಅಟ್ಟಿ ಅಳ್ಳಿಲೇ ಇಲ್ಲಾ


ಚಿನ್ನದ್ ಗೊಂಬೆ ದೊಡ್ನಂಜಿ

ರನ್ನದ್ ಗೊಂಬೆ ಪುಟ್ನಂಜಿ


ನಿಮ್ಮಿಬ್ಬರ್ ಮೋರೆ ತಾವ್ರೆ ಕಾರಂಜಿ

ನಿಮ್ ಮೂತಿಗೆ ನಾ ವುಚ್ಚು

ನಿಮ್ ಮಾತಿಗೆ ನಾ ಬೆಚ್ಚು

ಇಬ್ರೂ ನನ್ ಅಪರಂಜೀ....


-ಕೈಲಾಸಂ

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಪ್ರಾರ್ತನೆ


ಬ್ರಮ್ಮ! ನಿಂಗೆ ಜೋಡಿಸ್ತೀನಿ

ಯೆಂಡ ಮುಟ್ಟಿದ್ ಕೈನ!

ಬೂಮೀ ಉದ್ಕು ಬೊಗ್ಗಿಸ್ತೀನಿ

ಯೆಂಡ ತುಂಬ್ಕೊಂಡ್ ಮೈನ!



ಬುರ್ ಬುರ್ ನೊರೆ ಬಸಿಯೋವಂತ

ಒಳ್ಳೆ ವುಳಿ ಯೆಂಡ

ಕೊಡ್ರೀನ್ ನನ್ದು ಪ್ರಾತ್ನ್ ಕೇಳು

ಸರಸೋತಮ್ಮನ್ ಗಂಡ!


ಸರಸೋತಮ್ಮ ಮುನಸ್ಕೊಂಡೌಳೆ

ನೀನಾರ್ ಒಸ್ಸಿಯೋಳು;

ಕುಡದ್ಬುಟ್ ಆಡ್ದ್ರೆ ತೋದಲ್ತಾದಣ್ಣ

ನಾಲ್ಗೆ - ಬಾಳ ಗೋಳು !


ಅಕ್ಸ್ರಾನೆಲ್ಲಾ ಸರಸೋತಮ್ಮ

ಪಟ್ಟಾಗ್ ಇಡಕೊಂಬುಟ್ಟಿ

ಮುನಿಯ ಯೆಂಡ ಬುಡೂವಂಗೇನೆ

ಬುಡತಾಳ್- ಔಳ್ ಕೈ ಗಟ್ಟಿ!

ಮುನಿಯಂಗಾರ ಕಾಸ್ ಔಗ್ತೈತೆ

ಯೆಚ್ಗೆ ಯೆಂಡ ಬುಟ್ರೆ;

ಸರಸೋತಮ್ಮಂಗ್ ಏನೋಗ್ತೈತೆ

ಮಾತ್ ಸಲೀಸಾಗ್ ಕೊಟ್ರೆ?


ನಂಗೆ ನೀನು ಲಾಯ್ರಿಯಾಗಿ

ನನ್ ಕೇಸ್ ಗೆದ್ ಗಿದ್ ಕೊಟ್ರೆ

ಮಾಡ್ತೀನಣ್ಣ ನಿನ್ ವೊಟ್ಟೇನ

ವುಳೀ ಯೆಂಡಕ್ ಪೊಟ್ರೆ!

ಕಮಲದ್ ಊವಿನ್ ಕುರ್ಚಿ ಮ್ಯಾಗೆ

ಜೋಕಾಗ್ ಕುಂತ್ಕೊ ನೀನು

ನಾಕೂ ಬಾಯ್ಗೂ ನಾಕು ಬುಂಡೆ

ಯೆಂಡ ತತ್ತೀನ್ ನಾನು!


ಸರಸೋತಮ್ಮಂಗೆ ಯೋಳಾಕಿಲ್ಲ-

ನೀನೇನ್ ಎದರ್ಕೊ ಬೇಡ;

ಕೇಳಿದ್ ವರಾನ್ ವೊಂದಿಸ್ಕೊಟ್ರೆ

ತಕ್ಕೋ! ಯೆಂಡದ್ ಫೇಡ!



- ಜಿ.ಪಿ. ರಾಜರತ್ನಂ

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ದೋಣಿ ಹಾಡು

ದೋಣಿ ಸಾಗಲಿ, ಮುಂದೆ ಹೋಗಲಿ, ದೂರ ತೀರವ ಸೇರಲಿ !
ಬೀಸು ಗಾಳಿಗೆ ಬೀಳು ತೇಳುವ ತೆರೆಯ ಮೇಗಡೆ ಹಾರಲಿ !

ಹೊನ್ನ ಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ,
ನೋಡಿ, ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ! ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ !

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು ಮೂಡುತೈತರೆ ಬಾಲಕೋಮಲ ದಿನಮಣಿ!
ಹಸುರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿದೆ,
ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ!

ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ, ಅಂತೆ ತೇಲುತ ದೋಣಿಯಾಟವ ನೋಡಿರಿ
ನಾವು ಲೀಲಾಮಾತ್ರ ಜೀವರು, ನಮ್ಮ ಜೀವನ ಲೀಲೆಗೆ
ನೆನ್ನೆ ನೆನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ.

~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಯುಗಾದಿ:


ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ


ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ
ಬೇವಿನ ಕಹಿ ಬಾಳಿನಲಿ
ಹೂವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ


ಕಮ್ಮನೆ ಬಾಣಕೆ ಸೋತು
ಜಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕಾದಿದೆ


ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ,
ನಮಗೆ ಏಕೆ ಬಾರದೋ?
ಎಲೆ ಸನತ್ಕುಮಾರ ದೇವ!
ಎಲೆ ಸಾಹಸಿ ಚಿರಂಜೀವ
ನಿನಗೆ ಲೀಲೆ ಸೇರದೋ?


ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ವರುಷದ
ಹೊಸತು ಹೊಸತು ತರುತಿದೆ
ನಮ್ಮನ್ನಷ್ಟೆ ಮರಿತಿದೆ.

- ದ.ರಾ. ಬೇಂದ್ರೆ

~~~~~~~~~~~~~~~~~~~~~~~~~~~~~~~~~~~~~~~~~~~~~~~~

ಮೋಹನ ಮುರಲಿ:


ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?
ಹೂವು ಹಾಸಿಗೆ ಚಂದ್ರ, ಚಂದನ, ಬಾಹು ಬಂಧನ. ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ:
ಒಲಿದ ಮಿದುವೆದೆ, ರಕ್ತ ಮಾಂಸದ ಬಿಸಿದು ಸೋಕಿನ ಪಂಜರ
ಇಷ್ಟೆ ಸಾಕೆಂದಿದ್ದೆಯಲ್ಲೋ ಇಂದು ಏನಿದು ಬೇಸರ?
ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?
ಮರದೊಳಗಿಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ
ಏನೋ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ
ಸಪ್ತಸಾಗರದಚೆಯೆಲ್ಲೋ ಸುಪ್ತ ಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?
ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?
ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ನಿತ್ಯೋತ್ಸವ:

ಜೋಗದ ಸಿರಿ ಬೆಳಕಿನಲಿ, ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ...
ನಿತ್ಯೋತ್ಸವ, ತಾಯಿ ನಿತ್ಯೋತ್ಸವ ನಿನಗೆ.....


ಇತಿಹಾಸದ ಹಿಮದಲ್ಲಿನ ಸಿಂಹಾಸನ ಮೂಲೆಯಲ್ಲಿ
ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,
ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲ್ಲಿ....
ನಿತ್ಯೋತ್ಸವ, ತಾಯಿ ನಿತ್ಯೋತ್ಸವ ನಿನಗೆ.....


ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ-
ನಿತ್ಯೋತ್ಸವ, ತಾಯಿ ನಿತ್ಯೋತ್ಸವ ನಿನಗೆ.....


~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಜಯ ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೆ,
ಜಯ ಹೇ ರಸ ಋಷಿಗಳ ಬೀಡೇ!

ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂದನವತರಿಸಿದ

ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!


ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ.
ಹಸುರಿನ ಗಿರಿಗಳ ಸಾಲೆ
ನಿನ್ನಯ ಕೊರಳಿನ ಮಾಲೆ

ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!


ಶಂಕರ ರಾಮನುಜ ವಿದ್ಯಾರಣ್ಯ
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ

ಕಬ್ಬಿಗರುದಿಸಿದ ಮಂಗಳಧಾಮ
ಕವಿ ಕೋಗಿಲೆಗಳ ಪುಣ್ಯಾರಾಮ!
ನಾನಕ ರಮಾನಂದ ಕಬೀರರ

ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!

ತೈಲಪ ಹೊಯ್ಸಳರಾಳಿದ ನಾಡೆ,
ಡಂಕಣ ಜಕಣರ ನೆಚ್ಚಿನ ಬೀಡೆ,
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗ!

ಚೈತನ್ಯ ಪರಮಹಂಸರ ವಿವೇಕರ

ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!

ಸರ್ವ ಜನಾಂಗದ ಶಾಂತಿಯ ನೋಟ
ರಸಿಕರ ಕಂಗಳ ಸೆಳೆಯುವ ನೋಟ,
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ,

ಜನಕನ ಹೋಲುವ ದೊರೆಗಳ ಧಾಮ
ಗಾಯಕ ವೈಣಿಕರಾರಾಮ!

ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ!

ಜಯ ಭಾರತ ಜನನಿಯ ತನುಜಾತೆ!
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೆ,
ಜಯ ಹೇ ರಸಋಷಿಗಳ ಬೀಡೆ

~~~~~~~~~~~~~~~~~~~~~~~~~~~~~~~~~~~~~~~

ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು
ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು
ಕೇಳುವಿರಿ ಸಾಕೆನೆಗೆ ಅದುವೆ ಬಹುಮಾನ
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ,
ಹಾಡುವುದು ಅನಿವಾರ್ಯ ಕರ್ಮ ನನಗೆ
ಕೇಳುವವರಿಹರೆಂದು ನಾ ಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ.

~~~~~~~~~~~~~~~~~~~~~~~~~~~~~~~~~~~~~~~~~~~~~

ಹುಬ್ಬಳ್ಳಿಯಾಂವಾ:

ಇನ್ನೂ ಯಾಕ ಬರಲಿಲ್ಲವಾ ಹುಬ್ಬಳ್ಳಿಯಾಂವಾ
ವಾರದಾಗ ಮೂರು ಸರತಿ ಬಂದು ಹೋದಾಂವಾ


ಭಾರಿ ಜರದ ವಾರಿರುಮ್ಮಾಲಾ ಸುತ್ತಿಕೊಂಡಾಂವಾ
ತುಂಬ ಮೀಸಿ ತೀಡಿಕೋತ ಹುಬ್ಬ ಹಾರಸಾಂವಾ
ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ
ಏನೊ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ

ಇನ್ನು ಯಾಕ....

ತಾಳೀ ಮಣಿಗೆ ಬ್ಯಾಳಿಮಣೆ ನಿನಗೆ ಬೇಕೇನಂದಾಂವಾ
ಬಂಗಾರ-ಹುಡಿಲೇ ಭಂಡಾರನ ಬೆಳಸೇನಂದಾಂವಾ
ಕಸಬೇಕ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನಗ ಅಂದಾಂವಾ

ಇನ್ನು ಯಾಕ.....

ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗೆ ಹಾಕಿತೆಂದರೆ ಇದ್ದುಬಿಡಾಂವಾ
ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ
ಖರೇ ಅಂತ ಕೈ ಮಾಡಿದರೆ ಹಿಡಿದ ಬಿಡಾಂವಾ

ಇನ್ನು ಯಾಕ......

ಚಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮೀಸ ಬಂದಾಂವಾ
ಬೆರಳಿಗುಂಗುರಾ ಮೂಗಿನಾಗ ಮುಗಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀ ಹಾಂಗ ಎದ್ಯಾಗ ನಟ್ಟಾಂವಾ

ಇನ್ನು ಯಾಕಾ......

ಹುಟ್ಟಾ ಯಾಂವಾ ನಗೀಕ್ಯಾದಿಗೆ ಮುಡಿಸಿಕೊಂಡಾಂವಾ
ಕಂಡ ಹೆಣ್ಣಿಲೇ ಪ್ರೀತಿ ವೀಳ್ಳೆ ಮಡಚಿಕೊಂಡಾಂವಾ
ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
ಎದಿಮ್ಯಾಗಿನ ಗೆಣತಿನ ಮಾಡಿ ಇಟ್ಟುಕೊಂಡಾಂವಾ

ಇನ್ನು ಯಾಕ......

ಯಲ್ಲಿ ! ಮಲ್ಲಿ ॑ ಪಾರೀ ! ತಾರೀ ! ನೋಡೀರೇನ್ರೆವ್ವಾ?
ನಿಂಗೀ ! ಸಂಗೀ ! ಸಾವಂತರೀ ! ಎಲ್ಲ್ಹಾನ ನನ್ನಾಂವಾ?
ಸೆಟ್ಟರ ಹುಡುಗ ಸೆಟಗೊಂಡಾದಾ ಅಂತ ನನ್ನ ಜೀಂವಾ
ಹಾದೀಬೀದೀ ಹುಡಕತೈತ್ರೆ ಬಿಟ್ಟ ಎಲ್ಲಾ ಹ್ಯಾಂವಾ

ಇನ್ನು ಯಾಕ.........


~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ತೆರೆದಿದೆ ಮನೆ, ಓ , ಬಾ ಅತಿಥಿ!:

ತೆರಿದಿದೆ ಮನೆ, ಓ, ಬಾ ಅತಿಥಿ!
ಹೊಸಬೆಳಕಿನ ಹೊಸಗಾಳಿಯ ಹೊಸಬಾಳನು ತಾ, ಅತಿಥಿ!

ಎಲ್ಲಾ ಇದೆ ಇಲ್ಲಿ;
ಉಲ್ಲಾಸವೆ ಹಾ ಕುಡಿಮುರಿಟಿದ ಬಳ್ಳಿ!
ದೈನಂದಿನದತಿಪರಿಚಯ ಮಂದಲತೆಯನು ತಳ್ಳಿ
ಬಾ, ಚಿರನೂತನತೆಯ ಕಿಡಿ ಚೆಲ್ಲಿ,
ಓ, ನವಜೀವನ ಅತಿಥಿ!

ಆವ ರೂಪದೊಳು ಬಂದರು ಸರಿಯೆ

ಬಾ ಅತಿಥಿ!

ಆವ ವೇಷದಲಿ ನಿಂತರು ಸರಿಯೆ
ನೀನತಿಥಿ!

ನೇಸರುದಯದೊಲು ಬಹೆಯಾ? ಬಾ ಅತಿಥಿ!
ತಿಂಗಳಂದದಲಿ ಬಹೆಯಾ? ಬಾ ಅತಿಥಿ!
ಇಷ್ಟ ಮಿತ್ರರೊಲು? ಬಂಧು ಬಳಗದೊಲು?
ಸುಸ್ವಾಗತ ನಿನಗತಿಥಿ!

ಕಷ್ಟದಂದದಲಿ? ನಷ್ಟದಂದದಲಿ?
ಸ್ವಾಗತವದಕೂ ಬಾ, ಅತಿಥಿ!

ಇಂತಾದರೂ ಬಾ; ಅಂತಾದರೂ ಬಾ;
ಎಂತಾದರೂ ಬಾ; ಬಾ, ಅತಿಥಿ!
ಬೇಸರವಿದನೋಸರಿಸುವ ಹೊಸ ಬಾಳುಸಿರಾಗಿ,
ಬಾ, ಅತಿಥಿ!

ಹಾಡುವ ಹಕ್ಕಿಯ ಗೆಲುವಾಗಿ,
ಬಾ, ಅತಿಥಿ!
ಮೂಡುವ ಚುಕ್ಕಿಯ ಚೆಲುವಾಗಿ,
ಬಾ, ಅತಿಥಿ!
ಕಡಲಾಗಿ, ಬಾನಾಗಿ,
ಗಿರಿಯಾಗಿ, ತಾನಾಗಿ,
ಚಿರನವತೇತನ ಝರಿಯಾಗೆ
ಬೇಸರವನು ಕೊಚ್ಚುತೆ ಬಾ, ಅತಿಥಿ!

ಉಲ್ಲಾಸದ ರಸಬುಗ್ಗೆಯ ಚಿಮ್ಮಿಸಿ ಬಾ, ಅತಿಥಿ!
ವಿಷಣ್ಣತೆಯನು ಪರಿಹರಿಸಿ
ಪ್ರಸನ್ನತೆಯಾ ಸೊಡರುರಿಸಿ
ಮನಮಂದಿರದಲಿ ಮಧುರತಿಯಾರತಿಯೆತ್ತುತೆ
ಬಾ, ಅತಿಥಿ!

ತೆರೆದಿದೆ ಮನೆ, ಓ , ಬಾ ಅತಿಥಿ!
ಹೊಸತಾನದ ಹೊಸಗಾನದ ರಸಜೀವನ ತಾ, ಅತಿಥಿ!


~~~~~~~~~~~~~~~~~~~~~~~~~~~~~~~~~~~~~~~~~~~~~~~~

ಜೋಗದ ಝೋಕ್:


ಮಾನವನಾಗಿ ಹುಟ್ಟಿದ ಮ್ಯಾಲೆ ಏನೇನ್ ಕಂಡಿ|
ಸಾಯೋತನಕ ಸಂಸಾರ್ ದೊಳಗೆ ಗಂಡಾಗುಂಡಿ|
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ|
ಇರೋದರೊಳಗೆ ನೋಡು ಒಮ್ಮೆ ಜೋಗದ ಗುಂಡಿ|


ತಾಲಗುಪ್ಪಿ ತಾರಕವೆಂಬ ಬೊಂಬಾಯ್ ಮರ|
ಸಾಲಗುಡ್ಡದ ಮ್ಯಾಲೆ ನೋಟಕ ಭಟ್ಕಳ್ ಮರ|
ದಾರ ಕಡಿದು ಮಾಡಿದಾಗ ಗುಡ್ಡ ಬೆಟ್ಟ|
ಪಶ್ಚಿಮ ಘಟ್ಟದ ಮ್ಯಾಲೆ ನೋಡು ಮೈಸೂರ್ ಬಾವುಟ|


ನಾಡಿನೊಳಗೆ ನಾಡು ಚೆಲುವು ಕನ್ನಡ ನಾಡು|
ಬೆಳ್ಳಿ ಬಂಗಾರ ಬೆಳಿಯುತಾವೆ ಬೆಟ್ಟ ಕಾಡು|
ಭೂಮಿತಾಯಿ ಮುಡಿದು ನಿಂತಾಳ್ ಬಾಸಿಂಗ ಜೋಡು|
ಬಾಣಾವತಿ ಬೆಡಗಿನಿಂದ ಬರ್ತಾಳ್ ನೋಡು


ಅಂಕು ಡೊಂಕು ವಂಕಿ ಮುರಿ ರಸ್ತೆ ದಾರಿ|
ಹತ್ತಿ ಇಳಿದು ಸುತ್ತಿದಂಗೆ ಹಾವಿನ ಮರಿ|
ತೊಟ್ಟಿಲ ಜೀಕಿ ಆಡಿಧ್ಹಾಂಗ ಮನಸಿನ ಲಹರಿ|
ನಡೆಯುತದೆ ಮೈಸೂರೊಳಗೆ ದರಂದುರಿ


ಹೆಸರು ಮರ್ತಿ ಶರಾವತಿ ಅದೇನ್ ಕಷ್ಟ|
ಕಡೆದ ಕಲ್ಲ ಕಂಬದ ಮ್ಯಾಲೆ ಪೂಲಿನಕಟ್ಟ|
ಎಷ್ಟು ಮಂದಿ ಎದೆಯ ಮುರಿದು ಪಡುತಾರೆ ಕಷ್ಟ|
ಸಣ್ಣದರಿಂದ ದೊಡ್ಡದಾಗಿ ಕಾಣೋದ್ ಬೆಟ್ಟ


ಬುತ್ತಿ ಉಣುತಿದ್‍ರುಣ್ಣು ಇಲ್ಲಿ ಸೊಂಪಾಗಿದೆ|
ಸೊಂಪು ಇಂಪು ಸೇರಿ ಮನಸು ಕಂಪಾಗ್ತದೆ|
ಕಂಪಿನಿಂದ ಜೀವಕ್ಕೊಂದು ತಂಪಾಗ್ತದೆ|
ತಂಪಿನೊಳಗೆ ಮತ್ತೊದೇನೋ ಕಾಣಸ್ತದೆ


ಅಡ್ಡ ಬದಿ ಒಡ್ಡು ನಿಲಿಸಿ ನೀರಿನ ಮಿತಿ|
ಇದರ ಒಳಗೆ ಇನ್ನು ಒಂದು ಹುನಾರೈತಿ|
ನೀರ ಕೆಡವಿ ರಾಟೆ ತಿರುವಿ ಮಿಂಚಿನ ಶಕ್ತಿ|
ನಾಡಿಗೆಲ್ಲ ಕೊಡ್ತಾರಂತೆ ದೀಪದ ತಂತಿ


ಊಟ ಮುಗಿದಿದ್ದೇಳು ಮುಂದೆ ನೋಡೋದದೆ|
ನೋಡುತ್ತಿದ್ರೆ ಬುದ್ಧಿ ಕೆಟ್ಟು ಹುಚ್ಚಾಗ್ತದೆ|
ಬೇಕಾದ್ರಲ್ಲಿ ಉಡುಪಿ ಮಾವನ ಮನೆಯೊಂದಿದೆ|
ಉಳಿಯೋದಾದ್ರೆ ಮಹರಾಜ್ರ ಬಂಗ್ಲೆ ಅದೆ


ನೋಡು ಗೆಳೆಯ ಜೋಕೆ ಪಾತಾಳ ಗುಂಡಿ|
ಹಿಂದಕೆ ಸರಿದು ನಿಲ್ಲು ತುಸು ಕೈತಪ್ಪಿಕೊಂಡಿ|
ಕೈಗಳಳ್ತಿ ಕಾಣಸ್ತದೆ ಬೊಂಬಾಯ್ ದಂಡೀ
ನಮ್ಮದಂದ್ರೆ ಹೆಮ್ಮೆಯಲ್ಲ ಜೋಗದ ಗುಂಡೀ


ಶಿಸ್ತುಗಾರ ಶಿವಪ್ಪ ನಾಯ್ಕ ಕೆಳದಿಯ ನಗರ|
ಚಿಕ್ಕದೇವ ದೊಡ್ಡದೇವ ಮೈಸೂರಿನವರ|
ಹಿಂದಕ್ಕಿಲ್ಲಿ ಬಂದಿದ್ರಂತೆ ಶ್ರೀರಾಮರ|
ಎಲ್ಲ ಕಥೆ ಹೇಳುತದೆ ಕಲ್ಪಾಂತರ


ರಾಜಾ, ರಾಕೆಟ್, ರೋರರ್, ಲೇಡಿ ಚತುರ್ಮುಖ|
ಜೋಡಿಗೂಡಿ ಹಾಡಿತಾವೆ ಹಿಂದಿನ ಸುಖ|
ತಾನು ಬಿದ್ರೆ ಆದಿತೇಳು ತಾಯಿಗೆ ಬೆಳಕ|
ಮುಂದಿನವರು ಕಂಡರೆ ಸಾಕು ಸ್ವಂತ ಸುಖ


ಒಂದು, ಎರಡು, ಮೂರು ನಾಲ್ಕು ಆದಾವ ಮತ|
ಹಿಂದಿನಿಂದ ಹರಿದು ಬಂದದ್ದೊಂದೇ ಮತ|
ಗುಂಡಿ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ|
ಮುಂದೆ ಹೋಗಿ ಸೇರುವಲ್ಲಿಗೊಂದೇ ಮತ


ಶಹಜಹಾನ ತಾಜಮಹಲು ಕೊಹಿನೂರ್ ಮಣಿ|
ಸಾವಿರಿದ್ರು ಸಲ್ಲವಿದಕೆ ಚೆಲುವಿನ ಕಣಿ|
ಜೀವವಂತ ಶರಾವತಿಗಿನ್ನಾವ್‍ದೆಣೆ|
ಹೊಟ್ಟೆಗಿಚ್ಚಿಗಾಡಿಕೊಂಡ್ರೆ ಅದಕಾರ್ ಹೊಣೆ


ಶರಾವತಿ ಕನ್ನಡ ನಾಡ ಭಾಗೀರಥಿ|
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತಿ
ಸಾವು ನೋವು ಸುಳಿಯದಿಲ್ಲಿಯ ಕರಾಮತಿ|
ಮಲ್ಲೇಶನ ನೆನೆಯುತ್ತಿದ್ರೆ ಜೀವನ್ಮುಕ್ತಿ

~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಹೌದೇನೇ ಉಮಾ


ಹೌದೇನೇ ಉಮಾ ಹೌದೇನೆ,
ಜನವೆನ್ನುವುದಿದು ನಿಜವೇನೇ?

ಮಸಣದ ಬೂದಿಯ ಮೈಗೆ ಬಳಿದು ಶಿವ
ಎಲ್ಲೆಲ್ಲೋ ತಿರುಗುವನಂತೆ |
ಹೊಟ್ಟೆಬಟ್ಟೆಗೂ ಗತಿಯಿಲ್ಲದರೊಲು
ಊರೂರಲು ತಿರಿದುಂಬವನಂತೆ |
ನೀನು ಕೂಡ ಬಂಗಾರದ ಮೈಯಿಗೆ
ಆ ಬೂದಿಯನೇ ಬಳಿಯುವೆಯಂತೆ |

ನಿನ್ನ ತಾಯಿ ನಾನಾಗಿಹ ತಪ್ಪಿಗೆ
ಸಹಿಸಬೇಕೆ ಅವಮಾನವನು?
ಮತ್ತೆ ನಿನ್ನ ಶಿವ ಕರೆಯಲು ಬರಲಿ,
" ಮನೆಯೊಳಿಲ್ಲ ಉಮೆ"- ಎನ್ನುವೆನು.


- ಜಿ. ಎಸ್. ಶಿವರುದ್ರಪ್ಪ

~~~~~~~~~~~~~~~~~~~~~~~~~~~~~~~~~~~~~~~~~~~

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು


ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಲುಹೀನ ನಿಧಿಯು ಸದಭಿಮಾನದ ಗೂಡು


ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು


ಲೆಕ್ಕಿಗ ಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು
ಚೊಕ್ಕ ಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು


ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಆವಗಂ ಸ್ಫೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು.

~~~~~~~~~~~~~~~~~~~~~~~~~~~~~~~~~~~~~~~~~~~

ವನಸುಮ


ವನಸುಮದೊಳೆನ್ನ ಜೀ
ವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ - ಹೇ ದೇವ


ಜನಕೆ ಸಂತಸವೀವ
ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ


ಕಾನನದಿ ಮಲ್ಲಿಗೆಯು
ಮೌನದಿಂ ಬಿರಿದು ನಿಜ
ಸೌರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು
ದೀನತೆಯ ತೋರಿ ಅಭಿ
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ

ಉಪಕಾರಿ ನಾನು ಎ
ನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನುಳಿದು
ವಿಪುಲಾಶ್ರಯವನೀವ
ಸುಫಲ ಸುಮಭರಿತ ಪಾ
ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು

- ಡಿ.ವಿ.ಗುಂಡಪ್ಪ.

~~~~~~~~~~~~~~~~~~~~~~~~~~~~~~~~~~~~~~~~~~~~

ಅನಂತ ಪ್ರಣಯ


ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ

ಚುಂಬಕ ಗಾಳಿಯು ಬೀಸುತಿದೆ.

ಸೂರ್ಯನ ಬಿಂಬಕೆ ಚಂದ್ರನ ಬಿಂಬವು

ರಂಬಿಸಿ ನಗೆಯಲಿ ಮೀಸುತಿದೆ.


ಭೂರಂಗಕೆ ಅಭಿಸಾರಕೆ ಕರೆಯುತ

ತಿಂಗಳು ತಿಂಗಳು ನವೆಯುತಿದೆ

ತುಂಬುತ ತುಳುಕಿತ ತೀರುತ ತನ್ನೊಳು

ತಾನೇ ಸವಿಯನು ಸವಿಯುತಿದೆ.


ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ

ಕೋಟಿ ಕೋಟಿ ಸಲ ಹೊಸಯಿಸಿತು

ಮಿತ್ರನ ಮೈತ್ರಿಯ ಒಸಗೆ ಮಸಗದಿದೆ

ಮರುಕದ ಧಾರೆಯ ಮಸೆಯಿಸಿತು.


ಅಕ್ಷಿ ನಿಮೀಲನ ಮಾಡದೆ ನಕ್ಷ-

ತ್ರದ ಗಣ ಗಗನದಿ ಹಾರದಿದೆ

ಬಿದಿಗೆಯ ಬಿಂಬಾಧರದಲಿ ಇಂದಿಗು

ಮಿಲನದ ಚಿಹ್ನವು ತೋರದಿದೆ.



- ದ.ರಾ.ಬೇಂದ್ರೆ.
~~~~~~~~~~~~~~~~~~~~~~~~~~~~~~~~~~~~~~~~~~~~~

ಕನ್ನಡ್ ಪದಗೊಳು



ಯೆಂಡ ಯೆಡ್ತಿ ಕನ್ನಡ್ ಪದಗೊಳ್

ಅಂದ್ರೆ ರತ್ನಂಗ್ ಪ್ರಾಣ!

ಬುಂಡೇನ್ ಎತ್ತಿ ಕುಡುದ್ಬುಟ್ಟಾಂದ್ರೆ-

ತಕ್ಕೊ ! ಪದಗೊಳ್ ಬಾಣ!



ಬಗವಂತ್ ಏನ್ರ ಬೂಮೀಗ್ ಇಳದು

ನನ್ ತಾಕ್ ಬಂದಾಂತ್ ಅನ್ನು

ಪರ್ ಗಿರಿಕ್ಸೆ ಮಾಡ್ತಾನ್ ಔನ್

ಬಕ್ತನ್ ಮೇಲ್ ಔನ್ ಕಣ್ಣು!


ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!

ಅಂತ ಔನ್ ಏನಾರ್ ಅಂದ್ರೆ-

ಮೂಗ್ ಮೂರ್ ಚೂರಾಗ್ ಮೂರಸ್ಕೋಂತೀನಿ

ದೇವರ್ ಮಾತ್ಗ್ ಅಡ್ಬಂದ್ರೆ!


ಯೆಂಡ ಬುಟ್ಟೆ ಯೇಡ್ತೀನ್ ಬುಟ್ ಬುಡ್!

ಅಂತ ಔನ್ ಏನಾರ್ ಅಂದ್ರೆ-

ಕಳದೋಯ್ತ್ ಅಂತ ಕುಣದಾಡ್ತೀನಿ

ದೊಡ್ಡ್ ಒಂದು ಕಾಟ ! ತೊಂದ್ರೆ!


' ಕನ್ನಡ್ ಪದಗೊಳ್ ಆಡೋದ್ನೇಲ್ಲ

ನಿಲ್ಲೀಸ್ ಬುಡಬೇಕ್ ರತ್ನ!

ಅಂತ್ ಔನ್ ಅಂದ್ರೆ-ದೇವ್ರೆ ಆದ್ರ್ ಏನು!

ಮಾಡ್ತೀನ್ ಔನ್ಗೆ ಖತ್ನ!


ಆಗ್ನೆಮಾಡೋ ಐಗೋಳ್ ಎಲ್ಲಾ

ದೇವ್ರೆ ಆಗ್ಲಿ - ಎಲ್ಲ!

ಕನ್ನಡ್ ಸುದ್ದೀಗ್ ಏನ್ರ ಬಂದ್ರೆ

ಮಾನಾ ಉಳಸಾಕಿಲ್ಲ!


ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ

ಬಾಯ್ ಒಲಿಸಾಕಿದ್ರೂನೆ-

ಮೂಗ್ನಲ್ ಕನ್ನಡ್ ಪದವಾಡ್ತೀನಿ

ನನ್ ಮನಸನ್ ನೀ ಕಾಣೆ!


ಯೆಂಡ ವೋಗ್ಲಿ ! ಯೆಡ್ತಿ ವೋಗ್ಲಿ!

ಎಲ್ಲಾ ಕೊಚ್ಕೊಂಡ್ ವೋಗ್ಲಿ!

ಪರ್ಪಂಚ್ ಇರೋ ತನಕ ಮುಂದೆ

ಕನ್ನಡ್ ಪದಗೊಳ್ ನುಗ್ಲಿ!



-ಜಿ. ಪಿ. ರಾಜರತ್ನಂ
~~~~~~~~~~~~~~~~~~~~~~~~~~~~~~~~~~~~~~~~~~~~~

ನನ್ನವಳು ನನ್ನೆದೆಯ ಹೊನ್ನಾಡನಾಳುವಳು



ನನ್ನವಳು ನನ್ನೆದೆಯ ಹೊನ್ನಾಡನಾಳುವಳು

ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ

ಹೊಳೆಯ ಸುಳಿಗಳಿಗಿಂತ ಆಳ ಕಣ್ಣಿನ ಚೆಲುವು

ಅವಳೊಮ್ಮೆ ಹೆರಳ ಕೆದರಿ

ಕಪ್ಪುಗುರುಳನು ಬೆನ್ನ ಮೇಲೆಲ್ಲಾ ಹರಡಿದರೆ

ದೂರದಲಿ ಗಿರಿಯ ಮೇಲೆ

ಇಳಿದಂತೆ ಇರುಳ ಮಾಲೆ.



ಕರೆದಾಗ ತೌರುಮನೆ, ನೆನೆದಾಗ ನನ್ನ ಮನೆ

ಹಳ್ಳಿಯೆರಡರ ಮುದ್ದು ಬಳ್ಳಿಯವಳು.

ಮುಚ್ಚುಮರೆಯಿಲ್ಲದೆಯೆ ಅಚ್ಚಮಲ್ಲಿಗೆಯಂತೆ

ಅರಳುತಿಹುದವಳ ಬದುಕು.


ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ

ಬಂಗಾರದಂಥ ಹುಡುಗಿ

ನನ್ನೊಡವೆ, ನನ್ನ ಬೆಡಗಿ,

ಹಸುರು ಸೀರೆಯನುಟ್ಟು ಕೆಂಪು ಬಳೆಗಳ ತೊಟ್ಟು

ತುಂಬುದನಿಯಲಿ ಕರೆವಳೆನ್ನ ಚೆಲುವೆ

ಹಣೆಯನಾಳುವುದವಳ ಕುಂಕುಮದ ನಿಡುಬಟ್ಟು

ಲಕ್ಷ್ಮಿಯವಳೆನ್ನ ಮನೆಗೆ


ನಮಗಿದುವೆ ಸೊಗಸು ಬದುಕಿನ ಬಣ್ಣಗಳ ಸಂತೆ

ನಮಗಿಲ್ಲ ನೂರು ಚಿಂತೆ

ನಾವು ಗಂಧರ್ವರಂತೆ


ತೆಂಗುಗರಿಗಳ ಮೇಲೆ ತುಂಬುಚಂದಿರ ಬಂದು

ಬೆಳ್ಳಿ ಹಸುಗಳ ಹಾಲು ಕರೆಯುವಂದು

ಅಂಗಳದ ನಡುವೆ ಬೃಂದಾವನದ ಬಳಿ ನಿಂದು

ಹಾಡುವೆವು ಸಿರಿಯ ಕಂಡು,

ತಾರೆಗಳ ಮೀಟುವೆವು, ಚಂದಿರನ ದಾಟುವೆವು;

ಒಲುಮೆಯೊಳಗೊಂದು ನಾವು;

ನಮಗಿಲ್ಲ ನೋವು, ಸಾವು.



- ಕೆ. ಎಸ್. ನರಸಿಂಹಸ್ವಾಮಿ.
~~~~~~~~~~~~~~~~~~~~~~~~~~~~~~~~~~~~~~~~~~~

ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ,




ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ,

ಕೈ ಹಿಡಿದು ನಡಸೆನ್ನನು.

ಇರಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ

ಕೈ ಹಿಡಿದು ನಡಸೆನ್ನನು.



ಹೇಳಿ ನನ್ನಡಿಯಿಡಿಸು; ಬಲು ದೂರ ನೋಟವನು

ಕೇಳಿದೊಡನೆಯೆ-ಸಾಕು ನನಗೊಂದು ಹೆಜ್ಜೆ.

ಮುನ್ನ ಇಂತಿರದಾದೆ; ನಿನ್ನ ಬೇಡದೆ ಹೋದೆ,

ಕೈ ಹಿಡಿದು ನಡಸು ಎನುತ.


ನನ್ನ ದಾರಿಯ ನಾನೆ ನೋಡಿ ಹಿಡಿದೆನು; ಇನ್ನು,

ಕೈ ಹಿಡಿದು ನಡಸು ನೀನು.


ಮಿರುಗು ಬಣ್ಣಕೆ ಬೆರೆತು ಭಯ ಮರೆತು ಕೊಬ್ಬಿದೆನು;

ಮೆರೆದಾಯ್ತು; ನೆನೆಯದಿರು ಹಿಂದಿನದೆಲ್ಲ.

ಇಷ್ಟು ದಿನ ಸಲಹಿರುವೆ ಮೂರ್ಖನನು; ಮುಂದೆಯೂ

ಕೈ ಹಿಡಿದು ನಡೆಸದಿಹೆಯಾ?


ಕಷ್ಟದಡವಿಯ ಕಳೆದು, ಬೆಟ್ಟಹೊಳೆಗಳ ಹಾದು,

ಇರುಳನ್ನು ನೂಕದಿಹೆಯಾ?

ಬೆಳಗಾಗ ಹೊಳೆಯದೇ ಹಿಂದೊಮ್ಮೆ ನಾನೊಲಿದು

ಈ ನಡುವೆ ಕಳೆಕೊಂಡ ದಿವ್ಯಮುಖ ನಗುತ?



- ಬಿ.ಎಂ. ಶ್ರೀಕಂಠಯ್ಯ.
~~~~~~~~~~~~~~~~~~~~~~~~~~~~~~~~~~~~~~

ಕನ್ನಡಿಗರ ತಾಯಿ


ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ |

ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ |



ನಮ್ಮ ತಪ್ಪನೆನಿತೊ ತಾಳ್ವೆ

ಅಕ್ಕರೆಯಿಂದೆಮ್ಮ ನಾಳ್ವೆ

ನೀನೆ ಕಣಾ ನಮ್ಮ ಬಾಳ್ವೆ

ನಿನ್ನ ಮರೆಯಲಮ್ಮೆವು


ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು

ಹಣ್ಣ ನೀವ ಕಾಯನೀವ ಪರಿಪರಿಯ ಮರಂಗಳೊ,

ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೂ,


ತೆನೆಯ ಕೆನೆಯ ಗಾಳಿಯೊ

ಖಗಮೃಗೋರಗಾಳಿಯೊ

ನದಿನಗರ ನಗಾಳಿಯೊ!

ಇಲ್ಲಿಲ್ಲದುದುಳಿದುದೆ?-

ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?

ಬುಗುರಿಯೀಯೆ ಶಬರಿ ಕಾಯೆ ರಾಮನಿಲ್ಲಿ ಬಂದನೆ?

ಕನ್ನಡ ದಳ ಕೂಡಿಸಿ ಖಳ ದುಶ್ಯಾಸನಂ ಕೊಂದನೆ?


ಪಾಂಡವರಜ್ನಾತಮಿದ್ದ,

ವಲಲಂ ಕೀಚಕನ ಗೆದ್ದ,

ಕುರುಕುಲ ಮುಂಗದನಮೆದ್ದ

ನಾಡು ನೋಡಿದಲ್ಲವೆ?


ನಂದನಂದನನಿಲ್ಲಿಂದ ಸಂಧಿಗಯ್ದನಲ್ಲವೆ?

ಶಕ ವಿಜೇತನಮರ ಶಾತವಾಹಾನಾಖ್ಯನೀ ಶಕಂ

ನಿನ್ನೊಳಂದು ತೊಡಗಿ ಸಂದುದರ್ಧ ಭರತದೇಶಕಂ !


ಚಾಳುಕ್ಯ ರಾಷ್ಟ್ರಕೂಟರೆಲ್ಲಿ,

ಗಂಗರಾ ಕದಂಬರೆಲ್ಲಿ,

ಹೊಯ್ಸಳ ಕಳಚುರ್ಯರೆಲ್ಲಿ

ವಿಜಯನಗರ ಭೂಪರು

ಆಳ್ದರಿಲ್ಲಿಯಲ್ಲದೆಲ್ಲಿ ತಾಯೆ ಮೇಣುಲೂಪರು?

ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ,

ಮಧ್ವಯತಿಯೆ ಬಸವಪತಿಯೆ ಮುಖ್ಯ ಮತಾಚಾರ್ಯರ,

ಶರ್ವ ಪಂಪ ರನ್ನರ,

ಲಕ್ಷ್ಮೀಪತಿ ಜನ್ನರ,

ಷಡಕ್ಷರಿ ಮುದ್ದಣರ,

ಪುರಂದರವರೇಣ್ಯರ

ತಾಯೆ, ನಿನ್ನ ಬಸಿರ ಹೊನ್ನಗನಿ ವಿದ್ಯಾರಣ್ಯರ!

ಹಳೆಯ ಬೀಡ ಬೇಲನಾಡ ಮಾಡಮೆನಿತೊ ಸುಂದರಂ!

ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ!

ಇಲ್ಲಿಲ್ಲದ ಶಿಲ್ಪವಿಲ್ಲ!

ನಿನ್ನ ಕಲ್ಲೆ ನುಡಿವುದಲ್ಲ!

ಹಿಂಗತೆಯಿನಿವಾಲ ಸೊಲ್ಲ

ನೆಮ್ಮ ತೃಷೆಗೆ ದಕ್ಕಿಸು

ಹೊಸತು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು !

ಆರ್ಯರಿಲ್ಲಿ ಬಾರದಿಲ್ಲಿ ಬಾಸೆ ಎಲ್ಲಿ ಸಕ್ಕದಂ?

ನಿನ್ನ ನುಡಿಯನಚ್ಚುಪಡಿಯನಾಂತರೆನಿತೂ ತಕ್ಕುದಂ!

ಎನಿತೊ ಹಳೆಯ ಕಾಲದಿಂದ

ಬರ್ದಿಲಮೀ ಬಾಸೆಯಿಂದ

ಕಾಲನ ಮೂದಲಿಸಿ ನಿಂದ

ನಿನಗೆ ಮರವೆ ಹೊಡೆವುದೆ?


ನಿನ್ನ ನುಡಿಗೆ ನಿನ್ನ ನಡೆಗೆ ಮುದುಪುಮೆಂದುಮೊದೆವುದೆ?

ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ

ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ!

ಕನ್ನಡ ಕಸ್ತೂರಿಯನ್ನ

ಹೊಸತು ಸಿರಿಂ ತೀಡದನ್ನ

ಸುರಭಿ ಎಲ್ಲಿ? ನೀನದನ್ನ

ನವಶಕ್ತಿಯನೆಬ್ಬಿಸು-

ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು!

ನಿನ್ನ ಪಡೆಯ ಕತೆಯ ಕಡೆಯ ನುಡಿಯೆ ತಾಳಿಕೋಟೆಯು?

ಕಡಲಿನೊರೆತಗೊಳವೆ ಕೊರತೆ? ಬತ್ತದು ನಿನ್ನೂಟಿಯು!

ಸೋಲಗೆಲ್ಲವಾರಿಗಿಲ್ಲ?

ಸೋತು ನೀನೆ ಗೆದ್ದೆಯಲ್ಲ!

ನಿನ್ನನಳಿವು ತಟ್ಟಲೊಲ್ಲ!

ತಾಳಿಕೋಟೆ ಸಾಸಿರಂ

ಬಾಹುಬಲದಿ ಮನೋಬಲದಿ ತಾಯೆ ಗೆಲುವೆ ಭಾಸುರಂ!

ಕುಗ್ಗದಮ್ತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ,

ನೀಗದಂತೆ ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ,

ನಮ್ಮೆದೆಯೆಂ ತಾಯೆ ಬಲಿಸು,

ಎಲ್ಲರ ಬಾಯಲ್ಲಿ ನೆಲಸು,

ನಮ್ಮ ಮನನೊಂದೆ ಕಲಸು!

ಇದನೊಂದನೆ ಕೋರುವೆ-

ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ?


- ಎಂ. ಗೋವಿಂದ ಪೈ.
~~~~~~~~~~~~~~~~~~~~~~~~~~~~~~~~~~~~~~~~~~~~~

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ


ಹೆಂಡತಿಯೊಬ್ಬಳು ಮನೆಯೊಳಗಿದ್ದರೆ

ನನಗದೆ ಕೋಟಿ ರುಪಾಯಿ

ಹೆಂಡತಿಯೊಬ್ಬಳು ಹತ್ತಿರವಿದ್ದರೆ

ನಾನೂ ಒಬ್ಬ ಸಿಪಾಯಿ



ಹೆಂಡತಿಯೊಬ್ಬಳು ಮನೆಯೊಳಗಿದ್ದರೆ

ಹುಣ್ಣಿಮೆ, ಹೋಳಿಗೆ, ದೀಪ

ಹೆಂಡತಿ ತೌರಿಗೆ ಹೊರಡುವೆನೆಂದರೆ

ನನಗಿನ್ನಿಲ್ಲದ ಕೋಪ


ಭರಣಿಯ ತೆರೆದರೆ ಅರಸಿನ ಕುಂಕುಮ

ಅವಳದು ಈ ಸಂಪತ್ತು

ತುಟಿಗಳ ತೆರೆದರೆ ತುಳುಕುವುವಿಂಪಿನ

ಎರಡೋ ಮೂರೋ ಮುತ್ತು


ಯುದ್ಧದ ಬೇಗೆಯನರಿತವಳಲ್ಲ

ಮುತ್ತಿಗೆ ಪಡಿತರವಿಲ್ಲ

ತುರುಬಿಗೆ ಮಲ್ಲಿಗೆ ತಪ್ಪುವುದಿಲ್ಲ

ಹೂವಿಗೆ ಬಡತನವಿಲ್ಲ


ಕೈ ಬಳೆ, ತಾಳಿ, ಓಲೆ, ಮೂಗುತಿ-

ಬಡವರ ಮಗಳೀ ಬಾಲೆ

ತಿಂಗಳ ಚೆಲುವಿನ ಮಂಗಳ ಮೂರುತಿ

ಶೀಲದ ಧವಳ ಜ್ವಾಲೆ


ಕೈ ಹಿಡಿದವಳು ಕೈ ಬಿಡದವಳು

ಮಾಡಿದಡಿಗೆಯೇ ಚೆಂದ

ನಾಗರ ಕುಚ್ಚಿನ ನಿಡುಜಡೆಯವಳು

ಈಕೆ ಬಂದುದೆಲ್ಲಿಂದ


ಎಲ್ಲಿಯ ಹಾಡಿದು? ಏನಿದು ಗಡಿಬಿಡಿ?

