Tuesday 4 March 2008

ಸೂರ್ಯೋದಯ - 2

ಮೊನ್ನೆ ಯಜಮಾನರು ಕಾರ್ಯನಿಮಿತ್ತ ಪರವೂರಿಗೆ ಹೊರಟಿದ್ದರು, ಎಂದಿನಂತೆ ಕ್ಯಾಮರ ಕೈಗೆ ಕೊಟ್ಟು ಕಳಿಸಿದ್ದೆ. " ಕ್ಯಾಮರ ಯಾಕೆ? ಅಲ್ಲಿ ನನಗೇನೂ ಊರು ಸುತ್ತಲು ಕರೆದಿಲ್ಲ, ಬೆಳಿಗ್ಗೆ ಹೋಗಿ ಕೂತರೆ, ಇನ್ನು ಸಂಜೆಯೇ ಬರುವುದು, ಇಲ್ಲಿಗಿಂತ ಆ ಊರಿನಲ್ಲಿ ಚಳಿ, ಮಳೆ ಜಾಸ್ತಿ, ಕ್ಯಾಮೆರ ಬೇಡ!" ಎಂದು ಅವರ ವಾದ. ಕಡೆಗೆ ಅಂತೂ ಒಪ್ಪಿಸಿ ಕೈಗೆ ಕೊಟ್ಟು ಕಳಿಸಿದ್ದೆ.


ಎರಡು ದಿನಗಳ ಕೆಲಸ ಮುಗಿಸಿ ಬಂದ ಅವರು ಕ್ಯಾಮೆರಾ ಕೈಗೆ ಕೊಡುತ್ತಾ, ನೋಡು " ಎಷ್ಟು ಸುಂದರ ಹುಡುಗಿಯರ ಫೋಟೋ ತೆಗೆದುಕೊಂಡು ಬಂದಿದ್ದೇನೆ...ಇನ್ನೊಮ್ಮೆ ನೀನು ಊರಿಗೆ ಹೋಗುತ್ತೀಯಾ ಅಂದರೆ ನಾನೇನೂ ನಿನಗೆ ಬಲವಂತ ಮಾಡುವುದಿಲ್ಲ! ಅವರಲ್ಲಿ ಯಾರಾದರೂ ಒಬ್ಬರನ್ನು ಕಟ್ಟಿಕೊಳ್ಳುತ್ತೇನೆ" ಎಂದರು. ಎಲ್ಲವೂ ಹೇಳುವಷ್ಟು ಸುಲಭವಾಗಿ ಬಿಟ್ಟಿದ್ದರೆ, ಅಲ್ಲವೆ?! " ಆಯ್ತು ಕರೆ ತನ್ನಿ, ನನಗೂ ಅಡಿಗೆ ಕೆಲಸ, ಮನೆ ಕೆಲಸ ಮಾಡಿ ಮಾಡಿ ಸಾಕಾಗಿದೆ, ಬಂದವಳ ಹತ್ತಿರ ನಾನು ಕೆಲಸ ತೆಗೆಸುತ್ತೇನೆ " ಎಂದು ಹಾಸ್ಯ ಮಾಡುತ್ತ ಫೋಟೋಗಳನ್ನು ನನ್ನ ಕಂಪ್ಯೂಟರಿಗೆ ಏರಿಸಿದೆ. ಫೋಟೋಗಳು ನೋಡಿ ಶಾಕ್! ನೀವೇ ನೋಡಿ :)






























ನಮ್ಮ ಊರಿನ ಮೇಲಿಂದ ಕಂಡು ಬಂದ ಸೂರ್ಯೋದಯ! ನನಗೆ ಬಣ್ಣಿಸಲು ಬರುವುದಿಲ್ಲವಾದ್ದರಿಂದ ನೀವೇ ಊಹಿಸಿಕೊಳ್ಳಿ :)

13 comments:

bhadra said...

ಪರವಾಗಿಲ್ಲರೀ ನೀವೂನೂ! ಪಾಪ ಅನಿಲ್ ಅವರು ದಿನಕ್ಕೊಂದು ಹೊತ್ತು ಊಟ ಮಾಡ್ತಾರೋ ಇಲ್ವೋ ಅನ್ನೋ ಹಾಗೆ ಕಾಣಿಸ್ತಾರೆ - ನೀವು ಅವರಿಗೆ ಅಡುಗೆ ಮಾಡಿ ಹಾಕಿ ಸುಸ್ತಾಗಿ ಹೋಗಿದ್ಯಾ? ನಿಮಗೆ ಅಸಿಸ್ಟೆಂಟಾಗಿ ಇನ್ನೊಬ್ಬರನ್ನು ಕರೆತರಬೇಕಾ? :P ;)

ಬಹಳ ಸುಂದರವಾಗಿರೋ ಹುಡುಗಿಯರ ಚಿತ್ರಗಳನ್ನೇ ತೋರಿಸಿದ್ದೀರ

ಇನ್ನು ನನ್ನ ಅನಿಸಿಕೆ ಕೇಳಿ - ನನ್ನ ಬೋಳು ತಲೆಗೆ ಕೆಲಸ ಕೊಡ್ತಿದ್ದೀರಾ? ಹುಂ ಸರಿ - ಹೀಗೆ ಹೇಳಲಾ?

