Sunday, 4 May 2008

ನಮ್ ಬ್ಲಾಗಿಗೆ ಒಂದೊರ್ಷ!

ನಮ್ಮ್ ಬ್ಲಾಗೂದೂ ಹ್ಯಾಪೀ ಬರ್ತ್ ಡೇ! ದಿನ? ನಂಗೂ ಗೊತ್ತಿಲ್ಲ.. ಎಲ್ಲರ ಬ್ಲಾಗುಗಳನ್ನು ಓದುವಾಗ ಎಲ್ಲರದೂ ಹೆಚ್ಚು ಕಡಿಮೆ " ಹುಟ್ಟುಹಬ್ಬದ್ದೇ" ವಿಷಯಗಳನ್ನು ನೋಡಿ, " ಅರೆ ನಮ್ ದ್ಯಾವಾಗ ಬರ್ತ್ ಡೇ" ಅನ್ಕೊಂಡು ನೋಡಿದ್ರೆ ಈ ತಿಂಗಳೇ!


ಬ್ಲಾಗು ಅಂದ್ರೇನು ಅಂತ ಗೊತ್ತಿಲ್ಲದೇ ಇಲ್ಲದ ದಿನಗಳಲ್ಲಿ, ಬೆನ್ನು ತಟ್ಟಿ " ನೀವು ಬರೀರಿ ಮೇಡಂ" ಅಂತ ಏಣಿಯೇ ಇಲ್ಲದೆ ಹತ್ತಿಸಿದ್ದರಿಂದ ನೋಡಿಯೇ ಬಿಡುವ ಒಂದು ಕೈ ಅಂತ ಶುರು ಮಾಡಿ, ನಾಕೂವರೆ ಸಾವಿರ ಚಿಲ್ಲರೆ ಹಿಟ್ಟುಗಳನ್ನು ( ಅದೇನೋ ವೈರಸ್ಸುಗಳೂ ಜಾಸ್ತಿ ನಂಗೆ ) ತಿಂದಿದ್ದು ನನ್ನ ಮಟ್ಟಿಗೆ ದೊಡ್ಡ ಸಾಧನೆಯೇ.


ಏನು ಬರೆಯೋದಪ್ಪಾ ಅಂತ ಯೋಚನೆ ಮಾಡಿ, ಕಡೆಗೆ ಮೊಟ್ಟ ಮೊದಲನೇ ಬಾರಿಗೆ " ಕುಡ್ಕನ್ ಗೋಳು" ಅಂತ ಪದ್ಯ ಬರೆದು, ಅದನ್ನೇ ಬ್ಲಾಗಿನಲ್ಲೇ ಹಾಕಿಕೊಂಡು, ನಂತರ ಹೀಗೆ ಬರೆದು ಬಿಡುತ್ತೇನೆ ಅಂತ ಶುರು ಮಾಡಿ ನಂತರ ಬರೆದದ್ದೇ " ಮಳೆ" ನನ್ನ ಅನುಭವ ಕವನ :D. ಆಮೇಲೆ ಒಂದಷ್ಟು " ಜೋಕ್ಸು" ಗಳನ್ನು ಅಲ್ಲಿ ಇಲ್ಲಿ ಕದ್ದು ಹಾಕ್ಕೊಂಡು ಕ್ಯಾಸೆಟ್ ಜೋಕ್ಸ್ ಕೇಳಿದಂತೆ, ಮನಸು ಬೋರಾದಾಗ ಓದಿಕೊಳ್ಳುತ್ತಿದ್ದೆ.


ನಂತರ ಸ್ನೇಹಿತರೆಲ್ಲರೂ ನಿಮ್ಮ ನ್ಯೂಝಿಲೆಂಡ್ ಅನುಭವಗಳನ್ನೇ ಬರೆಯಿರಿ, ನೀವು ಏನೇನು ನೋಡಿದರಿ ಅದನ್ನೇ ಬ್ಲಾಗಿನಲ್ಲಿ ಹಾಕಿ ಎಂದು ಭಯಂಕರ ಸಲಹೆ ಕೊಟ್ಟಿದ್ದರಿಂದ ವಾರಕ್ಕೊಂದಾವರ್ತಿಯಾದರೂ ಯಜಮಾನರೊಂದಿಗೆ ಊರು ಸುತ್ತಲು ಹೊರಟು, ಅಲ್ಲಿ ನೋಡಿದ, ತಿಳಿದ ವಿಷಯಗಳನ್ನೇ ಇಲ್ಲಿ ಕುಟ್ಟಲು ಶುರು ಮಾಡಿದೆ.