ಏಕಿದು ಹಸುರು ಮತಾಪು?

ಒಲುವೆಯು ತಂಗಿತು ಬಡತನ ಮನೆಯಲಿ;

ಕಂಬಳಿಯೇ ಕಿನಕಾಪು


ಕಬ್ಬಿಗನೂರಿಗೆ ದಾರಿಗಳಿದ್ದರೆ

ಕನಸೇ ಇರಬೇಕು

ಅಲ್ಲಿಯ ದೊರೆತನ ಸಿಗುವಂತಿದ್ದರೆ

ನನಗೇ ಸಿಗಬೇಕು


ತಾರೆಯ ಬೆಳಕಿನ ತುಂಬಿದ ಸಭೆಯಲಿ

ಸುಂದರಿ ಮೆರೆದಾಳು

ನನ್ನೊಡನವಳೂ ಸಿಂಹಾಸನದಲಿ

ಮೆಲ್ಲನೆ ನಕ್ಕಾಳು


ಚಂದಿರನೂರಿಗೆ ಅರಮನೆಯಿಂದ

ಬಂದವರೀಗೆಲ್ಲಿ

ಬೆಳ್ಳಿಯ ಕೋಟೆಯ ಬಾಗಿಲಿನಿಂದ

ಬಂದವರೀಗೆಲ್ಲಿ?


ಹೆಂಡತಿಯೊಂದಿಗೆ ಬಡತನ, ದೊರೆತನ

ಏನೂ ಭಯವಿಲ್ಲ

ಹೆಂಡತಿಯೊಲುಮೆಯ ಭಾಗ್ಯವನರಿಯದ

ಗಂಡಿಗೆ ಜಯವಿಲ್ಲ


ಹೆಂಡತಿಯೊಬ್ಬಳು ಮನೆಯೊಳಗಿದ್ದರೆ

ನನಗದೆ ಕೋಟಿ ರುಪಾಯಿ

ಹೆಂಡತಿಯೊಬ್ಬಳು ಹತ್ತಿರವಿದ್ದರೆ

ನಾನೂ ಒಬ್ಬ ಸಿಪಾಯಿ!


- ಕೆ. ಎಸ್. ನರಸಿಂಹಸ್ವಾಮಿ
~~~~~~~~~~~~~~~~~~~~~~~~~~~~~~~~~~~~~~~~~~~~~

ಕಾಶೀಗ್ ಹೋದ ನಂ ಬಾವ:


ಕಾಶೀಗ್ ಹೋದ ನಂ ಬಾವ
ಕಬ್ಣದ್ ದೋಣೀಲಿ
ರಾಶೀ ರಾಶೀ ಗಂಗೆ ತರೋಕ್
ಸೊಳ್ಳೆ ಪರದೇಲಿ


ತಂಗಿ ಯಮುನಾದೇವಿಯಳ
ಸಂಗವಾಯ್ತೆಂದುಬ್ಬಿ ಉಬ್ಬಿ
ಗಂಗಾದೇವಿ ಉಕ್ಕಿ ಉಕ್ಕಿ
ಬೀಸಿ ಬೀಸಿ ದೋಣಿ ಕುಕ್ಕಿ
ಬಾವ ಅತ್ತು ಬಿಕ್ಕಿ ಬಿಕ್ಕಿ

ಕಾಶೀಗ್ ಹೋದ ನಂ ಬಾವ
ಕಬ್ಣದ್ ದೋಣೀಲಿ
ರಾಶೀ ರಾಶೀ ಗಂಗೆ ತರೋಕ್
ಸೊಳ್ಳೆ ಪರದೇಲಿ

ಬಂಡೆ ತಾಕಿ ದೋಣಿ ಒಡ್ದು
ಸೊಳ್ಳೆ ಪರದೆ ಬಾವನ್ ಬಡ್ದು
ಮಂಡೆ ದವಡೆ ಪಟ್ಟಾಗೊಡ್ದು
ಕಾಶೀ ಆಸೆ ನಾಶವಾಗಿ
ಮೀಸೇ ಉಳಿದದ್ ಎಷ್ಟೋ ವಾಸೀಂತ್

ಕಾಶೀಂದ್ ಬಂದ ನಂ ಬಾವ,!
~~~~~~~~~~~~~~~~~~~~~~~~~~~~~~~~~~~~

ತಿಪ್ಪಾರ್ ಹಳ್ಳಿ:

ಬೋರೆಗೌಡನೆಂಬೊ ಗೌಡ ಬಂದ ಬೆಂಗ್ಳೂರ್*ಗೆ
ಬಳೇಪೇಟೆ ಬಾಟಿ ಮೇಲೆ ಬರುತ್ತಿದ್ದಾಗ
ಪೌಡರ್ ಗಿವ್ಡರ್ ಹಾಕಿಕೊಂಡ ಮನುಷ್ಯಳೊಬ್ಬಳು
ಕಣ್ಣು ಗಿಣ್ಣು ಮಿಟಿಕ್ಸಿ ಗಿಟಕ್ಸಿ ನೋಡಿ ನಕ್ಕಾಗ--


ತಿಪ್ಪಾರಳ್ಳಿ ಬಲುದೂರ
ನಡಿಯಾಕ್ ಬಲುದೂರ
ನಮ್ಮ ತಿಪ್ಪಾರಳ್ಳಿ ಬಲುದೂರ
ಆದರ್ ಅಲ್ವ್*ವ್ಳೆ ನಂಬಸ್ವಿ


ಬೇಡವ್ವಾ ಬಳೇಪೇಟೆ
ನಮಸ್ಕಾರ ನಗರ್ತ್ ಪೇಟೆ
ನಂ ತಿಪ್ಪಾರಳ್ಳಿ ಬಲುದೂರ-
ಆದರ್ ಅಲ್ವ್*ವ್ಳೆ ನಂಬಸ್ವಿ

ತಮಾಷೆ ನೋಡಾಕ್ ಬೋರ ವೊಂಟ ಲಾಲ್ ಬಾಗ್ ತೋಟಕ್ಕೆ
ವುಲೀನ್ ನೋಡಿ ಬರೆ ಆಕಿದ್ ದೊಡ್ ಬೆಕ್ ಅನ್ಕೊಂಡ
ಬೋನ್ನೊಳಕ್ ನುಗ್ಗಿ ವುಲೀನ್ ಸವರ್*ತ ಪುಸ್ ಪುಸ್ ಅಂತಿದ್ದ
-ಬೋರ ಪುಸ್ ಪುಸ್ ಅಂತಿದ್ದ
ವುಲೀ ರೇಕ್ಕೊಂಡ್ ಬೋರನ್ ಕೆಡವ್ಕೊಂಡ್ ಅಲ್ಗಳ್ ಬುಟ್ಟಾಗ
ಬೋರ ಬೆದರ್*ಕೊಂಡ್ ಕಣ್ಣೀರ್ ಸುರುಸ್ತ ಕೈ ಮುಗ್ದ್ ಕಿರುಚ್ಡ-

ಬುಟ್ಬುಡಪ್ಪಾ ಬೆಕ್ಕಿನ್ ರಾಯಾ
ನಮಸ್ಕಾರ ನನ್ ಒಡೆಯಾ


ನಮ್ಮ ತಿಪ್ಪಾರಳ್ಳಿ ಬಲುದೂರ-
ನಡಿಯಾಕ್ ಬಲುದೂರ
ನಂ ತಿಪ್ಪಾರಳ್ಳಿ ಬಲುದೂರ-
ಆದರ್ ಅಲ್ವ್*ವ್ಳೆ ನಂಬಸ್ವಿ


ಬಸ್ವೀನ್ ಕರ್ಕೊಂಡ್ ಮೈಸೂರ್ಗ್ ಬಂದ ಯೀಜೀದಸ್ಮೀಗೆ
ಅರ್ಮನ್ ಗೇಟ್ಮ್ಂದ್ ಅಂಬಾರ್ ಕಟ್ಟಿದ್ ಆನೇನ್ ನೋಡಿದಾ
ಅಂಬಾರ್ ಮೆಟ್ಲ್ ಮೇಲ್ ಬಸ್ವೀನ್ ಅತ್ಸ್ ಬುಟ್ ತಾನೂ ಅತ್ಬುಟ್ಟ
-ಬೋರ ಬುರ್ ಬುರ್*ನ್ ಅತ್ಬುಟ್ಟ

ಮಾವ್ತರ್ ಮಂಕಾಗ್ ಗುರಿಕಾರ್ ಗುಮ್ಮಗ್ ಇಳೀಂತ ಕಿರ್ಚ್ದಾಗ್
ಆನೆ ಕೊರಳಾಗ್ ಒದೀತ್ ನಡಸ್ತ್ ಆಡ್ತ ಓಗ್ತಿದ್ದ--

ಗಂಟ್ಳ್ ಉಳಿಸ್ಕೊಳ್ರಪ್ಪಾ ಗುರುಕಾರ್ರ
ಮನೆಗೋಗಿ ಮವುತ್ ಸಾಬರ್ರ್
ತಿಪ್ಪಾರಳ್ಳಿ ಬಲುದೂರ-
ಅಲ್ಲಿಗ್ ನಲಿವೊಲ್ಳು ನಂ ಬಸ್ವಿ....

~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಕೋ....ಳೀಕೆ ರಂಗಾ:

ನಾನ್ ಕೋ...ಳೀಕೆ ರಂಗಾ....
'ಕೋ' ನು 'ಳೀ' ನು 'ಕೇ' ನು 'ರಾ' ನು 'ಸೊನ್ನೆ' 'ಗಾ'


ನಾನು ಉಟ್ಟಿದ್ದು ಒಡ್ಡ್ ರಳ್ಳಿ
ಬೆಳೆದದ್ದು ಬ್ಯಾಡ್ ರಳ್ಳಿ
ಮದವನೆ ಮಾದನ್ ಅಳ್ ನನ್ ಒಲಗೊಳ್ ಅರನ್ನಳ್ಳಿ

ನಂ ಶ್ಯಾನ್ ಬೋಗಯ್ಯ
ಅಲ್ದ್ ಸೇಕ್ ದಾರಪ್ಪ
ಇವ್ರ್ ಎಲ್ರೂ ಕಂಡವ್ರೆ ನನ್ನಾ.....

ಇನ್ ದನಗೊಳ್ನು ಮಕ್ಕಳ್ನೂ ಎಂಡರ್*ನೂವೆ
ಅಟ್ಟಿ ಅವ್ವೇನೂ ಬುಟ್ಟು
ಬಂದಿವ್ನಿ ನಿಮ್ಮುಂದ್ ನಿಂತಿವ್ನ್ ನಾ
ನಮ್ಮಳ್ಳಿ ಕಿಲಾಡಿ ವುಂಜಾ

ನಾನ್ ಕೋ...ಳೀಕೆ ರಂಗಾ....
'ಕೋ' ನು 'ಳೀ' ನು 'ಕೇ' ನು 'ರಾ' ನು 'ಸೊನ್ನೆ' 'ಗಾ'

ನಂ ತಿಪ್ಪಾರಳ್ಳಿ, ಬೋರನ್ ಅಣ್ಣನ್ ತಮ್ಮನ್ ದೊಡ್ಮಗಾ
ಕಕೋತ್ವ-ಳೀ, ಕಕೇತ್ವ-ರ, ಮತ್ತೊನ್ನೆಯೂನು-ಗಾ
ಇದ್ನ ಆಡಾಕ್ ಬರ್ದೆ ಬಾಯ್ ಬುಡಾನು ಬೆಪ್ಪುನನ್ಮಗಾ

ಕೋ...ಳೀಕೆ ರಂಗಾ....
'ಕೋ' ನು 'ಳೀ' ನು 'ಕೇ' ನು 'ರಾ' ನು 'ಸೊನ್ನೆ' 'ಗಾ'

ಎತ್ತು ಕುದುರೆ ಇಲ್ದ್ ಗಾಡಿಗ್ಳೊವೆ
ಬತ್ತಿ ಯೆಣ್ಣೇ ಇಲ್ದ್ ದೀಪಗ್ಳೊವೆ
ಕುದ್ರೆಯಿಲ್ ಗಾಡಿಗ್ಳು ಎಣ್ಣೆ ಇಲ್ದ್ ದೀಪಗ್ಳು
ತುಂಬಿದ್ ಮೈಸೂರಿಗ್ ಬಂದೆ

ದೊಡ್ ಚೌಕದ್ ಮುಂದೆ
ಗಡಿಯಾರದ್ ಹಿಂದೆ

ಕಟ್ ತಂದಿದ್ದ್ ಬುತ್ತೀನ್ ತಿಂತಿದ್ದೆ


ಅಲ್ಲ್ ಕುದುರೆ ಮೇಲ್ ಕುಂತಿದ್ದೊಬ್ ಸವಾರ್*ದಯ್ಯ
ಕೆದ್ರಿದ್ ತನ್ ಮೀಸೆ ಮೇಲ್ ಆಕ್ತ ಕೈಯ

ಬೆದ್ರಿಸ್ತಾಲೀ....ನನ್

ಗದ್ರಿಸ್ತಾಲೀ.....


"ನೀನ್ ಯಾರೋ....ನೀನ್ ಯಾರೋ...

ನಾನು.....ನಾನ್ ಕೋ....ಳೀಕೆ ರಂಗಾ--
'ಕೋ' ನು 'ಳೀ' ನು 'ಕೇ' ನು 'ರಾ' ನು 'ಸೊನ್ನೆ' 'ಗಾ'

~~~~~~~~~~~~~~~~~~~~~~~~~~~~~~~~~~~~~~~~~~~~~~

ನೀ ಹೀಂಗ ನೋಡಬ್ಯಾಡ ನನ್ನ


ನೀ ಹೀಂಗ ನೋಡಬ್ಯಾಡ ನನ್ನ

ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ



ಸಂಸಾರ ಸಾಗರದಾಗ,ಲೆಕ್ಕವಿರದಷ್ಟು ದುಃಖದ ಬಂಡಿ

ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ

ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ

ನಾ ತಡೀಲಾರೆ ಅದು ಯಾಕ ನೋಡತಿ ಮತ್ತ ಮತ್ತ ನೀ ಇತ್ತ?



ತಂಬಲ ಹಾಕದ ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ

ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ

ಈ ಗದ್ದ, ಗಲ್ಲ, ಹಣೆ ಕಣ್ಣು ಕಂಡು ಮಾರೀಗೆ ಮಾರಿಯ ರೀತಿ

ಸಾವನ ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.



ದಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣಗ ಅಂತನ ತಿಳಿದು

ಬಿಡವಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು

ಮುಗಿಲ ನ ಕಪ್ಪರಿಸಿ, ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನ

ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ.


ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು

ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನನೇನ ಈ ಕಣ್ಣು?

ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ

ಹುಣ್ಣಿವೀ ಚೆಂದಿರನ ಹೆಣಾ ಬಂತೊ ಮುಗಿಲಾಗ ತೇಲುತ ಹಗಲ!


ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ

ಹನಿ ಒಡೆಯಲಿಕ್ಕೆ ಬಂದಂಥ ಮೋಡ, ತಡಧಾಂಗ ಗಾಳಿಯ ನೆವಕ

ಅತ್ತಾರೆ ಅತ್ತುಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ?

ಎವೆ ಬಿಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.

~~~~~~~~~~~~~~~~~~~~~~~~~~~~~~~~~~~~~~~~~~~~~~~~

ಎಲ್ಲ ಮರೆತಿರುವಾಗ


ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ

ಹೂಡಿ ಬರದಿರು ಮತ್ತೆ ಹಳೆಯ ನೆನಪೇ;

ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ

ರಾಡಿಗೊಳಿಸುವೆ ಏಕೆ, ಮಧುರ ನೆನಪೇ?



ಕಪ್ಪು ಕಪ್ಪಿನ ನೆಟ್ಟ ನೋಟದರೆ ಚಣವನ್ನೆ

ತೊಟ್ಟು ಬಾಣದ ಹಾಗೆ ಬಾರದಿರು ನೆನಪೇ;

ಬಿರಿದ ತುಟಿಗಳ ತುಂಬುನಗೆಯ ಕಾರಣವನ್ನೆ

ಹಿರಿದು ಕೊಲ್ಲಲು ಬಳಿಗೆ ಸಾರದಿರು ನೆನಪೇ,


ಸತ್ತ ಭೂತವನೆತ್ತಿ ಹದ್ದಿನಂದದಿ ತಂದು

ನನ್ನ ಮನದಂಗಳಕೆ ಹಾಕದಿರು ನೆನಪೇ;

ಭವ್ಯ ಭವಿತ್ಯಕ್ಕೆ ಮೊಗ ಮಾಡಿ ನಿಂತಿರುವೆ,

ಬೆನ್ನಲ್ಲೆ ಇರಿಯದಿರು ಓ ! ಚೆನ್ನ ನೆನಪೇ


-ಕೆ.ಎಸ್. ನಿಸಾರ್ ಅಹಮದ್
~~~~~~~~~~~~~~~~~~~~~~~~~~~~~~~~~~~~~~~~~

ಯಾವ ಜನ್ಮದ ಮೈತ್ರಿ


ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು

ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ!

ಎಲ್ಲಿದ್ದರೇನಂತೆ, ನಿನ್ನನೊಲಿಯದೆ ಮಾಣೆ,


ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು!

ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು!

ಮೇಲೆ ತೆರೆನೊರೆಯೆದ್ದು ಭೋರ್ಗರೆಯುತಿರೆ ರೇಗಿ,

ಅದರಂತರಾಳದಲಿ ಗುಪ್ತಗಾಮಿನಿಯಾಗಿ;


ಹೃದಯಗಳು ನಲಿಯುತಿವೆ ಪ್ರೇಮ ತೀರ್ಥದಿ ಮಿಂದು!

ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ;

ವ್ಯರ್ಥ ಜಿಜ್ನಾಸೆಯಲಿ ಕಾಲಹರಣವದೇಕೆ?

ಕುರುಡನಾದಗೆ ದಾರಿಯರ್ಥ ತಿಳಿಯಲೆ ಬೇಕೆ?


ಹಾದಿ ಸಾಗಿದರಾಯ್ತು? ಬರುವುದೆಲ್ಲಾ ಬರಲಿ!

ಬಾರಯ್ಯ, ಮಮಬಂಧು, ಜೀವನಪಥದೊಳಾವು

ಒಂದಾಗಿ ಮುಂದುವರಿಯುವ; ಹಿಂದಿರಲಿ ಸಾವು

- ಕುವೆಂಪು

~~~~~~~~~~~~~~~~~~~~~~~~~~~~~~~~~~~~~~~~~

ಬೆಳಗು



ಮೂಡಲ ಮನೆಯಾ ಮುತ್ತಿನ ನೀರಿನ

ಎರಕಾವ ಹೊಯ್ದಾ

ನುಣ್ಣ -ನ್ನೆರಾವ ಹೊಯ್ದಾ


ಬಾಗಿಲ ತೆರೆದೂ ಬೆಳಕು ಹರಿದೂ

ಜಗವೆಲ್ಲಾ ತೊಯ್ದಾ

ಹೋಯ್ತೋ- ಜಗವೆಲ್ಲಾ ತೊಯ್ದಾ



ರತ್ನದ ರಸದಾ ಕಾರಂಜೀಯೂ

ಪುಟಪುಟನೇ ಪುಟಿದು

ತಾನೇ - ಪುಟಪುಟನೇ ಪುಟಿದು

ಮಘಮಘಿಸುವಾ ಮುಗಿದ ಮೊಗ್ಗೀ

ಪಟಪಟನೇ ಒಡೆದು

ತಾನೇ - ಪಟಪಟನೇ ಒಡೆದು


ಎಲೆಗಳ ಮೇಲೆ ಹೂಗಳ ಒಳಗೇ

ಅಮೃತಾದ ಬಿಂದು

ಕಂಡವು - ಅಮೃತಾದ ಬಿಂದು

ಯಾರಿರಿಸಿರುವರು ಮುಗಿಲಾ ಮೇಲಿಂ-
ದಿಲ್ಲೀಗೇ ತಂದು

ಈಗ - ಇಲ್ಲೆಗೇ ತಂದು


ತಂಗಾಳಿಯಾ ಕೈಯೊಳಗಿರಿಸೀ

ಎಸಳಿನಾ, ಚವರಿ

ಹೂವಿನ - ಎಸಳಿನಾ ಚವರಿ

ಹಾರಿಸಿಬಿಟ್ಟರು ತುಂಬಿಯ ದಂಡು

ಮೈಯೆಲ್ಲಾ ಸವರಿ.

ಗಂಧಾ - ಮೈಯೆಲ್ಲಾ ಸವರಿ.


ಗಿಡಗಂಟಿಯಾ ಕೊರಳೊಳಗಿಂದ

ಹಕ್ಕಿಗಳಾ ಹಾಡು

ಹೊರಟಿತು - ಹಕ್ಕಿಗಳಾ ಹಾಡು.

ಗಂಧರ್ವರ ಸೀಮೆಯಾಯಿತು

ಕಾಡಿನ ನಾಡು

ಕ್ಷಣದೊಳು - ಕಾಡಿನ ನಾಡು


ಕಂಡಿತು ಕಣ್ಣು ಸವಿದಿತು ನಾಲಗೆ

ಪಡೆದಿತೀ ದೇಹ

ಸ್ಪರ್ಶಾ - ಪಡೆದಿತೀ ದೇಹ

ಕೇಳಿತು ಕಿವಿಯು ಮೂಸಿತು ಮೂಗು

ತನ್ಮಯವೀ ಗೇಹ

ದೇವರ - ದೀ ಮನಸಿನ ಗೇಹಾ


ಅರಿಯದು ಅಳವು ತಿಳಿಯದು ಮನವು

ಕಾಣದೋ ಬಣ್ಣಾ

ಕಣ್ಣಿಗೆ - ಕಾಣದೋ ಬಣ್ಣಾ-

ಶಾಂತೀರಸವೇ ಪ್ರೀತಿಯಿಂದಾ

ಮೈದೋರೀತಣ್ಣಾ

ಇದು ಬರಿ ಬೆಳಗಲ್ಲೋ ಅಣ್ಣಾ

- ದ.ರಾ. ಬೇಂದ್ರೆ.

~~~~~~~~~~~~~~~~~~~~~~~~~~~~~~~~~~~~~~~~~~~~~

Wednesday 13 June 2007

ನನ್ನ ಮೆಚ್ಚಿನ ಜೋಕುಗಳು :-)

ಸರ್ದಾರ್ಜಿ: ಬಸ್ ಸ್ಟ್ಯಾಂಡಿಗೆ ಬರಕ್ಕೆ ಎಷ್ಟು ತಗೋಳ್ತ್ಯಾ??

ರಿಕ್ಷಾದವ: ಇಪ್ಪತ್ತು ರೂಪಾಯಿ

ಸರ್ದಾರ್ಜಿ: ಎರಡು ರೂಪಾಯಿ ಕೊಡ್ತೀನಿ ಬರುತ್ತೀಯಾ??

ರಿಕ್ಷಾದವ: ಎರಡು ರೂಪಾಯಿಗೆ ಯಾರು ಕರ್ಕೊಂಡೋಗಲ್ಲ..!!

ಸರ್ದಾರ್ಜಿ: ನಾನೇ ಕರ್ಕೊಂಡೋಗ್ತೀನಿ...ನೀನು ಹಿಂದೆ ಕೂತ್ಕೋ...!!

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಗುಂಡ ಮನೆಯಿಂದ ಕಳಿಸಿದ್ದ ಮಾವಿನ ಹಣ್ಣುಗಳನ್ನು ಮೇಷ್ಟ್ರಿಗೆ ಕೊಟ್ಟ, ಮೇಷ್ಟ್ರಿಗೆ ಖುಷಿಯಾಯ್ತು--


" ಗುಂಡಾ, ಸಂಜೆ ನಿಮ್ಮನೆಗೆ ಬರ್ತೀನೋ..."

" ಯಾಕ್ ಸಾ...."

" ಎಂಟು ಮಾವಿನ ಹಣ್ಣುಗಳನ್ನು ಕೊಟ್ಟು ಕಳಿಸಿದ ನಿನ್ನಪ್ಪನಿಗೆ ಥ್ಯಾಂಕ್ಸ್ ಹೇಳಬೇಕೂಂತ...."

" ಸಾರ್....ಸಾರ್...ನೀವು ಥ್ಯಾಂಕ್ಸ್ ಹೇಳಲೇಬೇಕೂಂದ್ರೆ...ಎಂಟರ ಬದಲು ಹನ್ನೆರಡು ಅಂತ ಹೇಳಕಾಗುತ್ತಾ ಸಾ.....?"

_________________________________________________

ನಿದ್ದೆಯ ಗುಂಗಿನಲ್ಲಿದ್ದ ಗುಂಡನಿಗೆ ಎಬ್ಬಿಸಿದ ಗುಂಡನ ಹೆಂಡತಿ--

"ರ್ರೀ..."ಹ್ಯಾಪಿ ಬರ್ತ್*ಡೆ ಟೂ ಯೂ" ...ನಿಮ್ಮ ಬರ್ತ್*ಡೇಗಾಗಿ 3000 ರೂಪಾಯಿಯ ಗಿಫ್ಟ್ ತಂದಿದ್ದೀನಿ.."

ಗುಂಡನಿಗೆ ಆಶ್ಚರ್ಯವಾಯ್ತು..." ವೆರಿಗುಡ್ ಎಲ್ಲಿ ತಗೊಂಡು ಬಾ ನೋಡೋಣವಂತೆ.."

" ಒಂದೈದು ನಿಮಿಷ ತಾಳ್ರೀ ತಗೊಂಡು ಬರೋದೇನು ಉಟ್ಕೊಂಡೇ ಬರ್ತೀನಿ.."!!

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಒಬ್ಬ ಅಮೆರಿಕನ್, ಒಬ್ಬ ಜಪಾನಿ ಮತ್ತು ಒಬ್ಬ ಸರ್ದಾರ್ಜಿ ಮೂವರು ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಲಾರಂಭಿಸಿ ಹಡಗು ಅಲ್ಲಾಡತೊಡಗಿತು, ತುಸು ಹೊತ್ತಿನಲ್ಲೇ ಒಡೆದೂಹೋಯಿತು...ಮೂವರು ಹೆದರಿಕೆಯಿಂದ ದಾರಿತೋರದೆ ಒದ್ದಾಡುತ್ತಿರುವಾಗ ಹಡಗಿನೊಳಗೆ ಒಂದು ಬಾಟಲಿ ಅಮೆರಿಕದವನ ಕೈಗೆ ಸಿಕ್ಕಿತು... ಮೂವರು ಸೇರಿ ಅದರ ಮುಚ್ಚಳ ತೆಗೆದಾಗ....ಅದರೊಳಗಿನಿಂದ ರಾಕ್ಷಸನು ಪ್ರತ್ಯಕ್ಷನಾಗಿ....

" ನೀವುಗಳು ನನ್ನನ್ನು ಬಿಡುಗಡೆ ಮಾಡಿದಕ್ಕೆ ಖುಷಿಯಾಗಿದೆ!! ...ಮೂವರು ನಿಮ್ಮ ಒಂದೊಂದು ಆಸೆ ಹೇಳಿ...ನಿಮಗೇನಾಗಬೇಕು..??"

ಅಮೇರಿಕದವನು.." ನನ್ನನ್ನು ನನ್ನ ಸ್ವದೇಶಕ್ಕೆ ಕಳಿಸು.." ತಕ್ಷಣ ಅವನು ತನ್ನ ದೇಶದಲ್ಲಿದ್ದ!!

ಜಪಾನಿಯವನೆಂದ..."ನನ್ನನ್ನು ಈ ಕ್ಷಣ ಇಲ್ಲಿಂದ ನನ್ನ ಲ್ಯಾಬ್ ಗೆ ಕರೆದುಕೊಂಡು ಹೋಗು"...ಸರಿ ಜಪಾನಿಯವನು ತನ್ನ ಲ್ಯಾಬ್ ಸೇರಿಕೊಂಡ....

ಈಗ ಸರ್ದಾರ್ಜಿಯ ಸರದಿ....ರಾಕ್ಷಸ ಕೇಳಿದ..." ಹೇಳಿ ತಮಗೇನಾಗಬೇಕು??"

ಸರ್ದಾರ್ಜಿ..." ನನಗೀಗ ಇಲ್ಲಿ ಒಬ್ಬನಿಗೇ ಹೆದರಿಕೆ ಆಗುತ್ತಿದೆ...ಅವರಿಬ್ಬರನ್ನೂ ಈಗಲೇ ವಾಪಸ್ ಕರೆದು ತಾ....!!

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

ಸರ್ದಾರ್ಜಿಗೆ ಬೇಜಾರಾಗಿತ್ತು...ಯಾರು ನೋಡಿದ್ರೂ ತನ್ನ ಮೇಲೆ ಜೋಕ್ ಮಾಡ್ತಾರೆ, ದಡ್ಡ ಅಂತ ಹೇಳ್ತಾರೆ, ಹಾಗಾಗಿ ಎಲ್ಲಿಗಾದರೂ ಹೋಗಿ ಬಿಡಲು ತೀರ್ಮಾನಿಸಿದ-


ಆಗಲೇ ಅವನಿಗೆ ಒಂದು ವಿಚಿತ್ರ ಜೀವಿಯ ಭೇಟಿಯಾಗಿದ್ದು, ಅಕರಾಳ-ವಿಕರಾಳ ಸ್ವರೂಪದ ಆ ಜೀವಿ, "ನಮ್ಮ ಲೋಕಕ್ಕೆ ಬರ್ತೀಯಾ??" ಅಂತ ಕೇಳಿದಾಗ ಸರ್ದಾರ್ಜಿಗೆ ಸಕತ್ ಸಂತೋಷ!!

ಅಲ್ಲಿ ನಮ್ಮನ್ನು ಯಾರೂ ಜೋಕ್ ಮಾಡುವುದಿಲ್ಲ ತಾನೆ? ಎಂದು ಕೇಳಿದ...

"ಊಹೂಂ" ಎಂದಿತು ಜೀವಿ...

ಸರಿ ಹಾಗದ್ರೆ ಬರ್ತೇನೆ ಎಂದ...

"ಇನ್ನೊರು ರೂಪಾಯಿ ಕೊಡಿ, ನಮ್ಮ ಲೋಕಕ್ಕೆ ಟಿಕೆಟ್ ರಿಸರ್ವ್ ಮಾಡಿಸಬೇಕು ಎಂದಿತು ಜೀವಿ..

ಬರೀ ಇನ್ನೂರು ರೂಪಾಯಿಗೆ ಬೇರೆ ಲೋಕಕ್ಕೆ ಪ್ರಯಾಣ! ಯಾರಿಗುಂಟು ಈ ಅದೃಷ್ಟ ಅಂತ ತನ್ನ ಬುದ್ಧಿವಂತಿಕೆಯನ್ನು ಹೊಗಳಿಕೊಳ್ಳುತ್ತಾ ನೂರರ ಎರಡು ನೋಟು ಕೊಟ್ಟ...

ನಾಳೆ ಸಂಜೆ ನಾಲ್ಕು ಗಂಟೆಗೆ ನಮ್ಮ ವಾಹನ ಊರ ಹೊರಗಿರೋ ಬಯಲಿನಿಂದ ಹೊರಡುತ್ತದೆ, ನೀವು ಅಲ್ಲಿಗೆ ಬಂದುಬಿಡಿ ಎಂದ ಜೀವಿ ಅಲ್ಲಿಂದ ಕಾಲ್ಕಿತ್ತಿತ್ತು...

ಮರುದಿವಸ ಸರ್ದಾರ್ಜಿ ಟೈಂ ಗೆ ಸರಿಯಾಗಿ ಬಂದು ನಿಂತ ಪರಲೋಕದ ವಾಹನಕ್ಕಾಗಿ ಆಕಾಶದ ಕಡೆ ಮುಖ ಎತ್ತಿ....ಕಾದ....ಕಾದ...ಸಂಜೆ ಆರರ ತನಕ ಕಾದ...ಆಗ ಅವನಿಗೆ ಮೋಸಹೋದದ್ದು ಅರಿವಾಯಿತು....ಸದ್ಯ...ಇದು ಯಾರಿಗೂ ಗೊತ್ತಿಲ್ಲವಲ್ಲ ಅಂತ ನೆಮ್ಮದಿಯಿಂದ ಹಿಂದೆ ತಿರುಗಿ ನೋಡಿದ...

ಅಲ್ಲಿ! ಸಾವಿರಾರು ಸರ್ದಾರ್ಜಿಗಳು ಎಲ್ಲ ಆಕಾಶದಿಂದ ಇಳಿವ ವಾಹನದ ನೀರೀಕ್ಷೆಯಲ್ಲೇ ಮುಖ ಎತ್ತಿ ನಿಂತಿದ್ದರು...

********************************************************

ಪ್ರೊಡ್ಯೂಸರ್: ಸರ್, ನನ್ನ ಮುಂದಿನ ಸಿನೆಮಾಗೆ ಒಂದು ಒಳ್ಳೆಯ ಕ್ಯಾಚಿ ಹೆಸರು ಹೇಳಿ...ಹೆಸರು ಕೇಳಿಯೇ

ಯುವಕ ಯುವತಿಯರೆಲ್ಲಾ ಸಾವಿರಾರು ಸಂಖ್ಯೆಯಲ್ಲಿ ಬರಬೇಕು ನೋಡಿ....


ನಿರ್ದೇಶಕ : " walk in interview for freshers!"
__________________________________________________ __________

ಪತ್ನಿ: ನಾನು ಅಳ್ತಾ ಇದ್ದರೆ ಯಾಕೆ ಅಂತ ಕೇಳೋದಿಲ್ಲ ನೀವು...

ಪತಿ: ಇತ್ತೀಚೆಗೆ ಇಂತಹ ಪ್ರಶ್ನೆಗಳು ದುಬಾರಿ....ಒಂದು ರೇಷ್ಮೆ ಸೀರೆಗೆ ಕನಿಷ್ಠ ಅಂದರೆ 1000 ರೂಪಾಯಿ!


__________________________________________________ __________

" ನಿಮ್ಮ ಹೆಸರು?"

" ಮೀರಾ"

" ನಿಮ್ಮ ಯಜಮಾನರ ಹೆಸರು?"

ಮೀರಾ ನಾಚಿ ತನ್ನ ಗಂಡನ ಹೆಸರನ್ನು ಒಂದು ಚೀಟಿಯಲ್ಲಿ ಬರೆದು ಎದುರಿಗಿಟ್ಟಳು

" ನಿಮ್ಮ ಮನೆಯವರು ಏನು ಕೆಲಸ ಮಾಡ್ತಾರೆ??"


" ಅವರು ತೀರಿ ಹೋಗಿ ಎಂಟು ವರ್ಷಗಳೇ ಆಯ್ತು.."


" ಮತ್ತೆ ಈ ಚಿಕ್ಕ ಚಿಕ್ಕ ಮಕ್ಕಳು?"


" ನೀವೊಳ್ಳೇ ಜನ....ನಮ್ಮ ಯಜಮಾನರು ಇಲ್ಲದಿದ್ದರೇನಾಯ್ತು? ನಾನಿದ್ದೇನಲ್ಲ!!"

***********************************************************
ತಿಮ್ಮ ಹೆಂಡತಿಯ ಮಾತನಾಡುವ ಧಾಟಿಯನ್ನು ಆಕ್ಷೇಪಿಸುತ್ತಾ--

" ನೋಡು, ನೀನು ಮಾತು ಮಾತಿಗೂ....ನನ್ನ ಮನೆ, ನನ್ನ ತೋಟ...ನನ್ನ ಮಕ್ಕಳು ಅನ್ನಬೇಡ..." ನನ್ನ" ಬದಲಾಗಿ "ನಮ್ಮ" ಎಂದು ಹೇಳು ಅಂತ ಸಲಹೆ ನೀಡಿದ....

ಹೆಂಡತಿ..." ಆಯ್ತು...ಇನ್ಮೇಲೇ ನೀವು ಹೇಳಿದಂತೆ..." ನಮ್ಮ" ಎಂಬ ಪದವನ್ನೇ ಬಳಸುತ್ತೇನೆ" ಎಂದು ಹೇಳುತ್ತಾ...ಅಲ್ಮೇರಾದಲ್ಲಿ ಏನನ್ನೋ ಹುಡುಕಲಾರಂಭಿಸಿದಳು...

ತಿಮ್ಮ...ತನ್ನ ಹೆಂಡತಿಯ ವರ್ತನೆಯ ಬಗ್ಗೆ ಸಂತಸ ಪಡುತ್ತಾ..." ಬೀರುವಿನಲ್ಲಿ ಏನು ಹುಡುಕುತ್ತಿದ್ದೀಯಾ?"

ತಿಮ್ಮ ನ ಹೆಂಡತಿ...." ನಮ್ಮ ಸೀರೆ.!!!."


__________________________________________________ ______


ಉನ್ನತ ಮಿಲಿಟರಿ ಅಧಿಕಾರಿಯಾಗಿದ್ದ ಸರ್ದಾರ್ಜಿಯೊಬ್ಬರನ್ನು ಆಸ್ಪತ್ರೆಯ "ಮೇಜರ್ ಆಪರೇಶನ್ ಥಿಯೇಟರ್" ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು....ಸರ್ದಾರ್ಜಿ ಭಾಷಣ ಮಾಡುತ್ತಾ....

" ನೋಡಿ...ರೋಗಿಗಳಿಗೆ ಅವರ ಅಧಿಕಾರ ಆಧರಿಸಿ ಚಿಕಿತ್ಸೆ ನೀಡಬಾರದು...ಸೈನಿಕರಿಂದ ಜನರಲ್*ವರೆಗೆ ಎಲ್ಲರೂ ದೇಶರಕ್ಷಣೆಗಾಗಿ ಕೆಲಸ ಮಾಡುವಾಗ...ನೀವು.." ಮೇಜರ್ ಗಳಿಗೆ ಮಾತ್ರ ಆಪರೇಶನ್ ಥಿಯೇಟರ್ ಇಡುವುದು ತಪ್ಪು"....ಅಂದ....

ವೈದ್ಯರಲ್ಲಿ ಗುಸುಗುಸು ಶುರುವಾಯಿತು...ವೈದ್ಯಾಧಿಕಾರಿಗಳು ಸರ್ದಾರ್ಜಿಗೆ ಕಷ್ಟಪಟ್ಟು.."ಮೇಜರ್ ಆಪರೇಶನ್ ಥಿಯೇಟರ್ ಅಂದರೆ ಏನು ಎಂದು ವಿವರಿಸಿದರು....

ಸರ್ದಾರ್ಜಿ ಸುಮ್ಮನಾದ....ನಂತರ ಆಸ್ಪತ್ರೆ ಸುತ್ತುತ್ತಿದ್ದ...ಸರ್ದಾರ್ಜಿ ಅಧಿಕಾರಿಗಳಿಗೆ ಇನ್ನೊಂದು ಬೋರ್ಡ್ ತೋರಿಸಿದ....

ಅದನ್ನು ನೋಡಿದ ಅಧಿಕಾರಿಗಳಿಗೆ...ಸುಸ್ತು!!!

ಕಾರಣ....ಆ ಬೋರ್ಡಿನ ಮೇಲೆ.." ಜನರಲ್ ವಾರ್ಡ್" ಎಂದು ಬರೆಯಲಾಗಿತ್ತು...!!


__________________________________________________ ________

ನಿಮ್ಮ ಮನೆಯ ಅಡಿಗೆಯ ರುಚಿ ಸೂಪರ್! ಅಡಿಗೆ ಮಾಡಿದ ಕೈಗಳಿಗೆ ಚಿನ್ನದ ಬಳೆಗಳನ್ನು ಹಾಕ್ಬೇಕು!!


" ನಮ್ಮೆಜಮಾನ್ರು ಬಳೆಗಳನ್ನು ಹಾಕ್ಕೊಳ್ಳೋದಿಲ್ಲಾರೀ!!!"

**********************************************


ಡಾಕ್ಟ್ರೇ...ಈ ಮಾತ್ರೆಗಳನ್ನು ನುಂಗ್ತಾ ಬಂದ್ರೆ ನಾನು ಸಣ್ಣಗಾಗ್ತೀನಾ??"

" ಖಂಡಿತವಾಗಿ...ಬೇರೇನನ್ನೂ ತಿನ್ನದೇ ಬರೀ ಈ ಮಾತ್ರೆಗಳನ್ನು ತಿಂದರೆ ಮಾತ್ರ!!"

**********************************************


ಮೆಗಾ ಸೀರಿಯಲ್ ನ ಮಧ್ಯದಲ್ಲಿ ಖಂಡಿತವಾಗ್ಲೂ....ಉಪ್ಪು..ಬೇಳೆ...ಹಾಗೂ ಎಣ್ಣೆಯ ಬಗ್ಗೆ

ಜಾಹೀರಾತನ್ನು ಕೊಡ್ಲೇಬೇಕು....


" ಯಾಕೆ ಹಂಗೇಳ್ತೀರಾ??"


" ಅದನ್ನು ನೋಡಿದಾಗ್ಲಾದ್ರೂ ನಮ್ಮವಳಿಗೆ ಅಡಿಗೆ ಬಗ್ಗೆ ನೆನಪಾಗ್ಲೀಂತ!.."

*************************************************

ಸೆಕ್ಯೂರಿಟಿ ಕೆಲಸಕ್ಕಾಗಿ ಬಂದಿದ್ದೀಯಲ್ಲಾ..ನಿನ್ನಲ್ಲಿ ಯಾವ ಅರ್ಹತೆ ಇದೆ??


" ಸಣ್ಣ ಶಬ್ಧ ಕೇಳಿಸಿದರೂ ಎಚ್ಚರಗೊಳ್ತೀನಿ ಸಾರ್...!"


************************************************

ಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದವರು...ನಮ್ಮ ಆಫೀಸಿಗೆ ಮ್ಯಾನೇಜರ್ ಆಗಿ ಬಂದದ್ದು ತಪ್ಪಾಗೋಯ್ತು..


" ಯಾಕೆ ಏನಾಯ್ತು??"


" ಆಫೀಸಿಗೆ ಲೀವ್ ಹಾಕಿದ್ರೆ ಮಾರನೇ ದಿನ ಹೆಂಡ್ತಿಯ ಸಹಿ ಇರೋ ಲೀವ್ ಲೆಟರ್ ತರ್*ಬೇಕೂಂತ
ಆರ್ಡರ್ ಮಾಡಿದ್ದಾರಲ್ಲಾ..!"

*******************************************************

ಒಮ್ಮೆ ಸ್ವರ್ಗ ಮತ್ತು ನರಕ ಎರಡರ ಮಧ್ಯೆ ಕ್ರಿಕೆಟ್ ಮ್ಯಾಚ್ ಏರ್ಪಡಿಸಿದ್ದರು. ಸ್ವರ್ಗದವರಿಗೆಲ್ಲಾ ಸಂತಸವೋ ಸಂತಸ! ಅವರಲ್ಲೊಬ್ಬ " ಒಳ್ಳೆಯ ಆಟಗಾರರೆಲ್ಲಾ ಇರುವುದು ಸ್ವರ್ಗದಲ್ಲೇ, ಆದ್ದರಿಂದ ಗೆಲುವು ನಮ್ಮದೇ!" ಅಂದ...ಅದಕ್ಕೆ ನರಕವಾಸಿ "ಒಳ್ಳೆಯ ಆಟಗಾರರು ನಮ್ಮಲ್ಲಿಲ್ಲ, ಅದು ನಿಜ, ಆದ್ರೆ ಖಂಡಿತಾ ನಾವು ಗೆಲ್ಲುತ್ತೇವೆ....

" ಅದು ಹೇಗೆ??"

" ಹೇಗಂದ್ರೇ......ಅಂಪೈರ್ ಗಳು ಎಲ್ಲ ಇರುವುದು ನಮ್ಮಲ್ಲೇ..!"

*****************************************************

ಧಾರವಾಡದ ಹೊರವಲಯದಲ್ಲಿದ್ದ ಹೊಲವೊಂದರಲ್ಲಿ ದಢೂತಿ ಹೆಂಗಸೊಬ್ಬಳು ಕೆಲಸಮಾಡುತ್ತಿದ್ದುದನ್ನು ಕಂಡ ಕಿಡಿಗೇಡಿ ಹುಡಗರಿಬ್ಬರು..." ಅಬ್ಬಾ, ಎಮ್ಮೇನೇ ಈ ಗಾತ್ರ ಇದ್ದರೆ...ಇದರ ಕೋಣ ಇನ್ನೆಂಗಿರಬಹುದು?" ಎಂದರು...ಇದನ್ನು ಕೇಳಿದ ಆ ಹೆಂಗಸು..." ಅಯ್ಯೋ ಹಾವು...ಹಾವು..." ಎಂದು ಬೊಬ್ಬೆ ಹಾಕಿದಳು...

ಅವಳ ಕೂಗಿದೆ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದವನೊಬ್ಬ ಕೋಲಿನ ಸಮೇತ ಓಡಿಬಂದು, "ಎಲ್ಲೈತಮ್ಮೀ ಹಾವು?"
ಎಂದಾಗ ಆ ಹೆಂಗಸು ಹುಡುಗರ ಕಡೆ ನೋಡುತ್ತ..." ನೋಡಿದ್ರಾ..ಹೆಂಗೈತೆ ಕೋಣ?" ಎಂದಾಗ ಹುಡುಗರು ಪರಾರಿ!


********* ******************* ***************


ನಿನ್ನ ಟ್ಯಾಕ್ಸಿಯ ಸ್ಪೀಡೋಮೀಟರ್ ಕೆಲಸವನ್ನೇ ಮಾಡುತ್ತಿಲ್ಲ...ಅದು ಎಷ್ಟು ವೇಗದಲ್ಲಿ ಚಲಿಸುತ್ತಿದೆ ಎಂಬುದನ್ನು ಹೇಗೆ ತಿಳಿಯುವೆ?? ಎಂದು ಪ್ರಯಾಣಿಕ ಚಾಲಕನನ್ನು ಕೇಳಿದ...


" ನನ್ನ ಟ್ಯಾಕ್ಸಿಯ ಬಾಗಿಲುಗಳು ಬಡಿದುಕೊಳ್ಳುತ್ತಿದ್ದರೆ ಅದು 40 ಕಿ.ಮೀ.ಸ್ಪೀಡಿನಲ್ಲಿದೆ ಅಂತ ತಿಳಿಯುತ್ತೇನೆ...ಇಡೀ ಟ್ಯಾಕ್ಸಿ ಅಲ್ಲಾಡತೊಡಗಿದರೆ ಅದು 50ಕಿ.ಮೀ. , ಒಂದು ವೇಳೆ ಟ್ಯಾಕ್ಸಿಯೊಂದಿಗೆ ನಾನು ನೀನು ಇಬ್ಬರೂ ಅಲ್ಲಾಡತೊಡಗಿದರೆ ಅದು 60 ಕಿ.ಮೀ.ಸ್ಪೀಡಿನಲ್ಲಿದೆ ಅಂತ ತಿಳಿಯುತ್ತೇನೆ"!!

*************************************************************

ಸರ್ದಾರ್ಜಿ ಸ್ನೇಹಿತರಿಬ್ಬರು ಮೈಸೂರಿನಿಂದ ಬೆಂಗಳೂರಿಗೆ ಹೋಗಲು ರೈಲ್ವೇ ನಿಲ್ದಾಣದ ಬಳಿ ಬಂದರು. ಬೆಂಗಳೂರಿಗೆ ಹೊರಟಿದ್ದ ರೈಲಿನಲ್ಲಿ ನಿಲ್ಲಲೂ ಜಾಗವಿರಲಿಲ್ಲ...ಸೀಟು ಗಿಟ್ಟಿಸಲು ಒಂದು ಐಡಿಯಾ ಮಾಡಿದ್ರು...!

ಒಂದು ಬೋಗಿಯಲ್ಲಿ ಹತ್ತಿಕೊಂಡು ' ಹಾವು! ಹಾವು! ಎಂದು ಬೊಬ್ಬೆ ಹಾಕಿದರು...ಬೋಗಿಯಲ್ಲಿದ್ದ ಜನರೆಲ್ಲಾ..ಪರಾರಿಯಾದಾಗ ಹೋಗಿ ಆರಾಮವಾಗಿ ಕುಳಿತುಕೊಂಡು ಕಣ್ಮುಚ್ಚಿದರು...ಒಂದು ತಾಸು ಚೆನ್ನಾಗಿ ನಿದ್ರೆ ಮಾಡಿ ಎದ್ದು ಕಣ್ಣು ಬಿಟ್ಟಾಗ ಇನ್ನೂ ಮೈಸೂರಿನಲ್ಲೇ ಇದ್ದರು!!


ಸಂಶಯಗೊಂಡ ಸರ್ದರ್ಜಿಗಳು ಅಲ್ಲೇ ಇದ್ದ ಜವಾನನ್ನು ಕೇಳಿದಾಗ, " ಯಾರೋ ಕಿಡಿಗೇಡಿಗಳು ಹಾವು ಎಂದು ಬಡಕೊಂಡರು ಸಾರ್, ಅದಕ್ಕೇ ಈ ಬೋಗಿಯನ್ನು ಪ್ರತ್ಯೇಕಿಸಿ, ರೈಲನ್ನು ಬೆಂಗಳೂರಿಗೆ ಕಳಿಸಲಾಯಿತು...!"

*********************************************************************

" ಏನ್ ಶಾಂತಮ್ಮ, ನಿನ್ ಮನೆ ಬೆಳಗೋಕ್ ಬಂದಿರೋ ನಿನ್ ಸೊಸೆ ಏನೇನ್ ತಂದವ್ಳೆ??"


" ಹೂಂ....ತಂದವ್ಳೆ...ಒಂದ್ ಸೂಟ್*ಕೇಸ್ ತುಂಬಾ ಬೆಂಕಿಪೊಟ್ನಾನ..!"
__________________________________________________ ________


ಏನೋ...ಆ ಹೀರೋ...ಸಿಗರೇಟ್ನ ಬಾಯಲ್ಲಿಟ್ಕೋಂಡೇ ನೀರಲ್ಲಿ ಧುಮುಕುತ್ತಿದ್ದಾನೆ...?"


" ನಮ್ ಡೈರೆಕ್ಟ್ರು...ನೀರ್ನಲ್ಲಿ ಸ್ವಲ್ಪ ದಂ ಹಿಡ್ಕೋಬೇಕು ಅಂತಿದ್ರು...ಅದನ್ನ ಇವಯ್ಯಾ ತಪ್ಪಾಗ್ ಅರ್ಥ

ಮಾಡ್ಕೊಂಡವ್ನೆ..!"


__________________________________________________ ________

ನುಣ್ಣಗೆ...ಗುಂಡಗೆ..ತಾಮ್ರದ ಚೊಂಬಿನಂತೆ ಮಿರಮಿರನೆ ಮಿನುಗುವ ತನ್ನ ತಂದೆಯ ತಲೆಯನ್ನು ನೋಡಿದರೆ
ಗುಂಡನಿಗೆ ಏನೋ ಒಂದು ತರ...ಅಜ್ಜಿಗೆ...ಅಮ್ಮನಿಗೆ ತಲೆಯಲ್ಲಿ ಜೊಂಪೆ ಜೊಂಪೆ ಕೂದಲಿದೆ...ಆದರೆ ಅಪ್ಪನಿಗೆ
ಮಾತ್ರ ಯಾಕೆ ಹಿಂಗೆ? ಒಂದು ದಿನ ಅಪ್ಪನಿಗೆ ಕೇಳಿಯೇ ಬಿಟ್ಟ-

" ಅದಿಕ್ಕೆ ನಿಮ್ಮ ಅಮ್ಮ ಹಾಗೂ ನಮ್ಮ ಅಮ್ಮ ಕಾರಣ!" ಎಂದರು ಅಪ್ಪ

" ಅಮ್ಮಾ, ಅಜ್ಜಿ ಸೇರಿಕೊಂಡು ನಿನ್ನ ತಲೆಯ ಕೂದಲುಗಳನ್ನೆಲ್ಲಾ ಕಿತ್ತಿದ್ರಾ??"

" ಹಾಗಲ್ಲ ಕಣೋ, ಹುಡುಗನಾಗಿದ್ದಾಗ...ನನ್ನ ಅಮ್ಮ..." ಮಗೂ ನೀನು ಬುದ್ಧಿ ಕಲಿಯಬೇಕಪ್ಪಾ" ಅಂತ ಹೇಳುತ್ತಾ
ನನ್ನ ತಲೆ ಸವರುತ್ತಿದ್ದಳು....ನಾನು ಬೆಳೆದು ದೊಡ್ಡವನಾಗಿ ಮದುವೆಯಾದ ಮೇಲೆ...ನಿನ್ನ ಅಮ್ಮ.." ರೀ, ನೀವು
ಬುದ್ಧಿ ಕಲಿಯುವುದು ಯಾವಾಗ??" ಎಂದು ನನ್ನ ತಲೆ ಸವರುತ್ತಿದ್ದಳು...ಹೀಗಾಗಿ ನನ್ನ ತಲೆ ಬೋಳಾಯಿತು..!!"

__________________________________________________ _______

ಮಿಸ್: ನೀನು ಹೋಂವರ್ಕ್ ತಪ್ಪು ಮಾಡಿದ್ದಿ...ತಪ್ಪು ಮಾಡಿದ ಕೈಗೆ ಎರಡು ಏಟು ಕೊಡ್ತೀನಿ ಅಂದಿದ್ದೆ...ನೆನಪಿದ್ಯಾ???

ಪುಟ್ಟು: ಹೌದು ಮಿಸ್...ಆದ್ರೆ ಅದ್ಕೆ ನೀವು ನಮ್ಮನೆಗೆ ಬರ್*ಬೇಕಾಗುತ್ತೆ!"

ಮಿಸ್: ಯಾಕೆ?

ಪುಟ್ಟು: ಯಾಕೆಂದ್ರೆ...ತಪ್ಪು ಮಾಡಿರೋ ಕೈ ನಮ್ಮಪ್ಪಂದು..!

__________________________________________________ __________

" ದರಿದ್ರ ರಸ್ತೆ...ಒಂದಾದ್ರೂ ಮರಗಳಿಲ್ಲವಲ್ಲಾ...."

" ಆಹಾ! ನಿನ್ನಂತಹ ಡ್ರೈವರ್ ಗೆ ನಾನು ನೋಡಿಯೇ ಇಲ್ಲ...ಏನು ಪರಿಸರ ಕಾಳಜೀ...ಮೆಚ್ಚಬೇಕು...

" ಸಾಕು ಸುಮ್ನಿರಯ್ಯಾ....ಬಸ್ ಬ್ರೇಕ್ ಫೇಯಿಲ್ ಆಗಿ ನನ್ನ ಕಷ್ಟ ನಂಗೆ!...

__________________________________________________ _________

ಎಳ್ಳು ಅಂದ್ರೆ ಎಣ್ಣೆಯಂತೆ ಚುರುಕಾಗಿದ್ದ ನಿಮ್ಮ ಮಗ ಈಗ ಏನು ಮಾಡ್ತಿದ್ದಾನೆ??

" ಮದುವೆ ಮಾಡಿಕೋ ಅಂದೆ...ಮಗುವಿನೊಂದಿಗೆ ಬಂದು ನಿಂತ..!"

************************************************************

"ನನ್ನ ಹೆಂಡ್ತಿಯ ಮೈ ತೂಕ ಹೆಚ್ಚಾಗಿರುವುದಕ್ಕೆ ಡಾಕ್ಟರ್ ನನ್ನನ್ನು ಬೈಯ್ದರು.."

" ನಿಮ್ಮನ್ನು ಏಕೆ ಬೈಯ್ದರು??"

" ನಾನ್ತಾನೆ ಮನೆಯಲ್ಲಿ ಅಡಿಗೆ ಮಾಡೋದು...!"

