Wednesday 13 June 2007

ಕುಡ್ಕನ್ ಗೋಳು

ನನ್ ಪಾಡಿಗ್ ನಾನ್ ಕುಡ್ಕೊಂಡ್
ತೂರಾಡ್ಕೊಂಡ್ ಹೋಗ್ತಿದ್ರೆ....
ಲೇಯ್ ಕುಡ್ಕ...ಲೇಯ್ ಕುಡ್ಕ...ಲೇ ಕುಡುಕ ಅಂತಾರಲ್ಲ..


ನನ್ ಕೂಲಿ ನನ್ ದುಡ್ತ ನಿಮ್ದೇನ್ರೀ ರೋಪ್
ನನ್ನ್ ತಂಟೇಗ್ ಬಂದ್ರೆ ಹುಷಾರ್ ತಗ್ದೇ ಬಿಡ್ತೀನ್ ಶೇಪ್

ಹೊಟ್ಟೆಗ್ ಎಂಡ ಬೀಳಿಲ್ಲಾಲ್ಲಂದ್ರೆ ಜೀವವೋದಂಗೆ
ಎಂಡ ಕುಡೀದ್ ಇರೋಣಾಂದ್ರೆ ಇದ್ರೊ ಸತ್ತಂಗೆ
ನಾನು ಕುಡ್ದು, ಎದ್ದು ಬಿದ್ದು ಹೋದ್ರೆ ಯಾಕ್ರಣ್ಣ ನಂಗೆ ಗುದ್ದು?
ದೊಡ್ಡೋರೆ ಏಳಿಲ್ವಾ, ಎಲ್ಲಾ ರೋಗಕ್ಕೂ ಸಾರಾಯೀನೇ ಮದ್ದು

ಸರ್ಕಾರ ಬೀಳ್ಲಿ ಸರ್ಕಾರ ಏಳ್ಲಿ ನಂದೇನೋಯ್ತದೆ ಗಂಟು?
ಯಾವನಾರ ಸಿಎಮ್ ಆಗ್ಲಿ, ನಂಗೆ ಸಿಕ್ರೆ ಸಾಕು ಪ್ಯಾಕೀಟು
ಐ.ಟಿ. ಬಿ.ಟಿ ಬಗ್ಗೆ ನಂಗೇನ್ ಕೇಳ್ಬೇಡಣ್ಣ
ಸಾರಾಯಿ ದೊರೆ ನೂರ್ವರ್ಷ ಬದುಕ್ಲಿ ಅಷ್ಟೇ ನಂಗ್ ಸಾಕಣ್ಣ

ಯಾರೋ ಹೋಗಿ ಕಂಪ್ಲೇಂಟ್ ಕೊಟ್ರು
ಬಂದ್ಬಿಟ್ಟಾ ಏರಿಯಾ ಇನ್ಸಪೆಟ್ರು!!
ಯಾಕೋ ಕುಡ್ದು ಗಲಾಟೆ ಮಾಡ್ತೀಯಾ ಮಧ್ಯರಾತ್ರಿಲಿಂಗೇ?
ಹತ್ತು ಜೀಪ್ನ ಸ್ಟೇಷನ್ ನಲ್ಲಿ ತೋರುಸ್ತೀನಿ ಸ್ವರ್ಗ ನಾನಿಂಗೆ

ಯಾಕ್ರಿ ಇನ್ಸ್ ಪೆಕ್ಟ್ರೇ ಕೂಗಾಡ್ತೀರಲ್ಲ ಹಿಂಗೇ
ಟೇಸನ್ ಏನು ಹೊಸ್ದಲ್ಲ್ ನಂಗೆ ಬತ್ತೀನಿ ನಡೀರಿಂಗೇ
ಅಲ್ಲಾಗಿದ್ದು ಮರೆಯೋಕ್ಕೆ ಕುಡ್ದು ಕುಡ್ದು ಆಗಿದ್ದು ನಾನಿಂಗೆ
ಯಾರ್ನೋ ಬಚಾಯ್ಸೋಕ್ ಶಿಕ್ಷೆ ಕೊಡ್ಸಿ ಒಳಗಾಕಿದ್ರಲ್ಲ ನಂಗೆ

ಈ ಪ್ರಪಂಚದಲ್ಲಿ ನಾನೊಬ್ನೆ ಏನೂ? ನೀವ್ ಕುಡ್ಯಾಕಿಲ್ವಾ?
ನೀವ್ ಕುಡ್ಯೊದ್ ಬ್ರಾಂದಿ ವಿಸ್ಕಿ, ನಾನ್ ಕುಡ್ಯೊದ್ ಎಂಡ
ಅದೇನ್ ಹಾಕ್ತೀರಾ ಹಾಕ್ಕೊಳ್ಳ್ರಿ ದಂಡ

ಈ ಕೋರ್ಟಲ್ಲಿ ನಿಮ್ಮಂತೋರೆಲ್ಲ ಈಚೆ ತಿರ್ಗಾಡ್ಕೊಂಡಿರಿ ಇಂಗೇ
ಮೇಲ್ನೋನು ನೋಡ್ಕೋತಾನೆ ಅಲ್ಲೀ ವರ್ಗೆ ನಡ್ಸಿ ನಿಮ್ ದರ್ಬಾರಿಂಗೆ.



( ಕುಡ್ಕನ್ ಗೋಳು - ಚೊಚ್ಚಲ ಕವನ ಇಲ್ಲಿ ಪ್ರಕಟವಾಗಿದೆ

http://thatskannada.oneindia.in/sahi...ka_girija.html )

No comments: