ಮಳೆಯೆಂದರೆ ನನಗಿಲ್ಲ ಈಗ ಸ್ಚಲ್ಪವೂ ಇಷ್ಟ
ಈ ಮಳೆಯಿಂದ ನನಗಾಯಿತು ಭಾರೀ ನಷ್ಟ
ಮೊನ್ನೆ ಮದುವೆಯ ಕರೆಯೋಲೆ ಕೊಡಲು ಹೊರಟಿದ್ದೆ
ಇಲ್ಲೇ ಮನೆ ಹತ್ತಿರ ತಾನೆ ಎಂದು ನಡೆದಿದ್ದೆ
ಉಟ್ಟಿದ್ದ ಹೊಸಾ ರೇಷ್ಮೆ ಸೀರೆಯ ನೆರಿಗೆ ಚಿಮ್ಮುತ್ತಾ
ಹೊಟ್ಟೆ ಉರಿಸುವ ಆಲೋಚನೆಯಲ್ಲಿ ಗೆಳತಿಯ ಮನೆಯತ್ತ
ನಾನುಂಟೋ ಮೂರು ಲೋಕವುಂಟೋ ಎಂದು ಹೊರಟ್ಟಿದ್ದ ನನಗೆ
ತಟ್ಟನೇ ಬ್ರೇಕು ಬಿತ್ತು ಮಳೆಯ ಮೊದಲ ಹನಿಗೆ
ಆಕಾಶದಲ್ಲೇ ನಡೆದಿದ್ದ ನನಗೆ ಹಿಂದೆಯೇ ಕವಿದಿದ್ದ ಮೋಡ
ಗೊತ್ತೇ ಆಗಿರಲಿಲ್ಲ ಸ್ವಲ್ಪವೂ ಕೂಡಾ
ನನಗೇನೂ ಮಳೆಯೆಂದರೇನೂ ಹೆದರಿಕೆಯಿಲ್ಲ
ನೆಗಡಿ, ಶೀತಕ್ಕೆಲ್ಲಾ ಬೆದರುವವಳು ನಾನಲ್ಲಾ
ಚಿಂತೆಯೆಲ್ಲಾ ಯಜಮಾನರು ಕೊಡಿಸಿದ್ದ ಹೊಸ ಸೀರೆಯತ್ತಾ
ಮಳೆಗೆ ಸಿಕ್ಕಿಕೊಂಡರೆ ಸೀರೆ ಉಳಿಯುವುದಿಲ್ಲ ಖಂಡಿತಾ
ಮುಂದಕ್ಕೆ ಅಡಿಯಿಡಲಾಗದೇ ಹಿಂದಕ್ಕೆ ಬರಲೊಪ್ಪದೇ
ನೋಡಿಯೇ ಬಿಡೋಣವೆಂದು ಹೆಜ್ಜೆ ಎತ್ತಿಟ್ಟ ಕೂಡಲೇ
ಬೆದರಿಸಿತು ಮತ್ತೆರಡು ದಪ್ಪ ಮಳೆ ಹನಿ
ಮಳೆಗಿಂತ ಮೊದಲೇ ತುಂಬಿತ್ತು ಕಣ್ಣಲ್ಲಿ ಹನಿ
ಕೊಡೆ ತರದೆ ಬಂದ ನನ್ನ ತಪ್ಪಿಗೆ
ಚುರುಕುಗೊಳಿಸುತ್ತಾ ನಡಿಗೆ
ಹಾಕುತ್ತಾ ಹಿಡಿಶಾಪ ಮಳೆಗೆ
ನಡೆದೆ ಅಳುಮುಖ ಹೊತ್ತು ಮನೆಕಡೆಗೆ
7 comments:
ಅನುಭವ ಕವನ ರೂಪದಲ್ಲಿ ಬಹಳ ಸುಂದರವಾಗಿ ನಿರೂಪಿತವಾಗಿದೆ. ಇಷ್ಟು ದಿನ ಈ ತಾಣವನ್ನು ನನ್ನಿಂದ ಮುಚ್ಚಿಟ್ಟಿದ್ದು ಯಾಕೆ ಅಂತ ತಿಳಿಯುತ್ತಿಲ್ಲ :P
ನೀವೂ ಎಳ್ಳು ಬೀರಿದ್ದಾಯ್ತಾ?
ಮಕರ ಸಂಕ್ರಾಂತಿಯ ಶುಭಾಶಯಗಳು
ಪ್ರತಿನಿತ್ಯವೂ ಇಲ್ಲಿಗೆ ಬಂದು ನೋಡುವೆ. ದಿನಕ್ಕೊಂದು ಕಥೆ, ಕವನ, ಲೇಖನ, ಚಿತ್ರ ಯಾ ಇನ್ನೇನೇ ಆದರೂ ಬರುತ್ತಿರುತ್ತದೆ ಎಂದು ಆಶಿಸುವೆ - ನಂಬುಗೆ ಹುಸಿ ಮಾಡಿಸಬೇಡಿ.