~~~~~~~~~~~~~~~~~~~~~~~

" ಹಲೋ...ಕೆ.ಇ.ಬಿ. ಆಫೀಸಾ?...ಕರೆಂಟ್ ಯಾವಾಗ್ಬರುತ್ತೆ??"

" ಲೈಟ್ ಸ್ವಿಚ್ ಅನ್ನು ಆನ್ ಮಾಡಿಡಿ...ಕರೆಂಟ್ ಬಂದೊಡನೆಯೇ ತಿಳಿಯುತ್ತೆ..!"

~~~~~~~~~~~~~~~~~~~~~~~~~~~~


" ನಾಳೆಯ ಕೆಲಸವನ್ನು ಇಂದೇ ಮಾಡಿ ಎಂದು ಆಫೀಸಿನಲ್ಲಿ ಬೋರ್ಡ್ ಹಾಕಿದ್ದು ತಪ್ಪಾಯಿತು...."

" ಯಾಕೆ? ಏನಾಯ್ತು..?"

" ನಾಳೆ ಭಾನುವಾರದ ಬದಲಿಗೆ ಇಂದೇ ಎಲ್ಲರೂ ಆಫೀಸಿಗೆ ಬರದೆ ಮನೇಲಿ ಉಳಿದ್ಬಿಟ್ಟಿದ್ದಾರೆ..!"

~~~~~~~~~~~~~~~~~~~~~~~~~~~~~~~``

" ಈ ಪಿಕ್ಚರ್ ನ ಕೊನೆಯಲ್ಲಿ ಸೆಕ್ಸಿ ಹಾಡನ್ನು ಹಾಕಿದ್ದೀರಲ್ಲಾ....ಯಾಕೆ?"

" ಮಲಗಿ ನಿದ್ರಿಸುತ್ತಿರೋ ವೀಕ್ಷಕರನ್ನು ಮನೆಗೋಗಲು ಎಬ್ಬಿಸಬೇಕಲ್ಲಾ...!"

~~~~~~~~~~~~~~~~~~~~~~~~~~~~~~~

" ಸೇತುವೆಯಿಂದ ಜಾರಿ ಕೆಳಗೆ ಬೀಳುತ್ತಿದ್ದ ನಿಮ್ಮ ಅತ್ತೆಯನ್ನು ನೀವು ಕೈ ಕೊಟ್ಟು ಮೇಲೆ ಎತ್ತಬಾರದಾಗಿತ್ತೇ..?"

" ನ್ಯಾಯಾಧೀಶರೇ, ನಾನು ತೂಕ ಎತ್ತಬಾರದು ಎಂದು ಡಾಕ್ಟ್ರು ಹೇಳಿದ್ದಾರೆ...!"

~~~~~~~~~~~~~~~~~~~~~~~~~~

" ನೀವು ಪ್ರೀತಿಸಿದ ಹುಡುಗನೇ ನಿಮ್ಮ ಪತಿಯಾಗುತ್ತಾನೆ..!"

" ಯಾರೆಂದು ಸ್ಪಷ್ಟವಾಗಿ ಹೇಳದೆ, ಹೀಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದ್ರೆ ಹೇಗೆ...!!??"

~~~~~~~~~~~~~~~~~~~~~~~~~

" ಇಡ್ಲಿ..ಚಪಾತಿ...ಪೂರಿ...ದೋಸೆಯನ್ನೆಲ್ಲಾ ಆರ್ಡರ್ ಮಾಡಿದ್ದೀರಲ್ಲಾ...ದುಡ್ಡು ಭರ್ಜರಿಯಾಗಿ ಇದ್ಯಾ??"

" ಇಷ್ಟೆಲ್ಲಾ ತಿಂದ್ರೇ ತಾನೇ ಹಿಟ್ಟಿ ರುಬ್ಬೋಕೆ ಶಕ್ತಿ ಬರೋದು...!"

~~~~~~~~~~~~~~~~~~~~~~~~~~~~~

" ನಿಮ್ಮ ಗಂಡನಿಗೆ ನಿದ್ರೆಯಲ್ಲಿ ನಡೆಯುವ ರೋಗಕ್ಕೆ ಔಷಧಿ ಕೊಟ್ಟಿದ್ನಲ್ಲಾ...ಈಗ ಹೇಗಿದೆಯಮ್ಮಾ?"

" ಈಗ ನಡೆಯುವಾಗ ನಿದ್ರೆ ಬರುತ್ತದೆ ಅಂತೆ ಡಾಕ್ಟರ್...."!

*******************************************************

" ಬಸ್ಸನ್ನು ಕ್ಲೀನಾಗಿ ಇಡಿ...ಅದು ನಿಮ್ಮ ಸ್ವತ್ತು" ಅಂತ ಬರ್ದಿರೋದೇ ತಪ್ಪಾಗೋಯ್ತು...


" ಏಕೆ...ಏನಾಯ್ತು...?"


" ಬಸ್ ನ ತಗೊಂಡೋಗಿ ಯಾರಿಗೋ ಮಾರಿ ಬಿಟ್ಟಿದ್ದಾನೆ..!"


**********************************************

" ಕಡಿಮೆಯೆಂದ್ರೂ ಹದಿನೈದು ಜನ ಹತ್ತಿದ್ರೆ ಮಾತ್ರ ಬಸ್ಸನ್ನು ಸ್ಟಾರ್ಟ್ ಮಾಡ್ತೀರಾ.....ಏಕೆ??"


" ಈ ಬಸ್ ತಳ್ಳಿದ್ರೇನೆ ಸ್ಟಾರ್ಟ್ ಅಗೋದು...ಅದಕ್ಕೆ ಜನ ಬೇಡ್ವಾ??"

*****************************************


" ನನ್ನ ಲವರ್ ನನ್ನು ಭಗವದ್ಗೀತೆಯ ಉಪನ್ಯಾಸಕ್ಕೆ ಕರ್ಕೊಂಡೋಗಿದ್ದೇ ತಪ್ಪಾಯ್ತು..."

" ಯಾಕೆ....ಏನು ಹೇಳ್ದಾ?"


" ನಮ್ಮ ಮದುವೆ ಯಾವಾಗಾಂತ ಕೇಳಿದ್ರೆ.." ಪ್ರೀತಿ ಮಾಡು; ಮದುವೆಯನ್ನು ನಿರೀಕ್ಷಿಸಬೇಡ" ಅಂತ

ಅಡ್ವೈಸ್ ಶುರು ಮಾಡ್ಕೊಂಡಿದ್ದಾನೆ...!"

*****************************************************

ಅಡ್ಡ ಹೆಸರಿನ ಮಜಾ!

ವಸ್ತ್ರದ ಮತ್ತು ಕುಬುಸದ ಕಥೆ


ವಸ್ತ್ರದವರು ಎಲ್ಲಿದಾರ ನಿಮಗೇನಾದರೂ ಗೊತ್ತೇನ್ರೀ? ಎಂದು ಅಂಟಿನವರನ್ನು ಬೆಲ್ಲದವರು ಪ್ರಶ್ನಿಸಿದರು.

ಕುಬುಸದವರು ಬಂದಿದ್ರೀ ಸರ್, ಅವರ ಸಂಗಡ ಎಲ್ಲೋ ಹೋಗಿರಬೇಕ್ರೀ" ಎಂದರು ಅಂಟಿನ. ಬೆಲ್ಲದ ಅವರು ಕೂಡಲೇ
ಹೇಳಿದರು - " ನಂಗ್ಯಾಕೋ ಇವರ ವ್ಯವಹಾರ ಸರಿ ಕಾಣಿಸೂದಿಲ್ರಿ. ಅಲ್ಲಿ ಈ ವಸ್ತ್ರದವರಿಗೆ ಕುಬುಸದವರ ಹತ್ರ ಏನು
ಕೆಲಸ ಇರ್ತದ್ರಿ? 24 ಗಂಟಿನೂ ಅವರ ಹಿಂದೆ ಅಡ್ಡಾಡಿಕೊಂಡಿರ್ತಾರೆ".


ಪ್ರೊಫೆಸರ್ ಬಸವರಾಜ ವಸ್ತ್ರದ ಹಾಗೂ ಲೆಕ್ಚರರ್ ವೀಣಾ ಕುಬುಸದ ನಡುವೆ ಪ್ರೇಮವಿತ್ತು...ಇದು ಏಕೋ ಪ್ರೊಫೆಸರ್ ರವಿರಾಜ ಬೆಲ್ಲದ ಅವರಿಗಿಷ್ಟವಿರಲಿಲ್ಲ ತಮ್ಮ ದುಃಖವನ್ನವರು ಪ್ರೊ|ವಿಶ್ವನಾಥ ಅಂಟಿನ ಅವರೊಡನೆ ತೋಡಿಕೊಳ್ಳುತ್ತಿದ್ದರು!!

******************


ಕಲ್ಯಾಣ ಮಂಟಪದಲ್ಲಿ ಈ ಮಾತುಗಳು ಕೇಳಿ ಬಂದರೆ ಹೇಗಿರುತ್ತೆ??

" ಲಗ್ನದ ವ್ಯಾಳ್ಯಾ ಆತು. ಇನ್ನೂ " ಜವಳೀನೇ" ಬರಲಿಲ್ಲಲ್ಲೋ ಪುಟ್ಯಾ??"

***********************


" ಪುರೋಹಿತರು ಬಂದು ಕಾಯ್ತಾ ಕುಂತಾರ. ಈ ವರ ಅಂಬೋ ಮಾರೀ ಹಾಳನ ಹಾಳು ಮಾರೀನೇ ಕಾಣಿಸವಲ್ಲದಲ್ಲೋ!!"

*****************************************************************

ಅದೊಂದು ಹಳ್ಳಿ ಹೋಟೆಲ್. ಗಲ್ಲಾ ಪೆಟ್ಟಿಗೆಯ ಹಿಂದೆ ಇದ್ದ ಗೋಡೆ ಮೇಲೆ " ವರದರಾಜ ಬಾಣಾವರ" ಎಂಬ ಬೋರ್ಡ್ ಇತ್ತು...

ಅದನ್ನು ದಿನಾಲೂ ನೋಡುತ್ತಿದ್ದ ಗಿರಾಕಿಯೊಬ್ಬ, ಮಾಲೀಕನನ್ನು ಕೇಳಿದ...

" ಏನ್ಸಾಮಿ ನಿಮ್ಮ ಹೆಸ್ರು " ವರದರಾಜ" ಅಂತಲೋ??

ಮಾಲೀಕ " ಇಲ್ಲ"

" ಹಾಗದ್ರೆ ನಿಮ್ಮ ಊರು " ಬಾಣಾವರ ಇರ್ಬೇಕಲ್ವಾ?" ಗಿರಾಕಿಯ ಮರುಪ್ರಶ್ನೆ

" ಇಲ್ಲ"

ವಿಸ್ಮಿತನಾದ ಗಿರಾಕಿ " ಹಾಗಾದ್ರೆ? ಈ ಬೋರ್ಡ್ ಯಾಕೆ ಹಾಕ್ಕೋಂಡಿದೀರಾ ಮತ್ತೆ??"

ಇದನ್ನು ಕೇಳಿ ಮಾಲೀಕನಿಗೆ ರೇಗಿ ಹೋಯ್ತು..ಎಂಥ ಪ್ರಶ್ನೆ ಕೇಳ್ತಿದ್ದಾನೆ ಈತ ಅಂತ ಸಿಟ್ಟು ಬಂತು....

" ರೀ, ಸ್ವಾಮಿ, ಕನ್ನಡ ಓದಕ್ಕೆ ಬರಲ್ವಲ್ಲಾ ನಿಮ್ಗೆ? ಅಲ್ಲಿ ಬರೆದಿರೋದು " ವಾರದ ರಜಾ ಭಾನುವಾರ" ಅಂತ
ಅಷ್ಟು ಗೊತ್ತಾಗಲ್ವೇ??""!!!

***************************************************************

" ಕತ್ತಿ" ನ " ಕುದುರಿ" ಅನ್ನಬೇಕೆ?


ಉತ್ತರ ಕರ್ನಾಟಕದವರ ಅಡ್ಡ ಹೆಸರುಗಳ ಬಗ್ಗೆ ಈ ಕಡೆಯವರಿಗೆ ತಿಳಿದಿರುವುದಿಲ್ಲ...ಆದರೆ ಆ ಕಡೆ ಅಡ್ಡ ಹೆಸರುಗಳದ್ದೇ ಕಾರುಬಾರು! ಅವುಗಳಲ್ಲಿ ಕೆಲವು " ಸ್ಯಾಂಪಲ್ಸ್" .." ಉಪ್ಪಾರ, ಕೋರವಾರ, ಮಡ್ಡೀಕರ, ಬೆಲ್ಲದ್, ತುಪ್ಪದ್, ಹಡಪದ್, ಉಳ್ಳಾಗಡ್ಡಿ, ಬಳ್ಳುಳ್ಳಿ, ಮೆಣಸಿನಕಾಯಿ, ಕಿರಸಾಲಿ, ಸಣ್ಣಕ್ಕಿ, ಹಂಚಾಟಿ, ಧನಪಾಲ, ಸಣ್ಣಮನಿ, ದೊಡ್ಡಮನಿ......ಹೀಗೆ ದೊಡ್ಡ ಪಟ್ಟಿ! ಅವುಗಳಲ್ಲಿ ಒಂದು ಅಡ್ಡ ಹೆಸರು " ಕತ್ತಿ" ಅಲ್ಲಿ " ಎ " ಕಾರವನ್ನು " ಇ" ಕಾರವಾಗಿ ಬಳಸುತ್ತಾರೆ..! ಕುದುರೆಗೆ ಕುದುರಿ, ಒಂಟೆಗೆ ಒಂಟಿ, ಮನಿ, ಮಳಿ, ಹೀಗೆ...!

ಒಮ್ಮೆ " ಕತ್ತಿ" ಹೆಸರಿನ ( ಈ ಹೆಸರಿನ ಓಣಿ ಇದೆ!) ಓಣಿಯವರಿಗೆ ನಮ್ಮ ಅಡ್ಡ ಹೆಸರಿನ ಬಗ್ಗೆ ಬೇಸರ ಬಂದು ತಮ್ಮನ್ನು ಇನ್ನು ಮುಂದೆ " ಕತ್ತಿ" ಎಂದು ಕರೆಯಬಾರದೆಂದು ಊರಾದ ಊರಿಗೆಲ್ಲಾ ಸಕ್ಕರೆ ಹಂಚಿದರಂತೆ. ಒಂದು ಮನೆಯಲ್ಲಿ ಹೊರಗಿನಿಂದ ಬಂದ ಮನೆಯ ಯಜಮಾನ ಮನೆ ಮಕ್ಕಳ ಕೈಯಲ್ಲೆಲ್ಲಾ ಸಕ್ಕರೆ ನೋಡಿ ಏನ್ರೋ ವಿಶೇಷ ಈವತ್ತು? ಎಲ್ರೂ ಸಕ್ಕರಿ ತಿನಾಕತ್ತೀರಿ? ಎಂದನಂತೆ. ಮಕ್ಕಳೆಲ್ಲಾ..." ಕತ್ತಿ" ಓಣಿಯವರು ಇದನ್ನು ಕೊಟ್ರು ಇನ್ನು ಮ್ಯಾಲೆ ಅವರನ್ನು "ಕತ್ತಿ" ಅಂತ ಕರೀಬಾರದಂತೆ....ಅದಕ್ಕೆ ಮನೆ ಯಜಮಾನ..." ಕತ್ತೀ"ನ " ಕತ್ತಿ" ಅನ್ನದೇ ಮತ್ತೇನು " ಕುದುರಿ" ಅನ್ನಬೇಕಂತೇನು?!!!

*******************************************************************************

ಪದೇ ಪದೇ ಸೆಲ್ ಫೋನ್ ರಿಂಗ್ ಆಗುತ್ತಿತ್ತು...ಗುಂಡ ಕಿವಿಗೆ ಹಿಡಕೊಂಡು ಹಲೋ ಹಲೋ ಅನ್ನುತ್ತಿದ್ದ....ಅದು ರಿಂಗ್ ಆದಾಗೊಮ್ಮೆ ಗುಂಡನ ಹೆಂಡತಿ ಮಲ್ಲಿ " ಯಾರ ಮಾಡಿದ್ದರಿ ಅದು?" ಅನ್ನುತ್ತಿದ್ದಳು. ಗುಂಡ ಸಿಟ್ಟಿಗೆ ಬಂದು, " ಅದು ಮಿಸ್ ಕಾಲ್ ನಿನಗೆ ಸಂಬಂಧ ಇಲ್ಲ" ಅಂತ ಜೋರಾಗಿ ಅಂದ...

ಮಲ್ಲಿಗೆ ಏನೋ ಸಂಶಯ ಬಂದು, " ಎಷ್ಟು ಸಲ ಬರಾಕ ಐತಲಾ?"ಅಂದಳು. ಗುಂಡ " ಹೌದು ಬಂದದ್ದೆಲ್ಲ ಮಿಸ್ ಕಾಲ" ಅಂದ

ಮಲ್ಲಿ ಭಾಳ ಸಿಟ್ಟಿಗೆ ಬಂದು ಜೋರಾಗಿ ಒದರೇ ಬಿಟ್ಟಳು- " ಯಾವಾಕರಿ ಆಕಿ ಮಿಸ್ ನಾ ಜೀವಂತವಿರುವಾಗ ಇನ್ನೊಂದ ಸರ ಕಿವಿಗೆ ಮೊಬಾಯಿಲ ಹಿಡಕೊಂಡ ಮಿಸ್ ಕಾಲ ಬಂದದ ಅಂದರ ಅದನ್ನ ಒಡದ ಚೂರ ಚೂರ ಮಾಡ್ತೀನಿ ಹುಷಾರ..!"

****************************************************************

ಒಮ್ಮೆ ಬೀಚಿಯವರು ಸಾಹಿತ್ಯ ಸಮಾರಂಭವೊಂದಕ್ಕೆ ಹೋಗಿದ್ದರಂತೆ. ಆಗ ಅವರಿಗೆ ಸ್ವಲ್ಪ ಪರಿಚಯವಿದ್ದ ಮಹಿಳೆಯೊಬ್ಬಳು ಅವರ ಕುಶಲೋಪರಿ ವಿಚಾರಿಸಿದಾಗ, ಬೀಚಿಯವರೂ ಆಕೆಯನ್ನು ಕುರಿತು- ಏನಮ್ಮಾ, ನಿನ್ನ ಗಂಡ ಹೇಗಿದ್ದಾನೆ? ಎಂದು ಪ್ರಶ್ನಿಸಿದರಂತೆ, ಆಕೆ ಸ್ವಲ್ಪ ಅಸಮಾಧಾನದಿಂದ " ಏನ್ಸಾರ್ ನೀವು? ನನ್ನ ಯಜಮಾನರನ್ನು ಏಕವಚನದಿಂದ ಸಂಬೋಧಿಸುತ್ತೀರಿ? ಎಂದು ಕೇಳಿದಳು. ಕೂಡಲೇ ಬೀಚಿಯವರು- "ತಪ್ಪಾಯಿತು ತಾಯೀ! ಕ್ಷಮಿಸು ನನಗೆ ಗೊತ್ತಾಗಲಿಲ್ಲ! ನಿನ್ನ ಗಂಡಂದಿರರು ಹೇಗಿದ್ದಾರೆ? ಎಂದರಂತೆ!!

*****************************************************************

ಆ ಹಳ್ಳಿಯ ದಾರಿಯಲ್ಲಿ ಬರೀ ಹಳ್ಳ ದಿಣ್ಣೆಗಳೇ....ಹೇಗೊ...ಸಂಭಾಳಿಸಿಕೊಂಡು ಕಾರು ನಡೆಸುತ್ತಿದ್ದ...ಅಂತೂ

ರಸ್ತೆ ಮಧ್ಯದ ದೊಡ್ಡ ಹಳ್ಳಕ್ಕೆ ಕಾರು ಬಿತ್ತು...ಕೆಸರು ಬೇರೆ ತುಂಬಿದೆ..ಸುತ್ತಮುತ್ತಾ ಯಾರು ಇಲ್ಲಾ..ಈ

ಈ ಕತ್ತಲೆಯಲ್ಲಿ ಹೇಗಪ್ಪಾ ಕಾರನ್ನು ತಳ್ಳುವುದು ಎಂದು ಯೋಚಿಸಿದ...ಕಾರಿನ ಯಜಮಾನ...ಸ್ವಲ್ಪ ದೂರ

ನಡೆದುಕೊಂಡು ಹೊರಟ...ಅವನ ಅದೃಷ್ಟಕ್ಕೆ ಅಲ್ಲೇ ಹತ್ತಿರದಲ್ಲಿ ಒಂದು ಗುಡಿಸಲು ಕಂಡಿತು...ಓಡುತ್ತಾ...ಅಲ್ಲಿದ್ದ

ಇಬ್ಬರು ಹಳ್ಳಿಗರಿಗೆ ತನ್ನ ಕಾರು ಹಳ್ಳಕ್ಕೆ ಬಿದ್ದಿದೆ...ತಳ್ಳಲು ಸಹಾಯ ಬೇಕೆಂದು...ಅವರಿಬ್ಬರೂ ಏನೂ

ಮಾತನಾಡದೆ..ಬಂದು ಕಾರು ತಳ್ಳಿದರು....ಕಾರಿನ ಯಜಮಾನನಿಗೆ ಖುಷಿಯಾಗಿ ಕೈತುಂಬಾ

ಹಣವನ್ನಿತ್ತು...ಕೇಳಿದ..." ಈ ಕಗ್ಗಳ್ಳಿಯಲ್ಲಿ ಏನು ಮಾಡ್ತಾ ಇದ್ದೀರಾ..??




ಅವರಲ್ಲೊಬ್ಬ...." ಅದೇ ಬುದ್ಧಿ...ಹಳ್ಳ ತೆಗೆದು ನೀರು ತುಂಬ್ಸೋದೇ ನಮ್ಮ ಕೆಲಸ..!"

*****************************************



" ಪಕ್ಕದ ಮನೆಯಲ್ಲಿ ಕಳ್ಳತನವಾದ್ರೆ...ನಿಂಗ್ಯಾಕೆ ದುಃಖ??"


" ಅಯ್ಯೋ...ನಿಮ್ಗೆ ಏನೂ ಗೊತ್ತಾಗಲ್ಲ ರೀ...ಕಳವಾಗಿದ್ದೆಲ್ಲಾ..ಗೊಲ್ಡ್ ಕವರಿಂಗ್

ಒಡವೆಗಳಂತೆ...ಚಿನ್ನದ್ದೆಲ್ಲಾ...ಹಂಗೇ ಇದ್ಯಂತೆ ರೀ....!"

******************************************************


" ನಗುತ್ತಿದ್ದರೆ ರೋಗವು ಓಡಿ ಹೋಗುತ್ತದೆ ಎಂದು ನನ್ನ ಗಂಡನಿಗೆ ಯಾಕೆ ಹೇಳಿದಿರಿ??"

" ಯಾಕೆ ಏನಾಯಿತು??"

" ನನಗೆ ಕಾಯಿಲೆ ಬಂದಾಗ ನನ್ನ ಎದುರಿನಲ್ಲಿ ಕುಳಿತುಕೊಂಡು ಗಹಗಹಿಸಿ ನಗುತ್ತಿರುತ್ತಾರೆ.."


********************************************



" ಲವ್ ಸಬ್ಜೆಕ್ಟ್ ಆಗಿ ಬರುತ್ತಿದ್ದ ಧಾರಾವಾಹಿಯನ್ನು ಏಕೆ ಪ್ರೇತದ ಕಥೆಯಾಗಿ ಬದಲಾಯಿಸಿದಿರಿ?"

" ಇನ್ನು ಮುಂದೆ ಮೇಕಪ್ ಇಲ್ಲದೆ ನಟಿಸುವುದಾಗಿ ಹೀರೋಯಿನ್ ತೀರ್ಮಾನಿಸಿದರು. ಆದ್ದರಿಂದ ಈ ರೀತಿ ಮಾಡಬೇಕಾಯಿತು"


**********************************************


" ಹತ್ತು ಜನರು ನಮ್ಮನ್ನು ನೆನೆಸಿಕೊಳ್ಳುವ ಹಾಗಿರಬೇಕು....ನೀವೆಲ್ಲಾ ಏನಾಗಬೇಕೆಂದಿದ್ದೀರಿ?"

" ಹತ್ತು ಜನರ ಹತ್ತಿರ ಸಾಲ ಮಾಡಿ ಊರು ಬಿಟ್ಟರೆ ಸಾಕು ಸಾರ್....ನಾವು ಸತ್ತ ಮೇಲೂ ನಮ್ಮನ್ನು

ನೆನೆಸುತ್ತಾರೆ..!"

*************************************************

ಕೆಲ ದಿನಗಳ ಹಿಂದೆಯಷ್ಟೇ ಒಂದು ಸಿನೆಮಾ ನೋಡಿದ್ದ ಚಿಲ್ಟೂಗೆ...ಮತ್ತೆ ಸಿನೆಮಾ ನೋಡುವ ತೀವ್ರ ಆಶೆ...ಅದಕ್ಕಾಗಿ ಬಾಯಿ( ಅಜ್ಜಿ)ಯನ್ನು ಒಂದೇ ಸಮನೆ ಪೀಡಿಸತೊಡಗಿದ. ಅದಕ್ಕೆ ಬಾಯಿ, " ಸಿನೆಮಾ ಬಾಳಾ ನೋಡಬಾರ್ದು, ಕಣ್ಣು ಕೆಡ್ತಾವ" ಎಂದು ಎಷ್ಟು ಬಾರಿ ಹೇಳಿದರೂ ಕೇಳದೆ ಮತ್ತೆ ಮತ್ತೆ ಕಾಡತೊಡಗಿದ...

ಕೊನೆಗೆ ಬೇರೆ ಉಪಾಯ ಕಾಣದೆ ಅಜ್ಜಿ ಅವನಿಗೆ, " ನೋಡಪಾ ನನ್ನ ಕಡೆ ಅಂತೂ ರೊಕ್ಕ ಇಲ್ಲ, ರೊಕ್ಕ ಇಲ್ಲದ ಸಿನೆಮಾಕ್ಕೆ ಹೋದ್ರ ಥೇಟರದವ್ರು ಅರಿಬಿ ( ಬಟ್ಟೆ) ಕಳಿಸ್ಗೋತಾರ...ಹ್ಯಾಂಗ ಮಾಡ್ತಿ ನೋಡು.." ಎಂದು ಅಂಜಿಸಿದಳು...ಅದನ್ನು ಕೇಳಿದ ಚಿಲ್ಟೂ ಸುಮ್ಮನೆ ಒಳ ಕೋಣೆಗೆ ಹೋದನು...

ಸ್ವಲ್ಪ ಹೊತ್ತಿನಲ್ಲೇ ಹೊರಬಂದವನು " ಹುಟ್ಟುಡುಗೆಯಲ್ಲಿ ಗೊಮ್ಮಟನಂತೆ ನಿಂತಿದ್ದನು.." ಅಜ್ಜೀ ನಾ ನನ್ನ ಅಂಗಿ ಚೊಣ್ಣ ತಗದ ಬಂದೀನಿ, ನೀನೂ ಸೀರಿ ಕಳದಿಟ್ಟು ಬಂದುಬಿಡು, ಸಿನೆಮಾಕ್ಕೆ ಹೋಗೂಣ, ನಮ್ಮ ಮೈಮ್ಯಾಲ ಅರಿವಿನ ಇರದಿದ್ರ ಅವರು ಹ್ಯಾಂಗ ಕಳಿಸ್ಗೋತಾರ ನೋಡೂಣ.."....!!

******************************************************************

ಬಾರಿನಲ್ಲಿ ಹಲವಾರು ಜನ ಕುಡಿಯುತ್ತಾ ಹರಟುತ್ತಾ ಕೂತಿದ್ದರು. ಇದ್ದಕ್ಕಿದ್ದಂತೆ ಒಬ್ಬಾತ, " ನೋಡ್ರಪ್ಪಾ ಒಂದು ಬಕೆಟ್
ಪೂರ್ತಿ ಬಿಯರ್ ಕುಡಿದವರಿಗೆ ನಾನು ಒಂದು ತಿಂಗಳು ಅವರಿಗೆ ದಿನಾ ಬಿಟ್ಟಿ ಬಿಯರ್ ಕುಡಿಸುತ್ತೇನೆ...ಯಾರಿದ್ದೀರಿ..? ಮುಂದೆ ಬನ್ನಿ.." ಎಂದ...ಒಂದು ಕ್ಷಣ ಇಡೀ ಬಾರಿನಲ್ಲಿ ಮೌನ ಆವರಿಸಿತು. ಧಡೂತಿ ದೇಹದ ಗುಂಡ ಮೆಲ್ಲನೆದ್ದು ಮುಂದೆ ಬಂದ, ಆತನ ಉತ್ಸಾಹಕ್ಕೆ ತಣ್ಣೀರೆರಚುವಂತೆ ಪಂದ್ಯ ಕಟ್ಟಿದ ವ್ಯಕ್ತಿ " ಅಕಸ್ಮಾತ್ ನೀನೇನಾದರೂ ಸೋತರೆ ನೀನು ನನಗೆ ಒಂದು ತಿಂಗಳು ಬಿಟ್ಟಿ ಬಿಯರ್ ಕೊಡಿಸಬೇಕು" ಎಂದ....ಬಡಪಾಯಿ ಗುಂಡ ನ ಹತ್ತಿರ ಕಾಸೇ ಇಲ್ಲ..! " ಒಂದು ನಿಮಿಷ ಬಂದೆ" ಎಂದು ಹೇಳುತ್ತಾ.. ಬಾರಿನಿಂದ ಆಚೆ ಹೋದ ಗುಂಡ ಅರ್ಧ ಗಂಟೆಯಲ್ಲಿ ವಾಪಸ್ ಬಂದ...ಬಂದವನು ಬಕೆಟ್ ಪೂರ್ತಿ ಬಿಯರನ್ನು ಕುಡಿದ...!! ಎಲ್ಲರೂ ಸುಸ್ತು!!


ಅಂದ ಹಾಗೆ ಇಷ್ಟೊತ್ತು ಎಲ್ಲಿಗೆ ಹೋಗಿದ್ದಿ ಗುಂಡು...? ಎಂದು ಗುಂಪಿನಲ್ಲಿದ್ದವರು ಕೇಳಿದರು...ಅದಕ್ಕೆ ಗುಂಡ..." ಏನಿಲ್ಲಾ...ನನಗೆ ಒಂದು ಬಕೆಟ್ ಬಿಯರ್ ಕುಡಿಯುತ್ತೇನೆ ಎಂಬ ಆತ್ಮವಿಶ್ವಾಸ ಇರಲಿಲ್ಲ...ಅದಕ್ಕೆ ಪರೀಕ್ಷಿಸಲೆಂದು ಮೊದಲು ಹೋಗಿ ಒಂದು ಬಕೆಟ್ ನೀರನ್ನು ಕುಡಿದು ಬಂದೆ, ನಂತರ....." ಮುಂದೆ ಕೇಳುವಷ್ಟು ಚೈತನ್ಯ ಯಾರಲ್ಲೂ ಇರಲಿಲ್ಲ...!!

****************************************************************

ಭಕ್ತ: ದೇವರೇ, ಚೀಲದ ತುಂಬಾ ಹಣ ಮತ್ತು ಒಂದು ವಾಹನ ಸದಾ ನನ್ನ ಬಳಿ ಇರುವಂತೆ ವರವನ್ನು ನೀಡು..

ದೇವರು: ತಥಾಸ್ತು! ನೀನು ಬಸ್ ಕಂಡಕ್ಟರನಾಗು!!


__________________________________________________ ____

ಜೇನು ಸಾಕಲು ಶುರು ಮಾಡಿದ್ದ ತಿಮ್ಮನಿಗೆ ಅವನ ಗೆಳೆಯ ಕೇಳಿದ--

ಏನೋ ತಿಮ್ಮ! ಜೇನು ನೊಣಗಳನ್ನು ಸಾಕಲು ಶುರು ಮಾಡಿದ ಮೇಲೆ ನಿಂಗೆ ಲಾಭ ಆಗಿದ್ಯಾ??

ತಿಮ್ಮ: ಆಗದೇ ಇದ್ದೀತೆ?? ಅವು ಕಡಿತಾವೆ ಅಂತ ಭಯದಿಂದ ಮೊದಲು ನಮ್ಮ ಮನೆಗೆ ಬರುತ್ತಿದ್ದ.ನೆಂಟರು
ಕಡಿಮೆಯಾಗಿದ್ದಾರೆ!!

************************************************************

ಕನ್ನಡದ ವರಕವಿ ಬೇಂದ್ರೆಯವರು ತಮ್ಮ ಆಡುನುಡಿಯನ್ನು ಸಹಜವಾಗಿ ಹಾಸ್ಯಕ್ಕೆ ಪರಿವರ್ತಿಸಿ ಮಾತನಾಡುತ್ತಿದ್ದರು. ಒಂದು ಸಮಾರಂಭದಲ್ಲಿ ಬೇಂದ್ರೆಯವರು ಮಾತನಾಡಲು ನಿಂತಾಗ ಸಂಘಟಕರಿಗೆ " ಎಷ್ಟು ಹೊತ್ತು ಮಾತಾಡಲಿ?" ಎಂದು ಕೇಳಿದರು...ಆಗ ಸಮಯ ಸಾಯಂಕಾಲ ಆರುವರೆಯಾಗಿತ್ತು...ಸಂಘಟಕರು " ಏಳುವರೆವರೆಗೆ ಮಾತನಾಡಿ" ಎಂದರು...


ಬೇಂದ್ರೆಯವರು - ಆಯಿತು " ಜನ ಏಳುವವರೆಗೆ ಮಾತನಾಡುತೀನಿ"!!!

***********************************************************

ಮದುವೆಯ ಮಮತೆಯ ಕರೆಯೋಲೆ


ಭೋಜನ ಪ್ರಿಯರಿಗೆ ವಂದನೆಗಳು. ಮೈಸೂರುಪಾಕ ರಾಜ್ಯದ ಜಿಲೇಬಿ ಜಿಲ್ಲೆಯ ಪೇಡಾ ತಾಲ್ಲೂಕಿನ
ಸಿರಾ ಗ್ರಾಮದ ಶ್ರೀ ಬೇಸನ ಉಂಡಿಯವರ ಮಗನಾದ,


ಚಿ|| ಬಾಲುಶಾ (ಸಿಹಿ.ಸಿಹಿ)


ಜೊತೆ


ಚಿ|| ಕು||ಸೌ|| ಮಸಾಲೆದೋಸೆ


ಇವರ ಶುಭವಿವಾಹವು ಇದೇ ಪಕೋಡಾ ವಾರದ ಮಿರ್ಚಿಭಜಿ ಮುಹೂರ್ತದಲ್ಲಿ ಮುಂಜಾನೆ ಇಡ್ಲಿ ಸಾಂಬರದ ವೇಳೆಗೆ ನೆರವೇರಿಸುವುದೆಂದು ಹೋಟೆಲ್ ಸಪ್ಲಾಯರ್ಸ್ ನಿಶ್ಚಯಿಸಿದ್ದಾರೆ. ತಾವು ಕೈ - ಬಾಯಿ ಸಮೇತ ಅವಸರದಿಂದ ಬಂದು ಜಾಗ ಹಿಡಿದು ಹಿಂದೆ - ಮುಂದೆ ನೋಡದೆ ತಿಂದು ಹೊಟ್ಟೆ ಕೆಡಿಸಿಕೊಂದು ಹೋಗಬೇಕಾಗಿ ವಿನಂತಿ.


ತಮ್ಮ ಆಗಮನಾಭಿಲಾಷಿಗಳು,
ಶ್ರೀಮತಿ ಮತ್ತು ಶ್ರೀ ಪುರಿಭಟ್ಟರ ಅಡಿಗೆಮನೆ
ತಾಲ್ಲೂಕ|ಪಡಸಾಲಿ|ಜಿ||ದವಾಖಾನೆ.



ವಿವಾಹ ಸ್ಧಳ: ಕಚೋರಿ ಕಲ್ಯಾಣ ಮಂಟಪ,
ಖಾರಭವನ ಹತ್ತಿರ ಪಾನಿಪೂರಿ.


