ದಿನಾ ಬೆಳಗಾದ್ರೆ ಎಲ್ಲಾ ಕಡೆ ಪ್ರಧಾನಮಂತ್ರಿಗಳ 500 ಮತ್ತು 1,000 ಹಳೇ ನೋಟುಗಳ ಬ್ಯಾನ್ ಮತ್ತು ಅದರಿಂದ ಕೆಲವರಿಗೆ ಸಮಸ್ಯೆಗಳು, ಕೆಲವರಿಗೆ ಸಮಸ್ಯೆ ಇದ್ರೂ " ಪರವಾಗಿಲ್ಲ...ಒಳ್ಳೇ ಕೆಲಸಕ್ಕೆ ವಿಘ್ನ ಬರೋದೇ ಅಲ್ವೇ"ಅಂತ ತಮಗೆ ತಾವೇ ಸಮಾಧಾನ ಮಾಡ್ಕೋತಾ ಇರೋ ಎಲ್ಲಾ ನ್ಯೂಸ್ ಗಳನ್ನ ಓದ್ತಾ....ಓದ್ತಾ..ಟೈಮ್ ಪಾಸ್ ಮಾಡ್ತಾ ಇದ್ದ ನಂಗೆ, ಸದ್ಯದ ಸಮಸ್ಯೆ ಏನಪ್ಪಾ ಅಂದ್ರೆ, ನನ್ನ ಹತ್ರ ಇರೋ ...ಈಗ ಬ್ಯಾನ್ ಆಗಿರೋ 500 ಮತ್ತು 1,000 ನೋಟುಗಳನ್ನ ಏನ್ ಮಾಡೋದು ಅಂತ! ಊರಿಂದ ಬರೋವಾಗ ಅಮ್ಮನ ಕಡೆಯಿಂದ,ಅತ್ತೆ ಮನೆ ಕಡೆಯಿಂದ..." ತಗೋಳೇ ನಿನ್ನ ಬರ್ಥ್ ಡೇದು...ನಿನ್ನ ಮದ್ವೆ ಆನಿವರ್ಸರಿದು...ಗೌರಿ ಹಬ್ಬದ್ದು...ಯುಗಾದೀದು..." ಅಂತೆಲ್ಲಾ ಲಿಸ್ಟ್ ಅವ್ರು ಹೇಳಿ ಕೊಟ್ಟಿದ್ದು, ಮಿಕ್ಕಿದ್ದು ನಾನು ನೆನಪಿಸಿ ಇಸ್ಕೊಂಡು ಬಂದಿದ್ದು, ಕೆಲವು ಪತಿ ದೇವರಿಗೆ ಕಂಡಂಗೆ ಕೆಲವು ಕಾಣದಂಗೆ ನನ್ನ ಸೀರೆಗಳ ಮಧ್ಯೆ ಮುಚ್ಚಿಟ್ಟುಕೊಂಡು ಬಂದಿದ್ದು ...ಎಲ್ಲಾ ಲೆಕ್ಕ ಹಾಕೋಣ ಅಂತ ಈ ವೇಕೆಂಡ್ ಲೆಕ್ಕ ಹಾಕಿದ್ರೆ ಹೆಚ್ಚು ಕಡಿಮೆ 30,000 ಚಿಲ್ರೆ!! ಅದ್ರಲ್ಲೂ ನಾನು ಬರೋವಾಗ ಪರ್ಸಲ್ಲಿ ಇಡಕ್ಕೆ ಬಟ್ಟೆಗಳ ಮಧ್ಯ ಮುಚ್ಚಿಡಕ್ಕೆ ಈಸಿ ಆಗುತ್ತೆ ಅಂತ ಎಲ್ಲಾ 1,000 ನೋಟಿಗೆ ಕನ್ವರ್ಟ್ ಮಾಡ್ಕೊಂಡು ಬೇರೆ ಬಂದಿದ್ದ್ನಲ್ಲಾ...ಈಗ ಏನು ಮಾಡಲೀ...??!!! ಇನ್ನು ಊರಿಗೆ ಸದ್ಯಕ್ಕಂತೂ ಬರೋ ಪ್ಲಾನ್ ಇಲ್ಲ :( ನಮ್ಮ ಪ್ರಧಾನಮಂತ್ರಿಗಳು ಮಾರ್ಚ್ 31 ತನಕ ಟೈಮ್ ಏನೋ ಕೊಟ್ಟವ್ರೆ....ನಾನು ಅಷ್ಟ್ರಲ್ಲಿ ಊರಿಗೆ ಬರಕ್ಕೆ ಆಗಲ್ವಲ್ಲಾ?! ಹಂಗಿದ್ರೆ ನನ್ನ "ಬ್ಲ್ಯಾಕ್ ದುಡ್ಡು" ಹೋದಂಗೆಯಾ..!! ಹೋಗ್ಲಿ ಬಿಡಿ ಅಷ್ಟ್ರಲ್ಲಿ ದೇವ್ರು ಏನಾರಾ ಆ ದುಡ್ಡಿಗೆ ದಾರಿ ತೋರಿಸ್ತಾನೆ.