ನೀಲ-ಗಿರಿಯವರುಗಳಿಗೆ ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
PS : ನಾನ್ಯಾರು?
ನಿಮಗೂ ಮಕರ ಸಂಕ್ರಾಂತಿಯ ಶುಭಾಶಯಗಳು. ಇಲ್ಲಿನ " ಬಿಳಿ " ಜನಕ್ಕೆ ಎಳ್ಳಿನ ಜೊತೆಗೆ ಒಂದು ಬಿಟ್ಟಿ ಭಾಷಣವನ್ನೂ ಬಿಗಿದು ಕೊಟ್ಟೆವು :D ನೀವು ಎಳ್ಳು ಬೀರೀದಿರಾ??
ತಾಣಕ್ಕೆ ಸುಣ್ಣ ಬಣ್ಣ ಕೊಡುತ್ತಿದ್ದರಿಂದ ಸ್ವಲ್ಪ ದಿನ ಮುಚ್ಚಿಟ್ಟಿದ್ದೆ :D
ದಿನವೂ ನಿಮಗೆ ಸ್ವಾಗತ.
PS: ನೀವ್ಯಾರು ಎಂದು ಹೇಳುವುದೇ ಬೇಡ! ನಾವು 3 ಶ್ರೀಗಳ ಪಟ್ಟ ಶಿಷ್ಯರು.
ಸಂ-ಕ್ರಾಂತಿಯ ಸಂದೇಶವನ್ನು ಹೊರದೇಶದಲ್ಲಿಯೂ ಸಾರಿದುದಕ್ಕೆ ವಂದನೆಗಳು
ನಮ್ಮ ಮನೆಯವರೂ ಎಳ್ಳು ಬೀರಿದರು. ಒಬ್ಬ ಪೋರ ಮಾತ್ರ ಕಲ್ಲು ಬೀರೋಕ್ಕೆ ಹೋಗಿ, ಯಾವುದೋ ಹುಡುಗಿಯಿಂದ ತಪರಾಕಿ ತಿಂದ ಎಂಬ ಮಾಹಿತಿ ದೊರೆತಿದೆ. :P
ನೀವೂ ಪಟ್ಟಭದ್ರ ಹಿತಾಸಕ್ತಿಯ ಚಿಂತಕರು ಎಂಬುದು ತಿಳಿದು ಸಂತೋಷವಾಗುತ್ತಿದೆ. :)
ನಮಸ್ಕಾರ ಮೇಡಮ್ ಸಾಹೇಬ್ರ ( ! ?)
ಇಷ್ಟು ದಿನ ಬೊಗಳೆ ಡಬ್ಬಿಯಲ್ಲಿ ಚಟರ್-ಪಟರ್ ಮಾಡ್ತಾ ಇದ್ರಲ್ಲ !
ಅಜ್ನಾತವಾಸದಲ್ಲಿರಲು ಕಾರಣ ಏನು ಬೃಹನ್ನಳೆ?
ಶ್ರೀಗಳೇ, ತಪರಾಕಿ ತಿಂದ ಪೋರ ಯಾರೆಂದು ನಮಗೆ ಮಾಹಿತಿ ಬಂತು ;-) ಅಂದ ಹ್ಯಾಗೆ ಈಗ ಹೇಗಿದೀರಿ??!!
ಎಂಡೀ ಗಳೇ " ಚಟರ್ ಪಟರ್" ಸಾಕು ಮಾಡಿ ನಾವೇ ಒಂದು " ಬಾಂಬ್" ಹಾಕಲು ಬೊಗಳೆ ಡಬ್ಬಿಯ ತಯಾರಿಯಲ್ಲಿದ್ದೆವು!
ಹಲೋ ಗಿರಿಜಾ
ನಿಮ್ಮ ಬ್ಲಾಗ್ ತುಂಬಾ intresting ಆಗಿದೆ.
ತೋಟದ ನೋಟ ಅಂತು ಕಣ್ಣಿಗೆ ಊಟ !! ಸಿಕ್ತಾಗೆ ಆಯ್ತು...
ಬದನೆಕಾಯಿ,ದಪ್ಪಮೆಣಸಿನಕಾಯಿ,ಕೊತ್ತಂಬರಿ,
ಪುದಿನ...ಏನೆಲ್ಲ ಬೆಳೆದಿದ್ದೀರ...
ರೇಷ್ಮೆ ಸೀರೆ ಬಗ್ಗೆ ,ಮಳೆ ಕವನ ಒಳ್ಳೆ ಎಚ್ಚರಿಕೆ ಕೊಟ್ಟಿದೆ !!
ಹೀಗೆ ಕವನಗಳ ಮಳೆ ಸುರಿಸುತ್ತಿರಿ!!
ನಿಮ್ಮ ಅಭಿಮಾನಿ
Post a Comment