.................................................. ............................

ತಮ್ಮ ಸುಖಾಗಮನ ಬಯಸುವವರು:

ಶ್ರೀಮತಿ ಅವಲಕ್ಕಿ ಮತ್ತು ಶ್ರೀ ಬೇಸನ್ ಉಂಡಿ
ಶ್ರೀಮತಿ ರೈಸ್ ಬಾತ್ ಮತ್ತು ಉಪ್ಪಿಟ್ಟು ರವಾ
ಹಾಗೂ ಎಲ್ಲಾ ರುಚಿ ಮತ್ತು ಅಡುಗೆ ಮನೆಯ ಬಂಧು ಮಿತ್ರರು.
ಪ್ರಿಂಟಿಂಗ್ ಪ್ರ್*ಎಸ್: ಬ್ರೆಡ್, ಕಾಫಿ ಹಾಗೂ ಟೀ.

****************************************************************

ಆ ವೈದ್ಯರು ಯಾವಾಗಲೂ ಒಂದರ ನಂತರ ಒಂದು ಸಿಗರೇಟು ಸೇದುವವರು...ಉಳಿದ ವೈದ್ಯರು ಹೇಳಿದರೂ ಕೇಳುತ್ತಿರಲಿಲ್ಲ... ಒಂದು ಸಲ....ಗುಣಮುಖನಾಗಿದ್ದ ರೋಗಿಗೆ...ವೈದ್ಯರು ಮುಂದಿನ ಚಿಕಿತ್ಸೆಯ ವಿವರ ನೀಡುತ್ತಿದ್ದರು. ಆ ರೋಗಿಯು, " ಯಪ್ಪಾ, ಪಥ್ಯೇವು ಏನ ಮಾಡ ಬೇಕ್ತ್ರೀ...ಎಂದಾಗ ವೈದ್ಯರು..." ನಿನ್ನ ಜನ್ಮದಾಗ ಇನ್ನ ಬೀಡಿ ಸೇದಬ್ಯಾಡಾ...ಅದರಿಂದನ ..ನಿನಗ ಈ ರೋಗ ಬಂದದ್ದು ತಿಳೀತಾ...ಎಂದು ತಿಳಿಹೇಳಿದರು...ರೋಗಿಯು ಹೋದ....

ಮತ್ತೆ ನಾಲ್ಕು ತಿಂಗಳ ನಂತರ ಹೆಚ್ಚಿನ ರೋಗ ಲಕ್ಷಣಗಳೊಂದಿಗೆ ಬಂದಾಗ ಅದೇ ವೈದ್ಯರು...ಎಲ್ಲಾ ವಿಧದ ಪರೀಕ್ಷೆಗಳನ್ನು ಮಾಡಿಸಿ, " ಏನಪಾ...ರೋಗ ಹೆಚ್ಚಗೈತಲ್ಲೋ...ಗುಳಿಗಿ ಕರೆಕ್ಟ ತಿಂದೀ ಇಲ್ಲೋ? ನಿನ್ನ ನೋಡಿದರ ಬೀಡಿ ಸೇದೋದು ಬಿಟ್ಟಂಗ ಕಾಣೂದಿಲ್ಲ..." ಎಂದಾಗ ರೋಗಿಯು-

" ಯಪ್ಪಾ....ಗುಳಿಗಿ ನೀ ಹೇಳಿದಾಂಗ ತೊಗೊಂಡೀನೆ, ಬೀಡ್ಯಂತೂ ಮುಟ್ಟೇ ಇಲ್ಲ....ಆದರ ಸಿಗರೇಟು ಚಾಲೂ ಮಾಡೇನ್ರೀ" ಎಂದಾಗ ವೈದ್ಯರು.....


" ಲೇ ಬೀಡಿ ಸಿಗರೇಟು ಎಲ್ಲಾ ಒಂದ...ನಿನಗೆ ಸಿಗರೇಟು ಸೇದಲಿಕ್ಕೆ ಯಾ ಮಗಾ ಹೇಳಿದಾ...?"


" ಯಪ್ಪಾ..ನೀ ಯಾವಾಗ್ಲೂ ಸಿಗರೇಟ ಸೇತ್ತಿದಿ, ಸಿಗರೇಟ ಸೇದಿದ್ರ ಟಿ.ಬಿ. ಬರಾಂಗಿಲ್ಲ ಅಂತ ತಿಳಿದು ನಾನೂ ಚಾಲೂ ಮಾಡೇನ್ರೀ....!!!"

**************************************************************************

" ಸಾರ್... ಸಾರ್...ಯಾಕೆ ಹೊಡೀತೀರಾ? ನಾನು ಮುಂಚಿನ ಥರಾ ಕಳ್ತನ, ಪಿಕ್ ಪಾಕೆಟ್

ಮಾಡೋದನ್ನೆಲ್ಲಾ ಬಿಟ್ಟು ಬಿಟ್ಟಿದ್ದೀನಿ..."



" ಅದೇ ಕಣಲೇ ನನ್ಮಗ್ನೇ, ಅದನ್ನೆಲ್ಲಾ ಯಾಕ್ ಬಿಟ್ಟಿದ್ದು ಅಂತಾ...?"

************************************************** ***


" ನಾನು, ನೀನೇ ಅಂತಾ ತಿಳ್ಕೊಂಡು ಪಕ್ಕದ ಮನೆ ವನಜಾಕ್ಷೀನ್ನ

ತಬ್ಬಿಕೊಂಡುಬಿಟ್ಟೆ ಕಣೇ..."


" ಅಯ್ಯಯ್ಯೋ..., ಆಮೇಲೆ ಏನಾಯ್ತು..?"


" ನಾನು ಅವಳ ಗಂಡಾನೇ ಅಂದ್ಕೊಂಡು ಅವಳು ಲಟ್ಟಣಿಗೆಯಿಂದ ಬಾರಿಸಿಬಿಟ್ಟಳು..."

************************************************** *


" ಮಹಾರಾಣಿಯವರ ತಾಯಿಯನ್ನು ಹೊಗಳಿದ ವ್ಯಕ್ತಿಯನ್ನೇಕೆ ಸೆರೆಮನೆಗೆ ದೂಡಿದರು?"


" ಮಹಾರಾಣಿಯವರ ತಾಯಿಯನ್ನಲ್ಲ ಅವರು ಹೊಗಳಿದ್ದು, ಅತ್ತೆಯವರನ್ನು...!"

************************************************** *


" ಮೈ ಮರೆತು ನಿದ್ರಿಸುವುದು ಆರೋಗ್ಯಕ್ಕೆ ಒಳ್ಳೆಯದು...."


" ಇದನ್ನು ಹಾಗೇ ನಮ್ಮ ಮ್ಯಾನೇಜರ್ ಗೆ ಹೇಳಿ ಡಾಕ್ಟರ್ ಆ ವ್ಯಕ್ತಿ ನೆಮ್ಮದಿಯಿಂದ ನಿದ್ರಿಸಲು

ಬಿಡುವುದಿಲ್ಲ..!"


************************************************

ವರನ ತಂದೆ : " ಏನು ಓದಿದೀಯಮ್ಮಾ...?"

ಕನ್ಯಾ: " ಬಿ.ಎಸ್ಸಿ. ಓದಬೇಕಿತ್ತು....ಆದ್ರೆ...!"

ವರನ ತಂದೆ: " ಆದ್ರೆ ಏನಾಯ್ತಮ್ಮಾ..?

ಕನ್ಯಾ: " ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಅಡ್ಡ ಬಂದ್ಬಿಡ್ತು...!"


************************************************** ***


ಆರು ಹೂವುಗಳು ನಿಮಗಾಗಿ

ಒಂದು ಹೂ - ನಿಮ್ಮ ಸಂತೋಷಕ್ಕಾಗಿ,

ಎರಡನೇ ಹೂ - ನಿಮ್ಮ ಯಶಸ್ಸಿಗಾಗಿ

ಮೂರನೇ ಹೂ - ನಿಮ್ಮ ಸಂಪತ್ತಿಗಾಗಿ,

ನಾಲ್ಕನೇ ಹೂ - ನಿಮ್ಮ ಆರೋಗ್ಯಕ್ಕಾಗಿ,

ಕೊನೆಯ 2 ಹೂಗಳು - ನಿಮ್ಮ ಕಿವಿಯ ಮೇಲೆ ಇಡುವುದಕ್ಕಾಗಿ...!

*****************************************************

ಅಂದು ಹಬ್ಬದ ದಿನ....ಅಳಿಯ ಮಾವನ ಮನೆಗೆ ಊಟಕ್ಕೆ ಹೋಗಿದ್ದ...ಮಾವ ಸ್ವಲ್ಪ ಹಾಸ್ಯ ಪ್ರವೃತ್ತಿಯವ....ಅಂದು ಅತ್ತೆ, ಅಳಿಯ ಬಂದಿದ್ದಾನೆಂದು ಹೋಳಿಗೆ ಮಾಡಿದ್ದಳು....ಮಾವ-ಅಳಿಯ ಜೊತೆ ಜೊತೆಗೆ ಊಟಕ್ಕೆ ಕುಳಿತಿದ್ದರು...ಅಳಿಯನೇ ಆಗಾಗ ಒಳಗೆ ಹೋಗಿ ಹೋಳಿಗೆ ತಂದು ಮಾವನಿಗೆ ಬಡಿಸಿ ತಾನೂ ಒಂದೊಂದು ತುಪ್ಪದೊಂದಿದೆ ಮೆಲ್ಲುತಿದ್ದ...ಒಂದೆರಡು ಹೋಳಿಗೆ ತಯಾರಿಸಿ ತಟ್ಟೆಯ ಮೇಲಿಟ್ಟರೂ ಒಳಗೆ ಯಾರೂ ಬರದೇ ಇರುವುದನ್ನು ನೋಡಿ ಅತ್ತೆ..." ಏನರಿ, ಹೋಳಿಗೆ ತಯಾರಾಗ್ಯಾವ...ಎಂದು ಕೂಗಿದಳು...ಮಾವ ಹೊರಗಿನಿಂದಲೇ.." ಸ್ವಲ್ಪ ತಡಿ ವೇಟರ್ ಬರ್ತಾನಾ...." ಎಂದು ನಗುತ್ತಲೇ ಹೇಳಿದ...ಅಳಿಯನೇನೂ ಕಡಿಮೆಯಿಲ್ಲಾ...." ಮಾವಾ...ಒಬ್ಬ ವೇಟರನೊಂದಿಗೆ ಊಟ ಮಾಡಾಕ ಕೂತೀರಲ್ಲಾ...ಇದೇನು ನಿಮ್ಮ ಲಾಯಕಿ..."!!!..... ಮಾವ ಗಪ್...!!!!

***************************************************************

ಅಕಾಲದಲ್ಲಿ ಭೂಲೋಕ ತ್ಯಜಿಸಿದ ತಿಮ್ಮ ಪರಲೋಕದಲ್ಲಿ ಸುತ್ತಾಡಿ ಬರಲು ಹೊರಟ. ಸ್ವಲ್ಪ ದೂರದಲ್ಲಿ ತನ್ನ ಸಹಪಾಠಿ ಬೊಮ್ಮನನ್ನು ಕಂಡು ಆಶ್ಚರ್ಯದಿಂದ ಕೇಳಿದ -

" ನೀನೇಕೆ ಇಷ್ಟು ಬೇಗ ಇಲ್ಲಿಗೆ ಬಂದೆ...?"

" ಚಳಿ ತಡೆಯಲಾರದೆ ಬರಬೇಕಾಯಿತು...ನೀನು?"

" ಪಶ್ಚಾತ್ತಾಪದಿಂದ ಆತ್ಮಹತ್ಯೆ ಮಾಡಿಕೊಂಡೆ.."

" ಪಶ್ಚಾತ್ತಾಪ ..ಏಕೆ?"


" ಅದು ಹೀಗಾಯಿತು. ಅವತ್ತು ಬಾಸ್ ಅಫೀಸಿನಲ್ಲಿರಲಿಲ್ಲ. ಅರ್ಧ ಗಂಟೆ ಮೊದಲೇ ಮನೆ ತಲುಪಿದೆ. ಮನೆಬಾಗಿಲು ಮುಚ್ಚಿತ್ತು...ನನ್ನ ಹೆಂಡತಿ ಯಾರೋ ಪುರುಷನೊಡನೆ ಲಲ್ಲೆ ಹೊಡೆಯುತ್ತಿದ್ದುದು ಕೇಳಿಬಂತು...ಬಾಗಿಲು ತಟ್ಟಿದ ಸುಮಾರು ಹತ್ತು ನಿಮಿಷಗಳ ನಂತರ ಬಾಗಿಲು ತೆಗೆದಳು..." ನಿನ್ನ ಜೊತೆ ಚಕ್ಕಂದವಾಡುತ್ತಿದ್ದವ ಎಲ್ಲಿ..??" ಎಂದೆ...ಯಾರು? ಯಾಕೆ ಹೀಗಂತೀರಿ ಅಂದು ಅಳುವುದಕ್ಕೆ ಶುರು ಮಾಡಿದಳು...ಇರು ನಾನೇ ಪತ್ತೆ ಹಚ್ಚುತ್ತೇನೆ ಎಂದು ಮುಂದಿನ ಬಾಗಿಲು ಹಾಕಿ ಮನೆಯನ್ನೆಲ್ಲಾ ಜಾಲಾಡಿದೆ....ಯಾರೊ ಇರಲಿಲ್ಲ...ಸುಮ್ಮನೆ ನನ್ನ ಹೆಂಡತಿಯ ಮೇಲೆ ಸಂಶಯ ಪಟ್ಟೆನಲ್ಲಾ ಎಂದು ಬೇಸರವಾಗಿ ಸೀದಾ ಊರ ಮುಂದಿದ್ದ ಕೆರೆಗೆ ಬಿದ್ದೆ...ಇಲ್ಲಿಗೆ ಬಂದೆ." ತಿಮ್ಮ ತನ್ನ ಕಥೆ ಮುಗಿಸಿದ....


ಬೊಮ್ಮ..." ಅಯ್ಯೋ ಪೆದ್ದೇ...ಒಂದೇ ಒಂದು ಸಾರಿ ಫ್ರಿಜ್ ತೆಗೆದು ನೋಡಿದ್ರೆ...ನಾವಿಬ್ರೂ ಬದುಕುತ್ತಿದ್ವಲ್ಲೋ...!!!"

***************************************************************************
" ನಿಮಗೂ ಹಾಗೂ ನಿಮ್ಮ ತಂದೆಗೂ ಒಂದೇ ರೀತಿಯ ಬಟ್ಟೆ ಹೊಲಿಸಬೇಡಿ ಅಂದ್ರೆ ಕೇಳಿದ್ರಾ ನೀವು??"

" ಯಾಕೆ?? ಏನಾಯ್ತೆ??"


" ನಿಮ್ಮ ಬಟ್ಟೆ ಅಂತ ತಿಳ್ಕೊಂಡು...ಮಾವನವರ ಜೇಬಿನಿಂದ ದುಡ್ಡು ಎತ್ತಿಬಿಟ್ಟೆ!!"

**********************************************



" ನಿಮ್ಮ ಸ್ನೇಹಿತರ ಹೆಸರೇನು??"

" ಅವರಾ...? ಕುಡಿದಾಗ " ರಂಬಾಬು" ಉಳಿದಂತೆ ರಾಂಬಾಬು..!!"

*************************************************


. " ನಮ್ಮ ಏರಿಯಾದಲ್ಲೆಲ್ಲಾ ಚಿಕುನ್ ಗುನ್ಯಾ ಹಬ್ಬಿರೋದು ಒಳ್ಳೇದೇ ಆಯ್ತು..."


" ಎಕೆ...ಹೀಗೇಳ್ತೀದ್ದೀಯಾ...??"


" ಒಂದು ತಿಂಗಳಿಂದ ನಮ್ಮ ಅತ್ತೆಯವರು ನಮ್ಮ ಮನೆ ಕಡೇ ತಲೆ ಹಾಕಿಲ್ಲ...!!"

**********************************************


" ಹಳೆಯ ಸರಕುಗಳಿಗೆ ಪಾಲೀಷ್ ಮಾಡಿ, ಹೊಸದರಂತೆ ಹೊಳೆಯುವ ಹಾಗೆ ಮಾಡೋದು

ನಮ್ಮಪ್ಪನ ಕೆಲಸ..."



" ನಿನ್ನನ್ನೂ ಅದೇ ರೀತಿ ಮಾಡಿ ತಾನೇ ನನ್ಗೆ ಕಟ್ಟಿದ್ದು...!!"


**********************************************

ಇಬ್ಬರು ತಿರುಕರು ಒಂದು ಮರದ ಕೆಳಗೆ ಮಲಗಿದ್ದರು. ಒಬ್ಬ ಹೇಳಿದ;


" ಈ ತಿರುಕ ವೃತ್ತಿ ಸಾಕಾಗಿ ಹೋಗಿದೆ. ಇವತ್ತು ಒಂದು ಬೀದಿ, ನಾಳೆ ಒಂದು ಬೀದಿ,

ತಂಗಳನ್ನಕ್ಕಾಗಿ ಅಲೆದೂ ಅಲೆದೂ ಸುಸ್ತು. ಜನರಿಂದ ಬೈಸಿಕೋಬೇಕು. ನಾಯಿಯಿಂದ

ಬೊಗಳಿಸಿಕೋಬೇಕು. ಪೊಲೀಸರಿಂದ ಕಣ್ಣು ತಪ್ಪಿಸಿ ಓಡಬೇಕು. ಮಲಗೋಕೆ ಜಾಗವಿಲ್ದೆ

ಫುಟ್ ಪಾತಿನಲ್ಲೋ ಅಂಗಡಿ ಬಾಗಿಲಲ್ಲೋ ಮಲಗಬೇಕು....."



" ನಿನಗೆ ಭಿಕ್ಷೆ ಬೇಡೋದು ಅಷ್ಟೂ ಬೇಜಾರಾದರೆ ಯಾವುದಾದರೂ ಕೆಲಸ ಹುಡುಕ್ಕೋಳ್ಳೋದು ತಾನೆ??"


" ಚೆನ್ನಾಗಿ ಹೇಳಿದೆ! ವೃತ್ತೀಲಿ ಸೋಲು ಒಪ್ಪಿಕೋ ಅಂತೀಯಾ??!!"

************************************************** *

ಸಿನಿಮಾ ನೋಡುತ್ತಿದ್ದ ಸೀತಾರಾಮ ಎದುರು ಸಾಲಿನಲ್ಲಿ ಕೂತಿದ್ದವರ ಹೆಗಲ ಮುಟ್ಟಿ;


" ಸಾರ್, ದಯವಿಟ್ಟು ನಿಮ್ಮ ದಪ್ಪ ಟೋಪಿ ಹಾಕ್ಕೋತೀರಾ??"


ಸೀತಾರಾಮುವಿನ ಹೆಂಡತಿಗೆ ಬಹಳ ಆಶ್ಚರ್ಯವಾಯಿತು. ಆಕೆ,


" ಅಲ್ರೀ, ಅವರು ಟೋಪಿ ತೆಗೆದದ್ದು ನಿಮ್ಮ ಕೋರಿಕೆ ಮೇರೆಗೆ ತಾನೆ???"


" ಇರಬಹುದು, ಆದರೆ ಈ ಚಿತ್ರ ಇಷ್ಟು ಕೆಟ್ಟದಾಗಿರುತ್ತೆ ಅಂತ ನಾನಂದುಕೊಂಡಿರಲಿಲ್ಲ...

ನೋಡೋಕೆ ಕಷ್ಟವಾಗಿದೆ..." ಅನ್ನುತ್ತ ಸೀತಾರಾಮ ಕಣ್ಣುಮುಚ್ಚಿ ಕುರ್ಚಿಗೆ ಒರಗಿದ.

************************************************** ****

" ನಮಸ್ಕಾರ ಸ್ವಾಮಿ, ಬಹಳ ದಿನದಿಂದ ನಿಮ್ಮ ಭೇಟೀನೇ ಆಗಲಿಲ್ಲವಲ್ಲ? ಏನು ಸಮಾಚಾರ??"

" ನಮಸ್ಕಾರ, ಈಗ ಭೇಟಿ ಆಗಿದೀವಲ್ಲ ಅನ್ನೋದೇ ಸಮಾಚಾರ! ಅದಿರ್ಲಿ ಇವತ್ತು ನನ್ನ ಜತೆಗೇ

ಊಟ ಮಾಡ್ತೀರಾ???"


" ಆಗಬಹುದು, ಅದಕ್ಕೇನಂತೆ??"

" ಹಾಗಾದ್ರೆ ಹೋಗೋಣ ನಡೀರಿ?"

" ಎಲ್ಲಿಗೆ??"

" ನಿಮ್ಮ ಮನೇಗೇ ಬನ್ನಿ!!!"


************************************************** *****

" ಸ್ವಾಮಿ, ನನ್ನ ಆಪರೇಷನ್ ಯಶಸ್ವಿಯಾಯಿತೆ???"


" ಅದೇನೋ ನನಗೆ ಗೊತ್ತಿಲ್ಲ, ನಾನು ಯಮಲೋಕದ ಲೆಕ್ಕ ಪತ್ರದ ಅಧಿಕಾರಿ!!!"

************************************************

" ಇವತ್ತೇನು ವಿಶೇಷ?? ಪರಮೇಶಿ ನಿಮ್ಮನ್ನೆಲ್ಲ ಕರಕೊಂಡೋಗಿ ಕಾಫಿ ಕೊಡಿಸಿದ್ದಕ್ಕೆ??"


" ಅವನಿವತ್ತು ಸೆಂಚುರಿ ಮಾಡಿದ, ನಾವೆಲ್ಲ ಒತ್ತಾಯ ಮಾಡಿ ಅವನಿಂದ ಕಾಫಿ ಗಿಟ್ಟಿಸಿದೆವು!"


" ಸೆಂಚುರಿ? ಯಾವ ಆಟದಲ್ಲಿ???"


" ಆಟದಲ್ಲಲ್ಲ, ತನ್ನ ಹಳೇ ಜೋಕನ್ನು ಅವನು ಇವತ್ತು ನೂರನೇ ಸಲ ಹೇಳಿದ!!"


***********************************************

ಕಾಳಪ್ಪ ಬಾಡಿಗೆಗೆ ಹೊಸದಾಗಿ ಒಂದು ಮನೆ ನೋಡಿದ್ದ. ಬಾಡಿಗೆ ಅಡ್ವಾನ್ಸ್ ಕೊಡುವುದಕ್ಕೆ ಮೊದಲು, ಅದೇ ವಠಾರದಲ್ಲಿ ವಾಸ ಮಾಡುತ್ತಿದ್ದ ಮನೆ ಮಾಲೀಕನನ್ನು ಕೇಳಿದ;


" ನನಗೆ ಒಂದೇ ಒಂದು ಸಂದೇಹ, ವಠಾರದಲ್ಲಿ ಬೋಗಳೋ ನಾಯಿ ಇದೆಯೇನು??"


ಮನೆ ಮಾಲೀಕ ಅವಸರವಸರವಾಗಿ " ಇಲ್ಲ ಇಲ್ಲ ನಾಯಿ ಕಂಡರೆ ನನಗಾಗೋಲ್ಲ, ಇಲ್ಲಿ ಯಾರ ಮನೇಲೂ ನಾಯಿ ಸಾಕಿಲ್ಲ" ಅಂತ ಸಮಾಧಾನ ಹೇಳಿದ.


ಕಾಳಪ್ಪ, " ಸದ್ಯ ಒಳ್ಳೇದಾಯ್ತು, ನಮ್ಮನೇಲಿ ಎರಡು ನಾಯಿಗಳಿವೆ. ಅವುಗಳು ಅಸಾಧ್ಯವಾಗಿ ಬೊಗಳುತ್ತದೆ. ಅದನ್ನು ಕೇಳಿ ತಡಕೊಳ್ಳೋದರಲ್ಲೇ ನನಗೆ ಸಾಕೊಸಾಕು ಅನ್ನಿಸಿದೆ...!!!"


************************************************** ***


" ನಮ್ಮ ಅಗಸರವನಿಗೆ ಎಚ್ಚರಿಕೆ ಅನ್ನೋದೆ ಇಲ್ಲ..."


" ಯಾಕೆ? ಏನ್ಮಾಡಿದ ಅವನು?"


" ಅವನಿಗೆ ಹಾಕಿದ ಬಟ್ಟೆಗಳಲ್ಲೆಲ್ಲಾ ಒಂದೊಂದಾಗಿ ಗುಂಡಿ ಮಾಯವಾಗಿರುತ್ತೆ.."


" ನಮ್ಮ ಮೂರನೇ ಕ್ರಾಸ್ ಶಿವಪ್ಪನ ಲಾಂಡ್ರಿ ಈ ವಿಚಾರದಲ್ಲಿ ಬಹಳ ಅಚ್ಚುಕಟ್ಟು. ಅವನು ಹ್ಯಾಂಗೇಂತೀರಾ??? ಗುಂಡಿಗಳನ್ನ ಕಳೆಯೋದೇ ಇಲ್ಲ, ಆಗಾಗ , ಹಾಕಿದ ಬಟ್ಟೆಗಳು ಮಾತ್ರ ಕಳೆದು ಹೋದದ್ದುಂಟು...!!"


**************************************************

" ನೀವು ಭಾಷಣ ಮಾಡ್ತಿರೋವಾಗ ಮಧ್ಯೆ ಸಭೆಯಲ್ಲಿ ಯಾರಾದರೂ ಆಕಳಿಸಿ, ತಮ್ಮ ಕೈ ಗಡಿಯಾರ ನೋಡಿಕೊಂಡರೆ, ನಿಮಗೆ ಕಿರಿಕಿರಿಯಾಗುವುದಿಲ್ಲವೇ??"


" ಆಗುತ್ತೆ, ಆದರೆ ಅವರು ಸುಮ್ಮನೆ ಗಡಿಯಾರ ನೋಡಿಕೊಳ್ಳದೆ, ಅದನ್ನ ನೋಡಿ, ಅಲ್ಲಾಡಿಸಿ...ಕುಟ್ಟಿ ನೋಡಿದರೆ ಇನ್ನೂ ಹೆಚ್ಚು ಕಿರಿಕಿರಿಯಾಗುತ್ತದೆ...!!"


************************************************** ***

ಹೆಂಡತಿಗೆ ಹೆದರೆ ಹೆದರಿ ನರಪೇತಲನಾಗಿದ್ದ ಭಂಡಾರಿ ಒಂದು ದಿನ ತಿರುಗಿ ಬಿದ್ದ. ಭಂಡಾರಿ ಕಾರು ಓಡಿಸುತ್ತಿದ್ದಾಗ ಹಿಂದಿನ ಸೀಟಿನಲ್ಲಿ ಕೂತಿದ್ದ ಅವನ ಹೆಂಡತಿಯೂ ಅತ್ತೆಯೂ ಎಡೆಬಿಡದೆ..." ಹಾಗೆ ತಿರುಗಿಸು, ಹೀಗೆ ತಿರುಗಿಸು, ಮೆಲ್ಲಗೆ...ಓವರ್ ಟೇಕ್ ಮಾಡು...ಹಾರ್ನ್ ಮಾಡು...ಬ್ರೇಕ್ ಹಾಕು..." ಇತ್ಯಾದಿಗಳನ್ನು ಪರಸ್ಪರ ವ್ಯತಿರಿಕ್ತವಾಗಿ ಹೊರಡಿಸುತ್ತಿದ್ದ ಆರ್ಡರ್ ಗಳನ್ನು ಕೇಳಿ ಕೇಳಿ ಬೇಸತ್ತು, ಕಾರು ನಿಲ್ಲಿಸಿ ಹಿಂದೆ ತಿರುಗಿ ಹೆಂಡತಿಯ ಕಡೆ ದುರುಗುಟ್ಟಿ ನೋಡುತ್ತಾ ಗುಡುಗಿದ;


" ನನಗಿನ್ನು ಸಾಕಾಗಿ ಹೋಗಿದೆ, ಈಗ ಯಾವುದಾದರೂ ಇತ್ಯರ್ಥಕ್ಕೆ ಬರಲೇಬೇಕು. ಕಾರು ಓಡಿಸ್ತಿರೋದು ನೀನೋ, ನಿಮ್ಮಮ್ಮನೋ?!!!"


************************************************** ********

" ಏನಯ್ಯಾ ಮಾದೇವಯ್ಯಾ ಇದು? ಏನು ಚಿಮುಕಿಸ್ತಾ ಇದ್ದೀ???"


" ಇದು ಚಿರತೆ ಔಷಧಿ. ಇದನ್ನು ಮನೆ ಸುತ್ತ ಚಿಮುಕಿಸಿದರೆ ಚಿರತೆ ಮನೆಯೊಳಗೆ ಬರೋಲ್ಲಾ..."


" ನಿಮ್ಮನೆ ಹತ್ರ ಚಿರತೆ ಯಾವತ್ತೂ ಬಂದಿಲ್ಲವಲ್ಲ...!!"


" ಅದು ಹ್ಯಾಗೆ ಬರುತ್ತೆ?? ವಾರಕ್ಕೊಂದ್ಸಲ ನಾನೀ ಔಷಧಿ ಹೊಡಿತಾನೇ ಇರ್ತೀನಲ್ಲಾ...!!!"

****************************************************************

ಪುಟ್ಟನ ಸ್ಕೂಲಿನಿಂದ ಅವನ ತಂದೆಗೆ ಒಂದು ಉದ್ದ ರಿಪೋರ್ಟ್ ಬಂತು...


" ಪುಟ್ಟ ಯಾರ ಜತೆಗೂ ಸೇರುತ್ತಿಲ್ಲ, ಎಲ್ಲಾ ವಿಷಯಗಳಲ್ಲೂ ಅವನು ಹಿಂದೆ...ಉಳಿದ ಹುಡುಗರೆಲ್ಲಾ ಆಟಕ್ಕೆ ಹೋದರೆ

ಇವನು ಒಂಟಿಯಾಗಿ ಕೂತಿರುತ್ತಾನೆ, ಉಳಿದವರು ತಿಂಡಿ ತಿಂದು ಮುಗಿಸುವ ವೇಳೆಗೆ ಅವನು ಶುರು ಮಾಡುತ್ತಾನೆ, ಇವನಿಗೂ ಉಳಿದ ಹುಡುಗರಿಗೂ ಯಾವಾಗಲೂ ಜಗಳ...."


ಪುಟ್ಟನ ಅಪ್ಪ, ಈ ರಿಪೋರ್ಟ್ ಓದಿ ಕಂಗಾಲಾಗಿ ಹೆಂಡತಿಯ ಸಲಹೆ ಕೇಳಿದರು......" ಈ ಪರಿಸ್ಥಿತಿಯಲ್ಲಿ ನಾವೇನು ಮಾಡಬಹುದು ಅಂತ ತಿಳೀತಾ ಇಲ್ಲ..."


ಪುಟ್ಟನ ಅಮ್ಮ, ನನಗೆ ಅನ್ನಿಸುತ್ತದೆ...." ಮೇಷ್ಟರು ಆ ಹುಡುಗರನ್ನೆಲ್ಲಾ ಕರೆದು ಸರಿಯಾಗಿ ಬುದ್ಧಿ ಹೇಳಬೇಕು...!!"


******************************************* ********


ಡಾಕ್ಟರೊಬ್ಬರು ತಮ್ಮ ಫೀಸು ವಸೂಲಿಯ ವಿಷಯದಲ್ಲಿ ತುಂಬಾ ಕಟ್ಟುನಿಟ್ಟು ಅಂತ ಹೆಸರು ಪಡೆದಿದ್ದರು. ಅವರಲ್ಲಿ ಮೊದಲು ಚೆಕಪ್ ಮಾಡಿಸಿಕೊಳ್ಳಲು ಹೋದಾಗ ಇಪ್ಪತ್ತೈದು ರೂಪಾಯಿ ಕೊಡಬೇಕಾಗಿತ್ತು, ಇನ್ನೊಂದು ಬಾರಿ ಹೋದರೆ ಹತ್ತು ರೂಪಾಯಿ.....


ಜುಗ್ಗಪ್ಪನಿಗೆ ಗಂಟಲು ನೋವು ಬಂದು ಈ ಡಾಕ್ಟರ್ ಬಳಿಗೆ ಹೋದ...ಎರಡನೆಯ ಬಾರಿಗೆ ಬಂದಿರುವನಂತೆ ನಟಿಸುತ್ತಾ ಹತ್ತೇ ರೂಪಾಯಿ ಕೊಡುವ ಹವಣಿಕೆ ಜುಗ್ಗಪ್ಪನದು...


" ಡಾಕ್ಟರೇ, ನೀವು ಕೊಟ್ಟ ಔಷಧಿ ಕುಡಿದೆ, ಆದರೆ ಗಂಟ್ಲುನೋವು ಹಾಗೇ ಇದೆ..."



ಡಾಕ್ಟರು ಒಮ್ಮೆ ಅವನನ್ನು ನೋಡಿ....


" ಹಾಗಾದ್ರೆ ಅದೇ ಔಷಧೀನ ಮುಂದುವರಿಸಿ...!!"


************************************************** ******


" ಡಾಕ್ಟರೇ, ನನ್ನ ಪರಿಸ್ಥಿತಿಯ ಬಗ್ಗೆ ಏನು ಅಭಿಪ್ರಾಯವಿದ್ದರೂ ಮರೆಮಾಚದೇ ಹೇಳಿ..."


" ಎನೂಂತ ಹೇಳಲಿ? ನೀವು ಬಹಳ ತಡವಾಗಿ ಬಂದಿರಿ ಅಂತ ಮಾತ್ರ ಹೇಳಬಲ್ಲೆ...!"


" ಆದರೂ, ಈಗ ಸ್ವಲ್ಪ ಮಟ್ಟಿಗೆ ವಾಸಿ ಅನ್ನಬಹುದೇ??"


" ಅದು ಹೇಳಲಾರೆ..."


"ಹೋಗಲಿ ನಾನು ಎದ್ದು ಕೂತು...ಓಡಾಡಿ, ಪೇಪರು..ಮ್ಯಾಗಜೀನು ಓದಬಹುದೇ??"



" ಅದೇನೂ ಪರವಾಗಿಲ್ಲ, ಆದರೆ ಯಾವುದಾದರೂ ಧಾರಾವಾಹಿನ ಓದೋಕೆ ಶುರು ಮಾಡಿ ಬಿಡಬೇಡಿ...!!"


************************************************** ****


ಮಡ್ಡಿಮಾದೇವಯ್ಯ ಪೋಸ್ಟಾಫೀಸಿಗೆ ಹೊರಟಿದ್ದ. ದಾರಿಯಲ್ಲಿ ಆತನನ್ನು ಯಾರೋ ಕೇಳಿದರು;


" ಎತ್ತಲಾಗೆ ಹೊರಟೆ ಮಾದೇವಯ್ಯಾ???"

" ಪೋಸ್ಟಾಫೀಸಿಗೆ..."

" ಅಲ್ಲೇನು ಕೆಲಸ??"

" ಸ್ಟ್ಯಾಂಪು ತರಬೇಕು....ಆರು ಸ್ಟ್ಯಾಂಪು..."

" ಆರು ಸ್ಟ್ಯಾಂಪೇ? ಅಷ್ಟೋಂದ್ಯಾಕೆ???"


" ಮತ್ತೇ? ಮರುಳಯ್ಯ ಊರಿಗೆ ಹೋದ ಮೇಲೆ ಆರು ಲೆಟರ್ ಹಾಕಿದ್ದಾನೆ, ಅವಕ್ಕೆಲ್ಲಾ ಉತ್ತರ ಬರೀಬೇಕಲ್ಲಾ..!!!"


************************************************** ****

ನವದಂಪತಿಗಳಾದ ಚಿನ್ನಮ್ಮ, ಚಿನ್ನಪ್ಪ ಇವರುಗಳ ನಡುವೆ ಏನೋ ಒಂದು ಚಿಕ್ಕ ಜಗಳವಾಗಿತ್ತು. ಚಿನ್ನಮ್ಮ ಹುಬ್ಬುಗಂಟಿಕ್ಕಿಕೊಂಡು....


" ನನ್ನನ್ನೇನೂ ಸಾಮಾನ್ಯ ಅಂತ ತಿಳೀಬೇಡಿ...ನನ್ನ ಕೈ ಹಿಡಿಯೋದಕ್ಕೆ ಹನ್ನೆರಡು ಗಂಡು ಸಾಲಾಗಿ ಕ್ಯೂ

ನಿಂತಿದ್ದವು..."


" ಹಾಗಾದ್ರೆ, ಅದರಲ್ಲಿ ಎಲ್ಲರಿಗಿಂತ ಮುಂದೆ ನಿಂತಿದ್ದ ಹೇಸರಕತ್ತೇಗೇ ಯಾಕೆ ಹಾರ ಹಾಕಲಿಲ್ಲ..???"



" ಅದನ್ನೇ ನಾ ಮಾಡಿರೋದು...ನನ್ನ ಕರ್ಮ..!!!"


************************************************** *

ಸೀರೆ ಗಂಟುಗಳನ್ನು ಹೊತ್ತ ಇಬ್ಬರು ತಿರುಗು ವ್ಯಾಪಾರಿಗಳು ತಮ್ಮ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದರು...


" ಅಲ್ಲಯ್ಯಾ? ದಿನವೆಲ್ಲಾ ತಿರುಗಿದರೂ ನನಗೆ ನಾಲ್ಕು ಸೀರೆ ಮಾರೋದು ಕಷ್ಟ ಅನ್ನಿಸ್ತಿದೆಯಲ್ಲಾ! ನೀನು ಹ್ಯಾಗೆ ದಿನಾ ಒಂದು ಮೂಟೆ ಮಾರ್ತಿ???"



" ನಾನೊಂದು ಸುಲಭವಾದ ಉಪಾಯ ಹುಡುಕಿದ್ದೀನಿ..."


" ಏನದು ಉಪಾಯ? ನನಗೂ ಸ್ವಲ್ಪ ಹೇಳಿಕೊಡ್ತೀಯಾ??"



" ಆಗಲಿ, ಅದಕ್ಕೇನಂತೆ..." ಸೀರೆ ಬೆಲೆ ದುಬಾರಿ, ನನಗೆ ಬೇಡ" ಅಂತ ಒಬ್ಬಾಕೆ ಹೇಳಿದರೂನ್ನು, ಆಗ ನೀನು ಸರಿ, ಬಿಡಿ ಆಚೆ ಕಡೇಲಿ ಒಂದು ಮನೆಯವರು ನಿಮಗೆ ಈ ಸೀರೆಗಳನ್ನು ಕೊಂಡ್ಕೊಳ್ಳೋ ಶಕ್ತಿ ಇಲ್ಲ ಅಂತ ಆಗಲೇ ಸೂಚಿಸಿದ್ದರು ಅನ್ನು....ಒಂದೋ ಎರಡೋ ಕ್ಷಣದಲ್ಲಿ ಸೀರೆ ಖರೀದಿಯಾಗುತ್ತದೆ!!!

*********************************************************************************

ಹನುಮಂತರಾಯರು ಹಲ್ಲು ಕೀಳಿಸಿಕೊಳ್ಳುವುದಕ್ಕೆ ದಂತ ಚಿಕಿತ್ಸಾಲಯಕ್ಕೆ ಹೋದರು...


ಕುರ್ಚಿಯ ಮೇಲೆ ಕೂರುತ್ತಲೇ ರಾಯರು ಕೇಳಿದರು;


" ಹಲ್ಲು ಕೀಳುವುದಕ್ಕೆ ನೀವೆಷ್ಟು ತಗೊಳ್ತೀರಿ...??"


" ಐವತ್ತು ರೂಪಾಯಿ..."

" ಎಷ್ಟೊತ್ತಾಗುತ್ತೆ ಕೀಳೋದು??"

" ಹತ್ತು ನಿಮಿಷ ಆಗುತ್ತೆ.."

" ಹತ್ತು ನಿಮಿಷದ ಕೆಲಸಕ್ಕೆ ಐವತ್ತು ರೂಪಾಯಿ ಜಾಸ್ತಿ ಆಲ್ಲವೇ???"

" ಬೇಕಾದರೆ ನಿಧಾನವಾಗಿ ಕೀಳ್ತೀನಿ, ಆಗ ನಿಮಗೆ ಸಮಾಧಾನ ಅನ್ನಿಸಬಹುದು...!!"

******************************************* ***

ಪುಡಾರಿ ಪುಟ್ಟಸ್ವಾಮಯ್ಯನವರು ತಮ್ಮ ಭಾಷಣ ಮುಗಿಸಿಕೊಂಡು ಮನೆಗೆ ಬಂದಾಗ ಅವರ ಮೂಡ್ ಚೆನ್ನಾಗಿಲ್ಲದಿರುವುದನ್ನು ಅವರ ಮಡದಿ ಗಮನಿಸಿದಳು.


" ಏನಾಯ್ತುರೀ? ಮುಖ ಯಾಕೆ ಹೀಗೆ ಗಂಟಾಕಿಕೊಂಡಿದ್ದೀರಿ...??"


" ಎಲ್ಲರೂ ಠಕ್ಕರು ! ದಗಲ್ಬಾಜಿಗಳು..!!"

" ಯಾಕ್ರೀ? ಯಾರೇನು ದ್ರೋಹ ಮಾಡಿದರು ನಿಮಗೆ?"

" ನಾನು ದುಡ್ಡು ಕೊಟ್ಟು ಕಳಿಸಿದ್ದು ಹತ್ತು ಹೂವಿನ ಹಾರ, ಹತ್ತು ತುರಾಯಿಗಳಿಗೆ, ಇಲ್ನೋಡು, ಎಂಟೆಂಟೇ ಇವೆ...."


******************************************* ****

" ನಮ್ಮ ಮನೆ ಮಾಲೀಕರು ಬಾಡಿಗೆ ವಸೂಲಿಗೋಸ್ಕರ ಇವತ್ತು ಬೆಳಿಗ್ಗೆ ನಮ್ಮ ಮನೇಗೆ ಬರ್ತಿದ್ದಾಗ, ನಿಮ್ಮ ನಾಯಿ ಅವರ ಕಾಲು ಕಚ್ಚಿ ಬಿಡ್ತು...."


" ಅದಕ್ಕೇನು ಮಾಡೋಣ? ಅವರಿಗೆ ಏನಾದ್ರೂ ಪರಿಹಾರ ಧನ ಕೊಡೂಂತ ಕೇಳೋಕೆ ಬಂದಿದ್ದೀರಾ???"


" ಅದೇನಿಲ್ಲ, ನಿಮ್ಮ ನಾಯನ್ನು ಕೊಂಡುಕೊಳ್ಳೋಕೆ ಬಂದಿದ್ದೀನಿ...!!"

*****************************************


ಓಬಳಯ್ಯ ಓಟು ಮಾಡಿ ಬರುವ ಹಾದಿಯಲ್ಲಿ ತನ್ನ ಸ್ನೇಹಿತ ಕಿಟ್ಟಪ್ಪನ ಬೀಡಿಯಂಗಡಿಯಲ್ಲಿ ಹರಟೆಗೆ ನಿಂತ. ತಾನು ಓಟು ಮಾಡಿದ ಬೂತಿನಲ್ಲಿ ಮೋಸ ನಡೆಯುತ್ತಿದೆಯೆಂದು ಓಬಳಯ್ಯ ಕಿಟ್ಟಪ್ಪನಿಗೆ ಹೇಳಿದ....

" ಅದು ಹ್ಯಾಗೆ ಹೇಳ್ತೀ???"

" ಅಲ್ಲಿರೋ ಕೆಲಸದವರು, ಅಣ್ಣಯ್ಯ, ಸಣ್ಣಯ್ಯ, ಇಬ್ಬರೂ ತಾವೇ ಓಟಿನ ಚೀಟಿಗಳನ್ನು ಡಬ್ಬದಲ್ಲಿ ಹಾಕ್ತಾ ಇರ್ತಾರೆ..."


" ಅದನ್ನ ನೀನ್ಯಾವಾಗ ನೋಡಿದೆ??"

" ಈಗ ತಾನೇ ನಾನು ಮೂರನೇ ಸರ್ತಿ ಹೋಗಿ ಓಟು ಹಾಕಿ ಬಂದೆನಲ್ಲ, ಮೂರು ಸಲವೂ ನೋಡಿದೆ...!!"

******************************************* *****


ವ್ಯಾಪಾರದಲ್ಲಿ ಸಾಕಷ್ಟು ಸಫಲತೆ ಪಡೆದ ಶ್ರೀಮಂತರೊಬ್ಬರು ತಮ್ಮ ಜೇಷ್ಠ ಪುತ್ರನಿಗೆ ಉಪದೇಶ ಮಾಡುತ್ತಿದ್ದರು...


" ನೋಡು , ವ್ಯವಹಾರದಲ್ಲಿ ಮುಂದಕ್ಕೆ ಬರಬೇಕಾದರೆ ನೀನು ಎರಡು ವಿಚಾರಗಳನ್ನು ಯಾವಾಗಲೂ ನೆನಪಿನಲ್ಲಿಟ್ಟಿರಬೇಕು..."


" ಯಾವು ಯಾವುದು...??"

" ಒಂದು ಪ್ರಾಮಾಣಿಕತೆ, ಎರಡು ಬುದ್ಧಿವಂತಿಕೆ...ಅಂದರೆ ಏನೇ ಬರಲಿ ಕೊಟ್ಟ ಮಾತು ತಪ್ಪದೇ ನಡೆಸಿಕೊಡೋದು ಪ್ರಾಮಾಣಿಕತೆ.."


" ಸರಿ, ಬುದ್ಧಿವಂತಿಕೆ ಅಂದರೆ??"


" ಮಾತು ಕೊಡದೇ ಇರುವುದೇ ಬುದ್ಧಿವಂತಿಕೆ...!!"


