ಮೊದಲಿನಿಂದಲೂ ನನಗೆ ಚುಕ್ಕಿ ರಂಗೋಲಿಗಳಿಗಿಂತ, ಚುಕ್ಕಿ ಸೇರಿಸದ ಈ " ಸುತ್ತಿ ಬಳಸುವ" ರಂಗೋಲಿಗಳೇ ಇಷ್ಟ!
ಅಕ್ಕ- ಪಕ್ಕದ ಮನೆಯವರು ರಂಗೋಲಿ ಯಾವುದು ಬಿಟ್ಟಿದ್ದಾರೆ ಎಂದು ಕಣ್ಣಂಚಿನಲ್ಲೇ ನೋಡಿಕೊಂಡಿರುತ್ತಿದ್ದೆ. ಎಲ್ಲರೂ ಹೆಚ್ಚು ಕಡಿಮೆ ಚುಕ್ಕಿ ರಂಗೋಲಿಗಳೇ! ನೋಡಿದ ಕೂಡಲೇ " ಈ ರಂಗೋಲಿ ಎಷ್ಟರಿಂದ ಎಷ್ಟು ಚುಕ್ಕಿ" ಎಂದು ಗೊತ್ತಾಗಿ ಬಿಡುತ್ತಿತ್ತು. ನನ್ನ ತರಹ ಸುತ್ತಿಬಳಸುವ ರಂಗೋಲಿಗಳನ್ನು ಬಿಡುವುದಿಲ್ಲವಲ್ಲ, ಬಿಡುತ್ತೇವೆಂದರೂ ಬರಬೇಕಲ್ಲ! ಎಂದು ಕೊಂಡು ಒಳಗೊಳಗೇ ಖುಶಿ.
ಊರಿನಲ್ಲಿ ಪಕ್ಕದ ಮನೆ ಹುಡುಗಿ, ನಾನು ಬಿಡುವ ರಂಗೋಲಿಗಳನ್ನು ನೋಡಿ, ತಾನೂ ದಿನಕ್ಕೊಂದು ಬಿಡಲು ಶುರು ಮಾಡಿದ್ದಳು. ಅವಳ ರಂಗೋಲಿಗಳೆಲ್ಲವೂ ಚುಕ್ಕಿಯವು. ಅವಳು ಬಿಡುವ ರಂಗೋಲಿಗಳು ನನಗೆ ಗೊತ್ತೆಂದು ತೋರಿಸಿಕೊಳ್ಳಲು ಅವಳು ಬಿಟ್ಟ ರಂಗೋಲಿಯನ್ನೇ ನಾನೂ ಮನೆಯ ಮುಂದೆ ಬಿಡುತ್ತಿದ್ದೆ. ಅವಳಿಗೂ ಗೊತ್ತಾಗಿ ನಾನು ಬಿಡುವ ರಂಗೋಲಿಗಳನ್ನೇ ತಾನೂ ಅವರ ಮನೆ ಮುಂದೆ ಬಿಡಲು ಶುರುಮಾಡಿದ್ದಳು. ನಾನು ಬೇಕಂತಲೇ ಚುಕ್ಕಿಗಳನ್ನು ಕಾಣದ ಹಾಗೆ ಗೆರೆ ಸೇರಿಸಿಯೋ, ಇಲ್ಲವೇ ಸುಮ್ಮನೆ ರಂಗೋಲಿ ಬಿಟ್ಟಾದ ಮೇಲೆ " ಡಿಸೈನ್" ತರಹವೆಂದೋ ಎಕ್ಸ್ಟ್ರಾ ಚುಕ್ಕಿ ಇಟ್ಟುಬಿಡುತ್ತಿದ್ದೆ :D ನನ್ನದೂ ಅವಳದೂ ಮಾತಿಲ್ಲ ಕಥೆಯಿಲ್ಲ! ಕೇವಲ ರಂಗೋಲಿಯಲ್ಲೇ ನಮ್ಮಿಬ್ಬರ ಸಂಭಾಷಣೆ.
ಒಮ್ಮೊಮ್ಮೆ ಸ್ಪರ್ಧೆಗೆ ಬಿದ್ದವಳಂತೆ ಒಂದೆರಡು ಸುತ್ತಿ ಬಳಸುವ ರಂಗೋಲಿಗಳನ್ನು ಬಿಡಹತ್ತಿದಳು. ನಾನು ಸುಮ್ಮನಿರುತ್ತೇನೆಯೇ??! ನಮ್ಮಮ್ಮನ ರಂಗೋಲಿ ಪುಸ್ತಕ ನೋಡಿಕೊಂಡು ಬಿಡ ಹತ್ತಿದೆ!, ಅವಳಿಗೆ ಹೇಗೆ ಗೊತ್ತಾಗಬೇಕು ಆ ಹಳೆ ಕಾಲದ ಸುತ್ತಿ ಬಳಸುವ ರಂಗೋಲಿಗಳು??!!