ಇನ್ನು ಮಜ ಅಂದ್ರೆ, ಸುಮಾರು ಜನ ದಿನ ಬೆಳಗಾಗೋಷ್ಟ್ರಲ್ಲಿ ಎಕಾನಿಮಿಕ್ಸ್ ನ ಅರ್ದು ಕುಡ್ದೋರಂಗೆ ವಾಟ್ಸಾಪುಗಳಲ್ಲಿ, ಪೋಸ್ಟ್ಗಳಲ್ಲಿ, ಕಮೆಂಟುಗಳಲ್ಲಿ ಉಪದೇಶ ಕೊಡ್ತಾ ಇದ್ದಿದ್ದು ಓದಿ ನಂಗೂ ಕಾಲೇಜಲ್ಲಿ ಎಕಾನಿಮಿಕ್ಸ್ ಓದಿ ದಬಾಕಿದ್ದು ನೆನಪಿಗೆ ಬಂತು. ಹಂಗೇ ಒಂದೆರಡು ಡೌಟ್ಸುಗಳೂವೇ!
ನಂಗೇನೋ...ಈ ದೊಡ್ಡ್ ನೋಟುಗಳನ್ನ ಬ್ಯಾನ್ ಮಾಡಿದ ಐಡಿಯಾ ಚೆನ್ನಾಗೇ ಇದೆ. ಹೆಂಗೂ ದೊಡ್ಡ್ ನೋಟು ಬ್ಯಾನ್ ಮಾಡಿದ್ಮೇಲೆ...2,000 ನೋಟು ಏನಿಕ್ಕೆ ರಿಲೀಸ್ ಮಾಡಿದ್ರು?
ಈಗ ಒಂದಂತೂ ಗ್ಯಾರಂಟಿ ....ಮಿನಿಮಮ್ ಲಂಚ 2,000 ನೋಟು ಫಿಕ್ಸ್! ಮೊದಾಲಾದ್ರೆ 1,000ಗೆ ಆಗ್ತ ಇದ್ದಿದ್ದು ಕೆಲಸಕ್ಕೆ ಈಗ 2,000 ಒಂದೇ ನೋಟು! (ನಂಗೂ ಗೌರಿ, ಯುಗಾದಿ ಹಬ್ಬದ್ದು ವಸೂಲಿ 2,000 ಫಿಕ್ಸು!) ಸದ್ಯಕ್ಕೇನೋ ಜನ ಕ್ಯೂ ನಿಂತ್ಕೊಂಡು...ಹೊಸ ನೋಟುಗಳ್ನ ಹಿಡ್ಕೊಂಡು selfie ಹಾಕ್ಕೊತಾ ಅವ್ರೆ ಇನ್ನೊಂದು ಆರು ತಿಂಗಳು ವರ್ಷ ಅನ್ನೊಷ್ಟ್ರಲ್ಲಿ ಹೊಸಾ 500...1,000...ಆಮೇಲೆ ೨೦೦೦ ನೋಟುಗಳು ಮತ್ತೆ "ಬ್ಲ್ಯಾಕ್" ಆಗಕ್ಕೆ ಶುರು ಆಯ್ತವೆ! (ನಂಗೂ ಅಷ್ಟಿಷ್ಟು ಭವಿಷ್ಯ ಹೇಳಕ್ಕೆ ಬತ್ತದೆ!)