******************************************* ******


ಅಪ್ ಟು ಡೇಟ್ ಅಮ್ಮಯ್ಯನ ಹುಟ್ಟಿದ ಹಬ್ಬದ ಪಾರ್ಟಿಗೆ ಅವಳ ಗೆಳತಿಯೆರೆಲ್ಲಾ ಬಂದಿದ್ದರು. ಅವರ ಪೈಕಿ ಬಾಯಿಬಡುಕಿ ಅನ್ನಿಸಿಕೊಂಡ ಬಂಗಾರಮ್ಮನೂ ಇದ್ದಳು. ಬಂಗಾರಮ್ಮ ಹೂವಿನ ಗುಚ್ಚವನ್ನು ಅಮ್ಮಯ್ಯನಿಗೆ ಕೊಡುತ್ತಾ...


" ಜನ್ಮದಿನ ವಾರ್ಷಿಕೋತ್ಸವದ ಶುಭಾಷಯಗಳು.."

" ಅದೇನಮ್ಮ, ಜನ್ಮದಿನ ವಾರ್ಷಿಕೋತ್ಸವ ಅಂದ್ರೆ?? ಒಂದೋ ಜನ್ಮದಿನದ ಆಚರಣೆ ಇರುತ್ತೆ, ಇಲ್ದಿದ್ರೆ ಯಾವುದಾದರೂ ವಾರ್ಷಿಕೋತ್ಸವ ಇರುತ್ತೆ.??"


" ಇವತ್ತು ಅಮ್ಮಯ್ಯನ ಹತ್ತೊಂಬತ್ತನೇ ಹುಟ್ಟಿದ ಹಬ್ಬದ ಹತ್ತನೇ ವಾರ್ಷಿಕೋತ್ಸವ...!!!"
**************************************************************

ಹೊಸ ಏರಿಯಾದ ಚುಲ್ಟಾರಿಗಳೆಲ್ಲಾ ಸೇರಿ ಕ್ರಿಕೆಟ್ ಕ್ಲಬ್ ಮಾಡಿಕೊಂಡು, ಧನ ಸಹಾಯ ಕೇಳಲು ಎಲ್ಲರ ಮನೆಗೆ ಹುಂಡಿ ಹಿಡಿದು ಹೊರಟರು....


" ಅಂಕಲ್ ಏನಾದರೂ ಧನ ಸಹಾಯ ಮಾಡ್ತೀರಾ?? ನಮ್ಮ ಕ್ರಿಕೆಟ್ ಟೀಮಿಗೆ??"


" ನಿಮ್ಮ ಟೀಮಿನಲ್ಲಿ ಅಂಥಾದ್ದೇನು ವಿಶೇಷ??"


" ಬಹಳ ಇದೆ ವಿಶೇಷ...ಇಲ್ಲಿವರೆಗೆ ನಾವು ಒಂದು ಮ್ಯಾಚೂ ಸೋತಿಲ್ಲಾ....ಒಂದೂ ಡ್ರಾ ಮಾಡಿಕೊಂಡಿಲ್ಲ..."


" ಎಷ್ಟು ಮ್ಯಾಚು ಆಡಿದ್ದೀರಿ...??"


" ನಾಳೆ ಭಾನುವಾರ ಮೊದಲ ಮ್ಯಾಚು...!!"



***************************************


ಇಬ್ಬರು ಖೈದಿಗಳು ಜೈಲಿನಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು;


" ನೀನ್ಯಾಕೆ ಜೈಲು ಸೇರಿದೆ?"


" ದುಡ್ಡು ಸಾಲ ತಗೊಂಡಿದ್ದಕ್ಕೆ.."


" ದುಡ್ಡು ಸಾಲ ತಗೊಂಡಿದಕ್ಕೆ ಜೈಲುವಾಸವೇ???"


" ಹೌದು, ಆದರೆ ನಾನು ಸಾಲ ಕೇಳಿದ್ದಕ್ಕೆ ಆ ಸಾಹುಕಾರ ಒಪ್ಪದೆ ತಕರಾರು ಮಾಡಿದ, ಅವನ ತಲೆ ಮೇಲೆ

ದೊಣ್ಣೆಯಿಂದ ಒಂದು ಇಕ್ಕಬೇಕಾಯಿತು...!!"



******************************************* **

ಸೂರಣ್ಣ ಬಾರಿನಲ್ಲಿ ರಾತ್ರಿ ಹನ್ನೊಂದು ಗಂಟೆಯವರೆಗೂ ಕಂಠಪೂರ್ತಿ ಕುಡಿದು ತೂರಾಡುತ್ತ ಆಚೆಗೆ ಬಂದ. ಎದುರಿಗೆ ಒಂದು ಆಟೋರಿಕ್ಷಾ ಸಿದ್ಧವಾಗಿಯೇ ನಿಂತಿತ್ತು. ಸ್ಥೂಲಕಾಯನಾದ ಸೂರಣ್ಣ ಹಾಗೂ ಹೀಗೂ ಕೊಸರಾಡುತ್ತಲೇ ಆ ಕಡೆಯಿಂದ ಈಚೆಗೆ ಬಿದ್ದ, ಎದ್ದು ಮೈ ಕೊಡವಿಕೊಳ್ಳುತ್ತ ಮೀಟರೂ ನೋಡದೆ,


" ಎಷ್ಟಾಯ್ತಪ್ಪ...!!!" ಅಂದ....


******************************************


ಸುಬ್ಬರಾಮಯ್ಯನವರು ತಾವು ಪ್ರತಿದಿನ ನಾಷ್ಟಾ ಮಾಡುತ್ತಿದ್ದ ಹೋಟೆಲಿಗೆ ಒಂದು ದಿನ ಹೋದಾಗ, ಹಳೆಯ ಪೇಪರಿನಲ್ಲಿ ಸುತ್ತಿದ್ದ, ಒಂದು ಶೀಷೆಯನ್ನು ಮಾಲೀಕರಿಗೆ ಕೊಟ್ಟು,

" ಇದನ್ನು ನಿಮ್ಮ ಅಡಿಗೆ ಭಟ್ಟರಿಗೆ ಕೊಡಿ.."


" ಏನಿದು..??"


" ಆಯುರ್ವೇದಿಕ್ ಹೇರಾಯಿಲ್, ತಲೆಕೂದಲಿಗೆ ಒಳ್ಳೆಯದು..."


" ಭಟ್ಟರಿಗೆ ಯಾಕೆ ಇದು...?"


" ದಿನಾ ಹಚ್ಚಿಕೊಂಡರೆ, ಅವರ ತಲೆ ಕೂದಲು ನಮ್ಮ ಉಪ್ಪಿಟ್ಟಿನಲ್ಲಿ ಉದುರೋದು ನಿಲ್ಲುತ್ತೆ...!!"

******************************************* *


" ನನ್ನ ಕನ್ನಡಕ ಎಲ್ಲಾದರೂ ನೋಡಿದಿರೇನ್ರೋ?" ಅಂತ ಡ್ರಿಲ್ ಮೇಷ್ಟರು ಹುಡುಗರನ್ನು ಕೇಳಿದರು;


" ನಾನ್ನೋಡಿದೆ ಸಾರ್" ಅಂದ ಪುಟ್ಟ

" ಎಲ್ಲಿ ನೋಡಿದೆ?"

" ಮೈದಾನದಲ್ಲಿ..."


" ಮತ್ತೆ ಯಾಕೆ ತಂದು ಕೊಡಲಿಲ್ಲ??"

" ಅದು ನಿಮಗೆ ಬೇಡಾಂತ ಬಿಸಾಡಿದ್ದೀರಿ ಅಂದ್ಕೊಂಡು ಬೂಟ್ಸ್ ಕಾಲಿನಿಂದ ತುಳಿದಾಕಿಬಿಟ್ಟೆ ಸಾರ್...!!"

******************************************* ****

ಇಬ್ಬರು ಗೆಳೆಯರು ಅಪರೂಪಕ್ಕೆ ಒಂದು ಸಂಜೆ ಭೇಟಿಯಾಗಿ ಬಾರಿಗೆ ಹೋದರು. ಚೆನ್ನಾಗಿ ಕುಡಿದು ತಿಂದು ತೂರಾಡುತ್ತಾ ಮನೆಗೆ ಹೊರಟು ಬೀದಿಯಲ್ಲಿ ನಿಂತಾಗ ಅವರಲ್ಲಿ ಒಬ್ಬ.

" ನಾನೇನೋ ಒಂದು ಆಟೋರಿಕ್ಷಾ ತಗೊಂಡು ಹೋಗೋಣ ಅಂತ ತೀರ್ಮಾನ ಮಾಡಿದ್ದೀನಿ, ನೀನು???"


" ನನಗೂ ಆಟೋರಿಕ್ಷಾ ತೊಗೊಂಡು ಹೋಗೋಣ ಅಂತಲೇ ಆಸೆ, ಆದರೆ ಅದನ್ನು ಇಡೋಕೆ ನಮ್ಮನೇಲಿ ಜಾಗವೇ ಇಲ್ಲವಲ್ಲ...!!!"


******************************************* ****


ಪುಟ್ಟ ಅಪ್ಪನ ಜತೆಗೆ ಲೈಬ್ರರಿಗೆ ಹೋದ. ಇಬ್ಬರೂ ಒಂದೊಂದು ಪುಸ್ತಕ ಆರಿಸಿಕೊಂಡು ಬರುವ ಉದ್ದೇಶ. ಅಪ್ಪ ಒಂದು ಕನ್ನಡ ಕಾದಂಬರಿ ಆರಿಸಿಕೊಂಡರು. ಪುಟ್ಟ ಹೊರಲು ಕಷ್ಟವಾದ ಒಂದು ದೊಡ್ಡ ಅಟ್ಲಾಸನ್ನೇ ಎತ್ತಿಕೊಂಡ. ಅಪ್ಪ ಕೇಳಿದರು;

" ಯಾಕೋ ನಿನಗೆ ಅದು??"


" ಆಚೆ ನೋಡು, ಮಳೆ ಶುರು ಆಗಿದೆ, ತಲೆ ಮೇಲೆ ಪುಸ್ತಕ ಹಿಡುಕೊಂಡು ಹೋಗಬೇಕಾಗುತ್ತೆ, ನೀನೂ ಒಂದು ದೊಡ್ಡ ಪುಸ್ತಕ ತಗೋ...!!"


******************************************* ******


ಅಕ್ಕಚ್ಚಮ್ಮನ ಅಕ್ಕ ಪಕ್ಕದ ಮನೆಯವರೆಲ್ಲಾ ರಜದಲ್ಲಿ ಊರುಗಳಿಗೆ ಹೊರಟುಹೋಗಿದ್ದರು. ಅಕ್ಕಚ್ಚಮ್ಮನಿಗೆ ಹರಟೆ ಹೊಡೆಯುವುದಕ್ಕೆ ಅವಕಾಶ ಇಲ್ಲದೆ ಬೇಜಾರೋ ಬೇಜಾರು. ಟೆಲಿಪೋನ್ ಎಕ್ಸ್ ಚೇಂಚಿಗೆ ಪೋನ್ ಮಾಡಿ,


" ಕನೆಕ್ಷನ್ ಕೊಡಿ"


" ಯಾವ ನಂಬರಿಗೆ??"

" ಯಾವುದಾದರೂ ಆದೀತು , ಕೊಡಿ...!!"


******************************************* ******


ಮಡ್ಡಿ ಮಾದೇವಯ್ಯ ಬಹುಮಹಡಿ ಕಟ್ಟಡದ ಲಿಫ್ಟ್ ಪ್ರವೇಶ ಮಾಡುವುದರಲ್ಲಿದ್ದ, ಆಗ " ಲಿಫ್ಟ್ ಪ್ರಯಾಣಿಕರು ನಾಯಿಗಳನ್ನು ಕಂಕುಳಲ್ಲಿ ಎತ್ತಿಕೊಂಡಿರಬೇಕು" ಅನ್ನುವ ಸೂಚನಾಫಲಕ ಅವನ ಕಣ್ಣಿಗೆ ಬಿತ್ತು.


ಕೂಡಲೇ ಮಾದೇವಯ್ಯ ಕಟ್ಟಡದ ಹೊರಗೆ ಹೋಗಿ ಸುತ್ತ ಮುತ್ತಲೆಲ್ಲಾ ಹುಡುಕಾಡಿ ಒಂದು ಬೀದಿನಾಯಿಯನ್ನು ಹಿಡಿದು ಕಂಕುಳಲ್ಲಿ ಭದ್ರ ಮಾಡಿಕೊಂಡು ಲಿಫ್ಟ್ ಹತ್ತಲು ಬಂದ..!!!


******************************************* *******


ಸಣಕಲನೊಬ್ಬ ದೇವಸ್ಥಾನಕ್ಕೆ ಹೋದ. ಪೂಜೆ ಮುಗಿಸಿಕೊಂಡು ಹೊರಗೆ ಬಂದಾಗ ಒಬ್ಬ ದಢೂತಿ ಆಸಾಮಿ ಚಪ್ಪಲಿಗಳಲ್ಲಿ ಕಾಲು ತೂರಿಸಲು ಪ್ರಯತ್ನಿಸುತ್ತಿದ್ದುದ್ದನ್ನ ಕಂಡ,


ಸಣಕಲ ಸ್ವಲ್ಪ ಅಳುಕುತ್ತಲೇ ಆ ಪೈಲ್ವಾನನ ಬಳಿಗೆ ಹೋಗಿ ಅವನ ಬೆನ್ನು ತಟ್ಟಿ,



" ಸ್ವಾಮಿ, ತಮ್ಮ ಹೆಸರು ಸಾಂಬಮೂರ್ತಿನೇ???"


ಪೈಲ್ವಾನ ಹುಬ್ಬುಗಂಟಿಕ್ಕಿ..." ಅಲ್ಲ..."


ಸಣಕಲ ಕ್ಷಮಿಸಿ, ಯಾಕೆ ಕೇಳಿದೆ ಅಂದರೆ, ನಾನು ಸಾಂಬಮೂರ್ತಿ, ನೀವು ಹಾಕಿಕೊಳ್ಳುತ್ತಿರುವುದು ನನ್ನ ಚಪ್ಪಲಿಗಳು!"



***************************************

" ಅಲ್ರೀ....ನನ್ನ ಮಗಳ್ನ ಮದುವೆಯಾಗ್ತೀನಿ ಅಂತ ಅಷ್ಟು ಧೈರ್ಯದಿಂದ ಮುಂದೆ ಬರ್ತಿದ್ದೀರಲ್ಲಾ?? ಆದರೆ ಕೇಳಿದರೆ ಏನೂ ಉದ್ಯೋಗ ಇಲ್ಲ ಅಂತೀರಿ! ಸಂಸಾರ ಹ್ಯಾಗೆ ಸಂಭಾಳಿಸ್ತೀರಿ ಸ್ವಲ್ಪ ಹೇಳ್ತೀರಾ??"


" ಅದಕ್ಕೇನೂ ಚಿಂತೆಯಿಲ್ಲ ಸಾರ್, ಇನ್ನೊಂದು ತಿಂಗಳೊಳಗಾಗಿ ನಾನು ಎರಡು ಲಕ್ಷವೋ, ಐದು ಲಕ್ಷವೋ ಆಸ್ತಿ ಎದುರು ನೋಡುತ್ತಿದ್ದೀನಿ..."


" ಅದೆಂಥ ಆಸ್ತಿ?? ಇಷ್ಟೂಂತ ನಿರ್ಧಾರವಾಗಿ ನಿಮಗೆ ಗೊತ್ತಿಲ್ಲದ್ದು??"


" ಎಷ್ಟು ಬರುತ್ತೇಂತ ಹೇಳಲಾರೆ, ಲಾಟರಿ ಟಿಕೆಟ್ ಕೊಂಡ್ಕೊಂಡಿದ್ದೀನಿ....ನೋಡಬೇಕು...!!"


******************************************* **


ಒಂದು ಬಸವನ ಹುಳು ದೊಡ್ಡ ನೇರಿಳೆ ಹಣ್ಣಿನ ಮರವೊಂದನ್ನು ಹತ್ತುವ ಪ್ರಯತ್ನ ಮಾಡುತ್ತಿತ್ತು...ಅದನ್ನು ನೋಡಿದ ಒಂದು ಅಳಿಲು...


" ಅಯ್ಯಾ, ಈಗಲೇ ಮರ ಹತ್ತಿ ಏನು ಮಾಡಬೇಕೆಂದುಕೊಂಡಿದ್ದಿ?? ಇದು ಹಣ್ಣಿನ ಕಾಲ ಅಲ್ಲ...ಹಣ್ಣು ಬಿಡೋಕೆ ಇನ್ನೂ ಮೂರು ತಿಂಗಳಿದೆ "


" ಪರವಾಗಿಲ್ಲ! ನಾನು ಮೇಲಕ್ಕೆ ಹತ್ತಿ ಸೇರೋ ಹೊತ್ತಿಗೆ ಹಣ್ಣುಗಳು ಬಿಟ್ಟಿರುತ್ತವೆ.." ಎನ್ನುತ್ತ ಮುಂದಕ್ಕೆ ತೆವಳಿತು...


******************************************* *

ಜಗಲಿಯ ಮೇಲೆ ಅಪ್ಪ, ಅಮ್ಮ, ಮಗ ಕೂತಿದ್ದರು...


" ದೊಡಪ್ಪ, ಎಷ್ಟು ದಕ್ಷತ್ರಗಳು! " ಮಗ ಆಕಾಶದ ಕಡೆ ಕೈ ತೋರಿಸುತ್ತಾ ಹೇಳಿದ...


" ದೋಡಿದೇಯೇದೇ ದಿದ್ದ ಬಗದ ಉಚ್ಚಾರಡೆ ಹ್ಯಾಗಿದೆ???" ಅಂತ ಅಪ್ಪ, ಅಮ್ಮ ನಿಗೆ ಹೇಳಿದರು...


" ಸುಬ್ಬದೆ ಬಗೂದ ಯಾಕೆ ಹೀಗೆ ಹೀಯಾಳಿಸ್ತೀರಿ???!!" ಅಂತ ಕೋಪಿಸಿಕೊಂಡಳು ಅಮ್ಮ...


ಆ ದಾರಿಯಲ್ಲಿ ಹೋಗುತ್ತಿದ್ದಾತನೊಬ್ಬ ಇವರ ಸಂಭಾಷಣೆ ಕೇಳಿ..." ಬೂವರಿಗೂ ದೆಗಡಿ ಆದ್ತಕಾಡುತ್ತೆ..." ಅಂತ ತನಗೆ ತಾನೇ ಹೇಳಿಕೊಂಡ...


******************************************* **

ಬಾರಿನಲ್ಲಿ ಒಬ್ಬ ಗಿರಾಕಿ ಕಂಠಪೂರ್ತಿ ಕುಡಿದು, ಮೇಜಿನ ಮೇಲೆ ತಲೆಯೊರಗಿಸಿ ನಿದ್ದೆ ಮಾಡುತ್ತಿದ್ದ...ಅವನಿಗೆ ತಿಂಡಿ ತೀರ್ಥ ಸರಬರಾಜು ಮಾಡಿದ್ದ ಪರಿಚಾರಕ ಇನ್ನೊಬ್ಬನಿಗೆ ಹೇಳಿದ...

" ಈ ಗಿರಾಕಿನ ಎರಡು ಸಲ ಎಬ್ಬಿಸ್ದೆ...ಈಗ ಮೂರನೇ ಸಲ ಎಬ್ಬಿಸ್ತೀನಿ...."


" ಅಷ್ಟು ತೊಂದರೆ ಯಾಕೆ?? ಇಂಥ ಕುಡುಕರನ್ನು ಸುಮ್ಮನೆ ರಟ್ಟೆ ಹಿಡಿದುಕೊಂಡು ಎಳಕೊಂಡು ಹೋಗಿ ಆಚೆಗೆ ತಳ್ಳಿಬಿಟ್ಟು ಬರೋದೆ ಸರಿ..."


" ಅಯ್ಯೊ...ಅಯ್ಯೊ!...ಈತನನ್ನು ಆಚೆ ತಳ್ಳೊದೇ??? ಒಂದೊಂದು ಸಲ ಎಬ್ಬಿಸಿದಾಗಲೂ ಈಗ ಬಿಲ್ಲೆಷ್ಟು? ಅಂತ ಕೇಳಿ ದುಡ್ಡು ಕೊಡ್ತಾ ಇದ್ದಾನೆ...!!"


******************************************* *********


ಹೊರದೇಶಕ್ಕೆ ಹೋಗಿ ಅಪಾರ ಸಂಪತ್ತು ಗಳಿಸಿ ಅಲ್ಲೇ ಆಸ್ತಿ ಪಾಸ್ತಿ ಮಾಡಿಕೊಂಡ ಸೋಮು, ಬೆಂಗಳೂರಿಗೊಂದು ಬಾರಿಗೆ ಬಂದಾಗ ಕನಕಲಕ್ಷ್ಮಜ್ಜಿಯವರನ್ನು ಭೇಟಿ ಮಾಡಿದ...


" ಅಜ್ಜಿ, ನಿಮ್ಮ ಮನೆ ದೊಡ್ಡದು, ಕಾಂಪೌಂಡು ದೊಡ್ಡದು ಅಂತ ಎಲ್ಲರೂ ಹೇಳ್ತಾರೆ...ಅವರೆಲ್ಲ ಒಮ್ಮೆ ಬಂದು ನನ್ನ ಬಂಗಲೆ, ನನ್ನ ನೆಲ ಹೊಲ ನೋಡಿದರೆ ಇನ್ನೂ ಏನಂತಾರೋ ಕಾಣೆ..!"


" ಹಾಗೇನು??" ಅಂದರು ಅಜ್ಜಿ..


" ನನ್ನ ಎಸ್ಟೇಟ್ ನ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ಹೋಗಬೇಕಾದರೆ ನನ್ನ ಕಾರಿನಲ್ಲಿ ಒಂದು ಇಡೀ ದಿವಸವೆಲ್ಲಾ ಹಿಡಿಯುತ್ತೆ...!!"


ಅಜ್ಜಿ ಸಾವಧಾನವಾಗಿ..." ಒಂದು ಕಾಲಕ್ಕೆ ನಮ್ಮನೇಲೂ ಅಂಥ ಒಂದು ತರಕಟಾಲು ಕಾರಿತ್ತು...!!!"


******************************************* *****
" ಡಾಕ್ಟರ್ ಹುಡುಗಾಂತ ಹೇಳಿ ಮದುವೆ ದಳ್ಳಾಳಿ ಏಮಾರಿಸಿ ಬಿಟ್ರು...."


" ಹೌದಾ.....?"


" ಹುಡುಗನ ತಂದೆ ಡಾಕ್ಟರ್ ಅಂತೆ...!!"


******************************************



" ಇದೇನಪ್ಪಾ ಅನ್ಯಾಯಾ..? ನಾನು ಎರಡು ಇಡ್ಲಿ ತಿಂದೆ...ಐದು

ರೊಪಾಯಿಗೆ ಬದಲಾಗಿ ಹತ್ತು ರೂಪಾಯಿ ಬಿಲ್ ಕೊಡ್ತಾಯಿದ್ದೀಯಲ್ಲಾ...??"



" ಅದರ ಜೊತೆಗೆ ಎರಡು ಲೋಟ ನೀರು ಕುಡಿದ್ರಲ್ಲಾ...!"

****************************************


" ಪ್ರೇಕ್ಷಕರೇ, ನೀವ್ಯಾರು ನಮ್ಮೇಲೆ ಕೊಳೆತ ಟೋಮೋಟೋ...ಕೋಳಿ ಮೊಟ್ಟೆ

ಚಪ್ಪಲಿ ಎಸೆಯದಿದ್ದರೆ, ಭಾಷಣ ಮುಗಿದ ಮೇಲೆ ಸ್ವೀಟ್ಸ್ ಕೊಡಿಸ್ತೀನಿ....!!"



******************************************* ****


" ಮೆಡಿಕಲ್ ಕಾಲೇಜುಗಳಲ್ಲಿ ಅದೇನು ಕಲಿಸ್ತಾರೋ ಬಿಡ್ತಾರೋ ಗೊತ್ತಿಲ್ಲ...ಆದರೆ

ಎರಡು ವಿಷಯಗಳನ್ನು ಚೆನ್ನಾಗಿ ಕಲಿಸ್ತಾರೆ ಅನ್ನೋದನ್ನ ಯಾರು ಬೇಕಿದ್ರೂ ಹೇಳಬಹುದು..."


" ಯಾವ ಎರಡು ವಿಷಯಗಳು??"


" ಔಷಧಿ ಚೀಟಿಗಳನ್ನು ಒಬ್ಬರಿಗೂ ಅರ್ಥವಾಗದ ಹಾಗೆ ಗೀಚಿ ಬರೆಯೋದು...

ಬಿಲ್ಲುಗಳನ್ನು ಮಾತ್ರ ಸ್ಪಷ್ಟವಾಗಿ ಬರೆಯೋದು....!!"


******************************************* **********

ಪಾರ್ಟಿಯ ಅಧ್ಯಕ್ಶರು, ಉಮೇದುವಾರಿಕೆಗಾಗಿ ತಮಗೆ ಸೂಚಿಸಲಾಗಿದ್ದ ಕೆಲವು ಹೊಸ ಹೆಸರುಗಳ ಪಟ್ಟಿಯನ್ನು ಪರಿಶೀಲಿಸುತ್ತಿದ್ದರು. ಪಟ್ಟಿಯಲ್ಲಿದ್ದ ಒಂದು ಹೆಸರು ಅವರಿಗೆ ಆಕರ್ಷಕವಾಗಿ ಕಂಡಿತು. ಅವನಿಗೆ ಒಂದೆರಡು ಪ್ರಾವೇಶಿಕ ಪ್ರಶ್ನೆಗಳನ್ನು ಒಡ್ಡುವ ಉದ್ದೇಶದಿಂದ ಹೊಸ ಅಭ್ಯರ್ಥಿಯನ್ನು ತಮ್ಮ ಮನೆಗೆ ಕರೆಸಿದರು....


ಅಧ್ಯಕ್ಷರು " ಮೊದಲು ಇದನ್ನು ಹೇಳಿ, ನಿಮಗೆ ಕುಡಿಯೋ ಅಭ್ಯಾಸ ಉಂಟೋ???"


ಅಭ್ಯರ್ಥಿ ಕ್ಷಣಕಾಲ ತಡೆದು..." ಮೊದಲು ನನ್ನ ಸಂದೇಹ ನಿವಾರಣೆ ಮಾಡಿ....ಇದು ಪ್ರಶ್ನೆಯೋ...ಆಹ್ವಾನವೋ...??!!!!"



*******************************************
" ಈ ರೌಡಿ ರಂಗನಿಗೆ ಕೊಬ್ಬು ಜಾಸ್ತಿಯಾಗಿದೆ..."


" ಏಕೆ ಏನ್ಮಾಡ್ದಾ??"


" ನಮಗೆ ಮಾಮೂಲು ಕೊಡ್ತಾನೆ ಅನ್ನೋ ಧೈರ್ಯದಲ್ಲಿ, ತನ್ನ ಮಗಳ ಮದುವೆಗಾಗಿ

ಸ್ಟೇಷನನ್ನು ಬಿಟ್ಟುಕೊಡ್ಬೇಕು ಅಂತ ಹಠ ಹಿಡಿದಿದ್ದಾನೆ!"


******************************************* ***


" ನಮ್ಮ ಪ್ರೇಮವು ವಿವಾಹದಲ್ಲೇ ಮುಕ್ತಾಯವಾಗುತ್ತೆ ಅನ್ನೋ ನಂಬಿಕೆ ನನಗಿದೆ ಉಮಾ.."


" ನನ್ಗೆ ಈ ರೀತಿಯ ಮೂಢ ನಂಬಿಕೆಗಳಿಲ್ಲ ಬಾಲು....!"




****************************************


" ಇದೇನ್ರೀ, ನಿಮ್ಮ ಮನೆಯಲ್ಲಿ ಇಷ್ಟು ಜೊತೆ ಹೊಸ ಚಪ್ಪಲಿಗಳಿವೆಯಲ್ಲಾ???"



" ಅದ್ಯಾಕೇಳ್ತೀರಾ....ಈ ತಿಂಗಳು ಸಿಕ್ಕಪಟ್ಟೆ ಮದುವೆಗಳಿಗೆ ಹೋಗ್ಬಂದ್ವಿ!!!"


******************************************* ******



" ನನ್ನ ಕೈಗಳು ಯಾವಾಗಲೂ ದುಡ್ಡು ಎಣಿಸೋ ಥರ ಆಡ್ತಾನೆ ಇರುತ್ವೆ...

ಇದಕ್ಕೇನು ಪರಿಹಾರ ಡಾಕ್ಟ್ರೇ???"



" ರಿಟೈರ್ ಮೆಂಟಿಗೆ ಮುಂಚೆ ನೀವು ಯಾವಾಗಲೂ ಲಂಚದ ದುಡ್ಡನ್ನು ಎಣ್ಸಿದ್ರಿಂದ

ಆ ನರದೌರ್ಬಲ್ಯ ಹಾಗೇ ಉಳಿದುಕೊಂಡಿದೆ...ಇದಕ್ಕಿರೋ ಒಂದು ಪರಿಹಾರ...ಯಾವಗಲೂ

ಒಂದು ನೋಟಿನ ಕಟ್ಟನ್ನು ಎಣಿಸ್ತಾ ಇರಿ...!!!"


******************************************* ****


" ನಮ್ಮೆಜಮಾನ್ರರಲ್ಲಿ ಸಿಕ್ರೇಟ್ ಹೇಳಿದರೂ ಪ್ರಯೋಜನವಿಲ್ಲ....."


" ಯಾಕೆ? ಅವರಿಗೆ ಕಿವಿ ಕೇಳಿಸೊಲ್ಲವಾ??"


" ಅದಲ್ಲ...ಅವರು ಮತ್ತಾರಿಗೂ ಅದನ್ನು ಹೇಳೊಲ್ವಲ್ಲ....!!"


******************************************* *******


" ಈ ಪ್ರಪಂಚದಲ್ಲಿ ಯಾವುದೂ ಸ್ವಂತವಲ್ಲ...ಎಲ್ಲವೂ ಮಾಯೆ'...ಎಂದು ಪ್ರಲಾಪಿಸುತ್ತಿದ್ದೀರಲ್ಲ....

ಯಾವಾಗ ನಿಮಗೆ ಹೀಗೆ ಅನ್ನಿಸಿತು????"



" ಸ್ವಂತ ಕ್ಷೇತ್ರದಲ್ಲಿಯೇ ಸೋತ ನಂತರ...!!"


******************************************* ******


" ನಾನು ಮನೆ ಬಿಟ್ಟು ಓಡಿಹೋಗುವ ವಿಷಯ ನಮ್ಮನೆಯವರಿಗೆ ತಿಳಿದುಬಿಡ್ತು ಅಂತ ಕಾಣುತ್ತೆ..."


" ಹೇಗೇಳ್ತೀಯಾ...???"


" ನನ್ನ ಕತ್ತಿನಲ್ಲಿದ್ದ ಮೂರು ಸವರನ್ ಸರವನ್ನು ತಗೊಂಡು ಬಿಟ್ರಲ್ಲ...!"


*******************************************

" ಯಾಕೆ ಸರ್ ಹಿಂಗೆ ಸಿಟ್ಟುಮಾಡ್ಕೊಂಡಿದ್ದೀರಾ???"


" ಮತ್ತೇನ್ರೀ...ಪೇಪರ್ ನ ಓದಕ್ಕೆ ಪುಕ್ಕಟೆಯಾಗೆ ತಗೊಂಡಿಗ್ತೀರಾ,

ಹಾಳಾಗೋಗ್ಲೀಂದ್ರೆ, ಇಂದು ಪೇಪರ್ ನೊಂದಿಗೆ ಕೊಟ್ಟಿರುವ
ಸ್ಯಾಂಪಲ್ ಶಾಂಪೂ ಪ್ಯಾಕೆಟ್ ಕೂಡ ಕೊಡೀಂತ ಕೇಳಿದ್ರೆ ಇದ್ಯಾವ ನ್ಯಾಯ...??!!"


************************* ********************



" ದೇಹದಲ್ಲಿನ ರಕ್ತದ ವೃದ್ಧಿಗಾಗಿ ಎಲ್ಲರೂ ಟಾನಿಕ್ಕನ್ನು ಕೇಳಿದರೆ, ನೀವು

ಕಣ್ಣೀರಿನ ವೃದ್ಧಿಗಾಗಿ ಕೇಳ್ತಿದ್ದೀರಲ್ಲಾ....ಏನು ಕಾರಣ???"




" ಮೆಗ ಸೀರಿಯಲ್ ಗಳನ್ನು ನೋಡುವಾಗ ಒಂದೆರಡು ಸೀರಿಯಲ್ ಗಳ ನಂತರ

ಮೂರನೆ ಸೀರಿಯಲ್ ಗೆ ಹರಿಸಲು ಕಣ್ಣೀರೇ ಇರುವುದಿಲ್ಲ....!"



*******************************************


" ನಮ್ಮ ಅಮ್ಮ, ಹಾಗೂ ನನ್ನ ಹೆಂಡ್ತಿ ಹಣವನ್ನು ವೃಥಾ ವ್ಯಯಿಸೋಲ್ಲಾ..!"


" ಯಾಕಾಗೇಳ್ತೀರಾ???"


" ಜಗಳವಾಡುವಾಗ ಪಾತ್ರೆ ಹೊಡೆದೋಗುತ್ತೇಂತ ಅಲ್ಯುಮಿನಿಯಂ ಪಾತ್ರೆಗಳನ್ನೇ

ಉಪಯೋಗಿಸ್ತಾರೇಂದ್ರೆ...ನೀವೇ ನೋಡ್ಕೊಳ್ಳಿ....!!"



******************************************* **



" ನನ್ನ ಹೆಂಡತಿ ಲಟ್ಟಣಿಗೆಯಿಂದ ಹೊಡೆದಳು...."



" ಅದನ್ನು ನನಗೇಕೆ ಹೇಳುತ್ತೀರಿ? ಹೋಗಿ ಪೋಲಿಸರಿಗೆ ದೂರು ಕೊಡಿ.."


" ಅಯ್ಯೋ! ಈ ಲಟ್ಟಣಿಗೆ ಮುರಿದುಹೋಗಿದೆ...ಎಕ್ಸ್ ಚೇಂಜ್ ಮಾಡಿಕೊಡಿ ಸ್ವಾಮಿ!"


*****************************************

" ಯಾಕೆ ಹಿಂಗೆ ನನ್ನ ಹಿಡ್ಕೊಂಡು ಚಚ್ಚುತಾ ಇದ್ದಿಯಾ???"



" ನೆನ್ನೆ ಮಗನಿಗೆ ನೆಪೋಲಿಯನ್ ಬಗ್ಗೆ ಎಸ್ಸೆ ಬರ್ಕೊಟ್ರಾ??"


" ಹೌದೂ ಏನಾಯ್ತೀಗ???"


" ವೈನ್ ಸ್ಟೋರ್ ನಲ್ಲಿ ಸಿಗೋ ನೆಪೋಲಿಯನ್ ಬಗ್ಗೆ ಬರ್ಕೊಟ್ಟಿದ್ದೀರಾ? ಅವನು ಏಟು ತಿಂದು

ಅಳ್ತಾ ಬಂದಿದ್ದಾನೆ..!"

***********************************************************

ರುಕ್ಕಮ್ಮನ ಗಂಡ ಒಂದು ಮಾರುತಿ ಕಾರು ಕೊಂಡುಕೊಂಡ. ಹೆಂಡತಿಗೆ ಡ್ರೈವಿಂಗ್ ಕಲಿಸಲು ಹೊರಟ.

" ಇದು ಗೇರ್, ಇದು ಬ್ರೇಕ್, ಇದು ಆಕ್ಸಿಲೇಟರ್.......'


" ಅದೆಲ್ಲಾ ನಿಧಾನವಾಗಿ ಹೇಳೋವ್ರಂತೆ, ಮೊದಲು ಡ್ರೈವಿಂಗ್ ಹೇಳ್ಕೊಡಿ...!!"


**************************************************


" ಈ ಹೋಟೆಲಲ್ಲಿ ಬಿಸಿನೀರು, ತಣ್ಣೀರು...ಬರುತ್ತಾ??"


" ಓಹೋ!...ಬೇಸಿಗೇಲಿ ಬಿಸಿನೀರು....ಚಳಿಗಾಲದಲ್ಲಿ ತಣ್ಣೀರು ಬರುತ್ತೆ..!"


*************************************************



ಅರ್ಧರಾತ್ರೀಲಿ ಗೊರಕೆ ಹೊಡೀತಿದ್ದ ಗುಂಡನನ್ನು ಆತನ ಹೆಂಡತಿ ಎಬ್ಬಿಸಿದಳು..


" ರ್ರೀ...ಏನೋ ಶಬ್ಧ ಆಯ್ತು ಕಣ್ರೀ...ಕಳ್ಳರು ಮನೆಯೊಳಗೆ ನುಗ್ಗಿರಬೇಕು...."

" ಕಳ್ಳರು ಬಂದ್ರೆ ಎಲ್ಲಾದ್ರೂ ಶಬ್ಧ ಮಾಡ್ತಾರೇನೆ??"


ಹತ್ತು ನಿಮಿಷ ಆಯ್ತು...ಹೆಂಡತಿ ತಿರುಗಿ ಗಂಡನ್ನ ಎಬ್ಬಿಸಿದಳು....

" ಈಗೇನೇ ನಿನ್ನ ಗೋಳು???" ಅಂದ ಗುಂಡ ಬೇಸರದಿಂದ

"ಏನೂ ಶಬ್ಧ ಆಗ್ಲಿಲ್ಲ ಕಣ್ರೀ...ಕಳ್ಳರು ಬಂದಿರಬೇಕು...!!"


*************************************************


" ಮೀನಿನ ಬಲೆ ಹೇಗೆ ಮಾಡ್ತಾರೆ???"


" ಅದೇನ್ಮಹಾ ಕಷ್ಟ??...ತೂತುಗಳನ್ನೆಲ್ಲಾ ತಗೊಂಡು ದಾರದಲ್ಲಿ ಒಂದಕ್ಕೊಂದು ಸೇರಿಸಿ

ಕಟ್ಟಿದರೆ ಆಯ್ತು...!"


*************************************************


" ನಾಟಕಗಳಿಗೆ ಇಂಟರ್ ವೆಲ್ ಯಾಕೆ ಕೊಡೊಲ್ಲಾ???"

" ಕೊಟ್ರೆ, ಮತ್ತೆ ಯಾರೂ ಬರೋಲ್ಲ ಅಂತಾ...!"


************************************************** *****


ಗುಂಡ ಒಂದು ಹೊಸ ಕಾರ್ ತಗೊಂಡ. ಮೊದಲ ದಿನಾನೇ ತನ್ನ ಸ್ನೇಹಿತರನ್ನೆಲ್ಲಾ ಒಂದು ರೌಂಡ್

ಕರಕೊಂಡು ಹೋದ...


" ಹೇಗಿದೆ ನನ್ನ ಕಾರ್??"

" ತುಂಬಾ ಚೆನ್ನಾಗಿದೆ...ಇಂಥಾ ಕಾರು ಇನ್ನೆಲ್ಲೂ ಇಲ್ಲ......."

" ಅಲ್ವಾ ಮತ್ತೆ...." ಗುಂಡ ಉಬ್ಬಿದ


" ಹಾರನ್ ಒಂದು ಬಿಟ್ಟು ಇನ್ನೆಲ್ಲಾ ಭಾಗಗಳು ಶಬ್ಧ ಮಾಡೋ ಕಾರು ನಾವು ಜೀವಮಾನದಲ್ಲೇ

ನೋಡಿದ್ದು ಇದೊಂದೆ...!!" ಎಂದು ಮಾತು ಮುಗಿಸಿದರು....


**********************************************


ಗುಂಡನ ಮಗ ಸ್ಕೂಲಿನಲ್ಲಿ ಬುದ್ಧಿವಂತ ಅನ್ನಿಸ್ಕೊಂಡಿದ್ದನೋ...ದಡ್ಡ ಅನ್ನಿಸ್ಕೊಂಡಿದ್ದನೋ...ಅಂತೂ

ಪ್ರತಿದಿನ ಸ್ಕೂಲಿಗಂತೂ ಹೋಗುತ್ತಿದ್ದ... ಅವನು ದಿನಾ ಸ್ಕೂಲಿನಿಂದ ಮನೆಗೆ ಬಂದ ತಕ್ಷಣ ಅಂದು

ತಾನೇನೇನು ಮಾಡಿದೆ ಅನ್ನೋ ಬಗ್ಗೆ...ಅವರ ಅಪ್ಪನಿಗೆ ವರದಿ ಒಪ್ಪಿಸಬೇಕಿತ್ತು....ಕೊನೆಗೆ ಮಗನಿಗೂ

ಬೇಜಾರಾಯಿತು....ನೇರವಾಗಿ ಅಪ್ಪನನ್ನು ಕೇಳಿದಾ....


" ಅಲ್ಲಪ್ಪಾ, ನಾನು ಯಾವತ್ತಾದ್ರೂ ನಿನ್ನನ್ನು ಆಫೀಸಿನಲ್ಲಿ ನೀನೇನು ಮಾಡ್ತೀಯಾ...ಏನು ಮಾಡಲ್ಲ...

ಅನ್ನೋದನ್ನ ಕೇಳಿದೀನಾ?? ನೀನ್ಯಾಕೆ ದಿನಾ ನನ್ನನ್ನು ಗೋಳು ಹಾಕ್ಕೊತೀಯಾ???"


ಗುಂಡ ಅವತ್ತಿಂದ ಸುಮ್ಮಗಾದ...



************************************************



ಮಕ್ಕಳ ಮುಂದೆ ಪ್ರತಿದಿನ ತನ್ನ ಪ್ರತಾಪಗಳನ್ನು ಕೊಚ್ಚಿಕೊಳ್ಳುತ್ತಿದ್ದ ತಂದೆಯನ್ನು ಮಗ ಕೇಳಿದ-


" ಅಪ್ಪ, ನಿಂಗೆ ನಿಮ್ಮ ಆಫೀಸರನ್ನು ಕಂಡರೆ ಸ್ವಲ್ಪವೂ ಹೆದರಿಕೆ ಇಲ್ವೆ???"


" ಎಲ್ಲಾದರೂ ಉಂಟೆ??? ಅವರೇ ನನ್ನ ನೋಡಿ ಹೆದರ್ಬೇಕು..."


" ಕಾಡಿನಲ್ಲಿ ಹುಲಿ, ಸಿಂಹ ಇತ್ಯಾದಿಗಳನ್ನು ನೋಡಿದರೆ??"


" ಅವುಗಳಿಗೆ ಧೈರ್ಯವಿದ್ದರೆ ನನ್ನ ಮುಂದೆ ಬರಲಿ, ನೋಡೋಣ..."


" ಅಮಾವಾಸ್ಯೆ ರಾತ್ರೀಲಿ ಒಬ್ಬನೇ ಹೋಗ್ತೀಯಾ??"

" ಅದೇನು ಮಹಾ ಕಷ್ಟ??"


ಮಗ ಒಂದೆರಡು ನಿಮಿಷ ಸುಮ್ಮನಿದ್ದ...ತನ್ನ ಕೊನೆ ಪ್ರಶ್ನೆ ಕೇಳಿದ....


" ಹಾಗದ್ರೆ ನಿನಗೆ ಅಮ್ಮನ್ನ ಬಿಟ್ಟು ಬೇರೆ ಯಾವುದರಿಂದಲೂ ಹೆದರಿಕೆ ಇಲ್ವಾ....!!!???"


************************************************** ****


" ಮೂರು ದಿನದಿಂದ ಊಟ ಮಾಡಿಲ್ಲಾ...ಏನಾದರೂ ತಿನ್ನೋಕೆ ಕೊಡಮ್ಮಾ" ಗುಂಡನ ಮನೆ ಮುಂದೆ ಭಿಕ್ಷಕ

ಗೋಗರೆದ...


" ಏನೂ ಇಲ್ಲ...ಮುಂದಕ್ಕೆ ಹೋಗಪ್ಪಾ.." ಗುಂಡನ ಹೆಂಡತಿ ನಿರ್ದಾಕ್ಷಿಣ್ಯವಾಗಿ ಹೇಳಿದಳು.


" ಹಾಗನ್ಬೇಡಮ್ಮಾ, ನಿಮ್ಮ ಮನೆ ಮುಂದೆ ಬೆಳೆದಿರೋ ಹುಲ್ಲನಾದರೂ ತಿಂದು ಹೊಟ್ಟೆ ತುಂಬಿಸ್ಕೋತೀನಿ.."

ಅನ್ನುತ್ತ ಆತ ಅವಳ ಮನ ಕರಗಿಸಲು ಹುಲ್ಲನ್ನೇ ತಿನ್ನಲಾರಂಭಿಸಿದ..


ಒಂದೆರಡು ಕ್ಷಣ ಅದನ್ನೇ ನಿಟ್ಟಿಸಿದ ಗುಂಡನ ಹೆಂಡತಿ....


" ಮನೆ ಹಿಂದುಗಡೆ ಬಾಪ್ಪಾ..."


ತನ್ನ ಉಪಾಯ ಫಲಿಸಿತೆಂದು ಆತ ಖುಶಿಯಾಗಿ ಹಿಂದೆ ಹೋದ...


" ಇಲ್ಲಿ ಇನ್ನೂ ಚೆನ್ನಾಗಿ ಹುಲ್ಲು ಬೆಳೆದಿದೆ...ತಿನ್ನು...!!!"


************************************************** ****


ದೇವಸ್ಥಾನಕ್ಕೆ ಹೋಗಿ ಬರುವ ದಾರಿಯಲ್ಲಿ ಜಯಮ್ಮನವರಿಗೆ ಒಬ್ಬ ಕುಂಟ ಭಿಕ್ಷಕ ಎದುರಾದ...

ಅವರು ಅವನ ತಟ್ಟೆಯಲ್ಲಿ ಒಂದು ರೂಪಾಯಿ ಹಾಕಿ..." ಅಯ್ಯೋ ಪಾಪ....ಹೀಗೆ ಹೆಳವನಾದರೆ ಭಿಕ್ಷೆ

ಬೇಡ್ತಾ ಓಡಾಡೋದು ಬಹಳ ಕಷ್ಟ ಅಲ್ವೆ?? ಆದರೆ ಅವನನ್ನು ನೋಡು...ಕುರುಡ, ಕುರುಡನಾಗಿರೋದಕ್ಕಿಂತ

ಕುಂಟನಾಗಿರೋದು ಮೇಲಲ್ವ???" ಅಂತ ಸಂತಾಪದ ಮಾತುಗಳನ್ನಾಡಿದರು....


ಭಿಕ್ಷಕ..." ಹೌದು ತಾಯಿ, ನಾನು ಕುರುಡನಾಗಿದ್ದಾಗ ನನ್ನ ತಟ್ಟೇಲಿ ಬೀಳ್ತಿದ್ದ ನಾಣ್ಯಗಳೆಲ್ಲಾ

ಸವಕಲು ಇಲ್ವೆ ಖೋಟಾ ಆಗಿರ್ತಿದ್ವು...!!!"

****************************************************************
ಪುಟ್ಟನ ಅಕ್ಕ, ಪುಟ್ಟಿ, ಖಿನ್ನಳಾಗಿ ತನ್ನ ಅಪ್ಪನ ಬಳಿಗೆ ಹೋಗಿ...


" ಅಪ್ಪ, ನೀನು ನೆನ್ನೆ ತಾನೇ ತಂದು ಕೊಟ್ಟ ಈ ಹೊಸ ಹೊಸಾ ಬೊಂಬೆ ಮುರಿದೋಯ್ತು.."


" ಯಾಕೇ, ಏನಾಯ್ತು?? ಕೆಳಗೆ ಬೀಳಿಸಿದ್ಯಾ?"


" ಇಲ್ಲಪ್ಪಾ, ನಾನೇನೂ ಅದನ್ನ ಕೆಳಗೆ ಬೀಳಿಸಲಿಲ್ಲ...ಪುಟ್ಟನಿಂದಲೇ ಮುರಿದದ್ದು"


" ಎಲ್ಲಿ ಅವನು? ಕರಿ, ಅವನಿಗೆ ಸರಿಯಾಗಿ ಬುದ್ಧಿ ಕಲಿಸ್ತೀನಿ...ಏನು ಮಾಡಿದ ಅವನು??"


" ನಾನು ಬೊಂಬೆಯಿಂದ ಪುಟ್ಟನ ತಲೆ ಮೇಲೆ ಗಲಾಟೆ ಮಾಡಬೇಡವೋ ಅಂತ ಹೇಳಿ ಕುಟ್ಟಿದೆ,

ಅಷ್ಟಕ್ಕೇ ಈ ಬೊಂಬೆ ಮುರಿದೋಯ್ತು..!!"



************************************************** ********


ಸ್ಕೂಲಿನಲ್ಲಿ ಚರಿತ್ರೆ ಪಾಠ ನಡೆಯುತ್ತಿದ್ದಾಗ ತೆರೆಗ ಕಿಟಕಿಯ ಹೊಸ್ತಿಲ ಮೇಲೆ ಕೂತಿದ್ದ

ಸಿದ್ದಯ್ಯ ತೂಕಡಿಸಿ ಕಿಟಕಿಯಾಚೆಗೆ ಆಯ ತಪ್ಪಿ ಬಿದ್ದ....ಸಣ್ಣಪುಟ್ಟ ಗಾಯಗಳೂ ಆದವು. ಗಲಿಬಿಲಿಯಲ್ಲಿ

ಕ್ಲಾಸನ್ನು ಮುಗಿಸುತ್ತಾ ಮೇಷ್ಟರು ಹುಡುಗರನ್ನು ಪ್ರಶ್ನೆ ಕೇಳಿದರು...


" ಕ್ಲಾಸಿನಲ್ಲಿ ನಿದ್ದೇ ಮಾಡಿದೋರಿಗೆ ಏನಾಗುತ್ತೆ ಅಂತ ನೀವೇ ನೋಡಿದಿರಿ...ಇದರಿಂದ ನಾವು ಏನು ನೀತಿಪಾಠ

ಕಲಿತ ಹಾಗಾಯಿತು??"



ಹುಡುಗರು ಒಟ್ಟಿಗೆ ಅರಚಿದರು......" ಪಾಠಗಳು ಉದ್ದವಾಗಿರಬಾರದು!"




************************************************** *****


ಶೆಟ್ಟರ ರೊಟ್ಟಿಯಂಗಡಿಗೆ ರೋಷದಿಂದ ಬಂದ ರುದ್ರಪ್ಪ..." ನೀವು ಬೆಳಿಗ್ಗೆ ಕಟ್ಟಿಕೊಟ್ಟ ಫ್ರೂಟ್ ಬ್ರೆಡ್

ಪೊಟ್ಟಣ ಬಿಚ್ಚಿ ಬ್ರೆಡ್ಡನ್ನ ಕುಯ್ದಾಗ ಅದರಲ್ಲಿ ದ್ರಾಕ್ಷಿಗೆ ಬದಲು ಎರಡು ಜಿರಲೆಗಳಿದ್ದವು.." ಅಂತ ಕಿರುಚಿದ


ಶೆಟ್ಟರು ಶಾಂತಚಿತ್ತರಾಗಿ.." ಅದಕ್ಕೆ ಯಾಕೆ ಯೋಚನೆ ಮಾಡ್ತೀರಿ?? ನಮ್ಮ ಅಂಗಡಿಯಿಂದ ಮಾರಾಟವಾದ

ವಸ್ತುಗಳನ್ನು ನಾವು ಯಾವಾಗಬೇಕಾದರೂ ಬದಲಾಯಿಸಿಕೊಡ್ತೀವಿ...ಅನ್ನೋದು ನಿಮ್ಗೆ ಗೊತ್ತೇ ಇದೆ. ಆ ಜಿರಲೆಗಳನ್ನು ತನ್ನಿ, ಬದಲಾಯಿಸಿ ಎರಡು ದ್ರಾಕ್ಷಿಗಳನ್ನು ಕೊಡ್ತೀವಿ..!!!"



************************************************** *****


ಹೊಸಬರೊಬ್ಬರು ಬಸ್ಸಿನಿಂದಿಳಿದು ತಮ್ಮ ಹಳ್ಳಿಯನ್ನು ಪ್ರವೇಶಿಸಿದ್ದನ್ನು ಹಳ್ಳಿಯವ ನೋಡಿದ. ಹೊಸಬರು

ಅವನನ್ನು ಕರೆದು " ನಿಮ್ಮೂರಲ್ಲಿ ಭಜನಮಂದಿರ ಎಲ್ಲಿದೇಂತ ಸ್ವಲ್ಪ ತೋರಿಸಿ ಕೊಡ್ತೀಯಾಪ್ಪಾ??"


ಹಳ್ಳಿಯವ ಅವರನ್ನು ಭಜನಮಂದಿರಕ್ಕೆ ಕರೆದುಕೊಂಡು ಹೋದ. ಹೊಸಬರು " ನೋಡಪ್ಪಾ, ನೀನು

ಮನೆಯವರನ್ನೆಲ್ಲಾ ಕರೆದುಕೊಂಡು ಇವತ್ತು ಸಾಯಂಕಾಲ ಭಜನ ಮಂದಿರಕ್ಕೆ ಬಾ"


" ಯಾಕೆ ನಾವಿಲ್ಲಿಗೆ ಬರ್ಬೇಕು??"


" ನಾನು ಉಪನ್ಯಾಸ ಮಾಡ್ತೀನಿ, ಕೇಳೋಕೆ ನೀವೆಲ್ಲಾ ಬನ್ನಿ"


" ಏನು ಯೋಳ್ತೀರಿ ಉಪನ್ಯಾಸದಲ್ಲಿ??"


" ಮೋಕ್ಷಕ್ಕೆ ದಾರಿ ತೋರಿಸ್ತೀನಿ.."

" ನೀವಾ?? ದಾರಿ ತೋರುಸ್ತೀರಾ??? ನಿಮಗೆ ಭಜನೆ ಮಂದ್ರಕ್ಕೆ ದಾರಿ ಗೊತ್ತಿಲ್ಲ..!!!"


************************************************** ****


ಪಟ್ಟೆ ನಾಮ ಧರಿಸಿದ್ದ ಒಬ್ಬ ಯುವಕ ಕನಕಲಕ್ಷ್ಮಜ್ಜಿಯ ಮನೆ ಬಾಗಿಲಿಗೆ ಬಂದು ತನ್ನ ಕೈಲಿದ್ದ

ಹುಂಡಿಯನ್ನು ಕುಲುಕಿದ. ಶಬ್ಧ ಕೇಳಿ ಒಳಗಿನಿಂದ ಬಂದ ಅಜ್ಜಿ..

" ಏನಪ್ಪಾ ಅದು??"

" ವೆಂಕಟೇಶ್ವರ ಸ್ವಾಮಿಗೇಂತ ಹುಂಡಿ...ಏನಾದ್ರೂ ಹಾಕಿ ಅಜ್ಜಿ..."


" ಆ ಹುಂಡೀನ ನನ್ನ ಕೈಗೆ ಕೊಡು, ನಾನು ವೆಂಕಟೇಶ್ವರನಿಗೆ ತಗೊಂಡು ಹೋಗಿ ತಲುಪುಸ್ತೀನಿ...

ನಿನಗಿಂತ ಮುಂಚೆ ನಾನೇ ಅಲ್ಲಿಗೆ ಹೋಗೋಳು...!!"
***********************************************************

ಮನೆಗೆ ಬೀಗ ಹಾಕಿ ಮನೆಯವರೆಲ್ಲಾ ಭಾರತ ದರ್ಶನಕ್ಕೆ ಹೊರಡುವಾಗ ಪಾರ್ವತಮ್ಮನವರು

ಮನೆ ಕೆಲಸದಾಕೆ ನಂಜಮ್ಮನನ್ನು ಕರೆದು ಒಂದು ತಿಂಗಳ ಸಂಬಳವನ್ನು ಅವಳ ಕೈಗಿಟ್ಟು -


" ತಗೋ ಇನಾಮು.."


ಪ್ರಯಾಣ ಮುಗಿಸಿ ಹಿಂತಿರುಗಿದಾಗ ನಂಜಮ್ಮ ಕೆಲಸ ಪ್ರಾರಂಭಿಸುವುದಕ್ಕೆ ಮೊದಲು...


" ಈ ತಿಂಗಳಿನಿಂದ ನನ್ನ ಸಂಬಳ ಜಾಸ್ತಿ ಮಾಡಿ"


" ಇದೇನೇ ನಂಜಮ್ಮ! ಮೂರು ತಿಂಗಳ ಮುಂಚೆ ತಾನೆ ಸಂಬಳ ಹೆಚ್ಚಿಸಿದ್ದೀನಲ್ಲಾ"


" ನಾನು ಏನೂ ಕೆಲಸ ಮಾಡದೇ ಇದ್ದಾಗಲೂ ಈ ಸಂಬಳ ಕೊಟ್ಟಿದ್ದೀರೆ, ಕೆಲಸ ಮಾಡಿದರೂ

ಇಷ್ಟೇ ಸಂಬಳಾನೇ??"


*************************************************


ನಾಯಿ ಕೊಂಡುಕೊಳ್ಳುವುದಕ್ಕೆ ಮುಂಚೆ ನಾಣಪ್ಪ, ಅದರ ಪೂರ್ವೋತ್ತರಗಳನ್ನು ವಿಚಾರಿಸಿಕೊಂಡ;


" ಚೆನ್ನಾಗಿ ಬೊಗಳುತ್ತೋ??"


" ಬಹಳ ಜೋರಾಗಿ ಬೊಗಳುತ್ತೆ, ಮೊನ್ನೆ ರಾತ್ರಿ ಇದು ಎಷ್ಟು ಜೋರಾಗಿ ಬೊಗಳಿತು ಅಂತೀರಿ! ಇದು

ಬೊಗಳಿದ ಗಲಾಟೇಲಿ ಇವರ ಮನೆಗೆ ಕಳ್ಳರು ನುಗ್ಗಿ ಸಾಮಾನೆಲ್ಲ ದೋಚಿಕೊಂಡು ಹೋದದ್ದೇ

ಇವರಿಗೆ ತಿಳಿಯಲಿಲ್ಲ..!!"


**************************************************

ಭಟ್ಟರ ಹೋಟೆಲಿನಲ್ಲೊಂದು ದಿನ:


" ಏನು ಕೊಡಲಿ ಸಾರ್!"

" ಮಸಾಲೆ ವಡೆ"

" ಅದರ ಜೊತೆಗೆ ಏನ್ತರಲಿ ಸಾರ್"

" ವಡೆ ಹೋದ ಸಲ ಇದ್ದ ಹಾಗೇ ಇದ್ದರೆ, ಅದರ ಜೊತೆಗೆ ಸುತ್ತಿಗೆ ಉಳಿ, ತಗೊಂಡು ಬಾ...!"


************************************************** ***


ಪುಟ್ಟನನ್ನು ಕರೆದುಕೊಂಡು ಅವನ ಅಪ್ಪ, ಅಮ್ಮ ಎಂ.ಟಿ.ಆರ್ ಗೆ ಹೋದರು..


" ಏನು ಕೊಡಲಿ? ಮಾಮೂಲಿ ತಾನೆ? ಬಿಸಿಬಿಸಿ ಮಸಾಲೆದೋಸೆ?"


ಅಪ್ಪ.." ದೋಸೆ ನೋಡಪ್ಪಾ ಚೆನ್ನಾಗಿ ಬೆಂದಿರಲಿ"

ಅಮ್ಮ.... " ಮುರು ಮುರು ಅಂತ ಕೆಂಪಗೆ ಇರಲಿ"


ಪುಟ್ಟ " ನಂದು ದೊಡ್ಡದಾಗಿರಲಿ!!"



*******************************************


ಪುಟ್ಟನ ಮನೆಯ ಸಾಕು ಬೆಕ್ಕು ಕುಯ್ಯೋ ಮರ್ರೊ ಎಂದು ಗಟ್ಟಿಯಾಗಿ ಅರಚಿಕೊಳ್ಳುತ್ತಿತ್ತು.

ಅಡಿಗೆಮನೆಯಿಂದಲೇ ಪುಟ್ಟನ ಅಮ್ಮ " ಪುಟ್ಟಾ, ಬೆಕ್ಕನ್ನ ಹಿಂಸೆ ಮಾಡ್ತಿರೋದು ನೀನೇತಾನೇ?

ಎಷ್ಟು ಸಲ ನಿನಗೆ ಹೇಳಿದ್ದೀನಿ, ಅದರ ಬಾಲ ಎಳೀಬೇಡ ಅಂತ!" ಎಂದು ಕೂಗಿದಳು.


ಪುಟ್ಟ ಇದ್ದಲ್ಲಿಂದಲೇ ಉತ್ತರ ಕೊಟ್ಟ;


" ಇಲ್ಲ ಅಮ್ಮ, ಅದರ ಬಾಲ ನಾನು ಎಳೀತಾ ಇಲ್ಲ, ಬಾಲ ತುಳಿದುಕೊಂಡು ನಾನು ಸುಮ್ನೆ

ನಿಂತಿದ್ರೆ ಅದೇ ಎಳೀತಾ ಇದೆ!"

******************************************************

ನನ್ನ ಮಗ ಗಣಿತದಲ್ಲಿ ಹುಲಿ, ಇನ್ನೊಬ್ಬ ಮಗ ಆನೆಯಂತೆ

ಬಲಶಾಲಿ, ಇನ್ನು ನನ್ನ ಮಗಳು ಒಂಟೆಯಂತೆ ಎತ್ತರವಾಗಿದ್ದಾಳೆ!


" ಅದೆಲ್ಲಾ ಸರಿ....ನೀವು ಯಾವ ಕಾಡಿನಿಂದ ಬರುತ್ತಿದ್ದೀರ??!"


************************************************



" ನಿಮ್ಮ ತಂದೆ ದೊಡ್ಡ ರಾಜಕಾರಣಿ ಆಗಿರಬಹುದು, ಆದರೆ ಈ

ರೀತಿ ಕಂಡಿಷನ್ ಇಡಬಾರದು..."


" ಏಕೆ, ಏನು ಹೇಳಿದರು?"



" ಮುಂದಿನ ಚುನಾವಣೆಯಲ್ಲಿ ಸಾವಿರ ಮತಗಳನ್ನು

ವರದಕ್ಷಿಣೆಯಾಗಿ ಕೇಳಿದ್ದಾರೆ..!"

**********************************************

" ಯಾಕೆ ಆ ಮಹನೀಯರನ್ನು ಬಂಧಿಸಿ ಕರೆದೊಯ್ಯುತ್ತಿದ್ದಾರೆ??"



" ಗೌರವ ಡಾಕ್ಟರೇಟ್ ನೀಡಿದ ಬಳಿಕ ವೈದ್ಯಕೀಯ ವೃತ್ತಿ

ಆರಂಭಿಸಿದರಂತೆ!!"

*************************************************


" ಅಳಿಯಂದಿರೇ, ನನ್ನ ಮಗಳು ಟ್ಯೂಷನ್ ತೆಗೆದುಕೊಳ್ಳಲು

ಹೇಳುತ್ತಿದ್ದರೆ, ಯಾಕೆ ಬೇಡ ಅನ್ನುತ್ತಿದ್ದೀರಿ...?"



" ನನ್ನ ಅಡುಗೆ ಚೆನ್ನಾಗಿದೆ ಎಂದು ಶೊಭಾ, ಸುಧಾ, ವಿದ್ಯಾ,

ಲತಾ ಇವರಿಗೆಲ್ಲಾ ಅಡುಗೆ ಪಾಠ ಹೇಳಿಕೊಡಿ

ಅನ್ನುತ್ತಿದ್ದಾಳೆ...!"

**************************************************

" ನೀವು ಮಾಮೂಲಿ ಪಡೆಯುವ ಅಧಿಕಾರಿಯೇನು??"


" ಅದು ಹೇಗೆ ಅಷ್ಟು ಸರಿಯಾಗಿ ಹೇಳಿದಿರಿ!!?"


" ನಾಲಿಗೆ ಚಾಚಿ ಎಂದರೆ ಕೈ ಚಾಚುತ್ತಿರುವಿರಲ್ಲಾ..!"

************************************************


" ಸೂಪರ್ ಹೀರೋ ಇರುವ ಈ ಚಿತ್ರದಲ್ಲಿ ಎಲ್ಲವನ್ನೂ ದೊಡ್ಡದಾಗಿ

ತೋರಿಸಬೇಕು ಎನ್ನುವುದೇನೋ ಸರಿ ನಿರ್ಮಾಪಕರೇ....ಆದರೆ ಹೀರೋನ

ಡ್ರೆಸ್ ಅನ್ನು ರೋಡ್ ರೋಲರ್ ನಲ್ಲೇ ಐರನ್ ಮಾಡಿಸುವ ಸೀನ್ ಇರಬೇಕು

ಎಂಬುದು ನಂಗೇನೋ ಸರಿಕಾಣುತ್ತಿಲ್ಲ..!!"

**************************************************
" ನೆನ್ನೆ ಸೀರೆ ಅಂಗಡೀಲಿ ಐದೇ ನಿಮಿಷದಲ್ಲಿ ಸೀರೆ


ಪರ್ಚೇಸ್ ಮಾಡಿ ಹೊರಬಂದ್ಬಿಟ್ಟೆ...!"



" ಹೌದಾ....ನಿಜವಾಗ್ಲೂನಾ...?"



"ಹೌದು....ಆ ಸೀರೆ ತಗೊಂಡಿದ್ದು ನಮ್ಮತ್ತೆಗಾಗಿ!"


************************************************** ********


" ಏನ್ರೀ ಲೇಖಕರೆ ಇದು, ಕತೆಯ ನಡೆಯೇ ಸರಿ ಇಲ್ವಲ್ರೀ,

ತುಂಬಾ ಎಳ್ಕೊಂಡು ಹೋಗ್ತದೆ..."



" ಈ ಕಥೆಯ ನಡೆ ಇರೋದು ಹಾಗೇನೇ ಸಾರ್...ಯಾಕಂದ್ರೆ

ಕಥೆಯಲ್ಲಿ ನಾಯಕ ನಾಯಕಿ ಇಬ್ರೂನೂ ಕುಂಟರೆ!.."

************************************************** ***


" ಏನ್ ಸಾರ್...ಆಫೀಸಿನಲ್ಲಿ ನಿಮ್ಗೆ ಮಾತ್ರ ಸಪರೇಟಾಗಿ ರೂಮ್

ಕೊಟ್ಟವ್ರೆ??"



" ಏನಿಲ್ಲಾ...ಮಧ್ಯಾಹ್ನ ಊಟ ಆದ್ಮೇಲೆ ನಿದ್ದೆ ಮಾಡೋವಾಗ

ನನ್ನ ಗೊರಕೆ ಶಬ್ಧದಿಂದ ಅವ್ರಿಗೆ ನಿದ್ದೆ ಬರೋಲ್ಲಂತೆ

ಅದ್ಕೆ...!


**************************************************


" ಅಲ್ಲಯ್ಯಾ...ರಾಮಸ್ವಾಮಿ, ನಿನ್ ಮಗ ಬೀಡಿ

ಸೇದ್ತಾಯಿದ್ದಾನೆ....ಕೇಳೋದಿಲ್ವೇನಯ್ಯಾ??"



" ಥೂ ಹೋಗ್ರಿ...ನೀವ್ ಬೇರೆ...ಅ ತುಂಡು ಬೀಡಿನಾ ನಾನ್

ಕೇಳೋದೇ..?!"


*************************************************


" ಸ್ವಾಮಿ, ನೀವು ಜಿಂಕೆ ಚರ್ಮದ ಮೇಲೆ ಕುಳಿತಿದ್ದೀರಲ್ಲಾ...

ಅರಣ್ಯಾಧಿಕಾರಿಗಳು ನಿಮ್ಮನ್ನು ಬಂಧಿಸಲಿಲ್ವೆ??"



" ಇಲ್ಲ...ನಾನು ಚರ್ಮವನ್ನು ತಗೊಂಡು ಅವರಿಗೆ ಮಾಂಸವನ್ನು

ಕೊಟ್ಟಿದ್ದೀನಲ್ಲ...!"

**************************************************

" ಇನ್ನೊರು ರೂಪಾಯಿ ಕೊಟ್ಟು3 ಶರ್ಟು ಕೊಂಡರೆ ಬಿಂದಿಗೆ ಉಚಿತ ಅಂದ್ರಲ್ಲಾ..?
ಈಗ ಬರೀ ಶರ್ಟ್ ಮಾತ್ರ ಕೊಡುತ್ತಿದ್ದೀರಿ...?"


" ಈ ಶರ್ಟ್ ತೆಗೆದೆಕೊಂಡು ಹೋಗಿ ನಿಮ್ಮ ಹೆಂಡತಿಯ ಕೈಗೆ ಕೊಡಿ, ಅವರು ಇದನ್ನು
ಪಾತ್ರೆ ಸಾಮಾನಿನವನಿಗೆ ಕೊಟ್ಟು ಬಿಂದಿಗೆ ತಗೋತಾರೆ..!"

*************************************************


" ನಾನು ನಿಮಗೆ ಕೊಟ್ಟ ಔಷಧಿ ಎಲ್ಲಾ ಸರಿಯಾಗಿ ತೋಗೋತಿದೀರಿ ತಾನೆ?

ಈಗ ನಿದ್ದೆಯಲ್ಲಿ ನಡೆಯುವ ತೊಂದರೆ ಇದೆಯೇ??"


" ಸಧ್ಯ, ಆ ಕಷ್ಟ ತಪ್ಪಿತು ಡಾಕ್ಟ್ರೆ..! ಮೊದಲು ನಡೆದೂ ನಡೆದೂ

ಸಾಕಾಗ್ತಾ ಇತ್ತು...ಈಗ ನನ್ನ ಬೈಕ್ ತಗೊಂಡು ರೌಂಡ್ ಹೊಡೆದು ಬರ್ತೀನಿ...!"

************************************************** *

" ಸ್ವಾಮಿ, ನನ್ನ ಮಗಳಿಗೆ ರಾತ್ರಿ ನಿದ್ರೆಯಲ್ಲಿ ನಡೆಯುವ ಅಭ್ಯಾಸ ಇದೆ

ನಿಮಗೆ ಒಪ್ಪಿಗೆಯೇ?"


" ನನ್ನ ಮಗನಿಗೆ ರಾತ್ರಿ ಕಣ್ಣು ಕಾಣಿಸುವುದಿಲ್ಲ...ನಿಮಗೆ ಒಪ್ಪಿಗೆಯೇ..??!"

************************************************


" ಈ ಫಿಲಂನ ಮುಕ್ತಾಯ ಬಹಳ ಸಸ್ಪೆನ್ಸ್ ಅಂತೆ!


" ಹೌದು...ಯಾರಾದ್ರೂ ಈ ಫಿಲಂನ ಕಡೆ ತನಕ ನೋಡಿದ್ರಲ್ವಾ

ಎಂಡಿಂಗ್ ಹೇಗಿದೆ ಅಂತ ಗೊತ್ತಾಗೋದು..?"

************************************************** *

" ಬೀರುವಿನ ಬೀಗದ ಕೈಯನ್ನು ಯಾರಿಟ್ಟುಕೊಳ್ಳಬೇಕೆಂಬ ಸಮಸ್ಯೆಯನ್ನು

ಹೇಗೆ ಸಂಭಾಳಿಸಿದೆ??"


" ಸಕತ್ ಸಿಂಪಲ್..! ನನ್ನ ಹೆಂಡತಿಯ ಬೀರುವಿನ ಬೀಗದ ಕೈಯನ್ನು ನಮ್ಮಮ್ಮನಿಗೂ,

ನಮ್ಮಮ್ಮನ ಬೀರುವಿನ ಬೀಗದ ಕೈಯನ್ನು ನನ್ನ ಹೆಂಡತಿಗೂ ಕೊಟ್ಬಿಟ್ಟೆ...!"

**************************************************

" ನನ್ನ ಮಗ ಫಾರಿನ್ ನಲ್ಲಿ ಓದ್ತಾ ಇದ್ದಾನೆ...ಅವನ ಪತ್ರ ಬಂದರೆ, ನಾನು ಡಿಕ್ಶನರಿ ತಗೀಬೇಕು

ಅವನ ಇಂಗ್ಲೀಷ್ ಅರ್ಥ ಮಾಡ್ಕೊಳ್ಳಕ್ಕೇ...!"



" ಹೌದೇ....ನೀವೆ ಅದೃಷ್ಟವಂತರು...ನನ್ನ ಮಗನ ಪತ್ರ ಬಂದರೆ, ನಾನು ಚೆಕ್ ಪುಸ್ತಕ ತಗೀಬೇಕು...!"

*************************************************

" ಹೆಣ್ಣು ನೋಡೋಕೆ ಹೋಗಿದ್ಯಲ್ಲಾ..ಏನಾಯ್ತು..?"


" ಪ್ರೆಶರ್ ಕುಕ್ಕರ್ ಗೂ, ರೈಸ್ ಕುಕ್ಕರ್ ಗೂ ಏನು ವ್ಯತ್ಯಾಸಾಂತ ಕೇಳಿದ್ರು,

ನಂಗೊತ್ತಿಲ್ಲ ಅಂದೆ, ರಿಜೆಕ್ಟ್ ಮಾಡಿಬಿಟ್ರು..."
*************************************************

" ದೇವರನ್ನು ನಂಬಿದರೆ, ಅವನು ಕೈಬಿಡಲಾರ ಎಂಬುದನ್ನು ಅನುಭವ ಪೂರ್ವಕವಾಗಿ ತಿಳ್ಕೊಂಡೆ.."


" ದೇವಸ್ಥಾನದಲ್ಲಿ ಅನ್ನದಾನವನ್ನು ಮಾಡಿದರೇನು??"

**************************************************

" ಪತ್ರಕರ್ತರು ನಡೆಸುವ ಹೋಟೆಲಿಗೆ ಹೋಗಿದ್ದೆ...."

" ಏನಾಯಿತು...?"

" ದೋಸೆಯ ಗಾತ್ರವನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ

ಪೂರ್ಣ ಅಧಿಕಾರವಿದೆ ಎಂದು ಮೆನುಕಾರ್ಡಿನಲ್ಲಿ ಮುದ್ರಿಸಿದ್ದಾರೆ..."

*********************************************


" ನಿಮ್ಮ ಹುಡುಗಿ ನಮಗೆ ತುಂಬಾ ಹಿಡಿಸಿದ್ದಾಳೆ...ಮದುವೆಯಲ್ಲಿ

ಏನೇನು ಹಾಕುತ್ತೀರಿ...?"


" ತಲೆಕೂದಲಿಗೆ ಡೈ, ತುಟಿಗೆ ಲಿಪ್ ಸ್ಟಿಕ್, ಕಣ್ಣಿಗೆ ಕಪ್ಪು

ಬೆರಳುಗಳಿಗೆ ಗೋರಂಟಿ ಹಾಕುತ್ತೇವೆ..!"

*************************************************


" ಡಾಕ್ಟ್ರೇ...ಹಣ್ಣು ತಿಂದರೆ ಒಳ್ಳೆಯದು ಅಲ್ವಾ...?"

" ಹೌದಪ್ಪಾ...ಆರೋಗ್ಯಕ್ಕೆ ತುಂಬಾ ಒಳ್ಳೆಯದು...."

" ಬೆಳಿಗ್ಗೆ ಒಂದೇ ಒಂದು ಹಣ್ಣು ತಿಂದದ್ದು...ವಿಪರೀತ ಹೊಟ್ಟೆನೋವು

ಏನಾದ್ರೂ ಔಷಧಿ ಕೊಡಿ..."

' ಹೊಟ್ಟೆನೋವೆ? ಒಂದೇ ಹಣ್ಣು ತಿಂದರೆ ಈ ರೀತಿ ಆಗುವಂತಿಲ್ಲವಲ್ಲಾ..
ಅಂದ ಹಾಗೆ ಯಾವ ಹಣ್ಣು ತಿಂದ್ರಿ??"

" ಒಂದೇ ಒಂದು ದೊಡ್ಡ ಹಲಸಿನ ಹಣ್ಣು...!"

**************************************************


" ಏನಯ್ಯಾ..ಪಟ್ಟಾಭಿ....ನಿನ್ನ ಹೆಂಡತಿ ಕಾಣೆಯಾಗಿದ್ದಾಳೆ ಅಂತಾ

ಟೀ.ವೀಲಿ ಪ್ರಕಟಣೆ ಮಾಡಿದ್ಯಲ್ಲಾ? ಏನಾಯ್ತು??"


" ಅಯ್ಯೋ..., ಅದ್ಯಾಕೆ ಕೇಳ್ತೀಯಾ! ಬೇರೆ ಬೇರೆ ಗಂಡಂದಿರಿಂದ ನನಗೆ
ಸಿಕ್ಕಾಪಟ್ಟೆ ಶುಭಾಶಯ ಪತ್ರಗಳು ಬರ್ತಿವೆ...!"


**************************************************

" ಯಾವ್ಯಾವ ವಿಷಯಕ್ಕೆ ಕೋರ್ಟಿಗೆ ಹೋಗಬೇಕು ಅನ್ನೋ ಬಗ್ಗೆ ಒಂದು ರೀತಿ,

ನೀತೀನೇ ಇಲ್ಲದಂತೆ ಆಯ್ತು ನೋಡು..."


" ಯಾಕ್ಸಾರ್, ಏನಾಯ್ತು...??"

" ತನ್ನ ಹೆಂಡತಿ ಎಂಟು ದಿನದಿಂದ ತನ್ನ ಜೊತೆ ಮಾತಾಡ್ತಾ ಇಲ್ಲಾ ಅಂತಾ

ಯಾವನೋ ಅರ್ಜಿ ಕೊಟ್ಟಿದ್ದಾನೆ....!"


**********************************************


" ಸಿನೆಮಾಗಳಿಗೆ ಹಾಡು ಬರೆಯೋವ್ನನ್ನ ಕಟ್ಟಿಕೊಂಡು ದೊಡ್ಡ ಅವಸ್ಥೆ ಆಗಿಬಿಟ್ಟಿದೆ..."


" ಯಾಕೆ, ಬರೀ ಹಾಡಲ್ಲೇ ಸರಸಾನಾ..!!?"


" ಅದೆಲ್ಲಾ ಏನಿಲ್ಲಾ...ಅವನು ಹೇಳೋದು ನನಗೆ ಅರ್ಥ ಆಗೋಲ್ಲಾ, ನಾನು ಹೇಳೋದು

ಅವನಿಗೆ ಅರ್ಥ ಆಗೋಲ್ಲಾ...!"

*****************************************************

" ಮದುವೆ ಮಂಟಪದಲ್ಲಿದ್ದ ತರುಣ ಪುರೋಹಿತ ಅದ್ಯಾಕೆ ಮೂರ್ಛೆಹೋದ? ಹೊಗೆ ಹೆಚ್ಚಾಯಿತೆ?"


" ಆ ವಧು ಅವನ ಪ್ರೇಯಸಿಯಂತೆ!"


************************************************


ಪರೀಕ್ಷೆ ಹಾಳೆಯಲ್ಲಿ " ಈಶ್ವರ ಕೃಪೆ" ಎಂದು ಬರೆದಿದ್ದೀಯಲ್ಲಾ, ಅದು ನಿಮ್ಮ ಮನೆದೇವರ ಹೆಸರೇನು?"

" ಇಲ್ಲ ಸಾರ್! ನನ್ನ ಮುಂದೆ ಕುಳಿತಿದ್ದವನ ಹೆಸರು!


************************************************

" ಕೈಯೆಲ್ಲಾ ಹೀಗೆ ಪಟ್ಟು ಕಟ್ಟಿಕೊಂಡಿದ್ದೀರಲ್ಲಾ ಯಾಕೆ? ಏನಾಯ್ತು..?"


" ಸ್ಟೆಪ್ನಿ ಬೇಕು............ಸ್ಕೂಟರ್ ಗೆ.." ಅನ್ನೋಷ್ಟರಲ್ಲಿ ನನ್ನ ಹೆಂಡ್ತಿ ಹಿಂಗೆ ಬಡಿದುಹಾಕಿದ್ದಾಳೆ ಕಣ್ರೀ.."

**************************************************

" ಡ್ರೈವರ್...ಸೀರೇನಾ ಯಾಕೆ ಹೀಗೆ ಕಾರ್ ಮೇಲೆ ಒಣಗಿಸ್ತಿದ್ದೀಯಾ??"


" ಅಮ್ಮಾವ್ರ ಈ ಹೊಸ ಸೀರೆನ ಮಹಡಿಯ ಮೇಲೆ ಒಣಗೋಕೆ ಹಾಕಿದ್ರೆ ಯಾರಿಗೂ ಕಾಣ್ಸೊಲ್ಲವಂತೆ..!"

**********************************************

" ನನ್ನನ್ನೇಕೆ ಇಷ್ಟು ಬೇಗ ಮೇಲಕ್ಕೆ ಕರಿಸಿಕೊಂಡ್ರಿ? ವೈದ್ಯನಾದ ನಾನು ಇನ್ನೂ ಅನೇಕರ ಜೀವ ಉಳಿಸುತ್ತಿದ್ದೆ..."


" ಆ ಅನೇಕರ ಪ್ರಾಣ ಉಳಿಸಲೆಂದೇ ನಿನ್ನನ್ನು ಇಷ್ಟು ಬೇಗ ಇಲ್ಲಿಗೆ ಕರೆಸಬೇಕಾಯಿತು..!"

***********************************************



" ಇದ್ದಕ್ಕಿದ್ದ ಹಾಗೆ ಹೊಟ್ಟೇಲಿ ಒಂಥರ ಸಂಕಟವಾಗ್ತಿದೆ ಡಾಕ್ಟ್ರೆ.."

" ಫೀಸ್ ಕೊಟ್ಟನಂತರ ಒಂದೈದು ನಿಮಿಷ ಹಾಗೆಯೇ ಇರುತ್ತದೆ...ನಂತರ ಸರಿಹೋಗುತ್ತೆ..ಯೋಚ್ನೆ

ಮಾಡ್ಬೇಡಿ...!"


*******************************************


ಸಂತಾ ಮತ್ತು ಬಂತಾ ಬೆಳಬೆಳಿಗ್ಗೆ ಜಾಗಿಂಗ್ ಹೊರಟಿದ್ದರು...ಪಾರ್ಕಿನಲ್ಲಿ ಸ್ವಲ್ಪ ಮುಂದೇ ಏನೋ ಒಂದು ಪುಟ್ಟ ಕಪ್ಪುರಾಶಿ ಬಿದ್ದಿತ್ತು. ಸಂತಾಗೆ ಯೋಚನೆ ಶುರುವಾಯಿತು...ಏನಿರಬಹುದು?? ಹತ್ತಿರ ಹೋಗಿ ನೋಡಿದರೆ ಏನೂಂತ ಗೊತ್ತಾಗಲೇ ಇಲ್ಲ...ಬಗ್ಗಿ ನೋಡುತ್ತಾನೆ...ಆಗಲೂ ಗೊತ್ತಾಗಲಿಲ್ಲ...ಮೂಸಿ ನೋಡಿದ...ಊಹುಂ...ಇಲ್ಲ..ಇನ್ನೇನು ಮಾಡುವುದು? ಸ್ವಲ್ಪ ಕೈಯಲ್ಲಿ ತೆಗೆದುಕೊಂಡು ನೆಕ್ಕಿ ನೋಡಿದ...ಸಂತಾನ ಮುಖ ಇಷ್ಟಗಲವಾಯಿತು!..ತನ್ನ ಬುದ್ಧಿವಂತಿಕೆಯನ್ನು ತಾನೇ ಮೆಚ್ಚಿ ಖುಷಿಯಿಂದ ಹೇಳಿದ.." ಬಂತಾ ಬಚಾವಾದ್ವಿ...ಇದು ಸೆಗಣಿ ಮಾರಾಯಾ...ಪುಣ್ಯಕ್ಕೆ ನೆಕ್ಕಿ ನೋಡ್ದೆ...ಇಲ್ಲಾಂದ್ರೆ ತುಳಿದುಬಿಡ್ತಿದ್ವಿ..!"

**************************************************

" ನಿಮ್ಮ ಪತಿ ಯಾವಗಿನಿಂದ ಈ ರೀತಿ ಹುಚ್ಚನ ಹಾಗೆ ಆಡ್ತಿದ್ದಾರೆ??"

" ಏಳೇಳು ಜನ್ಮಕ್ಕೂ...ನೀವೇ ನನ್ನ ಗಂಡನಾಗ್ಬೇಕೂಂತ ಹೇಳಿದೆ...ಆವಾಗಿನಿಂದ...!"

***********************************

" ಆರು ಅಕ್ಷರಗಳ ಹೆಸರಾಗಿದ್ರೆ ಒಳ್ಳೆಯದಾಗುತ್ತೇಂತ ಜ್ಯೋತಿಷಿಗಳು ಹೇಳೀದ್ರು...."

" ಅದಕ್ಕಾಗಿ ಈಶ್ವರ್ ರ್ ರ್ ರ್ ...ಅಂತ ಇಟ್ಕೋಳೋದು ಸರೀನಾ??"

*******************************************

" ಕಾಶೀಯಾತ್ರೆಗೆಂದು ಸ್ವಲ್ಪ ದೂರ ತಾನೇ ಹೋಗೋದು! ಅದಕ್ಕಾಗಿ ಏಕೆ ಹೊಸ ಚಪ್ಪಲಿ ತಕ್ಕೊಡ್ಬೇಕು?"

" ಹಾಗಾದರೆ ಶಾಸ್ತ್ರವನ್ನು ಹೇಗೆ ಮಾಡೋದು?"

" ಮದುವೆಗೆ ಯಾರದ್ರೂ ಹೊಸ ಚಪ್ಪಲಿ ಹಾಕ್ಕೊಂಡು ಬಂದಿರಬಹುದು..ಅದನ್ನೇ ಹಾಕ್ಕೊಳ್ಳೋಕೆ ಹೇಳಿ....!"

************************************************


" ಈ ನಿರ್ಮಾಪಕ ಕಳ್ಳ ಲೆಕ್ಕ ಬರೆದಿದ್ದಾರೆ ಎಂದು ಹೇಗೆ ಕಂಡುಹಿಡಿದ್ರು??"

" ಚಿತ್ರ ಪೂರ್ತಿ ಸ್ವಿಮಿಂಗ್ ಸೂಟ್ ನಲ್ಲಿದ್ದ ನಾಯಕಿಯ ಕಾಸ್ಟ್ಯೂಮ್ಸ್ ಗಾಗಿ ಐವತ್ತು ಲಕ್ಷ ರೂಪಾಯಿ
ಖರ್ಚಾಗಿರುವುದಾಗಿ ಲೆಕ್ಕ ಬರೆದಿದ್ರಂತೆ!"

************************************************

ಪ್ರಿಯತಮ: " ನಮ್ಮ ಮದುವೆಗೆ ಈಗೇನು ಅವಸರ ಡಿಯರ್?"

ಪ್ರಿಯತಮೆ: ದಿನವೂ ಕಡ್ಲೇಕಾಯಿ ಕೇಳೋ ನಾನು ಈ ದಿನ ಮಾವಿನಕಾಯಿ ಕೇಳ್ತಿದ್ದೀನಲ್ಲಾ...ಗೊತ್ತಾಗ್ಲಿಲ್ವಾ??!!

**************************************************

" ಏನ್ ಬೀಗರೇ...ಮದುವೆಗೆ ವೀಡಿಯೋ..ತೆಗೆಯೋಲ್ವಾ??"

" ಸ್ವಲ್ಪ...ಹಣಕಾಸಿನ ತಾಪತ್ರಯ....ಅದಕ್ಕಾಗಿ ಬರೀ ಆಡಿಯೋ...ತೆಗೆದುಕೊಳ್ತೀನಿ...!"

**************************************************


" ನಿಮ್ಮ ಗಂಡನಿಗೆ ಮರೆವು ಜಾಸ್ತಿಯಾಗಿದ್ಯಾ?"

" ಹೌದು ಡಾಕ್ಟರ್!....ಕೈಯಲ್ಲಿ ಇರುವುದು ಸಿಗರೇಟ್ ಎಂದು ಭಾವಿಸಿ, ಸೆಲ್ ಫೋನನ್ನು ಕೆಳಗೆ ಹಾಕಿ,
ಕಾಲಿನಲ್ಲಿ ಉಜ್ಜಿಬಿಟ್ಟರು...!"

***************************************************

" ನಮ್ಮ ಪ್ರೇಮ ಕೈಗೂಡಲಿಲ್ಲವಲ್ಲ...ನನ್ನ ಜೀವನವಿಡೀ ನಿನ್ನನ್ನು ನೆನೆಸ್ಕೊಳ್ತಾನೇ ಇರೋ ಹಾಗೆ

ಏನಾದ್ರೂ ಮಾಡು...."


" ನಾನೇನು ಮಾಡ್ಲಿ ಡಾರ್*ಲಿಂಗ್?"

" ನನ್ನ ಮದುವೆಗೆ ಬಂದು ದೊಡ್ಡ ಅಮೌಂಟ್ ಮುಯ್ಯಿ ಬರೆಸು...!"

~~~~~~~~~~~~~~~~~~~~~~~~~~~~~~~~~~~~~~

" ಬಿಡ್ವೇ ಇಲ್ದೆ ಲಂಚ ತಗೊಳ್ತೀರಂತ ಕಾಣ್ಸುತ್ತೆ..."

" ಅದೆಂಗೆ ಅಷ್ಟು ಕರೆಕ್ಟ್ ಆಗಿ ಹೇಳಿದ್ರೀ?"

" ಕೈಯಲ್ಲಿರುವ ರೇಖೆಗಳೆಲ್ಲಾ ಅಳಿಸಿಹೋಗಿವೆಯಲ್ಲಾ...!"

~~~~~~~~~~~~~~~~~~~~~~~~~~~~~~~~~~~~~~~

" ನಂ ಪಕ್ಷದ ಆರ್ಥಿಕ ಪರಿಸ್ಥಿತಿ ಏನೇನೂ ಚೆನ್ನಾಗಿಲ್ಲ.."

" ಹೀಗೇಕೆ ಹೇಳ್ತೀಯಾ??"

" ಉಪವಾಸ ಸತ್ಯಗ್ರಹ ನಡೆಸಿದಾಗ, ನಿಜವಾಗ್ಲೂ ಉಪವಾಸ ಕೆಡವಿಬಿಟ್ರು.."

~~~~~~~~~~~~~~~~~~~~~~~~~~~~~~~~~~~~~~

" ಇದೆಲ್ಲಾ ಚೆನ್ನಾಗಿರಲ್ಲ ನೋಡು..."

" ಯಾಕ್ರೀ..ಏನಾಯ್ತು?

" ನಿಮ್ಮ ತಾಯಿ ದೊಡ್ಡ ಡ್ಯಾನ್ಸ್ ಮಾಸ್ಟರ್ ಆಗಿರ್*ಬೋದು...ಹಂಗಂತಾ...ನಮ್ಮ ಹನಿಮೂನ್ ಗೆ ಹೊರಟಿರೋ

ನಮ್ಮ ಜೊತೆಯಲ್ಲಿ ಬಿಳಿಯ ಮ್ಯಾಕ್ಸಿ ತೊಟ್ಟ ಒಂದು ಡಜನ್ ಗ್ರೂಪ್ ಡ್ಯಾನ್ಸರ್*ಸ್*ನ ಕಳಿಸ್ತಿರೋದು ಸರೀನಾ??!!"

~~~~~~~~~~~~~~~~~~~~~~~~~~~~~~~~~~~~~~~~~~~~~

" ಹೆಂಗಸರೇಕೆ ಗುಂಪು ಕಟ್ಕೊಂಡು ಅವರ ಮನೆ ಮುಂದೆ ಕೂಗುತ್ತಿದ್ದಾರೆ??"