ಸುತ್ತಿ ಬಳಸುವ ರಂಗೋಲಿಗಳು ನೋಡಿದಾಗ ಕಷ್ಟವೆನಿಸಿದರೂ, ಬಿಡಲು ಕೈ ಹಚ್ಚಿದರೆ " ಅಯ್ಯೋ ಇಷ್ಟೇನಾ" ಅನ್ನಿಸುತ್ತದೆ. ನೋಡಿ ಈ ರಂಗೋಲಿಗಳು ಅದೆಷ್ಟು ಸುಲಭ ಅಲ್ಲವೆ?!
ಎಲ್ಲಾ ರಂಗೋಲಿಗಳಿಗೂ ಒಂದೇ ತರಹ ಚುಕ್ಕಿಗಳು, ಆದರೆ ಸುತ್ತಿ ಬಳಸುವ ವಿಧಾನ ಸ್ವಲ್ಪ ಬೇರೆಯಷ್ಟೇ.
10 comments:
Rangoli tumba chennagide girija. Nange ee reethi ragoli gottirlilla. Nammondige ee rangoligalanna hanchi kondidikke danyavadagalu:-) innu bere bere designgalu gottidre pls illi share madi....
ರಂಗೋಲಿ ಬಹಳ ಬಹಳ ಚೆನ್ನಾಗಿದೆ
ರಿಕ್ತ ಸ್ಥಳಗಳಲ್ಲಿ ಬಣ್ಣಗಳನ್ನು ತುಂಬಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು
ನನ್ನ ತಾಯಿ ಮತ್ತು ತಂಗಿಯೂ ಸಹ ಇದೇ ತರಹದ ರಂಗೋಲಿಯನ್ನು ಬಿಡಿಸುತ್ತಿದ್ದರು.
[quote]"ನಾನು ಬೇಕಂತಲೇ ಚುಕ್ಕಿಗಳನ್ನು ಕಾಣದ ಹಾಗೆ ಗೆರೆ ಸೇರಿಸಿಯೋ, ಇಲ್ಲವೇ ಸುಮ್ಮನೆ ರಂಗೋಲಿ ಬಿಟ್ಟಾದ ಮೇಲೆ " ಡಿಸೈನ್" ತರಹವೆಂದೋ ಎಕ್ಸ್ಟ್ರಾ ಚುಕ್ಕಿ ಇಟ್ಟುಬಿಡುತ್ತಿದ್ದೆ"[/quote]
ಹ ಹ ಹ ಸಕ್ಕತ್ ಮಜ ತೆಗೆದುಕೊಂಡಿದ್ದೀರ ಅನ್ಸತ್ತೆ. ಇಂತಹ ಸನ್ನಿವೇಶಗಳು ಬ್ಲಾಗಿನ ಅಂದವನ್ನು ಇನ್ನೂ ಹೆಚ್ಚಿಸುತ್ತದೆ :)
chennagi nenpisiddira... nija ri... olle competition thara hakutiddevu... namma oorallantu ratronratri kotu haki,. belagge bega yeddu ondu tour bere idee beedi , if someone elses is better namdu modification... colour combo change madodella... good old Golden days....
ಪ್ರಿಯರೇ,
ನಮಸ್ಕಾರ. ಹೇಗಿದ್ದೀರಿ?
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
-ಅಮರ
nange estu sarti nODidru I rangoli biDOdu matte A chukki inda design hAkOdu gottE Aglilla:(
Adre tumbA chennAgirutte. Goruru Ramaswamy Iyengar avara "ಗರುಡಗಂಬದ ದಾಸಯ್ಯ" ಸಂಕಲನದಲ್ಲಿನ "ನಮ್ಮೂರ ಜಾತ್ರೆ" ಅನ್ನೋ ಕಥೆಯಲ್ಲಿ ಹೀಗೆ ಬರೆಯುತ್ತಾರೆ "ರಸ್ತೆ ಮೇಲೆ ಬಿಡಿಸಿದ ರಂಗೋಲಿ ಬೆಳದಿಂಗಳಿನ ರಾತ್ರಿಯಲ್ಲಿ ರಸ್ತೆಯನ್ನು ಮುತ್ತುಗಳಿಂದ ಅಲಂಕರಿಸಿದಂತೆ ಕಾಣುತಿತ್ತು"
ರಂಗವಲ್ಲಿ ಕೇವಲ ಅಲಂಕಾರ ಮಾತ್ರವಲ್ಲ. ಅದು ಅನೇಕ ಕ್ರಿಮಿ ಕೀಟಗಳನ್ನು ತಡೆಗಟ್ಟುವುದರಲ್ಲಿ ಯಶಸ್ವಿ ಕೂಡ.ಹಾಗಾಗಿ ದಿನವೂ ಮನೆ ಮುಂದೆ ರಂಗವಲ್ಲಿ ಬಿಡಬೇಕು ಎಂದು ನಮ್ಮ ಹಿರಿಯರ ಕಟ್ಟಳೆ!!