ಪ್ರೀತಿಯಿಂದ ತಿದ್ದಿದ, ನೋಡಿದ, ಖುಷಿಪಟ್ಟು ಬೆನ್ನು ತಟ್ಟಿದ ಆತ್ಮೀಯ ಗೆಳೆಯ/ಗೆಳತಿಯರೆಲ್ಲರಿಗೂ ವಂದನೆಗಳು. ಹೀಗೆ ನನ್ನ ಕೊರೆತವನ್ನು ಸಹಿಸಿಕೊಳ್ಳುತ್ತೀರೆಂದು ನಂಬುತ್ತಾ.......aNILGIRIja.

11 comments:

Pranathi said...

Congrats Girija!!!
For the grand success of 1st year anniversary of ur blog

Anonymous said...

Happy Birthday NilGiri's Blog! :)

Nice job NilGiri, I have enjoyed each and every blog entry here.

Keep blogging!

JH

maddy said...

very good.. ondu varsha tumbita isht bega...!

Congrats... nimma barahagalu mattashtu moodali....

Madhu.. :)

Barthur said...

Congrats Girija....Good work ......keep going..................my best wishes..:)
Warm rgds
Sangeetha

ಅಸತ್ಯ ಅನ್ವೇಷಿ said...

ಅಬ್ಬ... ಒಂದ್ವರ್ಷದ ಮಗೂ ಇಷ್ಟು ಚೆನ್ನಾಗಿ ಓಡಾಡುತ್ತಲ್ವಾ...

ಹ್ಯಾಟ್ಸ್ ಆಫ್...

ಗುಡ್ ಗುಡ್ ಲಕ್ ಲಕ್

ಶಾನಿ said...

ನಮಸ್ತೆ,
ನಿಮ್ಮ ಬ್ಲಾಗ್ಮಗು ಒಂದು ವರ್ಷ ಪೂರೈಸಿದ್ದಕ್ಕೆ ಅಭಿನಂದನೆಗಳು. ನಾಲ್ಕೂವರೆ ಸಾವಿರ ಪ್ರೀತಿಯ ಏಟುಗಳನ್ನೂ ನಿಮ್ಮ ಬ್ಲಾಗು ತಿಂದದ್ದು ಖುಷಿ. ಇನ್ನಷ್ಟು, ಮತ್ತಷ್ಟು ಬ್ಲಾಗಿಸಿ. ಹ್ಯಾಪಿ ಬ್ಲಾಗಿಂಗ್!

MD said...

'ನೀಲಗಿರಿ'ಯವರ ಬ್ಲಾಗು ನೀಳವಾಗಿ ಗಿರಿಯೆತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ.

Shubha said...

Congratulations Nilgiri... Neevu baredaddu tumba nija... HIt tinnodralli ishtu khushi anta modlu tilidirallia alwa....

Your blog has been a pleasure to read . Keep writing...

shubha

NilGiri said...

Thanks Pranthi, Jh, Madhu, Sangita, Shubha.

~~~~~~~~~~~~~
@ Anveshi Sir, Shaani -

ನಿಮ್ಮೆಲ್ಲರ ಹಾರೈಕೆ- ಆರೈಕೆಯಿಂದ, ಪ್ರೀತಿಯಿಂದ ಕೊಟ್ಟ ಏಟಿನಿಂದಲೇ ಕೂಸು ಎದ್ದು ಓಡಾಡುತ್ತಿರುವುದು :).

~~~~~~~~~~~~~~~~~~~~~~~~~~
@ md,

" ಕಲಿತ ಹುಡುಗೀ....." ನಂಗೂ ಇಷ್ಟ ಕಣ್ರೀ :D ಆ ಪದ್ಯ ಇನ್ನೂ ಇದ್ಯಂತೆ, ನನ್ನ ಫ್ರೆಂಡ್ ಶುಭಾ ಕೊಟ್ಟಿದ್ದಾರೆ ಕೊನೆಯೆರಡು ಪ್ಯಾರಗಳನ್ನು. ಹಾಕಿದ್ದೇನೆ ನೋಡಿ ;-)

ನಿಮ್ಮ ಹಾರೈಕೆಗೆ ಧನ್ಯವಾದಗಳು.

ಸಂತೋಷಕುಮಾರ said...

ಎಲ್ಲಾದರಲ್ಲೂ ತಡವಾಗಿರುವ ನಾನು ನಿಮ್ಮ ಬ್ಲಾಗ್ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುವದರಲ್ಲೂ ತಡ ಆಯ್ತು. :)
ಅಂತೂ ನೀವೂ ಸಹ "ಹಿರಿಯ" ಬ್ಲಾಗಿಗರಾದ್ರಿ ಬಿಡಿ.

Keep blogging..

NilGiri said...

@ ಸಂತೋಷಕುಮಾರ,

ನೀವು ಹೇಳಿದಂತೆ, ನಾನೂ " ಬ್ಯಾ" ಅಂತ ಶುರು ಮಾಡಿ ಒಂದೊರ್ಷ! ನಿಮ್ಮ ಹಾರೈಕೆಗೆ ಧನ್ಯವಾದಗಳು.