" ಮೆಗಾ ಧಾರವಾಹಿ ಅಂತಾ ಹೇಳಿ...ಇಪ್ಪತ್ತು ಕಂತುಗಳಲ್ಲೇ ಮುಗಿಸಿಬಿಟ್ಟರಂತೆ...ಅದಕ್ಕೆ ನಿರ್ದೇಶಕರ
ಮನೆ ಮುಂದೆ ಧರಣಿ ಮಾಡುತ್ತಿದ್ದಾರೆ!!"


~~~~~~~~~~~~~~~~~~~~~~~~~~~~~~~~~~~~~~~~~~~~~

" ನಿಮ್ಮಲ್ಲಿ ತಗೊಂಡ ಈ ವಿಗ್ ನಲ್ಲಿರುವ ಕೂದಲು ಉದುರುತ್ತೆ...."

" ನಾವು ಹೇಳಿದ್ವಲ್ಲಾ....ನಮ್ಮ ಕಂಪನಿಯ ವಿಗ್ ತುಂಬಾ ನ್ಯಾಚುರಲ್ಲಾಗಿ ಇರುತ್ತೇಂತ!"

************************************************
ಅಷ್ಟೂ ಜನಗಳೂ ಸೇರಿ ಯಾಕಯ್ಯಾ ನೇತು ಹಾಕಿದರು ಆ ಚಿತ್ರಾನ??



" ಚಿತ್ರವನ್ನು ಬರೆದವನು ಸಿಕ್ಲಿಲ್ಲವಂತೆ...ಅದಿಕ್ಕೆ!!"

*********************************************

ಡಾಕ್ಟ್ರು: " ನಿಮ್ಮ ಜನ್ಮಕ್ಕಂಟಿದ ಯಾವುದೋ ವ್ಯಾಧಿ ಆಗಾಗ ನಿಮ್ಮ ಸುಖ ಸಂತೋಷಕ್ಕೆ

ಅಡ್ಡಿ ಬರ್ತಾ ಇದೆ...."

ರೋಗಿ: " ಅದು ಇಲ್ಲೇ ಪಕ್ಕದ ರೂಂನಲ್ಲಿ ಕೂತಿದೆ...ಮೆಲ್ಲಗೆ ಮಾತಾಡಿ ಡಾಕ್ಟ್ರೇ...!!"

*************************************************

ಯಾಕೋ ತಿಮ್ಮ ಶರ್ಟ್ ತುದಿಗೆ ಹಿಂಗೇ ಗಂಟು ಹಾಕ್ಕೊಂಡಿದ್ದೀಯಾ??


" ನಾನು ಹಾಕಿಲ್ಲ....ನನ್ನ ಹೆಂಡ್ತಿನೇ ಗಂಟು ಹಾಕಿದ್ದಾಳೆ...ನಾನು ಕಾಗದನ ಪೋಸ್ಟ್

ಮಾಡೋದು ಮರೆಯದಿರಲಿ ಅಂತ....



" ಪೋಸ್ಟ್ ಮಾಡಿದ್ಯಾ?? "


" ಅವಳು ಕಾಗದ ಕೊಡೊದನ್ನೇ ಮರ್ತಿದ್ದಾಳೆ..!"

************************************************** ***

ಬೇಕಾದಾಗ ಮಳೆ ಬಾರದೆ ನನ್ನ ಬೆಳೆ ಒಂದು ಅಂಗುಲದಷ್ಟು ಎತ್ತರ ಬೆಳೆದಿದೆ ನೋಡು....

" ನಿನ್ನ ಬೆಳೆ ಅಷ್ಟಾದರೂ ಬೆಳೀತಲ್ಲಾ....ನನ್ನ ಬೆಳೆಯನ್ನು ತಿನ್ನೊಕ್ಕೆ ಗುಬ್ಬಚ್ಚಿಗಳೂ ಮೊಣಕಾಲೂರಿ

ಕೂತ್ಕೊಬೇಕು ಗೊತ್ತಾ??!"

************************************************** ***

ಅಕ್ಕಪಕ್ಕದ ಮನೆಗಳಲ್ಲಿ ಇಬ್ಬರು ದಂಪತಿಗಳಿದ್ದರು....ಎಡಗಡೆ ಮನೆಯಲ್ಲಿದ್ದವರು ಯಾವಾಗಲೂ

ಜಗಳವಾಡುತ್ತಿದ್ದರೆ, ಬಲಗಡೆಯಿದ್ದವರು ನಗುನಗುತ್ತಾ ಇರುತ್ತಿದ್ದರು....ಒಮ್ಮೆ ಗಂಡ ಜೋರಾಗಿ ನಕ್ಕರೆ..

ಇನ್ನೊಮ್ಮೆ ಹೆಂಡತಿಯ ಜೋರು ನಗೆ!....ಒಮ್ಮೆ ಜಗಳಗಂಟ ದಂಪತಿಗಳು ಯಕೆ ಇವರಿಬ್ಬರು

ಜಗಳ ಮಾಡುವುದಿಲ್ಲ. ಕೇಳೋಣವೆಂದು ಹೊರ್*ಅಟರು....

" ನೀವು ಅದೆಂಗೆ ಯಾವಾಗಲೂ ನಗುನಗುತ್ತಾ ಇರುತ್ತೀರಿ?? ಜಗಳವಾಡುವುದೇ ಇಲ್ಲವಲ್ಲಾ??"


" ಏ...ಹಾಗೇನಿಲ್ಲಾ...ನಮ್ಮ ಜಗಳ ಬರೀ ಬಯ್ಗುಳವಲ್ಲಾ....ಅವಳಿಗೆ ಸಿಟ್ಟು ಬಂದಾಗ ಲಟ್ಟಣಿಗೇನೋ...

ಭಾಂಡ್ಲಿನೋ ಕೈಗೆ ಏನು ಸಿಗುತ್ತೆ ಅದನ್ನ ನನ್ನಡೆಗೆ ಎಸೆಯುತ್ತಾಳೆ! ಗುರಿ ಮುಟ್ಟಿದರೆ ಅವಳು ಜೋರಾಗಿ

ನಗುತ್ತಾಳೆ.. ಗುರಿ ಮುಟ್ಟದಿದ್ದರೆ ನಾನು ಜೋರಾಗಿ ನಗುತ್ತೇನೆ! "

************************************************** ***

ಸಂತಾ ಸೆಕೆಂಡ್ ಷೋ ಸಿನೆಮಾ ನೋಡಿಕೊಂಡು ಒಬ್ಬನೇ ಬರುತ್ತಿದ್ದ...ಎದುರಿಗೆ ಸಿಕ್ಕ ಇಬ್ಬರು ದಡಿಯರನ್ನು ಕಂಡು
ಹೆದರಿದ್ದ...ಅವರಲ್ಲೊಬ್ಬ....

" ಸಾರ್ ಒಂದು ರೂಪಾಯಿ ಕಾಯಿನ್ ಇದ್ರೆ ಕೊಡಿ.."

" ಯಾಕೆ?"

" ಅದೇ ಸಾರ್ ನಿಮ್ಮ ಕತ್ತಿನಲ್ಲಿರೋ ಚೈನ್ ಯಾರಿಗೆ, ನಿಮ್ಮ ಕೈಲಿರೋ ಉಂಗುರ ಯಾರಿಗೆ ಅಂತ ಹೆಡ್ ಅಂಡ್

ಟೈಲ್ ಹಾಕಿ ನೋಡ್ಬೇಕಾಗಿತ್ತು....ಅದಿಕ್ಕೆ...!"

************************************************** ***

ಏನೋ ರಂಗಾ...ಮನೇಗೆ ನಿಮ್ ಮ್ಯಾನೇಜರ್ ಬರ್ತಾರೆ ಅಂತಾ....ನನ್ನ ಬಚ್ಚಿಟ್ಕೋ

ಅಂತೀಯಲ್ಲಾ...ನಿಮ್ಮಜ್ಜಿಯಂದ್ರೆ ನಿನಗೆ ಅಷ್ಟು ಕೇವಲವೇನೋ...??


" ಅಯ್ಯೋ...ಅದು ಹಾಗಲ್ಲ ಅಜ್ಜಿ....ಹೋದವಾರ ನೀನು ಸತ್ತೋದೆ ಅಂತಾ ಹೇಳಿ...ಆಫೀಸ್ಗೆ 3 ದಿನ ರಜ ಹಾಕಿದ್ದೆ

ಅದಿಕ್ಕೆ....!

************************************************** ******

ಇದೇನ್ ಸಾರ್...ನಾನು ಹೋದ ಪಂಕ್ತೀಲೇ ಊಟ ಮುಗಿಸ್ದೆ...ನೀವೆನ್ನೂ ಊಟ ಮಾಡ್ತಾನೇ ಇದ್ದೀರಾ..?


ಯೋ...ನಾನೇನ್ ನಿನ್ ಹಾಗೆ ಬರೀ 50 ರೂಪಾಯಿ ಮುಯ್ಯಿ ಮಾಡಿದ್ದೀನಿ ಅಂದ್ಕೊಂಡ್ಯಾ?? 500ರೂಪಾಯಿ ಮುಯ್ಯಿ ಮಾಡಿದ್ದೀನೆ...ಸುಮ್ನೆ ಅಲ್ಲಾ..!!"



************************************************** ******
" ಮದುವೆ ಆಮಂತ್ರಣ ಪತ್ರದಲ್ಲಿ ಹಿಂದೆ ಏನೋ ವಿಶೇಷ ಸೂಚನೆ ಮುದ್ರಿಸಿದ್ದಾರಲ್ಲಾ??"



" ಮದುವೆಗೆ ನೀವು ಬರಲಾಗದಿದ್ದರೆ ಚಿಂತಿಸಬೇಡಿ, ಒಂದು ವಾರದೊಳಗೆ ನಾವೇ ಖುದ್ದಾಗಿ ಬಂದು

ಮುಯ್ಯಿ ವಸೂಲಿ ಮಾಡಿಕೊಳ್ಳುತ್ತೇವೆ" ಎಂದು ಮುದ್ರಿಸಿದ್ದಾರೆ!

**************************************************

ನಿನ್ನ ಹೆಂಡತಿ ಯಾಕಯ್ಯ ನಿನ್ನ ಹೊಡೆದಳು??

" ಹೆಂಡತಿಯ ಸೊಕ್ಕನ್ನು ಮುರಿಯುವ ನೂರು ದಾರಿಗಳು" ಎಂಬ ಪುಸ್ತಕ ನಾನೇ ಬರೆದದ್ದು ಅಂತ

ಗೊತ್ತಾಗೊಯ್ತು ಕಣ್ರೀ....

*********************************************

" ಉಟ್ಟ ಸೀರೆಯಲ್ಲಿ ಬಂದರೆ ಸಾಕು ಎಂದು ಪ್ರೇಯಸಿಯ ಹತ್ತಿರ ಹೇಳಿದ್ಯಂತಲ್ಲಾ...ನಿಂದು ಎಷ್ಟು ಒಳ್ಳೆ ಮನಸ್ಸು"

" ಸಿಕ್ಕಾಪಟ್ಟೆ ಸೀರೆಗಳೊಂದಿಗೆ ಬಂದರೆ ಅವನ್ನ ಒಗೆದು ಸಾಯ್ಬೇಕಾದೋನು ನಾನ್ ತಾನೆ!" ಅದಿಕ್ಕೆ.......

************************************************** *

" ಕಮೀಷನರ್ ರವರನ್ನು ನೋಡಿದ ನಂತರ ನಟಿಯು ದೂರು ಪತ್ರವನ್ನು ಕೊಡದೇ ನಿಂತಿದ್ದೇಕೆ??"

" ಆಕ್ಷನ್...ಸ್ಟಾರ್ಟ್....ಎಂದು ಹೇಳಿದರೇನೇ ಕೊಡ್ತಾಳಂತೆ!"

************************************************** *****

ಪಂಚಾಗವನ್ನು ಇಟ್ಟುಕೊಂಡು ಹಲ್ಲಿ ಬಿದ್ದ ಫಲವನ್ನು ನೋಡುತ್ತಿದ್ದಿಯಲ್ಲಾ...ಈಗ ಯಾವುದರ ಮೇಲೆ ಹಲ್ಲಿ ಬಿತ್ತು??


" ಕುದಿಯುತ್ತಿದ್ದ ಸಾಂಬಾರ್ ನಲ್ಲಿ ರೀ..!"


************************************************** ****

ನಿನ್ನ ಎಡಗೈ ಗಿಡ್ಡವಾಗಿದೆಯಲ್ಲಾ...ಆದರೂ ಆ ಅಂಗಡಿಯವ ನಿನಗೆ ಕೆಲಸ ಕೊಟ್ಟಿದ್ದಾನಾ?? ಏನು ಕೆಲಸ?

" ಅದು ಹೂವಿನ ಅಂಗಡಿ...ನನಗೆ ಮೊಳ ಹಾಕುವ ಕೆಲಸ!"

************************************************** ****

ಡಾಕ್ಟರ್! ನನಗೆ ಯಾವಗಲೂ ಬಾಯಿಯಲ್ಲಿ ಏನಾದರೂ ಹಾಕಿಕೊಂಡು ಅಗಿಯುತ್ತಲೇ ಇರಬೇಕೆಂದು ಅನ್ನಿಸುತ್ತದೆ!

" ಸರಿ ಈಗ ಏನು ಅಗಿಯುತ್ತಿದ್ದೀರಾ?"

" ನೀವು ಬರೆದುಕೊಟ್ಟ ಔಷಧಿ ಚೀಟಿ..!"

************************************************** ***

ಇದೇನ್ ಸ್ವಾಮಿ...ಅನ್ಯಾಯ...ನಿಮ್ಮನೆಗೇ ಹಾವು ಬಿಡು ಅಂತಿದ್ದೀರಲ್ಲಾ??"

" ಇನ್ನೇನಯ್ಯಾ ಮಾಡೋದು? ಮನೇಗ್ ಬಂದ ನೆಂಟ್ರು 3 ತಿಂಗಳಾದ್ರೂ ಜಾಗ ಖಾಲಿ ಮಾಡ್ದೆ ಪಟ್ಟಾಗಿ ಕೂತವ್ರೇ!"

*****************************************************

ಕ್ಷೌರಿಕ : ಸ್ವಾಮಿ, ಹೇರ್ ಕಟಿಂಗ್ ಆಗಬೇಕು ತಾನೆ? ಹ್ಯಾಗೆ ಮಾಡಲಿ??

ಗಿರಾಕಿ: ಒಂದಕ್ಷರವನ್ನು ಒದರದೆ, ಬಾಯಿ ಮುಚ್ಚಿಕೊಂಡು..!
__________________________________________________ ______________


" ಸಾರ್. ನೀವು ಸಾಕಿದ್ದ ಜೇನುನೊಣವೊಂದು ಬಂದು ನನಗೆ ಕಡಿಯಿತು...ಅದಕ್ಕೆ ನೀವು ಏನಾದರೂ ಪರಿಹಾರ

ಕೊಡಬೇಕು...

" ಆ ಜೇನುನೊಣ ಯಾವ್ದು ಅಂತ ಸಾಕ್ಷಿ ಸಮೇತ ತೋರ್*ಸಿ....ಖಂಡಿತ ಪರಿಹಾರ ಕೊಡ್ತೀನಿ..!"

__________________________________________________ ________

ಮಗ: ಅಪ್ಪ, ನೆನ್ನೆ ರಾತ್ರಿ ನಾನು ಹನ್ನೆರಡು ಗಂಟೆವರೆಗೂ ಓದ್ತಾ ಇದ್ದೆ....

ಅಪ್ಪ: ಬರೀ ಸುಳ್ಳು....ಹತ್ತೊವಾರೆ ಹೊತ್ಗೇ ಕರೆಂಟ್ ಹೋಯ್ತು...

ಮಗ: ನಾನು ಎಷ್ಟು ಡೀಪ್ ಆಗಿ ಓದೋದ್ರಲ್ಲಿ ಇದ್ದೆ ಅಂದ್ರೆ...ನೋಡು ಕರೆಂಟ್ ಹೋಗಿದ್ದೇ ಗೊತ್ತಾಗ್ಲಿಲ್ಲ..!
__________________________________________________ __________

" ಯಾಕ್ರೀ ಓಡ್ತೀದ್ದೀರಿ?"

" ನಾನೊಂದು ಹಾವು ನೋಡಿದೆ...ಆದರೆ ಅದು ಕೋಲು...!

" ಅದಕ್ಕೆ ಯಾಕೆ ಓಡ್ತಿದ್ದೀರಿ?"

" ಯಾಕೆಂದರೆ ಅ ಹಾವನ್ನು ಹೊಡೆಯೋಣ ಅಂತ ಕೈಗೆ ತಗೊಂಡ ಕೋಲು ಹಾವಗಿತ್ತು..ಅದಿಕ್ಕೆ..!!"
__________________________________________________ _________

ನ್ಯಾಯಾಧೀಶ : ಕೊಲೆ ನಡೆದಿದ್ದನ್ನು ನೋಡಿದ ನೀನು ತಡೆಯಲು ಯಾಕೆ ಪ್ರಯತ್ನಿಸಲಿಲ್ಲ??

ಸಾಕ್ಷಿಗಾರ: ಸ್ವಾಮಿ, ನಾನು ತಡೆಯಲು ಹೋಗಿದ್ದರೆ, ನಿಮ್ಮ ಮುಂದೆ ಇರುತ್ತಿರಲಿಲ್ಲ...!
__________________________________________________ ______

ಡಾಕ್ಟರ್: ನರ್ಸ್: ಈ ರೋಗಿ ಸತ್ತಿರೋ ಹಾಗಿದೆ...

ರೋಗಿ : ಇಲ್ಲಾ ಬದುಕಿದೀನಿ....

ನರ್ಸ್: ಸುಮ್ನೆ ಮಲ್ಕೋ...ಡಾಕ್ಟರಿಗಿಂತ ನಿನಗೇನು ಮಹಾ ಗೊತ್ತು??

__________________________________________________ _________

" ಐದು ನಿಮಿಷ ಆಗಿಲ್ಲ...ಇಷ್ಟು ಪಾತ್ರೆ ತೊಳೆದಾಯ್ತಾ? ಅದಕ್ಕೆ ಮುಸುರೆ ಎಲ್ಲಾ ಹಂಗೇ ಇದೆ...

" ಮೊದಲಿದ್ದ ಕಡೆ ಇದರ ನಾಕ್ರಷ್ಟು ತೊಳೆದ್ ಹಾಕ್ತಿದ್ದೆ...ಅದ್ರೂ ಅವ್ರ್*ಏನೂ ಹೇಳ್ತಿರಲಿಲ್ಲ...

" ಎಲ್ಲಿ ಮಾಡ್ತಿದ್ದೆ??"

" ಹೋಟ್ಲಲ್ಲಿ!!"

__________________________________________________ __________

ಬಸ್ ಕಂಡಕ್ಟರ್ ನ ಪತ್ನಿ ಹೊಸ ಮನೆಯ ಗೃಹಪ್ರವೇಶ ಸಮಾರಂಭವ ವೇಳೆ ಹೊರಗೆ ಜಮಾಯಿಸಿದ ತನ್ನ
ಸ್ನೇಹಿತೆಯರಿಗೆ ಏನಂತಾಳೆ???

" ಒಳಗೆ ಬನ್ನಿ...ಮುಂದೆ ಬಹಳ ಜಾಗವಿದೆ...ಹೊರಗಡೆ ಮೆಟ್ಟಿಲಲ್ಲಿ ನೇತಾಡಬೇಡಿ!"
__________________________________________________ _________

ಗಿರಾಕಿ: ಏನಪ್ಪಾ? ಈ ಉಪ್ಪಿಟ್ಟಿನಲ್ಲಿ ಹುಲ್ಲಿನ ಕಡ್ಡಿ...ಮೆಣಸಿನ ತೊಟ್ಟು...ಈರುಳ್ಳಿ ಸಿಪ್ಪೆ ಇದೆಯಲ್ಲಾ?
ಇದಕ್ಕೆಲ್ಲಾ ನಾನು ಹಣ ಕೊಟ್ಟಿಲ್ಲವಲ್ಲ...

ಮಾಣಿ: ಪರವಾಗಿಲ್ಲ ಸಾರ್...ಅದರ ಹಣ ನಾವು ಕೊಟ್ಟಿದ್ದೀವಿ!

******************************************************
ಸೋಮು: " ಇಷ್ಟು ಕಡಿಮೆ ದರದಲ್ಲಿ ವಾಚು ಮಾರಿದ್ರೆ ನಿಮ್ಗೆ ಏನು ಗಿಟ್ಟುತ್ತೇಂತ??!

ಅಂಗಡಿಯವ : ರಿಪೇರಿಯಲ್ಲಿ ಮತ್ತೇ ವಾಪಸ್ ಬರುತ್ತಲ್ಲಾ ಸಾರ್!

__________________________________________________ _____________

ಇಬ್ಬರು ಮುದುಕರು ಪಾರ್ಕಿನಲ್ಲಿ ಮಾತನಾಡುತ್ತಿದ್ದರು....

" ನಿಮ್ಮ ಬಾಲ್ಯದ ಯಾವುದಾದರೂ ಅಭಿಲಾಷೆ ಪೂರ್ತಿಯಾಗಿದೆಯೋ??"

" ಹೌದು ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಮಾಸ್ತರರು ನನ್ನ ತಲೆಕೂದಲನ್ನು ಹಿಡಿದು
ಅಲ್ಲಾಡಿಸುತ್ತಿದ್ದಾಗ...' ನನ್ನ ತಲೆಯಲ್ಲಿ ಕೂದಲೇ ಇಲ್ಲದಿದ್ದರೆ ಎಷ್ಟು ಚೆನ್ನಾಗಿರ್*ತಾಯಿತ್ತು' ಎಂದು
ಯೋಚಿಸುತ್ತಿದ್ದೆ....ಅ ಬಯಕೆ ಈಗ ಈಡೇರಿದೆ!!.....


__________________________________________________ __________

ಗಿರಾಕಿ: ಏನಯ್ಯಾ, ಸಾಂಬಾರಿನಲ್ಲಿ ಕೂದಲಿದೆಯಲ್ಲಾ?

ಮಾಣಿ: ಬಿಳಿದೋ...ಕರಿದೋ ಸಾರ್?

ಗಿರಾಕಿ: ಯಾವುದಾದ್ರೆ ಏನು?

ಮಾಣಿ: ಹಾಗಲ್ಲ...ಬಿಳಿದಾದ್ರೆ ನಮ್ಮ ಅಡುಗೆ ಭಟ್ಟಂದು....ಕರಿದಾದ್ರೆ ಪಾತ್ರೆ ತೊಳೆಯೋಳ್ದು!!
__________________________________________________ ___________

ಶ್ರೀಮಂತರ ಮನೆಯಲ್ಲಿ ಗುಂಡು ಪಾರ್ಟಿ ನಡೆಯುತ್ತಿತ್ತು...ಗಂಡು ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ
ಕುಡಿಯುತ್ತಿದ್ದರು...ಒಬ್ಬ ಮಹಿಳಾಮಣಿ ತನ್ನ ಗಂಡನಿಗೆ ಹೇಳಿದಳು....

" ನಾನು ಆಗ್ಲಿಂದ ನೋಡ್ತಾನೆ ಇದಿನೀ...ಎಷ್ಟು ಕುಡಿಯೋದು? ಸಾಕು ಮಾಡಿ...ನೋಡಿದವರು ಏನಂದುಕೊಂಡಾರು?

ಈಗಾಗ್ಲೆ ನಿಮ್ಮ ತಲೆ ನನಗೆ ಎರಡೆರಡು ಕಾಣ್ತಿದೆ!!"
__________________________________________________ ___________

ಹೆಂಡತಿ ( ಗಂಡನಿಗೆ) : ನೀವು ಜೀವನದಲ್ಲಿ ಸ್ವಲ್ಪ ಧೈರ್ಯದಿಂದರಬೇಕು....ಅಕಸ್ಮಾತ್ ನಮ್ಮ ಮನೆಗೆ

ಕಳ್ಳ ನುಗ್ಗಿದರೆ ಏನು ಮಾಡುತ್ತೀರಿ??

ಗಂಡ: ಮಾಡೋದೇನು? ಕಳ್ಳ ಹೇಳಿದಂತೆ ಇದ್ದು ಬಿಡ್ತೀನಿ...ಈ ಮನೆಯಲ್ಲಿ ನನ್ನ ಮಾತು ಎಲ್ಲಿ ನಡೆಯುತ್ತೆ??


__________________________________________________ __________

ಪತ್ನಿ: " ರೀ...ಸೈಂಟಿಸ್ಟ್ ಗಳು ಹೇಳಿದ್ದಾರೆ...ಮನುಷ್ಯ ದಿನವೊಂದಕ್ಕೆ ಸರಾಸರಿ ಐದು ಸಾವಿರ

ಪದಗಳನ್ನು ಮಾತಾಡ್ತಾನಂತೆ...


ಪತಿ: " ಅದು ಬರೀ ಸುಳ್ಳು...ಮನುಷ್ಯ ಮಾತನಾಡೋದು ಕೇವಲ ಒಂದು ಸಾವಿರ ಪದಗಳನ್ನು ಮಾತ್ರ...ಬಹುಷಃ ಅವರು ನಿನ್ನ ಮತ್ತ ನಿಮ್ಮ ಅಮ್ಮ ನ ಮಾತು ಕೇಳಿಸ್ಕೊಂಡಿರಬೇಕು.!!"

__________________________________________________ ___________

"ಅಪ್ಪಾ....ನೀನೀಗ ನಂಗೆ ಐಸ್ ಕ್ರೀಂ ಕೊಡಸಿಲ್ಲಾ ಅಂದ್ರೆ ನೋಡು..."

" ಏನ್ಮಾಡ್ತೀಯಾ??"

" ಕಂಡಕ್ಟರ್ ಅಂಕಲ್ ಗೆ ನನ್ನ ನಿಜವಾದ ವಯಸ್ಸು ಹೇಳಿಬಿಡ್ತೀನಿ..!! "

********************************************************

ಗಾಳಿಯಂತ್ರಗಳನ್ನು ಎಂದೂ ಕಾಣದ ವ್ಯಕ್ತಿಯೊಬ್ಬ ಅವುಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲದಿಂದ

ಅಲ್ಲೇ ದನ ಮೇಯಿಸುತ್ತಿದ್ದ ಹುಡುಗನಿಗೆ ಅವು ಏನೆಂದು ಕೇಳಿದ-


ಹುಡುಗ......" ಅವೇ?....ಅವು ನಮ್ಮ ದನಗಳ ಮೈಮೇಲೆ ಕುಳಿತುಕೊಳ್ಳುವ ನೊಣಗಳನ್ನು ಜಾಡಿಸುವ ಫ್ಯಾನ್ ಗಳು!!."

__________________________________________________

ತುಂಬಾ ಹತಾಶ ಸ್ಥಿತಿಯಲ್ಲಿ ಬಾರನ್ನು ಪ್ರವೇಶಿಸಿದ ವ್ಯಕ್ತಿಯೊಬ್ಬ ಬಾರ್ ಮ್ಯಾನೇಜರ್ ಗೆ ಹೇಳಿದ-

" ಬೇಗನೇ ಒಂದು ಕ್ವಾರ್ಟರ್ ವಿಸ್ಕಿ ಕೊಡಿ....ಕುಡಿದು ನನ್ನ ದುಃಖ ಮರೆಯುತ್ತೇನೆ..."


ಆಗಲಿ....ಆದರೆ ಬಿಲ್ಲನ್ನು ಮೊದಲೇ ಕೊಟ್ಟುಬಿಡು...ನಿನ್ನ ದುಃಖದೊಂದಿಗೆ ನನ್ನ ಬಿಲ್ಲನ್ನು ಮರೆತು ಬಿಟ್ಟರೇ ನಾನೇನು ಮಾಡಲಿ??"


__________________________________________________

ಸೋಮೇಶ್ವರ ಶತಕ ದ ಬಗ್ಗೆ ನಿಮಗೇನು ಗೊತ್ತು??


" ಅದೇನು ಬಿಡಿ ಸಾರ್....! ತೆಂಡೂಲ್ಕರ್ ಶತಕ...ದ್ರಾವಿಡ್ ಶತಕ...ಅದೇ ರೀತಿ ಸೋಮೇಶ್ವರ ಎಂಬ
ಬ್ಯಾಟ್ಸ್ ಮನ್ ಹೊಡೆದಿರೋ ಒಂದು ಶತಕ...!

_________________________________________________


ಮನೆಗೆ ಯಾರೋ ಗೆಸ್ಟ್ ಬಂದಿದ್ದಾರೆ ಅನ್ಸುತ್ತೆ...

" ಹೇಗೆ ಹೇಳ್ತೀಯಾ??"

" ಅಪ್ಪ ಹೇಳ್ತಾ ಇರೋ ಜೋಕಿಗೆ ಅಮ್ಮ ಜೋರಾಗಿ ನಗ್ತಾ ಇರೋದು ಕೇಳಿಸ್ತಾ ಇದೆ ನೋಡು...!"

__________________________________________________

ಗಂಡ ಹೆಂಡತಿಯ ಜಂಟಿ ಖಾತೆ ಬ್ಯಾಂಕಿನಲ್ಲಿತ್ತು....ಗಂಡ ತೀರಿಕೊಂಡ ಒಂದು ತಿಂಗಳ ಮೇಲೆ ಹೆಂಡತಿ

ಬ್ಯಾಂಕಿಗೆ ಹೋಗಿ ಖಾತೆಯನ್ನು ಒಬ್ಬರ ಹೆಸರಿನಲ್ಲೇ ಇರಿಸಲು ಕೇಳಿಕೊಂಡಳು....

ಬ್ಯಾಂಕಿನ ಕ್ಲರ್ಕ್ ಖಾತೆಯನ್ನು ನೋಡಿ ಪ್ರಶ್ನಿಸಿದ....


"ನಿಮ್ಮಲ್ಲಿ ಯಾರು ತೀರಿ ಹೋದದ್ದು???"


__________________________________________________

ನಮ್ಮ ಕಡೆ ಏನ್ಮಾಡ್ತಾರೆ ಅಂದ್ರೆ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗಲು ರಸ್ತೆ ಮಾಡಬೇಕಾದರೆ...ಮೊದಲು ಒಂದು ವಯಸ್ಸಾದ ಕತ್ತೆಯನ್ನು ಬಿಟ್ಟುಬಿಡುತ್ತಾರೆ....ಅದು ಹತ್ತಿರದ ದಾರಿಯನ್ನು ಹುಡುಕಿಕೊಂಡು ಮತ್ತೊಂದು ಹಳ್ಳಿಗೆ ಹೋಗುತ್ತದೆ....ಅಲ್ಲೇ ರಸ್ತೆ ನಿರ್ಮಾಣ ಮಾಡುತ್ತಾರೆ.." ಎಂದು ಒಬ್ಬ ಹಳ್ಳಿಯವ ಪಟ್ಟಣದಿಂದ ಬಂದ ಇಂಜನಿಯರ್ ಗೆ ತಮ್ಮ ಹಳೆಯ ಪದ್ಧತಿಯನ್ನು ವಿವರಿಸಿದ.....


" ಒಂದು ವೇಳೆ ಕತ್ತೆ ಸಿಗದೇ ಹೋದ್ರೆ ಏನ್ಮಾಡ್ತೀರಿ??" ಇಂಜನಿಯರ್ ಕೇಳಿದ....

" ಆಗ ಇಂಜನಿಯರ್ ಅವರನ್ನು ಕರೀತೀವಿ"

****************************************************

ಈ ಸನ್ಯಾಸಿ ಏನು ಇಷ್ಟೋಂದು ಶ್ರೀಮಂತರ ಹಾಗೆ ಕಾಣಿಸುತ್ತಾರಲ್ಲ..! ಏನಾದ್ರೂ ಸೈಡ್ ಬಿಸಿನೆಸ್ ಮಾಡ್ತಾರ??


"ಭಕ್ತರು ಹೇಳಿಕೊಳ್ಳುವ ಕಷ್ಟಗಳನ್ನು ಹಾಗೆಯೇ ಬರೆದು, ಮೆಗಾ ಸೀರಿಯಲ್ ಡೈರೆಕ್ಟರ್ ಗೆ ಮಾರಿಬಿಡ್ತಾರಂತೆ!!

__________________________________________________ __________


ರಮೇಶ್, ನಾವಿಬ್ಬರೂ ಬೇರೆ ಬೇರೆ ಆಗೋಣವೇ?

ಏಕೆ?....ನಾವು ಪ್ರೀತಿಸ್ತಿರೋದು ನಿಮ್ಮ ಮನೆಯವರಿಗೆ ಗೊತ್ತಾಗಿಹೋಯ್ತಾ???

ಹೌದು...ಗೊತ್ತಾಗಿದ್ದರಿಂದ ನಮ್ಮ ಮನೆಯಲ್ಲಿ ಬೇರೆ ಗಂಡನ್ನೇ ನೋಡುವುದಿಲ್ಲವೆಂದು ಹೇಳುತ್ತಿದ್ದಾರೆ..!!

__________________________________________________ __________

ಏನೋ ಅದು! ಛತ್ರದಲ್ಲಿ ಅಷ್ಟು ದೊಡ್ಡ ಗಲಾಟೆ, ಏನಾಗಿದೆ ಅಲ್ಲಿ....??

ಹೇ..ಏನಿಲ್ಲಾ...ಊಟ ಸರಿಯಿಲ್ವಂತೆ, ಅದ್ಕೆ ಮುಯ್ಯಿ ದುಡ್ಡು ವಾಪಸ್ ಕೊಡು ಅಂತ ಗಲಾಟೆ ಮಾಡ್ತಾವ್ನೆ...!!

__________________________________________________ ______________

ಟೇಸನ್ಗೆ ಬಂದಿರೋ ಆ ಹೊಸ ಸರ್ಕಲ್ ಹೆಂಗ್ ಗುರು??"

ಅದ್ಯಾಕ್ಕೇಳ್ತೀಯಾ! ಕಳ್ತನಕ್ ಹೋಗೊಕ್ ಮುಂಚೇ ಟೇಸನ್ಗೋಗಿ ಸೈನಾಗ್ಬೇಕು, ಬಂದ್ಮೇಲ್ ಕೂಡಾ, ಮಾಮೂಲ್ ಜೊತ್ಗೆ
ಫುಲ್ ಬಾಟ್ಲ್ ಬೇರ್*ಎ ಕಣಣ್ಣ...!


__________________________________________________ ______________

ಏನಯ್ಯಾ??.... ಅದು ಪೋಲೀಸ್ ಸ್ಟೇಶನ್ ನಲ್ಲಿ ಜನ್ರು ಸುಮ್ನೆ ನಿಂತವ್ರೆ, ಪೋಲೀಸ್ನೋರು ಕಿತ್ತಾಡ್ತಿದ್ದಾರೆ??

ಅಲ್ಲಿ ಯಾರೋ ಲವರ್*ಸ್*ಗೆ ಮದ್ವೆ ಮಾಡಿದ್ದಾರಂತೆ...ಮುಯ್ಯಿ ಕವರ್ ಗಳನ್ನು ಯಾರ್ ತಗೋಬೇಕು ಅಂತಾ....!!

__________________________________________________ _____________

ಜೋರಾಗ್ ಓಡ್ದ್ರೆ ಏದುಸ್ರು ಜಾಸ್ತಿ ಬರ್*ತದೆ ಡಾಕ್ಟ್ರೇ...!

ಹಾಗಾದ್ರೆ ನಿಧಾನವಾಗಿ ಓಡು..."

"ಪಿಕ್ ಪ್ಯಾಕೆಟ್ ಮಾಡ್ಬುಟ್ಟು ನಿಧಾನವಾಗೋಡಿದ್ರೆ ಹಿಡ್ಕೊಂಡಬುಡ್ತಾರಲ್ಲ .ಡಾಕ್ಟ್ರೇ...!
__________________________________________________ _____________

ಹೋಟೆಲ್ಗೆ ಹೋಗಿದ್ದ ಗುಂಡಾ ಕುಡಿಯಲು ಬಿಸಿ ನೀರು ಕೇಳಿದ್ದ....ಮಾಣಿ ಬೆರಳು ಅದ್ದಿ ತಂದಿಟ್ಟದ್ದನ್ನು ಕಂಡು..

" ಹಾಗೆ, ಕೈ ಬೆರಳುಗಳನ್ನು ಅದ್ದಿ ಯಾರದ್ರೂ ನೀರು ತರುತ್ತಾರೆಯೇ???"

" ಪರವಾಗಿಲ್ಲ ಬಿಡಿ ಸರ್, ನೀರು ಅಷ್ಟೇನು ಬಿಸಿಯಿರಲಿಲ್ಲ...!!

__________________________________________________ ___________

" ನನ್ನ ಹೆಂಡತಿ ಕಣ್ಣಿಗೆ ಧೂಳು ಬಿದ್ದು... ...ಡಾಕ್ಟ್ರ ಹತ್ತಿರ ಹೋಗಿದ್ದೆ....300ರುಪಾಯಿ ಖರ್ಚಾಯ್ತು!

" ಹೌದೇ....ಪರವಾಗಿಲ್ಲ..ನೀವೇ ಅದೃಷ್ಟವಂತರು...ನನ್ನ ಹೆಂಡತಿ ಕಣ್ಣಿಗೆ ಒಂದು ರೇಷ್ಮೆ ಸೀರೆ ಬಿದ್ದು
3000 ಖರ್ಚಾಯ್ತು..!!

*****************************************************

ಕಿಟಕಿಗಳನ್ನು ತೆರಿದಿಟ್ಟು ಮಲಗಿದ್ದೀರಾ ತಾನೆ??


ಹೂಂ....

ಈಗ ಉಬ್ಬಸ ಮಾಯವಾಗಿರಬೇಕು....

ಹೌದು...ಅದರ ಜೊತೆಗೆ ಗಡಿಯಾರ, ಪರ್ಸು, ಕನ್ನಡಕ ಎಲ್ಲಾ ಮಾಯವಾಗಿದೆ..!

__________________________________________________ ______________

ಏನು? ಇವತ್ತು ದಿಢೀರ್ ಅಂತ ಸ್ವೀಟ್ಸ್??

ಇವತ್ತೇ ನಾನು ಮೊದಲ ಬಾರಿಗೆ ನಿಮ್ಮ ತಾಯಿಯ ಜೊತೆ ಜಗಳವಾಡಿ ಗೆದ್ದದ್ದು...ಅದಕ್ಕೆ....!


__________________________________________________ _____________

ವರ ಪೂಜೆಗೆ ಹುಡಗನಿಗೆ ಏನು ಕೊಡಬೇಕು???


" ಜಾಮೀನು ಕೊಡಿಸಿ ಬಿಡಿ ಸಾಕು...... !!"

__________________________________________________ ______________

ಮೋಬೈಲ್ ಮತ್ತು ಮದುವೆ ಇವರೆಡರ ಸಾಮ್ಯತೆ ಏನು??

ಮೋಬೈಲ್ ಖರೀದಿಸಿದ ವ್ಯಕ್ತಿ ಮತ್ತು ಮದುವೆಯಾದ ವ್ಯಕ್ತಿ ಒಂದೇ ಮಾತನ್ನು ಹೇಳುತ್ತಾರೆ...." ಅಯ್ಯೋ...ಇನ್ನೂ ಸ್ವಲ್ಪ ದಿನ ತಡೆದಿದ್ದರೆ ಇದಕ್ಕಿಂತಲೂ ಉತ್ತಮವಾದ ಮಾಡೆಲ್ ಸಿಕ್ಕುತ್ತಿತ್ತೋ ಏನೋ....!'

__________________________________________________ ___________

ಸರ್ದಾರ್ಜಿ 3ನೆಯ ಮಹಡಿಯಲ್ಲಿ ವಾಸಿಸುತ್ತಿದ್ದ....ಒಂದು ದಿನ ಜಾರಿ ಬಿದ್ದು ಕಾಲು ಮುರಿದುಕೊಂಡ...ವೈದ್ಯರು
ಅವನಿಗೆ ಪಟ್ಟಿ ಕಟ್ಟಿ ಮೆಟ್ಟಿಲುಗಳನ್ನು ಹತ್ತಬಾರದೆಂದು ಎಚ್ಚರಿಕೆ ಕೊಟ್ಟರು.....

ಎರಡು ತಿಂಗಳಾದ ಮೇಲೆ ಪಟ್ಟಿ ಬಿಚ್ಚಿದರು ವೈದ್ಯರು....

"ನಾನೀಗ ಮೆಟ್ಟಿಲುಗಳನ್ನು ಹತ್ತಬಹುದೇ...??"

" ಓಹೋ...ಧಾರಾಳವಾಗಿ...."

" ಸದ್ಯ ದೇವರ ದಯೆ..."

" ಸ್ವಲ್ಪ ನಿಧಾನವಾದರೂ ನಿಮ್ಮ ಕಾಲು ಈಗ ಸರಿಯಾಗಿದೆ....."

"ನನಗಂತೂ ನೀರಿನ ಪೈಪು ಹಿಡಿದುಕೊಂಡು ಹತ್ತುವುದೂ, ಇಳಿಯುವುದೂ ಮಾಡಿ ಸಾಕಾಗಿ
ಹೋಗಿತ್ತು...!"

********************************************************************
ಒಬ್ಬ ಬ್ರಿಟಿಷ್ ಹಾಗೂ ಇನ್ನೊಬ್ಬ ಭಾರತೀಯರ ನಡುವೆ ವಾದ ವಿವಾದ ನಡೆದಿತ್ತು.

ಬ್ರಿಟಿಷ್ ಹೇಳಿದ, " ನಾವು ನಿಮ್ಮ ದೇಶವನ್ನು ಎರಡು ನೂರು ವರ್ಷಗಳ ಕಾಲ ಹಾಳು ಮಾಡಿದೆವು".

"ಅದೇನು ಮಹಾ...ನಾವು ನಿಮ್ಮ ಭಾಷೆಯನ್ನು ಇನ್ನೂ ಹಾಳು ಮಾಡುತ್ತಲೇ ಇದ್ದೇವೆ"....ಭಾರತೀಯನೆಂದ.

__________________________________________________


ಪತಿ: ಹೋಟೆಲ್ ಮ್ಯಾನೇಜರನನ್ನು ಕುರಿತು " ಬೇಗ ಬಾ...ನನ್ನ ಪತ್ನಿ ಕಿಟಕಿಯಿಂದ ಹಾರಿ ಆತ್ಮಹತ್ಯೆ
ಮಾಡಿಕೊಳ್ಳಬೇಕೆನ್ನುತ್ತಿದ್ದಾಳೆ...

ಮ್ಯಾನೇಜರ್: ಅದಕ್ಕೆ ನಾನು ಬಂದು ಮಾಡಬೇಕಾಗಿರುವುದೇನು??

ಪತಿ: ಮೂರ್ಖ ಕಿಟಕಿಯ ಬೋಲ್ಟ್ ತೆಗೆಯುತ್ತಿಲ್ಲ...ಬಂದು ಸ್ವಲ್ಪ ಸಹಾಯ ಮಾಡು!

__________________________________________________ ______


ಗರ್ಲ್ಸ್ ಹಾಸ್ಟೆಲ್ ಕಡೆ ಸುಳಿದರೆ ಮೊದಲನೆ ಬಾರಿಗೆ 100 ರೂಪಾಯಿ ದಂಡ, ಎರಡನೆ ಬಾರಿಗೆ 200 ರೂಪಾಯಿ ದಂಡ, ಮೂರನೇ ಬಾರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ಪ್ರಿನ್ಸಿಪಾಲರು ವಿದ್ಯಾರ್ಥಿಗಳಿಗೆ ಹೇಳಿದರು...