ಪಾಪ ಕೆಲವ್ರ ಪೋಸ್ಟ್ ಗಳ್ನ ಓದ್ತಾ ಇದ್ರೆ, ಎಲ್ಲೆಲ್ಲಿಂದ ದುಡ್ಡು ತಂದು ಇಟ್ಕೊಂಡಿದ್ರೋ ಎನ್ ಕಥೆನೋ...ಪ್ರಧಾನಮಂತ್ರಿಗಳೇನೋ ಈಸಿಯಾಗಿ ದೊಡ್ಡ್ ನೋಟು ಬ್ಯಾನ್ ಮಾಡ್ಬುಟ್ರು...ಈಗ ಇವ್ರ ಸಂಕಟ ಯಾರಿಗೆ ಹೇಳ್ತಾರೆ ಪಾಪ...
ಮೊನ್ನೆ ಊರಿಗೆ ಫೋನ್ ಮಾಡ್ದಾಗ ನಮ್ಮಮ್ಮಂಗೆ ಕೇಳ್ದೆ " ಹೆಂಗೆ ಮ್ಯಾನೇಜ್ ಮಾಡ್ತಾ ಇದೀರಾ? " ಅಂತಾ...ನಮ್ಮಮ್ಮ ಏನೂ ತಲೇನೇ ಕೆಡ್ಸಿಕೊಳ್ದೆ .." ಲಲ್ಲೀ (ನಮ್ಮಕ್ಕ)..ಬೋನಸ್ ಬಂದಿತ್ತು ಅಂತಾ ಯಾವಾಗ್ಲೋ...ಹತ್ತತ್ತು ರುಪಾಯಿದು ಎಲ್ಲಾ ಹೊಸ ನೋಟು ಇರೋ ಐದು ಬಂಡ್ಲು ಕೊಟ್ಟಿದ್ಲು...ಅದ್ರಲ್ಲೇ ಹಾಲಿನವ್ನಿಗೆ ತರಕಾರಿಗೆ...ಪೇಪರ್ನೋರಿಗೆ ಕೊಡ್ತಾ ಇದೀನಿ...ಇನ್ನು ಮನೇ ಸಾಮಾನು ತಿಂಗ್ಳಿಗೆ ಒಂದ್ಸಲ ತಾನೇ ಕೊಡೋದು...ಇನ್ನೂ ಟೈಮ್ ಇದ್ಯಲ್ಲ ಏನೂ ಚಿಂತೆಯಿಲ್ಲ.." ಅಂದ್ರು. ಅದ್ರಲ್ಲೂ ಪಾಪ ತರಕಾರಿಯೋರು....ಹಾಲಿನವರಂತೂ ಹತ್ತು ರುಪಾಯಿ ನೋಟ್ನ ಒಳ್ಳೇ ದೇವ್ರ ಪ್ರಸಾದ ಇಸ್ಕೊಂಡಂಗೆ ಎರಡೂ ಕೈಯಲ್ಲಿ ಇಸ್ಕೊಂಡ್ರು ಅಂತ ಫುಲ್ ಖುಶ್! ಆದ್ರೆ ಒಂದೇ ಬೇಜಾರು ಅಂದ್ರು...." ಸದ್ಯಕ್ಕೆ ಅವ್ರ ಸಮಸ್ಯೆ ಏನಪ್ಪಾ ಅಂದ್ರೆ..."ಇಷ್ಟು ದಿನ ನೂರು...ಐನೂರು...ಸಾವಿರ ಏಣ್ಸಕ್ಕೆ ಕಷ್ಟ ಇರ್ಲಿಲ್ಲ....ಈಗ ಹತ್ತತ್ತು ರುಪಾಯಿದು ಒಂದೊಂದೇ ಎಣಿಸಿ...ಎಣಿಸಿ ಕೊಡ್ಬೇಕಲ್ಲ ಅನ್ನೋದು!