ಕಣ್ಣಿದ್ದರೂ ಕಾಣದು
ಈ ಜಗ
ಜಗದ ಸೌಂದರ್ಯ
ಮರ ಗಿಡ ಗುಡ್ಡ ಬೆಟ್ಟಗಳ ಸೊಬಗು
ಸವಿಯಲಾರೆನು
ಹರಿದ್ವರ್ಣದ ಸಿರಿತನ
ನೇಸರನ ಇಣುಕು ನೋಟ
ಕಣ್ಣೊಳಗೆ ಇಳಿಯದಿರೆ
ನಾನಾಗುವೆ ಕಣ್ಣಿದ್ದರೂ ಕುರುಡ

ಜಗಚ್ಚಕ್ಷು
ಕಣ್ತೆರೆಯಲು
ಎಲ್ಲವೂ ಬಯಲು
ಮಾಯವಾಗುತಿದೆ ಬಟ್ಟ ಬಯಲು

ಬತ್ತಲಾಗುತಿಹ ಜಗವು
ಜೀವಿಗಳಿಗೆ ಜೀವ ತುಂಬುವ
ದಿವಾಕರನ
ಆಸರೆಯ ಹಾತೊರೆಯುವಿಕೆ

ಹೊಂಬೆಳಕು ಕುಡಿಸುತಿದೆ
ಸುಪ್ರಭಾತದಿ ಪೇಯ
ಇರಲೆಂದಿಗೂ ಆ ದೇವನ ದಯ

ಪ್ರಖರತೆಯು ತೀಕ್ಷ್ಣವಾಗುವ
ಮೊದಲೇ
ನಮಿಸುವೆ ನೀ ನನ್ನೊಡೆಯ
ನಂತರ ನಾ ನಿಲ್ಲ ಬಲ್ಲೆನೇ
ನಿನ್ನ ಸಮಕೆ ಓ ಜಗರಾಯ

baibEDree - pukkaTe jaaga siktu aMta, sumne huccuccaagi EnO barede aShTe

maddy said...

sooper snaps ri..
sakkat ive ella...

Sumeru said...

WoW! Very beautiful............(-:
Sangeetha..

Shubha said...

Nija Nilgir... cannot be caputured in words.. really lovely pics... excellent.. NO MORE WORDS!!!!

Anonymous said...

Cool ri nilgiri avare.
nAn EnO antidde:)

Anonymous said...

Pictures Tumba chennagide girija:-)

Anonymous said...

Looks like your hubby got a nice window seat in the flight!

The pictures are very nice.

ಶ್ರೀನಿಧಿ.ಡಿ.ಎಸ್ said...

ನಮಸ್ತೇ,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಶ್ರೀನಿಧಿ.ಡಿ.ಎಸ್.

NilGiri said...

ಸುಂದರವಾದ ಹುಡುಗಿಯರ ಚಿತ್ರಗಳಿಗೆ ಅದಕ್ಕಿಂತಲೂ ಸುಂದರವಾಗಿ ವರ್ಣನೆ ಮಾಡಿದ್ದೀರ ಸರ್! ತುಂಬಾ ಧನ್ಯವಾದಗಳು.

** ಅಂದ ಹಾಗೆ ನೀವು ಅನಿಲ್ ರವರನ್ನು ಎಲ್ಲಿ ನೋಡಿದ್ದೀರಿ :D

NilGiri said...

Thanks Madhu!

"ಎಲ್ಲಾ ಹೊಗಳಿಕೆ ನೀನೊಬ್ಬಳೇ ತೆಗೆದುಕೊಳ್ಳಬೇಡ" ಎಂದು ಹೇಳಿದ್ದರಿಂದ ನಿಮ್ಮ ಹೊಗಳಿಕೆ ಯಜಮಾನರಿಗೆ ಸೇರಿದ್ದು ;)

NilGiri said...


ಸಂಗೀತ ಮತ್ತು ಶುಭಾ ಅವರಿಗೆ ಧನ್ಯವಾದಗಳು.

NilGiri said...


ಮೂವರು ಅನಾನಿಮಸರಿಗೆ ಧನ್ಯವಾದಗಳು :) ಮುಂದಿನ ಸಲ ನಿಮ್ಮ ಹೆಸರಾದರೂ ಬಿಟ್ಟು ಹೋಗಿ :)

NilGiri said...


ಬಹಳ ಒಳ್ಳೆಯ ಕೆಲಸ ಮಾಡುತ್ತೀದ್ದೀರಿ ಶ್ರೀನಿಧಿ ಅವರೆ,

ನಾನೂ ನಮ್ಮ ಸ್ನೇಹಿತರೆಲ್ಲರೂ ಪರದೇಸಿಗಳಾದ್ದರಿಂದ ಕಾರ್ಯಕ್ರಮಕ್ಕೆ ಬರುವ ಪುಣ್ಯ ನಾವು ಕೇಳಿಕೊಂಡು ಬಂದಿಲ್ಲ :(
" ಪ್ರಣತಿ" ಎಲ್ಲಾ ದಿಕ್ಕುಗಳಲ್ಲೂ ಬೆಳಗಲಿ ಎಂದು ಇಲ್ಲಿಂದಲೇ ಹಾರೈಸುತ್ತೇವೆ. ಎಲ್ಲರಿಗೂ ನಮ್ಮ ನಮಸ್ಕಾರಗಳನ್ನು ತಿಳಿಸಿ.