ಕೊನೆ ಬೆಂಚಿನಿಂದ ಒಂದು ಸ್ವರ ತೂರಿ ಬಂತು..." ತಿಂಗಳ ಪಾಸ್ ಗೆ ಎಷ್ಟು ಸಾರ್??

__________________________________________________ ________


ಬೋರ್ಡ್ ಮೇಲೆ ಹೀಗೆ ಬರೆದಿತ್ತು..." ಬರೆದವನು ಜಾಣ, ಓದಿದವನು ಕತ್ತೆ!". ಅದನ್ನು ಓದಿದ ಒಬ್ಬ ಸರ್ದಾರ್ಜಿಗೆ ತುಂಬಾ ಕೋಪ ಬಂತು...ಅವನು ಮೊದಲು ಬರೆದುದನ್ನು ಅಳಿಸಿ ಹೀಗೆ ಬರೆದ - ಬರೆದವನು ಕತ್ತೆ...ಓದಿದವನು ಜಾಣ"


__________________________________________________ ___

ಅಪ್ಪ: ಕ್ಯಾಲೆಂಡರ್ ನೋಡಿ ಸಂಡೆ ಯಾವತ್ತು ಬರುತ್ತೆ ಹೇಳೊ...

ಮಗ: ಭಾನುವಾರ ಬರುತ್ತೆ!!

__________________________________________________ ______

ಅಪ್ಪ: ನನ್ನ ಮಗ ಇಸ್ಪೀಟ್ ಕಿಂಗ್ ಆಗ್ತಾನೆ ಅಂತ ಹೇಗೆ ಹೇಳುತ್ತೀರಾ??

ಮಿಸ್: ಹತ್ತು ಆದ ಮೇಲೆ...ಜೆ...ಕೆ...ಕ್ಯೂ ಅಂತಾನೆ!!

__________________________________________________ ______

ಲೇ ಪಂಕಜ....ಇದೇನೇ ಈ ವಯಸ್ಸಿನಲ್ಲಿ ತೆಲುಗು ಕಲೀತಾ ಇದ್ದೀಯಾ??

ಮತ್ತೇನು ಮಾಡಲೇ ಜಲಜ...ಪಕ್ಕದ ಮನೆಗೆ ಬಂದಿರೋರು ತೆಲುಗಿನಲ್ಲಿ ಜಗಳ ಮಾಡ್ತಿರ್ತಾರೆ ಅದಿಕ್ಕೆ!!

__________________________________________________ ________

ಸಾರ್! ಈ ಮಿಷನ್ ನೋಡಿ...ನಿಮ್ಮ ಹತ್ತಿರ ಯಾರೇ ಸುಳ್ಳು ಹೇಳಿದರೆ ಕಂಡು ಹಿಡಿದುಬಿಡುತ್ತದೆ..!

ಬೇಡಾಪ್ಪ! 30 ವರ್ಷಗಳಿಂದ ಅದರೊಂದಿಗೆ ನಾನು ಸಂಸಾರ ಮಾಡುತ್ತಿದ್ದೇನೆ...

__________________________________________________ ___________

ವಿಮ್ಮಿ: ಡಾಕ್ಟ್ರೇ, ನೋಡಿ ನಮ್ಮೆಜಮಾನರಿಗೆ...ಈಗೀಗ..ಏನನ್ನಾದರೂ ಎದುರಿಸುವ ಶಕ್ತಿ ಕಡಿಮೆಯಾಗಿದ್ಯಾ ಅಂತ
ಅನುಮಾನ ನನಗೆ...

ಡಾಕ್ಟ್ರು.: ಯಾಕಮ್ಮ ಆ ರೀತಿಯ ಅನುಮಾನ??

ವಿಮ್ಮಿ: ಮೊದಲೆಲ್ಲ....ದೊಡ್ಡ ದೊಡ್ಡ ಪಾತ್ರೆ ಪಡಗ ಮೇಲೆ ಎಸೆದರೂ ತಡ್ಕೋತಾ ಇದ್ರು...ಈಗೀಗ ಒಂದು ಸಣ್ಣ ಲೋಟ ಎಸೆದರೂ ತುಂಬಾ ನರಳಾಡುತ್ತಾರೆ!!

************************************************************

ಸೋಮ: "ಪೋಸ್ಟ್ ಮ್ಯಾನ್" ಜೊತೆ ಜಗಳವ್ಯಾಕೆ??

ರಾಮ: ಮತ್ತಿನ್ನೇನು? ನನ್ನ ಕಥೆ, ಕವಿತೆ ವಾಪಸ್ ಬಂದಾಗೆಲ್ಲಾ
"ಪೋಸ್ಟ್" ಎಂದು ಕೂಗುವ ಬದಲು "ವೇಸ್ಟ್" ಅಂತ ಕೂಗುತ್ತಾನೆ..!


*************************************************************

ಶೀಲಾ: ಕೆಲಸದವಳ ಮೇಲೆ ಅನುಮಾನ ಬರುತ್ತಿದೆ..

ಮಾಲ: ಯಾಕೆ?

ಶೀಲಾ: ನೆನ್ನೆಯವರೆಗೆ ಅಮ್ಮಾವ್ರೇ ಅನ್ನುತ್ತಿದ್ದವಳು ಇಂದು "ಅಕ್ಕಾ" ಅಂತಿದ್ದಾಳೆ..!!

***************************************************************

ಸೀಮಾ: "ಅಜ್ಜಿ, ನಿಂಗೆ ಕೋಡುಬಳೆ ತಿನ್ನಲಿಕ್ಕಾಗುತ್ತಾ??"

ಅಜ್ಜಿ: "ನಂಗೆ ಹಲ್ಲಿಲ್ಲ, ಹೇಗೆ ತಿನ್ನಲಿ?"

ಸೀಮಾ: ಹಾಗದ್ರೆ ಈ ಕೋಡುಬಳೆಗಳು ನಿನ್ನ ಹತ್ರ ಇರ್ಲಿ, ನಾನು ಆಟ ಆಡ್ಕೊಂಡು ಬರ್ತೀನಿ..!

*****************************************************************

ಹುಚ್ಚಾಸ್ಪತ್ರೆಯಲ್ಲಿ ಹುಚ್ಚನೊಬ್ಬ ಕಾಗದ ಬರೆಯುತ್ತಿದ್ದ, ಇನ್ನೊಬ್ಬ ಹುಚ್ಚ ಕೇಳಿದ...

" ಏನು ಮಾಡ್ತಿದ್ದಿ??"

" ಕಾಗದ ಬರೀತಾ ಇದ್ದೀನಿ."

" ಯಾರಿಗೆ??"

" ನನಗೆ..!"

"ಹೌದಾ? ಏನು ಬರ್*ಕೋತಾಯಿದ್ದೀಯಾ??"

" ನಂಗೇನು ಗೊತ್ತು? ಕಾಗದ ಬಂದ ಮೇಲೆ ಗೊತ್ತಾಗುತ್ತೆ..!"

**************************************************************

ಸಂದರ್ಶಕ: ನಿಮ್ಮ ಆದರ್ಶ ದಾಂಪತ್ಯದ ಗುಟ್ಟೇನು??

ಶ್ರೀಪತಿ: ನನಗೆ ಬಿಸಿನೀರು ಬೇಕಾದಾಗ ತಣ್ಣೀರು ಕೇಳ್ತೀನಿ..!

***************************************************************

ಆ ಅಂಗಡಿಯಲ್ಲಿ ಕಳ್ಳ ವಿ.ಸಿ.ಡಿ ಗಳು ಇವೆ ಅಂತ ದೂರು ಬಂದಿದೆ, ಹೋಗಿ ನೋಡ್ಕೊಂಡು ಬಂದ್ಯಾ??


ನೋಡಿ ಬಂದೆ ಸಾರ್, ಪ್ರಿಂಟ್ಸ್ ಏನೂ ಅಷ್ಟು ಚೆನ್ನಾಗಿಲ್ಲ..!!

* * * * * * * * ** * * * * * *


ಮಿಸ್: ಮಕ್ಕಳೇ...ಒಂದು ಮಾತು ನೆನಪಿನಲ್ಲಿ ಇಟ್ಟುಕೊಳ್ಳಿ, ಒಗ್ಗಟ್ಟಿನಲ್ಲಿ ಬಲವಿದೆ. ನೀವೆಲ್ಲಾ ಒಟ್ಟಾಗಿ ಏನಾದರೂ ಕೆಲಸ ಮಾಡಿದರೆ, ಖಂಡಿತ ಸಕ್ಸಸ್ ಆಗ್ತೀರಾ...

ಮಕ್ಕಳು: O K ಮಿಸ್, ಹಾಗೇ ಆಗ್ಲಿ, ಈ ಸಲ ಪರೀಕ್ಷೆಯಲ್ಲಿ ನಾವೆಲ್ಲ ಒಂದೇ ಕಡೆ, ಒಟ್ಟಾಗಿ ಕೂತು ಉತ್ತರಗಳನ್ನು ಬರೀತೀವಿ..!


* * * * * * * * *


ಇಂಟರ್ ವ್ಯೂ ರೂಮ್ ನಲ್ಲಿ: ಎನ್ರೀ? ಎಷ್ಟು ಪ್ರಶ್ನೆ ಕೇಳಿದ್ರೂ ನೀವು ಯಾವುದಕ್ಕೂ ಉತ್ತರಿಸುತ್ತಾ ಇಲ್ಲ? ಸುಮ್ಮನೆ

ಮುಗುಳ್ನಗ್ತೀರಾ...ಯಾಕೆ?

ಅಭ್ಯರ್ಥಿ: ಸರ್, ನಮ್ಮ ಮೇಸ್ಟ್ರು ಹೇಳ್ತಾ ಇದ್ರು, ಮೌನವೇ ಆಭರಣ, ಮುಗುಳ್ನಗೆ ಶಶಿಕಿರಣ ಅಂತಾ..!

* * * * * * * * *


ಆಫೀಸಲ್ಲಿ ಲಂಚ ತೊಗೊಂಡೂ....ತೊಗೊಂಡೂ.....

ಮುಂದೆ ಹೇಳಯ್ಯಾ.......

ಸಂಬಳ ತೊಗೋಬೇಕಾದ್ರೆ ನನಗೆಷ್ಟು ಕಡಿಮೆ ಎಂದೆನಿಸಿ ಅಳು ಬರುತ್ತೆ...ಅದೂ ತಿಂಗಳಿಗೊಂದು ಸಲ.....

* * * * * * * * *


ಮನೆಗೆ ಬಂದ ಅಥಿತಿಗಳು ಹತ್ತು ನಿಮಿಷದಲ್ಲೇ ಹೊರಡಲು ತಯಾರಾದರು.....ಅದನ್ನು ಕಂಡ ರಂಗ---

ಇನ್ನೊಂದು ಸ್ವಲ್ಪ ಹೊತ್ತು ಕೂತ್ಕೊಂಡಿದ್ರೆ...ಚೆನ್ನಾಗಿರ್ತಿತ್ತು.....ಇರಿ, ಕಾಫಿ ಕುಡ್ಕೊಂಡು ಹೋಗೋರಂತೆ...

ಬೇಡ...ಬೇಡ....ನಮಗೆ ಟೈಂ ಇಲ್ಲ....ಕಾಫಿ ಬದ್ಲಾಗಿ ಅದರ ಚಾರ್ಜು 10 ರೂಪಾಯಿ ಕೊಟ್ಬಿಡಿ...ನಾವು ಹೊರಗಡೆ ಕುಡ್ಕೋತೀವಿ...


* * * * * * * * *

ಗಂಡ ಹೆಂಡತಿಯೊಡನೆ ಮಾತನಾಡುತ್ತಾ ಹೇಳಿದ : " ಅವರವರ ಮಕ್ಕಳು ಅವರವರಿಗೆ ಚಂದ...ಅನ್ಯರ ಹೆಂಡಿರು
ಇನ್ನೂ ಚೆಂದ.." ಅಂತಾ ಒಂದು ಗಾದೆ ಮಾತಿದೆ ಗೊತ್ತಾ??

ಹೆಂಡತಿ: ಹೌದೇನ್ರೀ?? ನಂಗೆ ಗೊತ್ತಿರಲಿಲ್ಲ...ಅಂದ್ರೇ ...ಪಕ್ಕದ್ಮನೆ ಪರಮೇಶಿ ಕಣ್ಗೆ ನಾನು ಚಂದ ಅನ್ನಿ..!!

*************************************************************

ಗಂಡ : ಕಾಲಿನ ಮೇಲೆ ಸ್ಕೂಟರ್ ಹೋಯ್ತು ಕಣೆ! ಅದ್ಕೆ ಮನೆಗೆ ಬರೋಕೆ ಎರಡು ಗಂಟೆ ತಡವಾಯ್ತು...

ಹೆಂಡತಿ: ಓಹೋ! ಎರಡು ಗಂಟೆಯಿಂದ ಸ್ಕೂಟರ್ ಕಾಲ ಮೇಲೆಯೇ ಹೋಗುತ್ತಿತ್ತಾ??!

* * * * * * * * *


ಒಂದು ಸ್ಕೂಟರ್ ನಲ್ಲಿ ಒಮ್ಮೆ 3 ಸರ್ದಾರ್ ಜಿಗಳು ಹೋಗುತ್ತಿದ್ದರು. ಟ್ರಾಫಿಕ್ ಪೊಲೀಸ್ ಕೈ ಮಾಡಿ ಸ್ಕೂಟರ್ ನಿಲ್ಲಿಸಲು ಹೇಳಿದ...

ಒಬ್ಬ ಸರ್ದಾರ್: ಸಾರಿ, ನಾವು ಈಗ್ಲೇ 3 ಜನ ಇದ್ದೇವೆ, ನಿನ್ಗೆ ಲಿಫ್ಟ್ ಕೊಡೋಕ್ಕಾಗೊಲ್ಲ..!

* * * * * * * * *

ಬಸ್ ಸ್ಟಾಪಿನಲ್ಲಿ ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳು ನಿಂತಿದ್ದರು...

ಗಂಡ: ಆಟೋ...ರಾಜಾಜಿನಗರಕ್ಕೆ ಬರುತ್ತೀಯಾ? ದುಡ್ಡು ಎಷ್ಟಾಗುತ್ತೆ ಅಂತ ಕೂಗಿ ಕರೆದ...

ಆ. ಡ್ರೈವರ್ (ನಗುತ್ತಾ) : ನಿಮಗೆ, ಮೇಡಂಗೆ ೨೦ - ೨೦ ಕೊಡಿ, ಮಕ್ಕಳಿಗೆ ಫ್ರೀ..!

ಹೆಂಡತಿ ( ಕೂಡಲೇ) ಮಕ್ಳೇ ನೀವು ಈ ಡ್ರೈವರ್ ಅಂಕಲ್ ಜೊತೆ ಹೋಗಿ, ನಾವು ಹಿಂದೆ ಬರ್ತಿರೋ ಬಸ್ನಲ್ಲಿ ಬರ್ತೀವಿ...!!

* * * * * * * * *

ಗಂಡನ ಮನೆಗೆ ಹೊರಟ ನವವಧುವಿಗೆ ಅವರ ಅಮ್ಮ ಗಂಡನ ಪ್ರೀತಿ ಗೆಲ್ಲುವ ಉಪಾಯಗಳನ್ನು ಹೇಳಿಕೊಡುತ್ತಿದ್ದಳು...

ಮಗಳು: ಅಮ್ಮಾ, ನಂಗೆ ಬೇಕಾಗಿದ್ದದ್ದು ಸಿಗದೆ ಇದ್ದಾಗ ಜಗಳ ಮಾಡಬೇಕಲ್ಲಾ...ಅದು ಹೆಂಗೆ??

ಅಮ್ಮ: ಶುದ್ಧ ಪೆದ್ದಿ ನೀನು..18 ವರ್ಷಗಳಿಂದ ನಾನು ಲೈವ್ ಶೋ ನಡೆಸಿ ಕೊಡ್ತಾನೇ ಇದ್ರೂ , ಇನ್ನೂ ನೀನು

ಕಲಿತುಕೊಂಡಿಲ್ಲವಲ್ಲ?!

**********************************************************

ಮದುವೆಗೆ ಅಂತ ಹೋದವ್ರು ಬಹಳ ಚಿಂತೆಯಿಂದ ಬರ್ತಿದ್ದೀರಲ್ಲಾ...ಏನು ಕಾರಣ??

ಮದುವೆ ಮನೆಲೀ ನಾನೊಂದು ಒಳ್ಳೆಯ ಚಪ್ಪಲಿಗೆ ಗುರಿಯಿಟ್ಟಿದ್ದೆ, ಅದನ್ನು ಬೇರೇ ಯಾರೋ
ಹೊಡ್ಕೊಂಡ್ ಬಿಟ್ರುಕಣ್ರೀ....


* * * * * * * * *

ಕೋಮಿ: ಏನೇ...ನಿಮ್ಮ ಯಜಮಾನ್ರಿಗೆ ನೀನೆ ಊಟ ಮಾಡುಸ್ತಿದ್ದೀಯಲ್ಲಾ...ಅಷ್ಟೋಂದು ಪ್ರೀತಿನಾ??!!


ಕಮ್ಮಿ: ಮಣ್ಣಾಂಗಟ್ಟಿ...ನೆನ್ನೆ ಲಟ್ಟಣಿಗೆಯಿಂದ ಹೊಡೆದಾಗ ಕೈಗೆ ಏಟು ಬಿದ್ದು ಬ್ಯಾಂಡೇಜ್ ಹಾಕ್ಕೊಂಡಿದ್ದಾರೆ..

* * * * * * * * *

ನಾನು ಏನು ಆಗ್ಬಾರ್ದು ಅಂದ್ಕೊಂಡಿದ್ನೋ ಅದು ಆಗೇ ಹೋಯ್ತು ಕಣೆ....

ಏನಾಯ್ತು??

ಹಾಸಿಗೆ ಹಿಡಿದಿದ್ದ ನಮ್ಮತ್ತೆಯವರು ಎದ್ಬಿಟ್ರೆ ಹೆಂಗಪ್ಪಾ ಅಂದ್ಕೊಂಡಿದ್ದೆ....ಎದ್ದೇ ಬಿಟ್ರು ಕಣೇ...

* * * * * * * * *

ರ್ರೀ...ಇವತ್ತಿಗೆ ನಮ್ಮ ಮದುವೆ ಆಗಿ 5 ವರ್ಷ ಆಯ್ತು...ಇವತ್ತಾದ್ರೂ ನಾನು ಈವರೆಗೆ ನೋಡ್ದೆ ಇರೋ
ಜಾಗಕ್ಕೆ ಕರೆದುಕೊಂಡು ಹೋಗ್ರಿ....

ನಡೀ ಹಾಗದ್ರೆ...ನೀನು ನಮ್ಮಮ್ಮನ ಮನೆ ನೋಡೇ ಇಲ್ಲ...ಅಲ್ಲಿಗೆ ಹೋಗೋಣ...

* * * * * * * * *

ಮದುವೆಯ ರಿಸೆಪ್ಷನ್ ಒಂದರಲ್ಲಿ ಗಂಡ ಒಂದರ ನಂತರ ಒಂದರಂತೆ ಐಸ್ ಕ್ರೀಂ ತಿನ್ನುತ್ತಿದ್ದ..ಇದನ್ನು ನೋಡಿ
ಆತನ ಹೆಂಡತಿಗೆ ಸಿಟ್ಟು ಬಂತು...." ಇದುವರೆಗೂ 8 ಐಸ್ ಕ್ರೀಂ ತಿಂದ್ರಿ...ಸಪ್ಲೈ ಮಾಡ್ತಾ ಇರೋ ಹುಡುಗ ನಿಮ್ಮ
ಬಗ್ಗೆ ತಪ್ಪು ತಿಳಿಯಲ್ವಾ??

ಗಂಡ: ಅದಕ್ಕೆ ನಾನು ಅಲ್ಲಿ ನಿಂತಿದ್ದಾಳಲ್ಲ ನನ್ನ ಹೆಂಡತಿ, ಅವಳಿಗೆ ಬೇಕಂತೆ ಅಂತ ನಿನ್ನ ತೋರಿಸಿ

ತರ್ತಿದ್ದೀನಿ..!!

**********************************************************

ಮಗ: ಅಮ್ಮಾ, ಎಲ್ಲಾ ಕಥೆಗಳು "ಒಂದು ದಿನ...." ಅಂತಾನೇ ಶುರು ಆಗುತ್ತಾ?

ಅಮ್ಮ: ಹಂಗೇನೂ ಇಲ್ಲ..." ಇವತ್ತು ಆಫೀಸಿನಿಂದ ಬರುವಾಗ ತುಂಬಾ ಲೇಟಾಗೊಯ್ತು..."ಅಂತ ಶುರುವಾಗುತ್ತೆ

ನಿಮ್ಮಪ್ಪನ ಕಥೆ..!

* * * * * * * * *

ಸುಬ್ಬು: ಜೆರಾಕ್ಸ್ ಮಾಡಿಸ್ಬೇಕು " ಸಾವಿರ ರೂಪಾಯಿ ಕಳ್ಸಿ" ಅಂತ ನಿಮ್ಮ ತಂದೆಗೆ ಪತ್ರ

ಬರೆದು ಕೇಳಿದ್ದೆಯಲ್ಲಾ, ದುಡ್ಡು ಕಳ್ಸಿದ್ರಾ??

ಸೀನ : ನಿನಗ್ಯಾಗಪ್ಪ ಕಷ್ಟ ಅಂತ ಅವ್ರೆ..1೦೦೦ ನೋಟನ್ನು ಜೆರಾಕ್ಸ್ ಮಾಡ್ಸಿ ಕಳ್ಸಿದ್ದಾರೆ ಕಣೋ...!!

* * * * * * * * *

ಹೋಟೆಲ್ ನಲ್ಲಿ ಗಿರಾಕಿ: ಬಿಸಿ ಬಿಸಿ ಮಸಾಲೆ ದೋಸೆ ಕೊಡಪ್ಪ...

ಮಾಣಿ: ಛೆ! ಎಂಥಾ ಕೆಲಸ ಮಾಡಿದ್ರಿ ಸರ್...ನೀವು ಒಂದು ದಿನ ಲೇಟ್...ನಿನ್ನೆ ಬಂದಿದ್ರೆ...ಇತ್ತು...!

* * * * * * * * *

ಪರೀಕ್ಷೇಲಿ ಹೇಗೆ ಬರೆದ್ಯೋ?? ಅಪ್ಪ ಮಗನಿಗೆ ಕೇಳಿದರು...

ನನ್ನ ಕೇಳಿದ್ರೆ...ಏನೂ ಪ್ರಯೋಜನ ಇಲ್ಲ ಅಪ್ಪ...ನನ್ನ ಮುಂದೆ ಸುಮಂತ ಕೂತಿದ್ದ...ಅವನ್ನ ಕರೀತೀನಿ...

ನೀನು ಅವನ್ನೇ ಕೇಳ್ಕೋ.....!


* * * * * * * * *

ಸ್ಕೂಲ್ ಮಿಸ್: ಏನ್ರೀ, ನಿಮ್ಮ ಮಗು ಅಪ್ಪನ ಹೆಸರು ಕೇಳಿದರೆ ಗೊತ್ತಿಲ್ಲ ಅನ್ನುತ್ತಲ್ಲಾ?

ಮಮ್ಮಿ: ಅದರಪ್ಪ ಬೇರೆ ಊರಿನಲ್ಲಿ ಕೆಲಸ ಮಾಡುತ್ತಾರೆ, ಭಾನುವಾರ ಬರೋರ ಹೆಸರು ಹೇಳು ಅಂದ್ರೆ
ಹೇಳುತ್ತಾನೆ..!

*****************************************************

ಕಳ್ಳರ ಬಾಸ್: ಏನೋ ಟೋನಿ, ಹೇಗಿದೆ ಬಿಜಿನೆಸ್?

ಪಿಕ್ ಪಾಕೆಟ್ ಕಳ್ಳ: ಚಳಿಗಾಲ ಗುರೂ...ಅದ್ಕೆ ಕಡ್ಮೆ ಬಾಸ್!

ಕಳ್ಳರ ಬಾಸ್: ಚಳಿಗಾಲ ಆದ್ರೇನಂತೆ?


ಪಿಕ್ ಪಾಕೆಟ್ ಕಳ್ಳ : ಎಲ್ರೂ ಜೇಬಲ್ಲಿ ಕೈಯಿಟ್ಟು ತಿರುಗ್ತಾ ಇರ್ತಾರೆ ಬಾಸ್!

* * * * * * * * *

ಮಿಸ್: ಏನೋ ವಿಕಾಸ್, ಇವತ್ತು ಲಂಚ್ ಬಾಕ್ಸ್ ತಂದಿಲ್ಲ? ಮಮ್ಮಿ ಊರಿಗೆ ಹೋಗಿದ್ದಾರಾ?

ವಿಕಾಸ್: ಮಮ್ಮಿ ಇದ್ದಾರೆ ಮಿಸ್, ಡ್ಯಾಡಿನೇ ಕ್ಯಾಂಪ್ ಅಂತ ಊರಿಗೆ ಹೋಗಿದ್ದಾರೆ!

* * * * * * * * *

ಮಹಿಳಾ ರೋಗಿ: ಡಾಕ್ಟ್ರೇ, ನೀವು ನನ್ನ ಟೆಸ್ಟ್ ಮಾಡುವಾಗ ನಿಮ್ಮ ನರ್ಸನ್ನು ಒಳಗೆ ಕರೆಯಿರಿ.

ಡಾಕ್ಟರ್: ಹಾಗೆಂದರೆ? ನನ್ನ ಮೇಲೆ ನಿಮಗೆ ವಿಶ್ವಾಸವಿಲ್ಲವೇ?

ರೋಗಿ: ನಿಮ್ಮ ಮೇಲೆ ವಿಶ್ವಾಸವಿದೆ, ಆದರೆ ಹೊರಗೆ ಕುಳಿತಿರುವ ನನ್ನ ಗಂಡನ ಮೇಲೆ ಇಲ್ಲ..!

* * * * * * * * *

ಗುಂಡ: ಓ! ಪ್ರಿಯೆ, ನಿನ್ನನ್ನು ಬಿಟ್ಟು ನಾನು ಮನೆಗೆ ಹೇಗೆ ಹೋಗಲಿ?

ಪ್ರಿಯೆ: 6 ನೆ ನಂಬರ್ ಸಿಟಿ ಬಸ್ ನಿಂದ ಅಥವಾ ನಡೆದುಕೊಂಡು...

* * * * * * * * *

ಪುಟ್ಟ: ಮಿಸ್, ನಮ್ಮ ಮನೇಲಿ ಒಂದು ಪುಟಾಣಿ ಪಾಪು ಹುಟ್ಟಿದೆ..

ಮಿಸ್: ತಮ್ಮನೋ? ತಂಗಿಯೋ?

ಪುಟ್ಟ: ಗೊತ್ತಿಲ್ಲ ಮಿಸ್, ಇನ್ನೂ ಬಟ್ಟೆ ಹೊಲಿಸಿಲ್ಲ.!

*************************************************

ಯುವಕ ಮೋಟರ್ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ. ಅವನನ್ನು
ನೋಡಲು ಅವನ ಪ್ರೇಯಸಿ ಬಂದಳು.

ಯುವಕ ಕೇಳಿದ: " ಮೈ ಡಿಯರ್. ನಾನು ಸತ್ತರೆ ನೀನು ಅಳುತ್ತೀಯಾ?"

ಛೇ...ಛೇ...ನಾನ್ ಸತ್ ಹೋದ್ರೇನೇ ಅಳುವವಳಲ್ಲ...ಅಂತದ್ರಲ್ಲಿ....."

* * * * * * * * *

ರ್ರೀ....ಮೊದಲೆಲ್ಲ...ನೀವು ನನ್ನನ್ನ ತುಂಬಾ ಪ್ರೀತಿಸ್ತಾ ಇದ್ರಿ...ಏನಾದ್ರೂ ತಿಂಡಿ
ಮಾಡಿಕೊತ್ರೆ ಮೊದಲು ನಂಗೆ ತಿನ್ಸಿ ಆಮೇಲೆ ಚೂರುಪಾರು ನೀವು ತಿನ್ತಾ ಇದ್ರಿ....ಈಗ
ಯಾಕೆ ಹಾಗೆ ಮಾಡೋದೆ ಇಲ್ವಲ್ಲ..??

" ಈಗ ನೀನು ನಿಜವಾಗಿಯೂ ತಿಂಡಿ ಚೆನ್ನಾಗಿ ಮಾಡ್ತೀಯಾ ಕಣೆ..."

* * * * * * * * *

ಅದೊಂದು ಸ್ಪರ್ಧೆ...ಹೋತವೊಂದನ್ನು ಕಟ್ಟಿಹಾಕಿದ ಇಕ್ಕಟ್ಟಾದ ಕೋಣೆಯಲ್ಲಿ 15 ನಿಮಿಷ
ಇದ್ದು ಬಂದವರಿಗೆ ಬಹುಮಾನ...

ಮೊದಲು ರಾಮ ಒಳಗೆ ಹೋದ...ಹೋತದ ದುರ್ಗಂದ ತಾಳಲಾರದೆ...5 ನಿಮಿಷಕ್ಕೆ ಹೊರಗೆ ಬಂದ...
ಮತ್ತೆ ಸೋಮ ಒಳಗಡಿಯಿಟ್ಟ...6 ನಿಮಿಷಕ್ಕೆ ಹೊರಗೆ ಓಡಿಬಂದ...

ಕಡೆಗೆ ತಿಮ್ಮ ಹೋದ...ಎರಡೇ ನಿಮಿಷದಲ್ಲಿ ಹೋತವೇ ಸರಪಣಿ ಹರಿದುಕೊಂಡು ಹೊರಗೆ ಓಡಿ ಬಂತು....

* * * * * * * * *

ನ್ಯಾಯಾಧೀಶರು ಪೋಲಿಸನೊಂದಿಗೆ : ಇವನು ಕುಡಿದ ಅಮಲಿನಲ್ಲಿದ್ದ ಎಂಬುದು ಹೇಗೆ ಗೊತ್ತಾಯಿತು??

ಪೊಲೀಸ್: ಅವನು ಬೀದಿಯಲ್ಲಿ ಒಬ್ಬ ರಿಕ್ಷಾದವನೊಂದಿಗೆ ಜಗಳ ಮಾಡುತ್ತಿದ್ದ...

ನ್ಯಾಯಾಧೀಶರು: ಜಗಳ ಮಾಡಿದ ಅಂದರೆ ಅವನು ಕುಡಿದಿದ್ದ ಅನ್ನೋದು ಸಾಬೀತಾಗುತ್ತಾ??

ಪೊಲೀಸ್: ಸ್ವಾಮಿ, ಇವನು ಜಗಳವಾಡುತ್ತಿದ್ದಲ್ಲಿ ರಿಕ್ಷಾವು ಇರಲಿಲ್ಲ....ಚಾಲಕನೂ ಇರಲಿಲ್ಲ...

* * * * * * * * *

ಗಂಡ: (ಸಾರನ್ನ ತಿನ್ನುತ್ತಾ, ಸಿಟ್ಟಿನಿಂದ) ದೇವ್ರು ಎರಡು ಕಣ್ಣು ಕೊಟ್ಟಿದ್ದಾನೆ, ಅಕ್ಕಿಲಿರೋ ಕಲ್ಲುಗಳನ್ನು
ಸರಿಯಾಗಿ ಆರಸಿ ಎಸೆಯೋಕೆ ಆಗಲ್ವಾ??

ಹೆಂಡತಿ: ನಿಮಗೆ ದೇವ್ರು ೩೨ ಹಲ್ಲು ಕೊಟ್ಟಿದ್ದಾನೆ....ಅಗಿದು ತಿನ್ನೋಕಾಗಲ್ವಾ??

******************************************************

ರ್ರೀ....ನಿಮ್ಮ ಅಂಗಡಿಯಲ್ಲಿ ಮೊಟ್ಟೆಗಳನ್ನಿಟ್ಟೀದ್ದೀರಾ??

ನಾವು ಮೊಟ್ಟೆಗಳನ್ನಿಡೋದಿಲ್ಲ...ಮೊಟ್ಟೆಗಳನ್ನು ಕೋಳಿಗಳು ಇಡುತ್ತವೆ, ನಮ್ದೇನಿದ್ರೂ ಮಾರೋದಷ್ಟೆ....


* * * * * * * * *

ಗುಂಡಾ ಚಹಾ ಕುಡಿಯಲು ಹೋಟೆಲ್ ಗೆ ಹೋದ. ಅಲ್ಲಿದ್ದ ಬೋರ್ಡೊಂದರಲ್ಲಿ ಹೀಗೆ ಬರೆದಿತ್ತು..
"ನಮ್ಮಲ್ಲಿ ಸೊಳ್ಳೆಗಳು ಇಲ್ಲ..ಹಾಗಾಗಿ ನಿಮಗೆ ಡೆಂಗ್ಯೂ ಜ್ವರ ಬರುವುದಿಲ್ಲ...

ಅದನ್ನು ಓದಿದ ಗುಂಡ ಕೇಳಿದ.." ನಿಮ್ಮ ಹೋಟೆಲ್ ನಲ್ಲಿ ಸೊಳ್ಳೆಗಳು ಇಲ್ಲವೇ ಇಲ್ಲ ಎಂದು ಅದೆಂಗೆ ಹೇಳ್ತೀರಾ?

ಹುಂ ಸ್ವಾಮಿ...ನಮ್ಮಂಗ್ಡೀಲಿರೋ ಎಲ್ಲ ತಿಂಡಿಗಳನ್ನ ಮಸ್ಕಿಟೋ ಕಾಯ್ಲ್ ಸೇರಿಸಿಯೇ ಮಾಡಿರೋದು...

* * * * * * * * *

ಗುಂಡ ಮೊಟ್ಟೆ ಮಾರುವ ಅಂಗಡಿಗೆ ಹೋಗಿ ಕೇಳಿದ...

ಏನಪ್ಪಾ...ಮೊಟ್ಟೆ fresh ಆಗಿದೆ ತಾನೇ??

ಹುಂ ಸರ್...ಈಗಷ್ಟೇ ಕೋಳಿ ಬಂದು ಮೊಟ್ಟೆ ಇಟ್ಟು ಹೋಗಿದೆ.

* * * * * * * * *

ನಡುರಾತ್ರಿ ಕುಡುಕನೊಬ್ಬ ಖಾಲಿ ಗೋರಿಯೊಳಗೆ ಬಿದ್ದು " ಚಳಿ ತಾಳೋಕಾಗ್ತಾ ಇಲ್ಲ...

ಯಾರದರೂ ಬನ್ನಿ.." ಎಂದು ಕೂಗುತ್ತಾ ಇದ್ದ.... ಇನ್ನೊಬ್ಬ ಕುಡುಕ ಬಂದು ಕೆಳಗೆ ಬಾಗಿ ನೋಡಿ...

" ಚಳಿಯಾಗದೆ ಇನ್ನೇನಾದೀತು? ಮೂರ್ಖರು! ನಿನ್ನನ್ನು ಗೋರಿಗೆ ಇಳಿಸಿದ ಮೇಲೆ ಮಣ್ಣು ಮುಚ್ಚಲು
ಮರೆತ್ತಿದ್ದಾರೆ" ಎಂದು ಗೋರಿಗೆ ಮಣ್ಣು ತುಂಬತೊಡಗಿದ...

* * * * * * * * *

ಸರ್ದಾರ್ ಮೊಬೈಲ್ ಗೆ ಯಾರೋ ಫೋನ್ ಮಾಡಿದರು...ಫೋನಿಗೆ ಉತ್ತರಿಸಿದ ಸರ್ದಾರ್ ಕೇಳಿದ
" ಹಲೋ.! ನಾನಿಲ್ಲಿ ಇರೋದು ನಿನಗೆ ಹೇಗೆ ಗೊತ್ತಾಯ್ತು??'

******************************************************

ಸಂತಾ ಮತ್ತೆ ಅವನ ಹೆಂಡತಿ ದೆಹಲಿ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದರು.
ಅಷ್ಟರಲ್ಲೇ ಅವರು ನಿಂತಿದ್ದ ಪ್ಲಾಟ್ ಫಾರ್ಮಿಗೆ ' ಪಂಜಾಬ್ ಮೇಲ್' ಎಂಬ ರೈಲು ಬಂದು ನಿಂತುಕೊಂಡಿತು.

ಸಂತಾ ಬೇಗಬೇಗನೆ ಆ ಟ್ರೇನಿಗೆ ಹತ್ತಿ, ಹೆಂಡತಿಗೆ ಹೇಳಿದ.." ಈಗ ನಾನು ಹೊರಡುತ್ತೇನೆ,
" ಪಂಜಾಬ್ ಫೀಮೇಲ್" ಬಂದ ಕೂಡಲೇ ನೀನು ಹೊರಟು ಬಾ.."

* * * * * * * * *

ಭಿಕ್ಷುಕ: ಸಾರ್, ಒಂದು ರೂಪಾಯಿ ಕೊಡಿ ಕಾಫಿ ಕುಡಿಯುತ್ತೇನೆ.
ಗೃಹಸ್ಥ: ಕಡಿದರೆ ನಾಕು ತುಂಡಾಗುವ ಹಾಗಿದ್ದೀಯಲ್ಲಯ್ಯ, ಏನಾದರೂ ಕೆಲಸ ಮಾಡಿ ಸಂಪಾದನೆ
ಮಾಡಬೇಕು. ರಸ್ತೆಯ ಮೇಲೆ ನಿಂತು ಭಿಕ್ಷೆ ಬೇಡುತ್ತೀಯಲ್ಲ ನಿನಗೆ ನಾಚಿಕೆಯಾಗುವುದಿಲ್ಲವೆ?
ಭಿಕ್ಷುಕ: ರಸ್ತೆಯ ಮೇಲೆ ಬೇಡದೆ ಇನ್ನೇನು ಮಾಡಲಿ? ನೀವು ಕೊಡುವ ಒಂದು ರೂಪಾಯಿಗೆ ಆಫಿಸ್ ತೆರೆಯೋಕಾಗುತ್ತಾ??

* * * * * * * * *

ರ್ರೀ...ರಾತ್ರಿ ಹತ್ತು ಗಂಟೆ ಆದ್ರೂ ನಿಮ್ಮ ಸ್ನೇಹಿತರು ಹೋಗೋದೇ ಇಲ್ಲ...ನಾನು ಅಡುಗೆ ಮನೆಯಿಂದ
ಊಟಕ್ಕೆ ಬನ್ನಿ ಅಂತಾ ನಿಮ್ಮೊಬ್ಬರನ್ನೇ ಹ್ಯಾಗೆ ಕರೀಲಿ??

ಊಟಕ್ಕೆ ಬನ್ನಿ ಅಂತ ಕರೀಲೆ ಬೇಡ. ನಿಮ್ಮ ಸ್ನೇಹಿತರ ಹತ್ತಿರ ಒಂದೈದು ಸಾವಿರ ರೂಪಾಯಿ ಸಾಲ
ತೊಗೊಂಡಿರಿ, ಆಮೇಲೆ ಕೊಟ್ರಾಯ್ತು ಅನ್ನು, ಅವರೇ ಹೋಗಿಬಿಡ್ತಾರೆ...

* * * * * * * * *

ಒಂದು ರೂಪಾಯಿ ನಶ್ಯ ಕೊಡಿ.....

ಇಲ್ಲಾ ಯಜಮಾನರೇ...ನಶ್ಯದ ರೇಟು ತುಂಬಾ ಜಾಸ್ತಿಯಾಗಿದೆ...ಒಂದು ರೂಪಾಯಿಗೆ ಬರೋದಿಲ್ಲ...

ಬಂದಷ್ಟು ಕೊಡ್ರಿ....

ಇಲ್ಲಿ ಬನ್ನಿ ಯಜಮಾನರೇ...ನಿಮ್ಮ ಮೂಗು ಕೊಡಿ, ಅದರೊಳಗೆ ತುಂಬಿ ಬಿಡ್ತೇನೆ....

* * * * * * * * *

ಅಪ್ಪ: ಎಲ್ ಹೊಯ್ತೀದಿಯೋ ಮಗಾ?
ಮಗ: ಇಸ್ಕೂಲ್ ಗೆ ಕಣಪ್ಪ....
ಅಪ್ಪ: ಇಸ್ಕೂಲ್ ಗೆ ಹೋಗ್ವಾಗ, ರಸ್ತೆ ದಾಟ್ವಾಗ ಹುಸಾರು ಕಣ್ಲಾ...
ಲಾರಿ ಬಸ್ಸು ಮೇಲ್ ಹೋದಾವು...
ಮಗ: ಬುಡಪ್ಪೋ ...ಏಟೋ ಸಲ ಇಮಾನನೇ ನನ್ ತಲೆಮ್ಯಾಗೆ ಹೋಗದೆ...ಇದೇನ್ಮಹಾ!....

******************************************************

"ನನ್ನ ಹೆಂಡತಿಗೆ ನಾನು ಅಂದ್ರೆ ಭಯ ಭಕ್ತಿ"

ಪರವಾಗಿಲ್ಲವೇ....ನಿಜಕ್ಕೂ ನೀನು ಪುಣ್ಯವಂತ, ಹೇಗೆ?

ಅವಳು ಬೆಳಿಗ್ಗೆ ಎದ್ದ ತಕ್ಷಣ ನನ್ನ ಕಾಲು ಮುಟ್ಟಿ ನಮಸ್ಕಾರ
ಮಾಡಿದ ನಂತರವೇ ನಾನು ಮಾಡಿದ ಕಾಫಿ ಕುಡಿಯೋದು....."

* * * * * * * * *

ಆ ಹದಿನಾಲ್ಕನೇ ಬೆಡ್ ನಲ್ಲಿರುವ ಟಿ.ವಿ. ನಟಿಗೆ ಎಚ್ಚರ ಆಯ್ತಾ?

ಆಯ್ತು ಡಾಕ್ಟ್ರೆ...

ಏನ್ ಮಾಡ್ತ ಇದಾಳೆ?

ಕನ್ನಡಿ ಮುಂದೆ ನಿಂತ್ಕೊಂಡು ಮೇಕಪ್ ಮಾಡ್ಕೋತಿದಾಳೆ...

* * * * * * * * * *

ಡಾಕ್ಟ್ರೆ.....ಇತ್ತೀಚೆಗೆ ನನಗೆ ಕಿವಿ ಸರಿಯಾಗಿ ಕೇಳಿಸ್ತಾ ಇಲ್ಲ.....

ರ್ರೀ ಮಿಸ್ಟರ್...ನೀವು ಅದೃಷ್ಟವಂತರು...ಇನ್ನು ನಿಮ್ಮ ಹೆಂಡತಿ ಮಾತು ನಿಮಗೆ
ಕೇಳಿಸಲ್ಲ ಅಂದ್ರೆ ನಿಮ್ಮ ಕಷ್ಟದ ದಿನಗಳು ಮುಗೀತು ಅಂತ್ಲೇ ಅರ್ಥ...
ಗೊ ಆಂಡ್ ಎಂಜಾಯ್ ಲೈಫ್....

* * * * * * * * * *

ನಿಮ್ಮ ತಂದೆ ವರದಕ್ಷಿಣೆಯಾಗಿ ಡಿ.ವಿ.ಡಿ ಕೋಡ್ತೀನಿ ಅಂತ ಹೇಳೀದ್ರು....ಮರೆತು ಬಿಟ್ರಾ?...

ಮರೆತಿಲ್ಲ...ಅದರ ಬದಲಾಗಿ ಕೇಬಲ್ ಹಾಕ್ಸಿ ಕೊಡ್ತಾರೆ".

* * * * * * * * * *

ಸರ್ದಾರ್ ಸಂತಾ ಸಿಂಗ್ ಗೆ ಹೈವೇ ಮಧ್ಯೆ ಬಿಳಿ ಪಟ್ಟೆಗಳನ್ನು ಬರೆಯುವ ಕೆಲಸ ಸಿಕ್ಕಿತು.
ಮೊದಲ ದಿನ ಅವನು ಆರು ಮೈಲಿ ಪೇಂಟ್ ಮಾಡಿದರೆ ಎರಡನೆಯ ದಿನ ಮೂರು ಮೈಲಿ, ಮೂರನೆ ದಿನ
ಒಂದು ಮೈಲಿಗಿಂತಲೂ ಕಡಿಮೆ ಪೇಂಟ್ ಮಾಡಿದ....

ಬಾಸ್: ಯಾಕೆ ದಿನ ಕಳೆದಂತೆ ದೂರ ಕಡಿಮೆಯಾಯ್ತು?

ಸಂತಾ : ಅಯ್ಯೋ! ಆಗೋದೇ ಇಲ್ಲ ಸರ್...ದಿನ ಹೋಗ್ತಾ....ಹೋಗ್ತಾ ಪೇಂಟಿಂಗ್ ಡಬ್ಬಾನೂ ದೂರ ಆಗುತ್ತೆ ಅಲ್ವಾ?.

*************************************************************

ಹೆಂಡತಿ : ರ್ರೀ......ಯಾಕ್ರೀ ಆ ಬೀದಿನಾಯಿ
ಎಲ್ಲರನ್ನೂ ಬಿಟ್ಟು ನಿಮ್ಮನ್ನ ನೋಡಿದ್ರೆ
ಗುರ್ರ್ ಅನ್ನುತ್ತೆ...

ಗಂಡ : ಓಹ್ ಅದಾ...ಮೊನ್ನೆ ರಾತ್ರಿ
ನೀನು ಮಾಡಿದ್ದ ಉಪ್ಪಿಟ್ಟು ತುಂಬಾ
ಮಿಕ್ಕಿತ್ತಲ್ಲ....ಅದನ್ನ ಆ ನಾಯಿಗೆ ಹಾಕಿದ್ದೆ...

* * * * * * * *

ಭಾಗೀರಥಿ : ನಮ್ಮೆಜಮಾನ್ರು ಇನ್ನು ಮುಂದೆ
ಕುಡಿಯಲ್ಲ ಎಂದು ನನ್ನ ಕೈ ಹಿಡಿದು ಪ್ರಮಾಣ ಮಾಡಿ ಹೇಳಿದ್ರು...

ಸರಸ್ವತಿ : ಪರವಾಗಿಲ್ಲ ಕಣೆ...ಒಳ್ಳೆ ನ್ಯೂಸ್...

ಭಾಗೀರಥಿ : ಏನ್ ಪರವಾಗಿಲ್ಲ....ಆಮೇಲೆ ನನ್ನ ಬೆರಳಲಿದ್ದ ಉಂಗುರನೇ ನಾಪತ್ತೆ....


* * * * * * * * *

ಶಾಲೆಯಿಂದ ಬಂದ ತಕ್ಷಣ ಆರು ವರ್ಷದ ನಿಖಿಲ್ ಹೇಳಿದ: ಅಮ್ಮ ನೀನಾದ್ರೂ
ಅಪ್ಪನಿಗೆ ಸ್ವಲ್ಪ ಧೈರ್ಯ ಹೇಳ್ಬಾರ್ದಾ?

ಅಮ್ಮ: ಯಾಕೋ ಪುಟ್ಟ,,,ಏನಾಯ್ತು?

ನಿಖಿಲ್: ಅಪ್ಪ ರಸ್ತೆ ದಾಟುವಾಗ ಹೆದ್ರಿಕೊಂಡು ನನ್ನ ಕೈ ಹಿಡ್ಕೋತಾರೆ.

* * * * * * * * *

ಕಳ್ಳ: ( ಮನೆ ಯಜಮಾನನ್ನು ಉದ್ದೇಶಿಸಿ) ಥತ್ ಎಂಥ ಜನಾರೀ ನೀವು...ಮನೇಲಿ ಏನೂ
ಸಾಮಾನಿಲ್ಲ ಅಂಥ ಬಾಗಿಲು ಹಾಕ್ದೇ ಮಲಗಿದ್ದೀರಾ? ಸುಮ್ನೆ ಟೈಂ ವೇಸ್ಟ್ ಆಯ್ತು..

ಮನೆ ಯಜಮಾನ : ಆದ್ರೂ ನೀನು ಒಳಗೆ ಬಂದು ಹೋಗ್ತಿರೋದ್ರಿಂದ ನನ್ನ ಮಾನ ಉಳೀತು.

ಕಳ್ಳ: (ಆಶ್ಚರ್ಯದಿಂದ) ಅದೆಂಗೆ?

ಮನೆ ಯಜಮಾನ : ನಮ್ಮನೆಗೂ ಕಳ್ಳ ಬಂದಿದ್ದ ಅಂತಾ ಗೊತ್ತಾದ್ರೆ...ಇವರು ಶ್ರ್*ಈಮಂತರಿರಬೇಕು ಅಂತ
ಅಕ್ಕ ಪಕ್ಕದೋರು ತಿಳ್ಕೋತಾರೆ..

* * * * * * * * * *

ರ್ರೀ...ಪಕ್ಕದ್ಮನೆ ಪದ್ಮ ಹೇಳ್ತಾ ಇದ್ಲು...ಸ್ವರ್ಗದಲ್ಲಿ ಗಂಡ...ಹೆಂಡತೀನಾ ಒಟ್ಟಿಗೆ
ಇರಲು ಬಿಡಲ್ವಂತೆ.....

ಗಂಡ: ಅದಕ್ಕೆ ಅದನ್ನ ಸ್ವರ್ಗ ಅಂತಾ ಕರೀತಾರೆ.

************************************************************