ಅಂದ ಹಾಗೆ..." ನಿನ್ನ ಹತ್ರ ಇರೋ ದುಡ್ಡು ಹೆಂಗೆ ಕನ್ವರ್ಟ್ ಮಾಡ್ಕೋತೀಯಾ??" ಅಂತ ಏನಾರಾ ನಿಮ್ಗೆ ಅಪ್ಪಿ ತಪ್ಪಿ ಕೇಳೋಣ ಅನ್ಸಿದ್ರೆ.... ಇಲ್ಲಿ ಊರಿನ ಯಾವ ದುಡ್ಡು ಇಲ್ಲಿನ ದುಡ್ಡಿಗೆ ಕನ್ವರ್ಟ್ ಮಾಡಲ್ಲ. ಇಲ್ಲೇ ಇರೋ ಇಂಡಿಯನ್ ಬ್ಯಾಂಕೂ ನನ್ನ ಇಂಡಿಯನ್ ದುಡ್ಡನ್ನ ಕನ್ವರ್ಟ್ ಮಾಡಲ್ಲ. ಯಾರಾದ್ರೂ ಊರಿಗೆ ಹೋಗ್ತಾ ಇರೋರ ಹತ್ರ ಕೊಟ್ಟು ನಮ್ಮನೆಗೆ ಮುಟ್ಟುಸ್ರಪ್ಪ ಅಂತ ಕೇಳ್ಕೋಳೊದು...ಅಗ್ಲಿಲ್ವಾ??!! ಕೃಷ್ಣಾರ್ಪಣ ಅಂತ ಸುಮ್ನೆ ಇರೋದು.
(ಯಾರೋ "ಬುಜೀ" ಇಲ್ಲಿಂದ ಭಾರತದಲ್ಲಿ ನೋಟು ಬ್ಯಾನ್ ಆಗಿರೋದಕ್ಕೂ....ಅಲ್ಲಿರೋ ಭ್ರಷ್ಟಾಚಾರಕ್ಕೂ....ಏನೋನೋ ಹಿಸ್ಟರಿ...ಲಾಜಿಕ್ ಇತ್ಯಾದಿ...ಇತ್ಯಾದಿ ಲಿಂಕ್ ಮಾಡಿರೋ ಪೋಸ್ಟ್ ಎಲ್ಲಾ ಕಡೆ ಬಂದಿರೋ ಬಗ್ಗೆ ಯಾರೇನೂ ತಲೆ ಕೆಡ್ಸಿಕೊಳ್ಳಬೇಕಿಲ್ಲ್ರಪ್ಪಾ! ಇಲ್ಲಿ ಸದ್ಯಕ್ಕೆ ಜನ ಭೂಕಂಪದಿಂದ ಆಗಿದ್ದ ಕಷ್ಟ...ನಷ್ಟ ಬಗ್ಗೆ, ಆಮೇರಿಕಾದ ಹೊಸ ಅಧ್ಯಕ್ಷರ ಬಗ್ಗೆ ಮಾತಾಡ್ತ ಅವ್ರೆ ಅಷ್ಟೇಯಾ!
ಇನ್ನೊಬ್ಬ "Brian" ಪ್ರಕಾರ, ಇಲ್ಲಿ ಆಗಿದ್ದ್ ಭೂಕಂಪಕ್ಕೆ ಬೇರೇನೇ ಕಾರಣ ಅಂತೆ! ಇಲ್ಲಿ ಜನ ಈ Brian ಹೇಳಿದ್ದನ್ನ ಎಷ್ಟು "ಬೆಲೆ" ಕೊಟ್ಟವ್ರೋ ನೀವು ಅಷ್ಟೇ ಆ "Brian"ಗೂ ಕೊಡಿ)