Girija thumba chenagide... during my college days.. namma thaye rangoli idu andre nanu ee taraha ne rangoli idutha ide.. thnq !
rgds
Iyyo nandu ade kathe girija, nanagu edru mane vani (close friend) gu compitation rangoli hakadrulli, avalu baglige neeru hakidale antha katri admele naanu parike bucket hidkondu hogutha ide.
namma dina biyaduke adenu sarvhotalli horgade hoguthya, time nodu 11:30 agide, belage bega edu haaku, illa ratri 8 gante olge hagi olgade baa antha.
avarige enu gothu nanna guttu. :)
amele bigula tadilarde...naane ondu dina helide :)
@ Deepa,
ಧನ್ಯವಾದಗಳು ದೀಪ. ಖಂಡಿತವಾಗಿಯೂ ರಂಗೋಲಿಗಳನ್ನು ಇಲ್ಲಿ ಹಾಕುತ್ತೇನೆ. ಕಲಿಸುವ ನೆಪದಲ್ಲಿ ತಲೆಯನ್ನೂ ತಿನ್ನುತ್ತೇನೆ ಒಪ್ಪಿಗೆಯೇ?!
-------------------------
@ Srinivas Sir,
ಮನೆ ಮುಂದೆ ಬಿಟ್ಟಾಗ ಬಣ್ಣ ತುಂಬುತ್ತಿದ್ದೆ. ಇದು ನನ್ನ ರಂಗೋಲಿ ಪುಸ್ತಕದಿಂದ ಫೋಟೋ ತೆಗೆದದ್ದು :D.
--------------------------
@ Shubha,
ನಾವಿಬ್ಬರೂ ಅಕ್ಕ-ಪಕ್ಕದ ಮನೆಯವರಾಗಿದ್ದದ್ದರೆ ಸಕತ್ ಮಜಾ ಇರ್ತಾ ಇತ್ತು! ನಿಜ ಆಗಿನ ದಿನಗಳು ಮತ್ತೆಂದು ಬರುತ್ತವೋ?!
--------------------------
@ Snakez,
ರಂಗೋಲಿ ನೋಡಿದರೆ ಹಾಗೆ ಅನ್ನಿಸುತ್ತದಷ್ಟೇ! ಬಿಡಲು ಶುರು ಮಾಡಿ, ಅಯ್ಯೋ ಇಷ್ಟಕ್ಕೆ ಇಷ್ಟುದ್ದ ಬರೆದಿದ್ದಾರೆಯೇ ಅನ್ನಿಸುತ್ತದೆ. ತಾಣಕ್ಕೆ ಭೇಟಿ ನೀಡಿದ್ದಕ್ಕೆ ವಂದನೆಗಳು :)
---------------------------
Thanks @ Sangeetha n Pranathi,
ಎಲ್ಲರದೂ ಸರಿ ಸುಮಾರು ಇದೇ ಕಥೆ ಅನ್ನಿಸುತ್ತದೆ. ಆದರೆ ಇದರಿಂದ ನಮಗೆ ಗೊತ್ತಿಲ್ಲದ ರಂಗೋಲಿಗಳನ್ನು ಕಲಿತಿರುತ್ತೇವೆ ಅಲ್ಲವೇ?;-)
Rangoli tumba chennagide. Aadre ella tumba simple. Eegantu rangoli website gale ive. naanu kuda ondu website nalli member. Tumba tumba variety rangoligalanna share maadtivi. Ellanu super rangolegalu. ittichege rangoli kade olave tororu jaasti aagtidare. Any how tumba thanks.
ಪದ್ಮರವರೇ, ರಂಗೋಲಿ ಬಿಡುವುದು ಸಿಕ್ಕಾಪಟ್ಟೆ ಸುಲಭ ಎಂಬುದನ್ನು ತಿಳಿಸಲಷ್ಟೇ ನನ್ನ ಈ ಸಿಂಪಲ್ ರಂಗೋಲಿಗಳು. ಬ್ಲಾಗ್ ವಿಸಿಟಿಸಿದ್ದಕ್ಕೆ ಧನ್ಯವಾದಗಳು :)
Post a Comment